Kerala: ಸಿನಿಮೀಯ ರೀತಿಯಲ್ಲಿ ನಡು ರಾತ್ರಿ ಪ್ರೇಯಸಿ ನೋಡಲು ಬಂದ; ಕಳ್ಳ ಎಂದು ಯುವಕನ ಕೊಂದ ತಂದೆ

ಪ್ರೇಯಸಿಯನ್ನು ನೋಡಲು ಇಂದು ಬೆಳಗಿನ ಜಾವ ಕಳ್ಳನಂತೆ ಆಕೆ ಮನೆಗೆ ಹೋಗಿದ್ದಾನೆ. ಈ ವೇಳೆ ಆತನ ಮನೆ ದರೋಡೆ ಮಾಡಲು ಬಂದ ಕಳ್ಳ ಎಂದು ಯುವತಿ ತಂದೆ ಚಾಕುವಿನಿಂದ ಚುಚ್ಚಿ ಕೊಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತಿರುವನಂತಪುರಂ (ಡಿ. 29): ಪ್ರೇಯಸಿಯನ್ನು ನೋಡಲು ಬಂದ ಯುವಕ ಹೆಣವಾದ ಘಟನೆ ಕೇರಳದಲ್ಲಿ (Kerala) ನಡೆದಿದೆ. ತನ್ನ ಗೆಳತಿಯನ್ನು ಭೇಟಿಯಾಗಲು ಸಿನಿಮೀಯ ರೀತಿಯಲ್ಲಿ ಮನೆಗೆ ಬಂದಿದ್ದಾನೆ. ಮನೆಯ ಮಂದಿ ಎಲ್ಲಾ ಮಲಗಿದ್ದಾಗ ತನ್ನ ಪ್ರೇಯಸಿಯನ್ನು (Lover) ಅಚ್ಚರಿ ಮಾಡುವ ಆತನ ಯೋಜನೆ ಕೈಕೊಟ್ಟಿದೆ. ದುರದೃಷ್ಟ ಎಂದರೆ, ಪ್ರೇಯಸಿಯ ತಂದೆಯೇ ಆತನನ್ನು ಕಳ್ಳ (Thief)  ಎಂದು ಇರಿದು ಕೊಂದಿರುವ ಘಟನೆ ತಿರುವನಂತಪುರಂದಲ್ಲಿ (Thiruvananthapuram) ನಡೆದಿದೆ. ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

    ಏನಿದು ಘಟನೆ
    ಅನೀಶ್​ ಜಾರ್ಜ್​ ಎಂಬ 19 ವರ್ಷದ ಯುವಕ ತನ್ನ ಕಾಲೇಜಿನಲ್ಲಿ ಓದುತ್ತಿದ್ದ ಸಹಪಾಠಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ನೋಡಲು ಇಂದು ಬೆಳಗಿನ ಜಾವ ಕಳ್ಳನಂತೆ ಆಕೆ ಮನೆಗೆ ಹೋಗಿದ್ದಾನೆ. ಈ ವೇಳೆ ಆತನ ಮನೆ ದರೋಡೆ ಮಾಡಲು ಬಂದ ಕಳ್ಳ ಎಂದು ಯುವತಿ ತಂದೆ ಚಾಕುವಿನಿಂದ ಚುಚ್ಚಿ ಕೊಂದಿದ್ದಾರೆ.

    ಯುವಕನ ಕೊಂದು ಶರಣಾದ ತಂದೆ
    ಯುವಕನ ಕೊಂದ ಬಳಿಕ ಯುವತಿ ತಂದೆ ಚಾಲಕುಡಿ ಲೈನ್ ನಿವಾಸಿ ಲಾಲನ್ ನೇರವಾಗಿ ಪೊಲೀಸ್​ ಠಾಣೆಗೆ ಹೋಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು, ಪೊಲೀಸರಿಗೆ ಶರಣಾಗಿದ್ದಾರೆ. ರಾತ್ರಿ ತನ್ನ ಮಗಳ ಕೊಠಡಿಯಿಂದ ಶಬ್ದ ಕೇಳಿದ ನಂತರ ಕೋಣೆಯನ್ನು ತೆರೆದಿದ್ದೇನೆ ಎಂದು ಲಾಲನ್ ಪೊಲೀಸರಿಗೆ ತಿಳಿಸಿದ್ದಾರೆ.

    ಆಸ್ಪತ್ರೆಗೆ ಕರೆದೊಯ್ದರು ಉಳಿಯಲಿಲ್ಲ ಪ್ರಾಣ
    ಕೊಠಡಿಯಿಂದ ಶಬ್ದ ಕೇಳಿ ಬಾಗಿಲು ಬಡಿದರೂ ಕೊಠಡಿ ತೆರೆಯಲಿಲ್ಲ. ನಂತರ ಲಾಲನ್ ಮನೆಯಲ್ಲಿ ತಡಕಾಡಿದ್ದು,  ಈ ವೇಳೆ ಆತನನ್ನು ಕಳ್ಳ ಎಂದು ಭಾವಿಸಿ ಚಾಕುವಿನಿಂದ ಚುಚ್ಚಿ ಕೊಂದಿರುವುದಾಗಿ ಅವರು ತಿಳಿಸಿದ್ದಾರೆ. ಈ ಸುದ್ದಿ ತಿಳಿದ ತಕ್ಷಣಕ್ಕೆ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದುರದೃಷ್ಟವಶಾತ್ ಯುವಕ ಆಸ್ಪತ್ರೆಗೆ ಸಾಗಿಸುವ ಮೊದಲೇ ಉಸಿರು ಚೆಲ್ಲಿದ್ದಾನೆ. ಮೃತದೇಹವನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

    ಘಟನೆಯ ಕುರಿತು ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ವಿವರವಾದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ನಂತರ ಪ್ರತಿಕ್ರಿಯೆ ನೀಡುವುದಾಗಿ ಸಿಐ ಮಾಧ್ಯಮಗಳಿಗೆ ತಿಳಿಸಿದರು.

    ಇದನ್ನು ಓದಿ: 2021ರಲ್ಲಿ ನಡೆದ ವಿಭಿನ್ನ ಪ್ರತಿಭಟನೆಗಳ ಚಿತ್ರಣಗಳಿವು!

    ಕಳ್ಳ ಎಂದು ಯುವಕನ ಕೊಲೆ
    ಲಾಲನ್​, ಯುವಕನನ್ನು ಕಳ್ಳನೆಂಬ ಶಂಕೆಯ ಮೇರೆಗೆ ದಾಳಿ ನಡೆಸಿ ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ ನಡೆಸಿರುವುದಾಗಿ ಲಾಲನ್ ತಿಳಿಸಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಮನೆಯಲ್ಲಿ ಎಲ್ಲರೂ ಮಲಗಿರುವಾಗ ಏನೋ ಸದ್ದು ಕೇಳಿ ಬಂದಿತು. ಗಾಬರಿಗೆ ಒಳಗಾದ ನಾನು ಚಾಕು ಹಿಡಿದು ಮನೆಯಲ್ಲಿ ಓಡಾಡಿದೆ. ಈ ವೇಳೆ ಮಗಳ ಕೋಣೆಗೆ ಹೋದೆ ಬಾಗಿಲು ಬಂದ್​ ಆಗಿತ್ತು. ಸದ್ದು ಅಲ್ಲಿಂದಲೇ ಬರುತ್ತಿದ್ದ ಹಿನ್ನಲೆ ಬಾಗಿಲು ಓಡಿದು ನುಗ್ಗಿದೆ. ಈ ವೇಳೆ ಯುವಕನನ್ನು ಕಳ್ಳ ಎಂದು ಆತ ತಮಗೆ ಹಾನಿ ಮಾಡುತ್ತಾನೆ ಎಂದು ಭಾವಿಸಿ ಚುಚ್ಚಿರುವುದಾಗಿ ತಿಳಿಸಿದ್ದಾರೆ.

    ಇದನ್ನು ಓದಿ: ಮುಂಬೈನಲ್ಲಿ ದಿನಕ್ಕೆ 2000ಕ್ಕೂ ಹೆಚ್ಚು ಕೋವಿಡ್​ ಪ್ರಕರಣ ದಾಖಲಾಗುವ ಸಾಧ್ಯತೆ; ಎಚ್ಚರಿಕೆ ನೀಡಿದ ಸರ್ಕಾರ

    ಮನೆ ಮಂದಿಯನ್ನು ಸ್ಥಳಾಂತರ ಮಾಡಿದ ಪೊಲೀಸರು

    ಲಾಲನ್, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಮೇಲಿನ ಮಹಡಿಯಲ್ಲಿ ಕೊಲೆ ನಡೆದಿದೆ ಎಂದು ಮಾತೃಭೂಮಿ ವರದಿ ಮಾಡಿದೆ. ಅಕ್ಕಪಕ್ಕದಲ್ಲಿ ಹಲವಾರು ಮನೆಗಳಿದ್ದರೂ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನಡೆದ ಘಟನೆಯ ಬಗ್ಗೆ ಹಲವರಿಗೆ ತಿಳಿದಿರಲಿಲ್ಲ. ಈ ಸ್ಥಳವನ್ನು ಪೊಲೀಸರು ಸೀಲ್ ಮಾಡಲಾಗಿದ್ದು, ಕುಟುಂಬವನ್ನು ಸ್ಥಳಾಂತರಿಸಲಾಗಿದೆ ಎಂದು ವರದಿ ಆಗಿದೆ
    Published by:Seema R
    First published: