HOME » NEWS » National-international » THEY LAUGH AND JOKE AT POLL RALLIES AS PEOPLE CRY FOR OXYGEN PRIYANKA CRITICISES YOGI ADITYANATH PM MODI MAK

Priyanka Gandhi: ಕೊರೋನಾದಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ, ಬಿಜೆಪಿ ನಾಯಕರು ಮಾತ್ರ ವೇದಿಕೆಯಲ್ಲಿ ನಗುತ್ತಿದ್ದಾರೆ; ಪ್ರಿಯಾಂಕ ಗಾಂಧಿ

ಉತ್ತರ ಪ್ರದೇಶದಲ್ಲಿ ಒಂದು ದಿನಕ್ಕೆ 29,754 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 9 ಲಕ್ಷಕ್ಕೆ ತಲುಪಿದೆ. 162 ಸಾವುಗಳೊಂದಿಗೆ ಸಾವಿನ ಸಂಖ್ಯೆ 10 ಸಾವಿರ ದಾಟಿದೆ ಎಂದು ಆರೋಗ್ಯ ಇಲಾಖೆ ವರದಿಗಳು ತಿಳಿಸಿವೆ.

news18-kannada
Updated:April 21, 2021, 5:21 PM IST
Priyanka Gandhi: ಕೊರೋನಾದಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ, ಬಿಜೆಪಿ ನಾಯಕರು ಮಾತ್ರ ವೇದಿಕೆಯಲ್ಲಿ ನಗುತ್ತಿದ್ದಾರೆ; ಪ್ರಿಯಾಂಕ ಗಾಂಧಿ
ಪ್ರಿಯಾಂಕಾ ಗಾಂಧಿ ವಾದ್ರಾ.
  • Share this:
ನವ ದೆಹಲಿ (ಏಪ್ರಿಲ್ 21); ದೇಶದಲ್ಲಿ ಕೊರೋನಾ ಅಲೆ ಮಿತಿಮೀರಿದೆ. ದಿನಕ್ಕೆ 2.5 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗುತ್ತಿದೆ. ಆಕ್ಸಿಜನ್​ ಕೊರತೆಯಿಂದಾಗಿ ಅಪಾರ ಜನ ಸಾವನ್ನಪ್ಪುತ್ತಿದ್ದರೆ, ಮತ್ತಷ್ಟು ಜನ ಕನಿಷ್ಟ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೆ ಮತ್ತು ಔಷಧಿ ಕೊರತೆಯಿಂದಾಗಿ ನೋವಿನಲ್ಲಿ ನರಳುತ್ತಿದ್ದಾರೆ. ಕೆಲವರು ತಮ್ಮ ಪ್ರೀತಿ ಪಾತ್ರರನ್ನು ಕಳೆದು ದುಃಖದ ಮಡುವಿನಲ್ಲಿದ್ದಾರೆ. ಆದರೆ ಬಿಜೆಪಿ ನಾಯಕರು ಮಾತ್ರ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಾ ವೇದಿಕೆಯಲ್ಲಿ ಜೋಕ್ ಮಾಡಿಕೊಂಡು ನಗುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಅವರು ಏಪ್ರಿಲ್ 23 ರಂದು ಮುರ್ಷಿದಾಬಾದ್, ದಕ್ಷಿಣ ಕೋಲ್ಕತಾ, ಸಿಯುರಿ ಮತ್ತು ಮಾಲ್ಡಾದಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸಲಿದ್ದಾರೆ. ಇದರ ಬದಲಿಗೆ ಮೋದಿ ಜನರೊಂದಿಗೆ ಕುಳಿತು ಪ್ರಸ್ತುತ ಬಿಕ್ಕಟ್ಟಿನ ಪರಿಹಾರದ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಿರೋ ಸರ್ವೆಯ ಪ್ರಕಾರ ಸುಮಾರು 5 ಕೋಟಿ ಜನರಿಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಹೀಗದ್ದರೂ ಯೋಗಿ ಸರ್ಕಾರ ಅತ್ಯಂತ ಕಡಿಮೆ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದೆ. ಅದರಲ್ಲಿ ಶೇ. 70 ರಷ್ಟು ಆಟಿಂಜನ್ ಟೆಸ್ಟ್ ನಡೆಸಿ, ಶೇ.30 ರಷ್ಟು ಮಾತ್ರ ಆರ್‌ಟಿಪಿಸಿಆರ್ ಟೆಸ್ಟ್ ನಡೆಸುತ್ತಿದೆ. ಖಾಸಗಿ ಲ್ಯಾಬ್‌ಗಳು ಪರೀಕ್ಷೆ ನಡೆಸದಂತೆ ಆದೇಶ ಹೊರಡಿಸಲಾಗಿದೆ. ಈ ಸರ್ಕಾರಕ್ಕೆ ಜನರ ಜೀವಕ್ಕಿಂತ ತಮ್ಮ ಸರ್ಕಾರದ ಪ್ರತಿಷ್ಠೆಯೇ ಮುಖ್ಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದಲ್ಲಿ ಒಂದು ದಿನಕ್ಕೆ 29,754 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 9 ಲಕ್ಷಕ್ಕೆ ತಲುಪಿದೆ. 162 ಸಾವುಗಳೊಂದಿಗೆ ಸಾವಿನ ಸಂಖ್ಯೆ 10 ಸಾವಿರ ದಾಟಿದೆ ಎಂದು ಆರೋಗ್ಯ ಇಲಾಖೆ ವರದಿಗಳು ತಿಳಿಸಿವೆ.

ಆಕ್ಸಿಜನ್ ರಫ್ತು ಮಾಡಿದ್ದು ಏಕೆ?

ಭಾರತವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಆಮ್ಲಜನಕ ಉತ್ಪಾದಿಸುವ ರಾಷ್ಟ್ರವಾಗಿದೆ. ಆದರೂ ನಮ್ಮ ದೇಶದ ಪ್ರಜೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಸಿಗುತ್ತಿಲ್ಲ ಏಕೆ ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ. ಈ ಕುರಿಟು ಟ್ವೀಟ್ ಮಾಡಿರುವ ಅವರು ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

ಭಾರತದ ಆಮ್ಲಜನಕ ರಫ್ತು

2019-20: 4502 ಮೆ.ಟನ್
2020-21: 9300 ಮೆ.ಟನ್

ನಮ್ಮಲ್ಲಿ ಆಮ್ಲಜನಕದ ಕೊರತೆ ಇರಲಿಲ್ಲ. ನಾವು ಆಮ್ಲಜನಕದ ಅತಿದೊಡ್ಡ ಉತ್ಪಾದಕರು. ಆದರೆ ಕೊರೊನಾದ ಬೆದರಿಕೆಯ ಹೊರತಾಗಿಯೂ, ಸರ್ಕಾರವು 2019-20ಕ್ಕೆ ಹೋಲಿಸಿದೆರೆ ಕಳೆದ ವರ್ಷ ಎರಡು ಪಟ್ಟು ಹೆಚ್ಚು ಆಮ್ಲಜನಕವನ್ನು ರಫ್ತುಮಾಡಿದೆ. ಈಗ ಹೇಳಿ ಆಮ್ಲಜನಕದ ಕೊರತೆಯಿಂದಾಗುತ್ತಿರುವ ಸಾವುಗಳಿಗೆ ಯಾರು ಕಾರಣ? ಎಂದು ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಹಾರಾಷ್ಟ್ರದಲ್ಲಿ ಕೈಮೀರಿದ ಪರಿಸ್ಥಿತಿ:

ಮಹಾರಾಷ್ಟ್ರದ ನಾಸಿಕ್​ ಡಾ ಜಾಕೀರ್ ಹುಸೇನ್ ಆಸ್ಪತ್ರೆಯ ಆಕ್ಸಿಜನ್ ಸೋರಿಕೆ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಆಸ್ಪತ್ರೆಯಲ್ಲಿ 171 ಕೋವಿಡ್-19 ರೋಗಿಗಳಿದ್ದರು. ಅವರಲ್ಲಿ 67 ಮಂದಿ ಆಮ್ಲಜನಕದ ಬಲದಲ್ಲಿ ಇದ್ದರು.ದೇಶದಲ್ಲಿ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಮಹಾರಾಷ್ಟ್ರದಲ್ಲಿ ಅತಿ ವೇಗವಾಗಿ ಸೋಂಕು ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಜಾರಿಗೆ ತರುತ್ತಿದೆ. ಇದೀಗ ಮತ್ತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಏ.20ರಿಂದ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳು ಬೆಳಗ್ಗೆ 7ರಿಂದ 11 ಗಂಟೆಯವರೆಗೆ ಮಾತ್ರ ತೆರೆಯಲು ಅವಕಾಶ ನೀಡಿದೆ.

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ಕೋವಿಡ್ ಮಾನದಂಡಗಳನ್ನು ಹೆಚ್ಚಿಸಿದೆ. ಏಪ್ರಿಲ್ 20 ರಿಂದ ದಿನಸಿ ಮತ್ತು ಇತರ ಅಂಗಡಿಗಳು ಬೆಳಗ್ಗೆ 7 ರಿಂದ 11 ರವರೆಗೆ ತೆರೆದಿರಲು ಅವಕಾಶವಿರುತ್ತದೆ. ಜೊತೆಗೆ ವಾರಂತ್ಯದ ದಿನಗಳಲ್ಲಿ ಲಾಕ್​ಡೌನ್​ ಮುಂದುವರೆಯಲಿದೆ.

ಇದನ್ನೂ ಓದಿ: Maharashtra LockDown: ಕೈಮೀರಿದ ಕೊರೋನಾ, ಮಹಾರಾಷ್ಟ್ರ ಸಂಪೂರ್ಣ ಲಾಕ್​ಡೌನ್​?; ಇಂದು ಘೋಷಣೆ ಸಾಧ್ಯತೆ

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌
Youtube Video

ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದರು. ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌ ಕೊರೋನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದರು. ಈಗ ದಿನ‌ ಒಂದರಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಲು ಆರಂಭಿಸಿವೆ.
Published by: MAshok Kumar
First published: April 21, 2021, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories