ಇವರು 13 ವರ್ಷದ ಗುರು; ಶಿಷ್ಯರು ಯುಪಿಎಸ್​ಎಸಿ ಪರೀಕ್ಷೆ ಬರೆಯುತ್ತಿದ್ದಾರೆ!

ಹೆಚ್ಚಿನ ವೀಕ್ಷಕರು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿದ್ದಾರೆ. ಅವರ ವಿನಂತಿ ಮೇರೆಗೆ, ಆಯಾ ವಿಷಯಗಳ ಕುರಿತಾದ ಮಾಹಿತಿಗಳನ್ನು ಒದಗಿಸುತ್ತೇನೆ. ಮೊದಲು ನಾನು ಆ ವಿಷಯಗಳನಗ್ನು ಅಭ್ಯಸಿಸಿ ವಿಡಿಯೋಗಳನ್ನು ಮಾಡುವೆ. ಇದರ ಅಧ್ಯಯನಕ್ಕಾಗಿ ಒಂದೆರೆಡು ವಾರಗಳ ಸಮಯ ತೆಗೆದುಕೊಳ್ಳುತ್ತೇನೆ.

zahir | news18
Updated:February 3, 2019, 4:58 PM IST
ಇವರು 13 ವರ್ಷದ ಗುರು; ಶಿಷ್ಯರು ಯುಪಿಎಸ್​ಎಸಿ ಪರೀಕ್ಷೆ ಬರೆಯುತ್ತಿದ್ದಾರೆ!
@IE
zahir | news18
Updated: February 3, 2019, 4:58 PM IST
ಇತ್ತೀಚೆಗಷ್ಟೇ ಹೈದರಾಬಾದ್​ನ 11ರ ಹರೆಯದ ಮೊಹಮ್ಮದ್ ಹಸ್ಸಾನ್​ ಅಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ಎಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಟ್ಯೂಶನ್​ ಹೇಳಿ ಕೊಡುತ್ತಿರುವ  ಸುದ್ದಿ ವೈರಲ್​ ಆಗಿತ್ತು. ಇದೀಗ ಅಮರ್ ಸ್ವಸ್ತಿಕ್ ಆಚಾರ್ಯ ತೊಗಿಟಿ ಎಂಬ ಬಾಲಕ ಸಖತ್ ಸುದ್ದಿಯಾಗಿದ್ದಾರೆ. 13 ವರ್ಷದ ಅಮರ್ ಸುದ್ದಿಯಾಗಲು ಮುಖ್ಯ ಕಾರಣ​ ತನ್ನ ಸಣ್ಣ ವಯಸ್ಸಿನಲ್ಲೇ ಯುಪಿಎಸ್​ಸಿ ಪರೀಕ್ಷಾರ್ಥಿಗಳಿಗೆ ಕ್ಲಾಸ್ ತೆಗೆಯುತ್ತಿರುವುದು.

ಇದಕ್ಕಾಗಿ ಲರ್ನ್​ ವಿತ್​ ಅಮರ್​ ಎಂಬ ಯೂಟ್ಯೂಬ್​ ಚಾನೆಲ್​ ಪ್ರಾರಂಭಿಸಿರುವ ಅಮರ್​ ಹಲವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಸಲಹೆಗಳನ್ನು ನೀಡುತ್ತಿದ್ದಾರೆ. ತೆಲಂಗಾಣದ ಸಣ್ಣ ಪಟ್ಟಣವಾದ ಮಂಚೇರಿಯಲ್ಲಿ ಜನಿಸಿದ ಅಮರ್​ ತನ್ನ 10ನೇ ವಯಸ್ಸಿನಲ್ಲೇ ಯೂಟ್ಯೂಬ್​ನಲ್ಲಿ ವ್ಲೋಗರ್​ ಆಗಿ ಕಾಣಿಸಿಕೊಂಡಿದ್ದರು. 2016 ರಲ್ಲಿ ಪ್ರಾರಂಭಿಸಿದ ಈ ಚಾನೆಲ್​ಗೆ ಈಗ ಬರೋಬ್ಬರಿ . 1,87,000 ಚಂದಾದಾರರಿದ್ದಾರೆ.

ಅಮರ್​ನ ಇಂತಹ ಸಾಧನೆಯ ಹಿಂದೆ ಇರುವುದು ಪೋಷಕರು. ಸರ್ಕಾರಿ ಶಾಲಾ ಶಿಕ್ಷಕರಾಗಿರುವ ಅಮರ್​ ತಂದೆ ಮಗನ ಸಾಮರ್ಥ್ಯವನ್ನು ಗುರುತಿಸಿದ್ದರು. 5ನೇ ತರಗತಿಯಲ್ಲಿದ್ದಾಗ ಅಟ್ಲಾಸ್​ನೊಂದಿಗೆ ಆಟವಾಡುತ್ತಿದ್ದೆ. ಈ ವೇಳೆ ನನ್ನ ಆಸಕ್ತಿಯನ್ನು ಗುರುತಿಸಿದ ತಂದೆಯು ಭೌಗೋಳಿಕ ವಿಷಯಗಳ ಬಗ್ಗೆ ಹೇಳಿ ಕೊಡಲಾರಂಭಿಸಿದರು. ಒಮ್ಮೆ ನಾನು ಮತ್ತು ತಂದೆ ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ವೇಳೆ ತಾಯಿ ವಿಡಿಯೋ ಮಾಡಿದ್ದರು. ಅಷ್ಟೇ ಅಲ್ಲದೆ ಅದನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್​ ಮಾಡಿದ್ದರು. ಈ ವಿಡಿಯೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಪ್ರೇರಿತನಾದ ನಾನು ಭೌಗೋಳಿಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಚಾನೆಲ್​ ಆರಂಭಿಸಿದೆ. ಹಾಗೆಯೇ ಅಲ್ಲಿ ರಾಷ್ಟ್ರಗಳ, ನದಿಗಳ ಸೇರಿದಂತೆ ಹಲವು ಹೆಸರುಗಳನ್ನು ಮತ್ತು ಸ್ಥಳಗಳನ್ನು ಹೇಗೆ ನೆನಪಿಟ್ಟುಕೊಳ್ಳುವುದು ಎಂಬ ತ್ರಂತ್ರವನ್ನು ಕಲಿಸಲು ಆರಂಭಿಸಿದೆ ಎನ್ನುತ್ತಾರೆ ಅಮರ್. ಇದೀಗ ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನಗಳ ವಿಷಯವನ್ನು ಕಲಿಸಲು ಯೋಚಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಅಮರ್ ಸ್ವತಃ ಯುಪಿಎಸ್​ಸಿ ಆಕಾಂಕ್ಷಿಯಾಗಿದ್ದಾನೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತೀರ್ಣರಾಗುವ ಮೂಲಕ ದೇಶದ ಭ್ರಷ್ಟಾಚಾರವನ್ನು ಮುಕ್ತಗೊಳಿಸಲು ಸರ್ಕಾರದೊಂದಿಗೆ ಕೆಲಸ ಮಾಡಲು ಬಯಸುತ್ತಾನೆ. ನಾನು ಐಎಎಸ್​ ಅಧಿಕಾರಿಯಾಗಲು ಬಯಸುತ್ತೇನೆ. ನಮ್ಮ ದೇಶದಲ್ಲಿ ಹಲವು ನಿಯಮಗಳಿದ್ದರೂ ಜನರು ಅದನ್ನು ಅನುಸರಿಸುವುದಿಲ್ಲ. ಇದೆಲ್ಲವನ್ನು ಕಾರ್ಯರೂಪಕ್ಕೆ ತರುವುದು ಒಬ್ಬ ಐಎಎಸ್​ ಅಧಿಕಾರಿಯಿಂದ ಸಾಧ್ಯ ಎಂದು 13 ವರ್ಷದ ಅಮರ್​ ತನ್ನ ಕನಸನ್ನು ಮುಂದಿಡುತ್ತಾರೆ.

ಹೆಚ್ಚಿನ ವೀಕ್ಷಕರು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿದ್ದಾರೆ. ಅವರ ವಿನಂತಿ ಮೇರೆಗೆ, ಆಯಾ ವಿಷಯಗಳ ಕುರಿತಾದ ಮಾಹಿತಿಗಳನ್ನು ಒದಗಿಸುತ್ತೇನೆ. ಮೊದಲು ನಾನು ಆ ವಿಷಯಗಳನಗ್ನು ಅಭ್ಯಸಿಸಿ ವಿಡಿಯೋಗಳನ್ನು ಮಾಡುವೆ. ಇದರ ಅಧ್ಯಯನಕ್ಕಾಗಿ ಒಂದೆರೆಡು ವಾರಗಳ ಸಮಯ ತೆಗೆದುಕೊಳ್ಳುತ್ತೇನೆ. ನನಗೆ ಸಂಪೂರ್ಣ ಅರ್ಥವಾದ ಬಳಿಕ ವಿಡಿಯೋ ಮೂಲಕ ತಿಳಿಸುತ್ತೇನೆ. ಈ ಬಗ್ಗೆ ಕೆಲವರು ನೆಗೆಟಿವ್ ಕಮೆಂಟ್​ಗಳನ್ನು ಹಾಕುತ್ತಾರೆ. ಅದನ್ನು ಕೂಡ ನಾನು ಸಕರಾತ್ಮಕವಾಗಿ ಸ್ವೀಕರಿಸುತ್ತಿದ್ದೇನೆ ಎಂದು ಅಮರ್ ಹೇಳುತ್ತಾರೆ.


ಇದರೊಂದಿಗೆ ನನ್ನ ಶಾಲಾ ಪಠ್ಯಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಿದ್ದೇನೆ. ನನ್ನೊಂದಿಗೆ ತಮ್ಮ ವಿಗ್ನೇಶ್​(10) ಕೂಡ ಕೈ ಜೋಡಿಸುತ್ತಿದ್ದಾನೆ. ಈಗಾಗಲೇ ಲರ್ನ್​ ವಿತ್ ಅಮರ್​ ಚಾನೆಲ್​ನಲ್ಲಿ ಅವನು ಮಾಡಿದ 10-13 ವೀಡಿಯೊಗಳನ್ನು ಅಪ್​ಲೋಡ್​ ಮಾಡಿದ್ದೇನೆ ಎಂದು ಅಮರ್​ ತಮ್ಮನನ್ನು ಶ್ಲಾಘಿಸಿದರು.
Loading...

ಕಾಸ್ಮಾಲಜಿ ವಿಷಯದ ಬಗ್ಗೆ ಹೆಚ್ಚು ಆಕರ್ಷಿತರಾಗಿರುವ ಅಮರ್ ಫ್ರೀ ವೇಳೆ ವಿಡಿಯೋಗಳನ್ನು ವೀಕ್ಷಿಸುತ್ತಾನೆ. ಗಣಿತ ಮತ್ತು ಭೌತಶಾಸ್ತ್ರ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾನೆ. ಇದರೊಂದಿಗೆ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ‘The brief history of time’ ಮತ್ತು ‘The Alchemist’ಎಂಬ ಪುಸ್ತಕಗಳು ಅಮರ್​ ಅವರ ನೆಚ್ಚಿನ ಕೃತಿಯಾಗಿದೆ. ಒಟ್ಟಿನಲ್ಲಿ ತನಗಿಂತ ಹಿರಿಯರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಪಡಿಸುವ ಅಮರ್​ ಸಾಧನೆಯನ್ನು ಮೆಚ್ಚಲೇಬೇಕು.

ಇದನ್ನೂ ಓದಿ: ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕತ್ತೆ ಕಾಲು ಹಿಡಿದ ಪಾಕಿಸ್ತಾನ!

First published:February 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ