ಜೈಪುರ, ರಾಜಸ್ಥಾನ: ಚಿನ್ನ (Gold) ಕದಿಯಲು ಬಂದ ಕಳ್ಳರು (Thieves) ವೃದ್ಧೆ (Old Women) ಎನ್ನುವುದನ್ನೂ ನೋಡದೇ ಅಮಾನವೀಯತೆ ಮೆರೆದಿದ್ದಾರೆ. ಕಳ್ಳರು ವೃದ್ಧೆಯ (Old Women) ಕಾಲು ಕತ್ತರಿಸಿ (Leg Cut), ಆಕೆಯ ಕಾಲಿನಲ್ಲಿದ್ದ ಚಿನ್ನದ ಕಡಗ (Gold Kadaga) ಕದ್ದೊಯ್ದಿದ್ದಾರೆ. ಇಂಥದ್ದೊಂದು ಆಘಾತಕಾರಿ ಘಟನೆ ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ನಡೆದಿದೆ. ಗಲ್ಫಾ ಎಂಬ ಹಳ್ಳಿಯಲ್ಲಿ ಮನೆ ಬಳಿಯೇ ವೃದ್ಧೆ ಕಾಲು ತುಂಡಾಗಿ, ಗಾಯದಿಂದ ನರಳುತ್ತಾ ಬಿದ್ದಿದ್ದಳು. ಅವಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿದೆ. ಮೂಲಗಳ ಪ್ರಕಾರ ಆಕೆಯ ವಯಸ್ಸು 100 ವರ್ಷಕ್ಕಿಂತ ಜಾಸ್ತಿ ಎನ್ನಲಾಗಿದೆ.
ಮನೆ ಬಳಿ ನಿಂತಿದ್ದ ವೃದ್ಧೆ
ಭಾನುವಾರ ಬೆಳಗ್ಗೆ ಮನೆ ಬಳಿ ಕಾಲು ಬೇರ್ಪಡಿಸಿದ ಸ್ಥಿತಿಯಲ್ಲಿ ವೃದ್ಧೆ ಪತ್ತೆಯಾಗಿದ್ದಾಳೆ. ತಕ್ಷಣ ನೆರೆಹೊರೆಯವರು ಆಕೆಯ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಭಾನುವಾರ ಮುಂಜಾನೆ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮನೆ ಬಳಿಯೇ ವೃದ್ಧೆ ಮೇಲೆ ಅಟ್ಯಾಕ್
ವೃದ್ಧೆ ತನ್ನ ಎರಡೂ ಕಾಲಿಗೆ ಚಿನ್ನದ ಕಡಗಗಳನ್ನು ಧರಿಸಿದ್ದಳು ಎನ್ನಲಾಗಿದೆ. ಅದನ್ನು ಗಮನಿಸಿದ ಕಳ್ಳರು, ಆಕೆಯ ಮನೆ ಮುಂದೆ ಹೊಂಚು ಹಾಕಿದ್ದಾರೆ. ಭಾನುವಾರ ಬೆಳಗ್ಗೆ ಮನೆ ಬಳಿ ಆಕೆ ನಿಂತಿದ್ದಾಗ ಏಕಾ ಏಕಿ ವೃದ್ಧೆ ಮೇಲೆ ದಾಳಿ ಮಾಡಿದ್ದಾರೆ.
ಇದನ್ನೂ ಓದಿ: Russia-Ukraine war: 24 ತಾಸಿನಲ್ಲಿ ರಷ್ಯಾದ 75 ಕ್ಷಿಪಣಿ ದಾಳಿಗೆ ನಲುಗಿದ ಕೀವ್: 8 ಸಾವು, 24 ಮಂದಿಗೆ ಗಾಯ!
ಕಾಲು ಕತ್ತರಿಸಿ ಕಡಗ ಕದ್ದೊಯ್ದ ದುಷ್ಟರು
ಈ ಕಳ್ಳರ ಪೈಕಿ ಒಬ್ಬಾತ ಆಕೆಯನ್ನು ಕೆಳಕ್ಕೆ ಬೀಳಿಸಿ, ಕಡಗ ಕದಿಯಲು ಯತ್ನಿಸಿದ್ದಾನೆ. ಆದರೆ ಅದು ಸುಲಭಕ್ಕೆ ಕೈಗೆ ಬರಲಿಲ್ಲ. ಹೀಗಾಗಿ ಮತ್ತೊಬ್ಬಾತ ತನ್ನ ಬಳಿಯಿದ್ದ ಮಾರಾಕ ಆಯುಧಗಳಿಂದ ಆಕೆಯ ಕಾಲು ಕತ್ತರಿಸಿದ್ದಾನೆ. ಬಳಿಕ ಕಾಲುಗಳನ್ನು ಅಲ್ಲೇ ಎಸೆದು, ಚಿನ್ನದ ಕಡಗ ಎತ್ತಿಕೊಂಡು ಹೋಗಿದ್ದಾರೆ.
ಒಂಟಿಯಾಗಿದ್ದನ್ನು ಗಮನಿಸಿ ದಾಳಿ
ಘಟನೆ ನಡೆದಾಗ ಮನೆಯವರ್ಯಾರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ವೃದ್ಧೆ ಒಂಟಿಯಾಗಿದ್ದ ಸಂದರ್ಭ ನೋಡಿಕೊಂಡು ಕಳ್ಳರು ದಾಳಿ ಮಾಡಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ ಆತನ ಮನೆಯ ಮಾಲೀಕರ ಮೂಲಕ ಘಟನೆ ಬಗ್ಗೆ ತಿಳಿದಿದೆಯಂತೆ. “ನಮ್ಮ ಮನೆಯ ಮಾಲೀಕರು ನನಗೆ ಹೇಳಿದಾಗ ಮುಂಜಾನೆ, ನನ್ನ ಅಜ್ಜಿ ಗಂಭೀರ ಸ್ಥಿತಿಯಲ್ಲಿ ಹೊರಗೆ ಮಲಗಿದ್ದರು. ನಾನು ಘಟನೆಯ ಬಗ್ಗೆ ನನ್ನ ತಾಯಿಗೆ ತಿಳಿಸಿದ್ದೇನೆ ಮತ್ತು ಅವರು ನನ್ನ ಸಂಬಂಧಿಕರಿಗೆ ತಿಳಿಸಲು ಹೇಳಿದರು. ಅವರೆಲ್ಲರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ " ಅಂತ ವೃದ್ಧೆಯ ಮೊಮ್ಮಗಳು ಹೇಳಿದ್ದಾಳೆ.
ಆಸ್ಪತ್ರೆಯಲ್ಲಿ ವೃದ್ಧೆಗೆ ಚಿಕಿತ್ಸೆ
ಸದ್ಯ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯದಲ್ಲೇ ಕಳ್ಳರನ್ನು ಹಿಡಿಯಲಾಗುವುದು ಎಂದು ಗಲ್ಟಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Hijab Protests: ಇರಾನ್ನಲ್ಲಿ ಹಿಂಸಾತ್ಮಕ ರೂಪ ಪಡೆದ ಹಿಜಾಬ್ ವಿರೋಧಿ ಪ್ರತಿಭಟನೆ, 19 ಮಕ್ಕಳು ಸೇರಿ 185 ಬಲಿ!
ಈ ಹಿಂದೆ ಶಾಸಕರ ತಾಯಿ ಮೇಲೂ ದಾಳಿ
ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದಲ್ಲಿ ಶಾಸಕರೊಬ್ಬರ ತಾಯಿ ಮೇಲೂ ಕಳ್ಳರು ದಾಳಿ ಮಾಡಿದ್ದರು. ಉತ್ತರ ಪ್ರದೇಶದ (Uttar Pradesh) ಬುಲಂದರ್ ಶಹರ್ (Bulandshahar) ಎಂಬಲ್ಲಿ 84 ವರ್ಷದ ವೃದ್ಧೆಯ ಎರಡೂ ಕಿವಿ (Ear) ಕತ್ತರಿಸಿ, ಆಕೆಯ ಕಿವಿಯಲ್ಲಿದ್ದ ಚಿನ್ನದ ಒಲೆಗಳನ್ನು ಕದ್ದೊಯ್ದಿದ್ದರು. 84 ವರ್ಷದ ವೃದ್ಧೆ ಬುಲಂದರ್ ಶಹರ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಚೌಧರಿ (MLA Pradeep Choudhari) ಅವರ ತಾಯಿಯಾಗಿದ್ದಾರೆ. ವೃದ್ಧೆಯ ಎರಡೂ ಕಿವಿಯನ್ನು ಕಳ್ಳರು ಕತ್ತರಿಸಿದ್ದು, ವೃದ್ಧೆ ಗಂಭೀರವಾಗಿ ಗಾಯಗೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ