HOME » NEWS » National-international » THINGS THAT MAKE THIS BUDGET TRULY BENEFIT FOR THE MASSES SNVS

Union Budget 2021 – ಬಹಳ ಮುಖ್ಯ ಎನಿಸುವ ನಾಲ್ಕು ಕ್ಷೇತ್ರಗಳಿಂದ ನಿರೀಕ್ಷೆಗಳಿವು

Budget Expectations - ಆರ್ಥಿಕ ಚೇತರಿಕೆಗೆ ಬಹಳ ಅಗತ್ಯ ಇರುವ ಕೆಲ ಆಯ್ದ ಕ್ಷೇತ್ರಗಳು ಈ ಬಾರಿ ಬಜೆಟ್​ನಿಂದ ಅಪೇಕ್ಷಿಸುತ್ತಿರುವುದಾದರೂ ಏನನ್ನು? ಇಲ್ಲಿದೆ ವಿವರ.

news18
Updated:February 1, 2021, 9:49 AM IST
Union Budget 2021 – ಬಹಳ ಮುಖ್ಯ ಎನಿಸುವ ನಾಲ್ಕು ಕ್ಷೇತ್ರಗಳಿಂದ ನಿರೀಕ್ಷೆಗಳಿವು
ನಿರ್ಮಲಾ ಸೀತಾರಾಮನ್
  • News18
  • Last Updated: February 1, 2021, 9:49 AM IST
  • Share this:
ನವದೆಹಲಿ(ಫೆ. 01): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಬಜೆಟ್ ಅನ್ನ ಇವತ್ತು ಮಂಡಿಸುತ್ತಿದ್ದಾರೆ. ಕೊರೋನಾ ಪಿಡುಗಿನ ನಂತರ ಆಗುತ್ತಿರುವ ಮೊದಲ ಬಜೆಟ್​ನಲ್ಲಿ ಬಹಳ ನಿರೀಕ್ಷೆಗಳಿವೆ. ಎಲ್ಲಾ ಕ್ಷೇತ್ರಗಳು ಪ್ರಾಮುಖ್ಯತೆಗಾಗಿ ತಹತಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಬಜೆಟ್​ನಲ್ಲಿ ಸರಿದೂಗಿಸುವುದು ವಿತ್ತ ಸಚಿವರಿಗೆ ಬಹುದೊಡ್ಡ ಸವಾಲಿನ ಕೆಲಸ. ಆದರೆ, ಆರ್ಥಿಕ ಚೇತರಿಕೆಗೆ ಬಹಳ ಅಗತ್ಯ ಇರುವ ಕೆಲ ಆಯ್ದ ಕ್ಷೇತ್ರಗಳು ಈ ಬಾರಿ ಬಜೆಟ್​ನಿಂದ ಅಪೇಕ್ಷಿಸುತ್ತಿರುವುದಾದರೂ ಏನನ್ನು? ಇಲ್ಲಿದೆ ವಿವರ.

1) ಉದ್ಯಮಗಳು:

ಕೊರೋನಾ ವೈರಸ್ ಬಿಕ್ಕಟ್ಟು ಸೃಷ್ಟಿಯಾಗಿ ಪ್ರವಾಸೋದ್ಯಮ, ಆಹಾರೋದ್ಯಮ, ವೈಮಾನಿಕ ಸಾರಿಗೆ ಇತ್ಯಾದಿ ಉದ್ಯಮಗಳು ವಿಪರೀತ ಹಾನಿಯಾದವು. ಇಂಥ ಉದ್ಯಮಗಳಿಗೆ ಕೇಂದ್ರ ಸರ್ಕಾರ 8 ವರ್ಷದ ನಷ್ಟ ಮುಂದೂಡುವ (Loss-Carrying-Forward) ಅವಕಾಶವನ್ನು ಇನ್ನಷ್ಟು ಅವಧಿಗೆ ಹೆಚ್ಚಿಸಿದರೆ ಉತ್ತಮ ಎಂಬ ನಿರೀಕ್ಷೆ ಈ ವಲಯದಲ್ಲಿದೆ.

ಇದನ್ನೂ ಓದಿ: Budget 2021 - ಬಜೆಟ್​ನಲ್ಲಿ ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕು? ಹೊಸ ತಲೆಮಾರಿನ ಯುವ ಉದ್ಯಮಿ ಏನಂತಾರೆ?

2) ಕಾರ್ಪೊರೇಟ್ ತೆರಿಗೆ ರಿಯಾಯಿತಿಗಳು:

ಕೋವಿಡ್ ಸಂಕಷ್ಟಕ್ಕೆ ಮುಂಚೆಯೇ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆಗಳಲ್ಲಿ ಕಡಿತ ಮಾಡಿತ್ತು. ಕಂಪನಿಗಳಿಗೆ ಶೇ. 22 ಮತ್ತು ತಯಾರಿಕಾ ವಲಯದ ಕಂಪನಿಗಳಿಗೆ ಶೇ. 15ಕ್ಕೆ ಕಾರ್ಪೊರೇಟ್ ತೆರಿಗೆಯನ್ನ ಇಳಿಕೆ ಮಾಡಲಾಗಿತ್ತು. ಈಗ ಇನ್ನೂ ಹೆಚ್ಚಿನ ತೆರಿಗೆ ಇಳಿಕೆಯಾಗುವ ಸಾಧ್ಯತೆ ಇಲ್ಲ. ಹೂಡಿಕೆ ಆಧರಿತ ಪರಿಹಾರಗಳು ಹಾಗೂ ಹಿಂದಿನ ವರ್ಷದ ನಷ್ಟವನ್ನ ಸರಿದೂಗಿಸುವ ಅವಕಾಶ ನೀಡುವ ಮೂಲಕ ಕಂಪನಿಗಳಿಗೆ ನೆರವಾಗಬೇಕೆನ್ನುವ ನಿರೀಕ್ಷೆ ಇದೆ.

3) ಆರ್ ಅಂಡ್ ಡಿ ಕ್ಷೇತ್ರದಲ್ಲಿ ತೆರಿಗೆ ಪರಿಹಾರ:ಕೋವಿಡ್-19 ಬಿಕ್ಕಟ್ಟಿನ ವೇಳೆ ಭಾರತದ ಖಾಸಗಿ ವಲಯವು ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಬಹಳ ಹೂಡಿಕೆ ಮಾಡಿದೆ. ಇಂಥ ಕೆಲ ವೆಚ್ಚಗಳಿಗೆ ಬಜೆಟ್​​ನಲ್ಲಿ ತೆರಿಗೆ ರಿಯಾಯಿತಿ (Deductions) ನೀಡಬೇಕೆನ್ನುವ ಅಪೇಕ್ಷೆ ಇದೆ.

ಇದನ್ನೂ ಓದಿ: Union Budget App - ಕೇಂದ್ರದಿಂದ ಬಜೆಟ್ ಆ್ಯಪ್ ಬಿಡುಗಡೆ; ಮೊಬೈಲ್​ನಲ್ಲೇ ಮುಂಗಡಪತ್ರದ ವಿವರ

4) ರಿಯಲ್ ಎಸ್ಟೇಟ್:

ಕೊರೋನಾ ಬಿಕ್ಕಟ್ಟಿನಲ್ಲಿ ಅತಿ ಹೆಚ್ಚು ಪೆಟ್ಟು ತಿಂದ ಉದ್ಯಮಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಒಂದು. ಆಸ್ತಿಯ ಮಾರುಕಟ್ಟೆ ಮೌಲ್ಯ ಕಡಿಮೆಯಾದರೂ ಸ್ಟ್ಯಾಂಪ್ ಡ್ಯೂಟಿ ಮೌಲ್ಯ ಹಿಂದಿನ ದರದಲ್ಲೇ ಇವೆ. ಆಸ್ತಿಗಳು ಕಡಿಮೆ ದರಕ್ಕೆ ಮಾರಾಟವಾದರೂ ಆಸ್ತಿಗೆ ವಿಧಿಸುವ ತೆರಿಗೆ ಅನುಗುಣವಾಗಿ ಕಡಿಮೆಯಾಗುವುದಿಲ್ಲ. ಹೀಗಾಗಿ, ಇದರಲ್ಲಿ ಬದಲಾವಣೆ ತರುವ ಅಗತ್ಯ ಇದೆ.
Published by: Vijayasarthy SN
First published: February 1, 2021, 9:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories