ಹಣದಾಸೆಗೆ ಬ್ಯಾಗ್​ ಕದ್ದ ಕಳ್ಳರಿಗೆ ಕಾದಿತ್ತು ದೊಡ್ಡ ಶಾಕ್!; ಅಷ್ಟಕ್ಕೂ ಅದರಲ್ಲಿ ಇದ್ದಿದ್ದೇನು?

Latha CG | news18-kannada
Updated:October 10, 2019, 1:30 PM IST
ಹಣದಾಸೆಗೆ ಬ್ಯಾಗ್​ ಕದ್ದ ಕಳ್ಳರಿಗೆ ಕಾದಿತ್ತು ದೊಡ್ಡ ಶಾಕ್!; ಅಷ್ಟಕ್ಕೂ ಅದರಲ್ಲಿ ಇದ್ದಿದ್ದೇನು?
ಪ್ರಾತಿನಿಧಿಕ ಚಿತ್ರ
  • Share this:
ಕ್ಯಾಲಿಪೋರ್ನಿಯಾ(ಅ.10): ಇದು ವಿಚಿತ್ರ ಸಂಗತಿ. ಕಳ್ಳರು ಹಣದ ಆಸೆಗೆ ವ್ಯಕ್ತಿಯೊಬ್ಬನ ಬ್ಯಾಗ್​ ಕದ್ದು ಪರಾರಿಯಾಗಿದ್ದರು. ಬ್ಯಾಗ್​ ತುಂಬಾ ಹಣ ಅಥವಾ ಚಿನ್ನ ಇರಬಹುದೆಂದು ಕಳ್ಳರು ತುಂಬಾ ಖುಷಿಪಟ್ಟಿದ್ದರು. ಆದರೆ ಆತ ಬ್ಯಾಗ್​ ತೆರೆದು ನೊಡಿದ ತಕ್ಷಣ ಹೆದರಿ ಜೀವ ಉಳಿಸಿಕೊಳ್ಳಲು ಮಾರುದೂರ ಓಡಿ ಹೋಗಿದ್ದಾರೆ. ಅಷ್ಟಕ್ಕೂ ಆತ ಕದ್ದಿದ್ದ ಬ್ಯಾಗ್​ನಲ್ಲಿ ಏನಿತ್ತು ಅಂತೀರಾ? ಮುಂದೆ ಓದಿ.

ಹಣ ಇರಬಹುದೆಂದು  ಕದ್ದ ಬ್ಯಾಗ್​ನಲ್ಲಿ ಹಾವುಗಳನ್ನು ನೋಡಿ ಕಳ್ಳರು ದಿಗ್ಭ್ರಮೆಗೊಂಡಿದ್ದರು. ಹಾವು ಕಚ್ಚಿದರೆ ಸತ್ತೆ ಎಂದು ಪ್ರಾಣ ಉಳಿಸಿಕೊಳ್ಳಲು ಹೆದರಿ ಓಡಿದ್ದರು. ಈ ಘಟನೆ ನಡೆದಿರುವುದು ಕ್ಯಾಲಿಪೋರ್ನಿಯಾದಲ್ಲಿ.

ರೈಲ್ವೆ ನಿಲ್ದಾಣದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಬ್ರಿಯಾನ್​ ಗುಂಡಿ ಹಾವುಗಳ ಪ್ರೇಮಿ. ಹಾವಿನ ತಳಿಗಳನ್ನು ಮಾರುವ ಬ್ಯುಸಿನೆಸ್​ ಮ್ಯಾನ್. ಮಾರ್ಟಿನ್​ ಲೂಥರ್ ಕಿಂಗ್​ ಲೈಬ್ರರಿಗೆ ತೆರಳಿ, ಹಾವುಗಳ ಸಂತತಿ ಬಗ್ಗೆ ಉಪನ್ಯಾಸ ಕೊಟ್ಟಿದ್ದರು. ಜೊತೆಗೆ ಬ್ಯಾಗ್​ನಲ್ಲಿ ಹಾವುಗಳನ್ನು ಕೊಂಡೊಯ್ದಿದ್ದರು. ವಾಪಸ್ಸಾಗುವಾಗ ಕಾರನ್ನು ಗ್ಯಾರೇಜ್​ಗೆ ಬಿಟ್ಟು ಕಾಲ್ನಡಿಗೆಯಲ್ಲಿ ಮನೆಗೆ ತೆರಳಿದ್ದರು. ಈ ವೇಳೆ ಬಂದ ಕಳ್ಳರು ಅವರಿಂದ ಬ್ಯಾಗ್​ ಕಸಿದು ಪರಾರಿಯಾಗಿದ್ದ.

ಬಳಿಕ ಬ್ಯಾಗ್​ ತೆಗೆದು ನೋಡಿದಾಗ ಹಾವುಗಳನ್ನು ಕಂಡು ಬೆಚ್ಚಿ ಓಡಿ ಹೋಗಿದ್ದ. ಬ್ರಿಯಾನ್​ ನೋಡುವಷ್ಟರಲ್ಲಿ ಒಟ್ಟು 4 ಹಾವುಗಳಲ್ಲಿ 2 ಹಾವುಗಳು ಮಾತ್ರ ಇದ್ದವು. ಮತ್ತೆರಡು ಹಾವುಗಳಿಗಾಗಿ ಬ್ರಿಯಾನ್ ಹುಡುಕಾಟ ನಡೆಸಿದ್ದರು. ಪೊಲೀಸರಿಗೆ ವಿಷಯ ತಿಳಿಸಿದ್ದರು. ಗ್ಯಾರೇಜ್​ ಬಳಿಯ ಸಿಸಿಟಿವಿ ಕ್ಯಾಮೆರಾ ಹಾಗೂ ಸ್ಥಳೀಯರ ಸಹಾಯದಿಂದ ಕಳ್ಳರನ್ನು ಹಿಡಿಯಲಾಗಿದೆ.

First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ