30 ವರ್ಷಗಳಿಂದ ಚಹಾ ಕುಡಿದೇ ಬದುಕಿದ್ದಾರೆ ಈ ಮಹಿಳೆ..!

ಪಿಲ್ಲಿದೇವಿ ಮೊದಲೆಲ್ಲಾ ಹಾಲಿನ ಟೀ ಜೊತೆಗೆ ಬಿಸ್ಕೆಟ್​, ಬ್ರೆಡ್​ನ್ನು ತೆಗೆದುಕೊಳ್ಳುತ್ತಿದ್ದಳು. ಆದರೆ ಇತ್ತೀಚೆಗೆ ದಿನಕ್ಕೊಂದು ಬಾರಿ, ಅದು ಸೂರ್ಯಾಸ್ತವಾದ ಮೇಲೆ ಕೇವಲ ಬ್ಲಾಕ್​ ಟೀ ಕುಡಿಯುತ್ತಾಳೆ ಎಂದು ಬೇಸರ ವ್ಯಕ್ತಪಡಿಸಿದರು.

Latha CG | news18india
Updated:January 12, 2019, 4:45 PM IST
30 ವರ್ಷಗಳಿಂದ ಚಹಾ ಕುಡಿದೇ ಬದುಕಿದ್ದಾರೆ ಈ ಮಹಿಳೆ..!
ಸಾಂದರ್ಭಿಕ ಚಿತ್ರ
  • Share this:
ಕೊರಿಯಾ,(ಜ.12): ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಎದ್ದಾಗ ಬಿಸಿ ಬಿಸಿ ಕಾಫಿ ಅಥವಾ ಚಹಾ ಕುಡಿದರೆ ಮನಸ್ಸಿಗೆ ಮುದ ನೀಡುತ್ತದೆ. ಆ ದಿನದ ಕೆಲಸಗಳು ಸಹ ಸರಾಗವಾಗಿ ನಡೆಯುತ್ತವೆ ಎಂದು ಹೇಳುತ್ತಾರೆ. ಚಳಿಗಾಲದಲ್ಲಿ ಮಾತ್ರವಲ್ಲದೇ ಪ್ರತಿದಿನ ಮುಂಜಾನೆ ಕಾಫಿ, ಟೀ ಸೇವಿಸುವುದು ಹಲವರ ಅಭ್ಯಾಸ. ಛತ್ತೀಸ್​ಗಢದ ಒಬ್ಬ ಮಹಿಳೆ ಬರೀ ಚಹಾವನ್ನೇ ತಮ್ಮ ಸಂಪೂರ್ಣ ಆಹಾರವನ್ನಾಗಿಸಿಕೊಂಡು 30 ವರ್ಷಗಳಿಂದ ಬದುಕಿದ್ದಾರೆ. ಇದು ಅಚ್ಚರಿಯಾದರೂ ಸತ್ಯ.

ಹೌದು, ಅತಿ ಹೆಚ್ಚು ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ, ಈ ಮಹಿಳೆ ಕೇವಲ ಟೀ ಕುಡಿದು ಬದುಕುತ್ತಿದ್ದರೂ ಸಂಪೂರ್ಣ ಆರೋಗ್ಯವಾಗಿದ್ದಾರೆ. ಛತ್ತೀಸ್​ಗಢದ ಕೊರಿಯಾ ಜಿಲ್ಲೆಯ ಬರದಿಯಾ ಹಳ್ಳಿಯಲ್ಲಿ ವಾಸವಿರುವ ಪಿಲ್ಲಿದೇವಿ ತಮ್ಮ 11 ನೇ ವಯಸ್ಸಿನಿಂದಲೇ ಊಟ, ತಿಂಡಿ, ನೀರು ಬಿಟ್ಟು ಕೇವಲ ಚಹಾವನ್ನೇ ಅವಲಂಬಿಸಿದ್ದಾರೆ. ಇವರ ವಿಶಿಷ್ಟ ಜೀವನ ಶೈಲಿಯಿಂದ ತಮ್ಮ ಗ್ರಾಮದಲ್ಲಿ 'ಚಾಯ್​ ವಾಲಿ ಚಾಚಿ' ಎಂದೇ ಜನಪ್ರಿಯವಾಗಿದ್ದಾರೆ.

'ಪಿಲ್ಲಿದೇವಿ ಆರನೇ ತರಗತಿಯಲ್ಲಿದ್ದಾಗ ಊಟ ಬಿಟ್ಟಳು. ಈಗ ಅವಳಿಗೆ 44 ವರ್ಷ. ಕೊರಿಯಾ ಜಿಲ್ಲೆಯ ಜನಕಪುರದ ಪಾಟ್ನಾ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಟೂರ್ನಮೆಂಟ್​ನಲ್ಲಿ ಪಿಲ್ಲಿ ಭಾಗವಹಿಸಿದ್ದಳು. ಅಲ್ಲಿಂದ ವಾಪಸ್​ ಬರುವಷ್ಟರಲ್ಲಿ ಅವಳಿಗೆ ಏನಾಯಿತೋ ಗೊತ್ತಿಲ್ಲ. ಊಟ, ತಿಂಡಿ, ನೀರು ಎಲ್ಲವನ್ನೂ ತ್ಯಜಿಸಿದ್ದಳು' ಎಂದು ಪಿಲ್ಲಿ ದೇವಿ ಅವರ ತಂದೆ ರತಿರಾಮ್​ ನೊಂದುಕೊಂಡರು.

ಇದನ್ನೂ ಓದಿ: ಬ್ಲಾಕ್ ಟೀ ಮತ್ತು ಗ್ರೀನ್ ಟೀ ನಂತರ ಬಂದಿದೆ ಬ್ಲೂ ಟೀ !

'ಪಿಲ್ಲಿದೇವಿ ಮೊದಲೆಲ್ಲಾ ಹಾಲಿನ ಟೀ ಜೊತೆಗೆ ಬಿಸ್ಕೆಟ್​, ಬ್ರೆಡ್​ನ್ನು ತೆಗೆದುಕೊಳ್ಳುತ್ತಿದ್ದಳು. ಆದರೆ ಇತ್ತೀಚೆಗೆ ದಿನಕ್ಕೊಂದು ಬಾರಿ, ಅದು ಸೂರ್ಯಾಸ್ತವಾದ ಮೇಲೆ ಕೇವಲ ಬ್ಲಾಕ್​ ಟೀ ಕುಡಿಯುತ್ತಾಳೆ' ಎಂದು ಬೇಸರ ವ್ಯಕ್ತಪಡಿಸಿದರು.

ಪಿಲ್ಲಿಯ ಸಹೋದರ ಬಿಹಾರಿ ಲಾಲ್​ ರಾಜ್​ವದೆ, 'ಪಿಲ್ಲಿ ಊಟ ಬಿಟ್ಟ ಮೇಲೆ ನಾವು ವೈದ್ಯರ ಬಳಿ ತೋರಿಸಿದೆವು, ಆದರೆ ಅವರು ಆಕೆಯ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ, ಆರೋಗ್ಯವಾಗಿದ್ದಾಳೆ ಎಂದು ಹೇಳಿದರು. ನಂತರ ಹಲವಾರು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದೆವು. ಆದರೆ ಯಾವ ವೈದ್ಯರೂ ಕೂಡ ಅವಳ ವರ್ತನೆ ಹಿಂದಿರುವ ಆರೋಗ್ಯ ಸಮಸ್ಯೆಯನ್ನು ಕಂಡುಹಿಡಿಯಲಿಲ್ಲ' ಎಂದು ದುಃಖಿತರಾದರು.

'ಪಿಲ್ಲಿದೇವಿ ಅಪರೂಪಕ್ಕೊಮ್ಮೆ ಮನೆಯಿಂದ ಹೊರಗೆ ಬರುತ್ತಾಳೆ. ಈಕೆ ಶಿವನ ಭಕ್ತೆಯಾಗಿದ್ದು, ಇಡೀ ದಿನ ಶಿವನ ಜಪ ಮಾಡುತ್ತಿರುತ್ತಾಳೆ' ಎಂದು ಪಿಲ್ಲಿಯ ಕುಟುಂಬದವರು ಹೇಳುತ್ತಾರೆ.'ಮನುಷ್ಯರು ಕೇವಲ ಚಹಾ ಕುಡಿದು ಬದುಕಲು ಸಾಧ್ಯವೇ ಇಲ್ಲ. ಇದು ಅಚ್ಚರಿಯ ವಿಷಯ. ವೈಜ್ಞಾನಿಕವಾಗಿ ಹೇಳಬೇಕೆಂದರೆ, 33 ವರ್ಷಗಳಿಂದ ಕೇವಲ ಟೀ ಕುಡಿದು ಬದುಕುವುದು ಅಸಾಧ್ಯ. ನವರಾತ್ರಿ ಹಬ್ಬದ ಸಮಯದಲ್ಲಿ ಜನರು 9 ದಿನಗಳ ಕಾಲ ಉಪವಾಸ ಇರುವುದೇ ಬೇರೆ. ಆದರೆ 33 ವರ್ಷಗಳ ಕಾಲ ಅಂದರೆ ಅದು ವೈದ್ಯ ಲೋಕಕ್ಕೆ ದೊಡ್ಡ ಅಚ್ಚರಿಯ ವಿಷಯವೇ ಹೌದು ಎಂದು ಕೊರಿಯಾ ಜಿಲ್ಲಾಸ್ಪತ್ರೆಯ ವೈದ್ಯ ಎಸ್​ಕೆ ಗುಪ್ತಾ ಆಶ್ಚರ್ಯಚಕಿತರಾದರು.

First published:January 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ