ಎರಡು ದಿನದಲ್ಲಿ ಪಿಎಂಸಿ ಬ್ಯಾಂಕ್​ನ ಮೂರನೇ ಠೇವಣಿದಾರರ ಸಾವು; ಬ್ಯಾಂಕ್​ ಬಿಕ್ಕಟ್ಟಿನಿಂದ ಮೃತಪಟ್ಟಿಲ್ಲ ಎಂದ ಪೊಲೀಸರು

ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ (ಪಿಎಂಸಿ) ಬ್ಯಾಂಕ್​ನಲ್ಲಿ ಹೂಡಿಕೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ಇಬ್ಬರು ಠೇವಣಿದಾರರು ಹೃದಯಾಘಾತಕ್ಕೆ ಒಳಗಾಗಿ, ಅಸುನೀಗಿದ್ದಾರೆ. ಇದೀಗ ಮೂರನೇ ಠೇವಣಿದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

HR Ramesh | news18-kannada
Updated:October 15, 2019, 10:45 PM IST
ಎರಡು ದಿನದಲ್ಲಿ ಪಿಎಂಸಿ ಬ್ಯಾಂಕ್​ನ ಮೂರನೇ ಠೇವಣಿದಾರರ ಸಾವು; ಬ್ಯಾಂಕ್​ ಬಿಕ್ಕಟ್ಟಿನಿಂದ ಮೃತಪಟ್ಟಿಲ್ಲ ಎಂದ ಪೊಲೀಸರು
ಪಿಎಂಸಿ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಠೇವಣಿದಾರರು.
  • Share this:
ಮುಂಬೈ: ಪಂಜಾಬ್​ ಮತ್ತು ಮಹಾರಾಷ್ಟ್ರ ಬ್ಯಾಂಕ್ (ಪಿಎಂಸಿ) ಮತ್ತೊರ್ವ ಠೇವಣಿದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ 39 ವರ್ಷದ ವೈದ್ಯೆ ನಿದ್ದೆ ಮಾತ್ರೆಗಳನ್ನು ಸೇವಿಸುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇವರ ಸಾವಿಗೆ, ಬ್ಯಾಂಕ್​ ಬಿಕ್ಕಟ್ಟಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪಿಎಂಸಿ ಬ್ಯಾಂಕ್​ ಬಿಕ್ಕಟ್ಟಿನಿಂದ ಬೇಸತ್ತು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುವುದಿಲ್ಲ. ಆದರೆ, ಪಿಎಂಸಿ ಬ್ಯಾಂಕ್​ ಬಿಕ್ಕಟ್ಟಿನಿಂದ ಮೃತಪಟ್ಟವರಲ್ಲಿ ಇವರು ಮೂರನೆಯವರು ಎಂದು ಬಿಂಬಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.


ನಿವೇದಿತಾ ಕಳೆದ ಕೆಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಕಳೆದ ವರ್ಷ ಮಾರ್ಚ್​ನಲ್ಲಿ ಅಮೆರಿಕದಲ್ಲಿ ಇದ್ದಾಗಲೂ ಆತ್ಮಹತ್ಯೆಗೆ ಯತ್ನಿಸಿದ್ದರು. ನಿವೇದಿತಾ ಅವರು ಯುಎಸ್​ನಲ್ಲಿ ಮೆಡಿಸನ್​ ತರಬೇತಿ ಪಡೆಯುತ್ತಿದ್ದರು. ಮೊದಲ ಗಂಡನಿಗೆ 17 ವರ್ಷದ ಮಗಳಿದ್ದರೆ, ಎರಡನೇ ಗಂಡನಿಂದ 18 ತಿಂಗಳ ಚಿಕ್ಕಮಗುವಿದೆ. ಇವರ ಗಂಡ ಅಮೆರಿಕದ ಪ್ರಜೆಗಳು. ಈ ಸಾವು ಆಕಸ್ಮಿಕ ಎಂದು ಪೊಲೀಸರು ಹೇಳಿದ್ದಾರೆ.

ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ (ಪಿಎಂಸಿ) ಬ್ಯಾಂಕ್​ನಲ್ಲಿ ಹೂಡಿಕೆ ಮಾಡಿ ಇಕ್ಕಟ್ಟಿಗೆ ಸಿಲುಕಿದ ಇಬ್ಬರು ಠೇವಣಿದಾರರು ಹೃದಯಾಘಾತಕ್ಕೆ ಒಳಗಾಗಿ, ಅಸುನೀಗಿದ್ದಾರೆ. ಇದೀಗ ಮೂರನೇ ಠೇವಣಿದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಹೃದಯಾಘಾತದಿಂದ ಮೃತಪಟ್ಟ ಮತ್ತೊಬ್ಬ ಪಿಎಂಸಿ ಬ್ಯಾಂಕ್ ಠೇವಣಿದಾರ; 24 ಗಂಟೆಯಲ್ಲಿ ಇಬ್ಬರ ಸಾವು

ಅವ್ಯವಹಾರ ಹಗರಣಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್ ಇದೀಗ ಭಾರೀ ನಷ್ಟದಲ್ಲಿದೆ. ಆರ್​ಬಿಐನ ನಿರ್ದೇಶನದ ಅಡಿಯಲ್ಲಿರುವ ಈ ಬ್ಯಾಂಕಲ್ಲಿ ಠೇವಣಿದಾರರು ಇಟ್ಟಿರುವ ಹಣದ ಮೊತ್ತ 11,000 ಕೋಟಿ ಇದೆ. ತಮ್ಮ ಹಣ ವಾಪಸ್ ನೀಡುವಂತೆ ಠೇವಣಿದಾರರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ಧಾರೆ. ನಿನ್ನೆ ಬೆಳಗ್ಗೆ ಸಂಜಯ್ ಗುಲಾಟಿ ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಮನೆಯಲ್ಲಿ ಊಟ ಮಾಡುವ ವೇಳೆ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆಂದು ಅವರ ಕುಟುಂಬದವರು ತಿಳಿಸಿದ್ದಾರೆ.

 

First published:October 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading