ವಾಟ್ಸ್ಯಾಪ್​ ಮೆಸೇಜ್​ ಫಾರ್ವರ್ಡ್​ ಮಾಡಿದ್ರೆ ಜೈಲಿಗೆ ಹೋಗ್ತೀರಾ; ಈ ಕಥೆ ಓದಿ..!

news18
Updated:July 23, 2018, 4:54 PM IST
ವಾಟ್ಸ್ಯಾಪ್​ ಮೆಸೇಜ್​ ಫಾರ್ವರ್ಡ್​ ಮಾಡಿದ್ರೆ ಜೈಲಿಗೆ ಹೋಗ್ತೀರಾ; ಈ ಕಥೆ ಓದಿ..!
news18
Updated: July 23, 2018, 4:54 PM IST
ನ್ಯೂಸ್​ 18 ಕನ್ನಡ

ಭೂಪಾಲ್​ (ಜು. 23):  ವಾಟ್ಸಾಪ್​, ಫೇಸ್ಬುಕ್​ನಲ್ಲಿ ಯಾವುದೇ ಕುತೂಹಲಕಾರಿ ಅಥವಾ ನಮಗಿಷ್ಟದ ಮೆಸೇಜ್​ ಬಂದರೂ ಮರು ಯೋಚನೆ ಮಾಡದೆ ಅದನ್ನು ಫಾರ್ವರ್ಡ್​ ಮಾಡುವವರು ಹಾಗೆ ಮಾಡುವ ಮೊದಲು ಇನ್ನು ಕೊಂಚ ಯೋಚಿಸಬೇಕು. ಇಲ್ಲದಿದ್ದರೆ ಜೈಲು ಸೇರೋದು ಗ್ಯಾರಂಟಿ. ಯಾಕೆ ಅಂತೀರಾ?

ನಮ್ಮ ನಿಮ್ಮಂತೆಯೇ ಮಧ್ಯಪ್ರದೇಶದ ರಾಜಘರ್​ನಲ್ಲಿನ ಗೆಳೆಯರ ಗುಂಪೊಂದು ವಾಟ್ಸಾಪ್​ ಗ್ರೂಪ್​ ಮಾಡಿಕೊಂಡಿತ್ತು. ನಮಗೆಲ್ಲ ತಿಳಿದಿರೋ ಹಾಗೆ ಒಂದು ಗ್ರೂಪ್​ನ ಅಡ್ಮಿನ್​ ಆ ಗ್ರೂಪಿನಿಂದ ಹೊರಹೋದರೆ ಮತ್ತೋರ್ವರು ಅಡ್ಮಿನ್​ ಆಗುತ್ತಾರೆ. ಅದಕ್ಕೆ ಆ ವ್ಯಕ್ತಿಯ ಅನುಮತಿಯೂ ಬೇಕಾಗಿಲ್ಲ. ಹಾಗೇ, ಡಿಫಾಲ್ಟ್​ ಆಗಿ ಆ ಗ್ರೂಪಿನ ಅಡ್ಮಿನ್​ ಆದ 21 ವರ್ಷದ ಜುನೈದ್​ ಖಾನ್​ನನ್ನು ಕಳೆದ ಫೆಬ್ರವರಿಯಲ್ಲಿ ಐಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್​ 124 ಎ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕೆ ಕಾರಣವೇನು?

ವಾಟ್ಸಾಪ್​ ಗ್ರೂಪ್​ ಅಡ್ಮಿನ್​ ಆಗಿದ್ದ ಇರ್ಫಾನ್​ ಗ್ರೂಪ್​ನಿಂದ ಹೊರಹೋದ ನಂತರ ಆ ಗ್ರೂಪಿನ ಸದಸ್ಯರಾಗಿದ್ದ ಜುನೈದ್​ ಖಾನ್​ ಅಡ್ಮಿನ್​ ಆಗಿದ್ದರು. ಆ ವಾಟ್ಸಾಪ್​ ಗ್ರೂಪಿನ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಮಾಹಿತಿಯುಳ್ಳ ಮೆಸೇಜನ್ನು ಪೋಸ್ಟ್​ ಮಾಡಿದ್ದ. ಅದು ಹಲವು ಗ್ರೂಪ್​ಗಳಿಗೆ ಶೇರ್​ ಕೂಡ ಆಗಿದೆ. ಆ ಸಂದರ್ಭದಲ್ಲಿ ಜುನೈದ್​ ಆ ವಾಟ್ಸಾಪ್​ ಗ್ರೂಪಿನ ಅಡ್ಮಿನ್ ಆಗಿದ್ದರಿಂದ ಪೊಲೀಸರು ಆತನನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ.

'ಇದರಲ್ಲಿ ಜುನೈದೇನೂ ತಪ್ಪಿಲ್ಲ. ಡಿಫಾಲ್ಟ್​ ಆಗಿ ಆತ ಆ ವಾಟ್ಸಾಪ್​ ಗ್ರೂಪಿನ ಅಡ್ಮಿನ್​ ಆಗಿದ್ದಾರೆ. ಅವರಿಗೂ ಆ ಮೆಸೇಜಿಗೂ ಸಂಬಂಧವಿಲ್ಲ' ಎಂದು ಜುನೈದ್​ನ ಕುಟುಂಬದವರು ಹೇಳುತ್ತಿದ್ದರೂ ಆ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಅದನ್ನು ಕೋರ್ಟ್​ಗೆ ಸಲ್ಲಿಸಬಹುದು. ನಾವು ನಮ್ಮ ಬಳಿ ಇರುವ ಮಾಹಿತಿಯನ್ನು ಆಧರಿಸಿ ಜುನೈದ್​ನನ್ನು ಬಂಧಿಸಿದ್ದೇವೆ ಎಂದು ಪಚೋರ್​ ಪೊಲೀಸ್​ ಸ್ಟೇಷನ್​ನ ಉಸ್ತುವಾರಿ ಯುವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ.

ವಾಟ್ಸಾಪ್​ನಲ್ಲಿ ಬರುವ ಮೆಸೇಜ್​ಗಳನ್ನು ಫಾರ್ವರ್ಡ್​ ಮಾಡುವ ಮೊದಲು ಅದರ ಸತ್ಯಾಸತ್ಯತೆಯ ಬಗ್ಗೆ ಯೋಚಿಸಬೇಕು. ಇಲ್ಲವಾದರೆ ಯಾರೋ ಮಾಡಿದ ತಪ್ಪಿಗೆ ನಾವು ಬೆಲೆ ತೆರಬೇಕಾಗುತ್ತದೆ.
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ