ಮೊದಲೆಲ್ಲಾ ಈ ಕಳ್ಳತನಗಳು (Theft) ಮನೆಯ ಮುಂಬಾಗಿಲ ಬೀಗ ಒಡೆದು ಅಥವಾ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ಮನೆಯ ಹಿಂದೆ ಗೋಡೆಯನ್ನು ದೊಡ್ಡದಾಗಿ ಒಡೆದು ಅದರ ಮುಖಾಂತರ ಒಳಗೆ ನುಗ್ಗಿ ಬಂದು ಕಳ್ಳತನ ಮಾಡುತ್ತಿದ್ದರು. ಆದರೆ ಈಗ ತಂತ್ರಜ್ಞಾನ (Technology) ಬೆಳೆಯುತ್ತಿದ್ದಂತೆ, ಕಳ್ಳರು ಸಹ ಬದಲಾಗಿದ್ದಾರೆ. ಮನೆಯ ಬೀಗಕ್ಕೆ ಸ್ವಲ್ಪವೂ ಕೈ ಹಚ್ಚದೆ, ಎಲ್ಲಿಯೂ ಮನೆಯ ಗೋಡೆಗೆ ಧಕ್ಕೆ ಮಾಡದಂತೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಅನೇಕ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ (Bollywood Cinema) ತೋರಿಸುವ ಅನೇಕ ದರೋಡೆಗಳ ಟ್ರಿಕ್ಸ್ ಗಳನ್ನು (Tricks) ಈಗಿನ ಕಳ್ಳರು ಫಾಲೋ ಮಾಡುತ್ತಿದ್ದಾರೆ.
ಯುಎಸ್‌ನ ಆ್ಯಪಲ್ ಸ್ಟೋರ್‌ಗೆ ಹೇಗೆ ನುಗ್ಗಿದ್ದಾರೆ ಈ ಖದೀಮರು?
ಈಗ ಇಲ್ಲಿಯೂ ಸಹ ಅಂತಹದೇ ಒಂದು ವಿನೂತನ ರೀತಿಯಲ್ಲಿ ಮತ್ತು ಯಾರೊಬ್ಬರೂ ಊಹಿಸದಂತ ರೀತಿಯಲ್ಲಿ ಕಳ್ಳತನ ನಡೆದಿದೆ. ಯುಎಸ್ನಲ್ಲಿರುವ ಆ್ಯಪಲ್ ಸ್ಟೋರ್ನಲ್ಲಿ ಈ ಕಳ್ಳತನ ನಡೆದಿದೆ ಅಂತ ಹೇಳಿದರೆ, ನೀವು ಒಂದು ಕ್ಷಣ ಶಾಕ್ ಆಗಬಹುದು. ಈ ಕಳ್ಳರು ಪಕ್ಕದ ಶಾಪ್‌ನ ಬಾತ್‌ರೂಂ ಮೂಲಕ ಅಂಗಡಿಗೆ ನುಗ್ಗಿ 4.10 ಕೋಟಿ ರೂಪಾಯಿ ಮೌಲ್ಯದ 436 ಐಫೋನ್ ಗಳನ್ನು ಕದ್ದೊಯ್ದಿದ್ದಾರೆ.
ಸಿಯಾಟಲ್‌ನ ಸ್ಥಳೀಯ ಸುದ್ದಿ ಚಾನೆಲ್ ಕಿಂಗ್ 5 ನ್ಯೂಸ್ ಪ್ರಕಾರ, ಕಳ್ಳರು ಸಿಯಾಟಲ್ ಕಾಫಿ ಗೇರ್‌ಗೆ ನುಗ್ಗಿ ಆಪಲ್ ಸ್ಟೋರ್‌ನ ಬ್ಯಾಕ್ ರೂಂಗೆ ಪ್ರವೇಶವನ್ನು ಪಡೆಯಲು ಶಾಪ್‌ನ ಬಾತ್‌ರೂಂ ಗೋಡೆಯಲ್ಲಿ ರಂಧ್ರವನ್ನು ಕೊರೆದಿದ್ದಾರೆ. ನಂತರ ಕಳ್ಳರು ಆಪಲ್ ಸ್ಟೋರ್‌ನ ಭದ್ರತಾ ವ್ಯವಸ್ಥೆಗೆ ಚಳ್ಳೆ ಹಣ್ಣು ತಿನ್ನಿಸಿ ಸುಮಾರು 500,000 ಡಾಲರ್ ಮೌಲ್ಯದ 436 ಐಫೋನ್ ಗಳನ್ನು ಸ್ಟೋರ್ ನಿಂದ ಕದ್ದಿದ್ದಾರೆ.
ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಕಿರಾತಕ; ಮಾಲೀಕನ ಮಗಳನ್ನೇ ಅತ್ಯಾಚಾರಗೈದ ಕಾಮುಕ!
ಆ್ಯಪಲ್ ಸ್ಟೋರ್ ಗೆ ನುಗ್ಗಲು ಕಳ್ಳರು ಪಕ್ಕದ ಕಾಫಿ ಶಾಪ್ ಅನ್ನು ಬಳಸಿದ್ದಾರಂತೆ
ರಿಜನಲ್ ರಿಟೈಲ್ ಮ್ಯಾನೇಜರ್ ಆದ ಎರಿಕ್ ಮಾರ್ಕ್ಸ್ ಈ ಘಟನೆಯ ನಂತರ ಬೆಳಿಗ್ಗೆ ತನಗೆ ಕರೆ ಬಂದಿದೆ, ಆದರೆ ಏನೆಲ್ಲಾ ಕಳ್ಳತನವಾಗಿದೆ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಬಹಿರಂಗಪಡಿಸಿದರು. ಆದಾಗ್ಯೂ, ಆ್ಯಪಲ್ ಸ್ಟೋರ್ ಅನ್ನು ಪ್ರವೇಶಿಸಲು ಅವರ ಅಂಗಡಿಯನ್ನು ಬಳಸಲಾಗಿದೆ ಎಂದು ಪೊಲೀಸರು ದೃಢಪಡಿಸಿದರು.
ಕಳ್ಳರು ಸೃಷ್ಟಿಸಿದ ಸುರಂಗದ ಫೋಟೋದೊಂದಿಗೆ ಕಾಫಿ ಶಾಪ್ ಸಿಇಒ ಮೈಕ್ ಅಟ್ಕಿನ್ಸನ್ ಈ ಘಟನೆಯ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಕ್ಕದ ಆಪಲ್ ಸ್ಟೋರ್ ಒಳಗೆ ನುಗ್ಗಲು ನಮ್ಮ ಶಾಪ್ ನಲ್ಲಿರುವ ಬಾತ್‌ರೂಂ ಗೋಡೆಯಲ್ಲಿ ರಂಧ್ರವನ್ನು ಕೊರೆದಿದ್ದಾರೆ. 500 ಸಾವಿರ ಡಾಲರ್ ಮೌಲ್ಯದ ಐಫೋನ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಳ್ಳತನದಲ್ಲಿ ಅಂಗಡಿಯಲ್ಲಿ ಕೆಲಸ ಮಾಡುವವರ ಕೈವಾಡವನ್ನು ಅನುಮಾನಿಸಲಾಗಿದೆ
ಸಿಯಾಟಲ್ ಕಾಫಿ ಗೇರ್ ತಮ್ಮ ಮುರಿದ ಬೀಗಗಳನ್ನು ಬದಲಾಯಿಸಲು ಸುಮಾರು 900 ಡಾಲರ್ ಮತ್ತು ಬಾತ್‌ರೂಂ ದುರಸ್ತಿಗಾಗಿ 600 ರಿಂದ 800 ಡಾಲರ್ ವರೆಗೆ ಖರ್ಚು ಮಾಡಿತು ಅಂತ ಹೇಳಿಕೊಂಡಿದೆ. ಪೊಲೀಸರು ಈ ಕಳ್ಳತನದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಈ ಸ್ಟೋರ್ ಗಳಿರುವ ಆಲ್ಡರ್‌ವುಡ್ ಮಾಲ್ ಅವರಿಗೆ ಸಹಾಯ ಮಾಡುತ್ತಿದೆ. ಸಿಯಾಟಲ್ ನ ಕಿಂಗ್ 5 ನ್ಯೂಸ್ ಪ್ರಕಾರ, ಈ ಕಳ್ಳತನ ಮಾಡಿದ ರೀತಿಯನ್ನು ಗಮನಿಸಿದರೆ, ಈ ಕಳ್ಳತನವನ್ನು ಯಾರೋ ಅಂಗಡಿಯಲ್ಲಿ ಕೆಲಸ ಮಾಡುವವರ ಕೈವಾಡದಿಂದಲೇ ನಡೆದಿರಬೇಕು ಅಂತ ಅನುಮಾನಿಸಲಾಗುತ್ತಿದೆ.
ಈ ಕಳ್ಳತನದಲ್ಲಿ ಆಸಕ್ತಿದಾಯಕವಾಗಿಸುವ ಒಂದು ಸಂಗತಿಯೆಂದರೆ, ಸಾಮಾನ್ಯವಾಗಿ, ಕಳ್ಳರು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಕದಿಯಲು ಬ್ಯಾಂಕುಗಳು, ಆಭರಣ ಅಂಗಡಿಗಳು ಮತ್ತು ಇತರ ಸ್ಥಳಗಳನ್ನು ಲೂಟಿ ಮಾಡುತ್ತಾರೆ. ಆದರೆ ಇಲ್ಲಿ ಆ್ಯಪಲ್ ಉತ್ಪನ್ನಗಳನ್ನು ಕದ್ದಿದ್ದಾರೆ. ಈ ಗ್ಯಾಜೆಟ್ ಗಳು ಚಿನ್ನಕ್ಕಿಂತ ಕಡಿಮೆಯಿಲ್ಲ ಬಿಡಿ, ಏಕೆಂದರೆ ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಈ ಗ್ಯಾಜೆಟ್ ಗಳಿಗೆ ತುಂಬಾನೇ ಬೇಡಿಕೆ ಇದೆಯಂತೆ.
ಅನೇಕ ಆ್ಯಪಲ್ ಸ್ಟೋರ್ ಗಳು ತಮ್ಮದೇ ಆದ ಭದ್ರತಾ ಸಿಬ್ಬಂದಿಯನ್ನು ಹೊಂದಿಲ್ಲ ಮತ್ತು ಅವರ ಸ್ಟೋರ್ ಇರುವ ಮಾಲ್ ಗಳು ಒದಗಿಸಿದ ಭದ್ರತೆಯನ್ನೇ ಅವಲಂಬಿಸಿದ್ದಾರೆ. ಈ ಕಳ್ಳತನದ ಬಗ್ಗೆ ಆ್ಯಪಲ್ ಯಾವುದೇ ಹೇಳಿಕೆ ನೀಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ