ನಮ್ಮನ್ನು ಕೊಂದು, ಮಾಂಸವನ್ನು ನಾಯಿಗಳಿಗೆ ಹಾಕುತ್ತಾರೆ: ತಾಲಿಬಾನಿಗಳ ಕ್ರೌರ್ಯವನ್ನು ಬಿಚ್ಚಿಟ್ಟ ಅಫ್ಘಾನಿಸ್ತಾನದ ಮಹಿಳೆ

ತಾಲಿಬಾನ್ ಮೊದಲು ಮಹಿಳೆಯರನ್ನು ಹಿಂಸಿಸುತ್ತಾರೆ. ನಮ್ಮ ದೇಹಕ್ಕೆ ವಿಕೃತವಾಗಿ ಗಾಯಗಳನ್ನು ಮಾಡಿ ಆ ಮೂಲಕ ಎಲ್ಲರಲ್ಲೂ ಹೆದರಿಕೆ ಹುಟ್ಟಿಸುತ್ತಾರೆ. ಕೆಲವೊಮ್ಮೆ ನಮ್ಮ ದೇಹವನ್ನು ನಾಯಿಗಳಿಗೆ ನೀಡಲಾಗುತ್ತದೆ.  ಅದರಿಂದ ನಾನು ಬದುಕುಳಿದಿದ್ದು ನನ್ನ ಅದೃಷ್ಟ.

ತಾಲಿಬಾನಿಗಳ ದಾಳಿಗೆ ಒಳಗಾಗಿದ್ದ ಕಟೇರಾ

ತಾಲಿಬಾನಿಗಳ ದಾಳಿಗೆ ಒಳಗಾಗಿದ್ದ ಕಟೇರಾ

  • Share this:
ತಾಲಿಬಾನ್‌ನ ದೃಷ್ಟಿಯಲ್ಲಿ ಮಹಿಳೆಯರು ಕೇವಲ ಮಾಂಸದ ಮುದ್ದೆಯಷ್ಟೇ. ನಮ್ಮನ್ನು ಕೊಂದು, ನಮ್ಮ ಮಾಂಸವನ್ನು ನಾಯಿಗಳಿಗೆ ಹಾಕುತ್ತಾರೆ ಎಂದು 33 ವರ್ಷದ ಖಟೇರಾ ಭಯಾನಕ ಪರಿಸ್ಥಿತಿಯನ್ನು ಬಿಚ್ಚಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ವರ್ಷ ತಾಲಿಬಾನಿಗಳ ಭೀಕರ ದಾಳಿಗೆ ತುತ್ತಾಗಿ ಬದುಕುಳಿದಿರುವ ಖಟೇರಾ ತಮ್ಮ ಭಯಾನಕ ಅನುಭವವನ್ನು ತೆರೆದಿಟ್ಟಿದ್ದಾರೆ. ಕಳೆದ ವರ್ಷ ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ಬಂಡುಕೋರರು ಗುಂಡು ಹಾರಿಸಿದಾಗ ಈಕೆಯ ಕಣ್ಣುಗಳಿಗೆ ಹಾನಿಯಾಗಿತ್ತು. ಖಟೇರಾ ತನ್ನ ಪತಿ ಮತ್ತು ಅಂಬೆಗಾಲಿಡುವ ಮಗುವಿನೊಂದಿಗೆ ನವೆಂಬರ್ 2020 ರಿಂದ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಆಕೆಯ ತಂದೆ ಮಾಜಿ ತಾಲಿಬಾನ್ ಹೋರಾಟಗಾರನೇ ಆಕೆಯ ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದರು ಎಂದು ಅವರು ದೆಹಲಿಯಲ್ಲಿ ನ್ಯೂಸ್ 18 ಗೆ ತಿಳಿಸಿದರು. 

ಖಟೇರಾ ಮಾಜಿ ಪೊಲೀಸ್ ಸಿಬ್ಬಂದಿಯಾಗಿದ್ದು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ತಾಲಿಬಾನಿಗಳು ಇವರನ್ನು ಕ್ರೂರವಾಗಿ ನಡೆಸಿಕೊಂಡಿತ್ತು. ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ, ಮೂವರು ತಾಲಿಬಾನ್ ಹೋರಾಟಗಾರರು ಖಟೇರಾ ಅವರ ಐಡಿಯನ್ನು ಮೊದಲು ಪರೀಕ್ಷಿಸಿದರು. ನಂತರ ಇವರ ಮೇಲೆ ಅನೇಕ ಬಾರಿ ಗುಂಡು ಹಾರಿಸಿದರು. ಖಟೇರಾ ಅವ ದೇಹದ ಮೇಲ್ಭಾಗದಲ್ಲಿ ಎಂಟು ಗುಂಡುಗಳು ಹೊಕ್ಕಿದ್ದವು. ಪ್ರಜ್ಞೆ ತಪ್ಪಿದ ನಂತರ ಆಕೆಯ ಕಣ್ಣುಗಳನ್ನು ಚಾಕುವಿನಿಂದ ಚುಚ್ಚಿದ್ದರು.

ತಾಲಿಬಾನ್ ಮೊದಲು ಮಹಿಳೆಯರನ್ನು ಹಿಂಸಿಸುತ್ತಾರೆ. ನಮ್ಮ ದೇಹಕ್ಕೆ ವಿಕೃತವಾಗಿ ಗಾಯಗಳನ್ನು ಮಾಡಿ ಆ ಮೂಲಕ ಎಲ್ಲರಲ್ಲೂ ಹೆದರಿಕೆ ಹುಟ್ಟಿಸುತ್ತಾರೆ. ಕೆಲವೊಮ್ಮೆ ನಮ್ಮ ದೇಹವನ್ನು ನಾಯಿಗಳಿಗೆ ನೀಡಲಾಗುತ್ತದೆ.  ಅದರಿಂದ ನಾನು ಬದುಕುಳಿದಿದ್ದು ನನ್ನ ಅದೃಷ್ಟ. ತಾಲಿಬಾನ್ ಅಡಿಯಲ್ಲಿ ಅಫ್ಘಾನಿಸ್ತಾನದ ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಮೇಲೆ ಯಾವ ನರಕ ಸಂಭವಿಸಿದೆ ಎಂದು ಊಹಿಸಲು ಅಸಾಧ್ಯ ಎಂದಿದ್ದಾರೆ.

ಇದನ್ನೂ ಓದಿ: Explained: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ..! ಭಾರತ ಮಾಡಬೇಕಿರುವುದು ಏನು.? ಇಲ್ಲಿದೆ ವಿವರ..

ಕಳೆದ 20 ವರ್ಷಗಳಲ್ಲಿ ನಾವು ಏನನ್ನು ಅನುಭವಿಸಿದ್ದೇವೆ ಎಂದು ಊಹಿಸುವುದು ಜಗತ್ತಿಗೆ ಕಷ್ಟ. ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲೇ ಸರ್ಕಾರ ಅಥವಾ ಪೊಲೀಸರೊಂದಿಗೆ ಕೆಲಸ ಮಾಡುವ ಮಹಿಳೆಯರನ್ನು ಬೇಟೆಯಾಡಲಾಯಿತು ಮತ್ತು ಬೆದರಿಸಲಾಯಿತು. ಈಗ ಮಹಿಳೆಯರಿಗೆ ಕೆಲಸ ಮಾಡುವ ಅವಕಾಶ ಮುಗಿಸಿದೆ. ಅವರು ಕೇವಲ ಮಹಿಳೆಯರನ್ನು ಕೊಲ್ಲುವುದಿಲ್ಲ. ಮಹಿಳೆಯ ದೇಹವನ್ನು ಪ್ರಾಣಿಗಳಿಗೆ ಆಹಾರವನ್ನಾಗಿ ಮಾಡುತ್ತಾರೆ ಎಂದು ಖಟೇರಾ ದುಃಖಿಸಿದ್ದಾರೆ.

ತಾಲಿಬಾನಿಗಳು 20 ವರ್ಷಗಳ ನಂತರ ಅಘ್ಘಾನಿಸ್ತಾವನ್ನು ವಶಕ್ಕೆ ಪಡೆದಿದ್ದಾರೆ. ಈ 20 ವರ್ಷದಲ್ಲಿ ಅಫ್ಘನ್ನರು ಬಹಳ ದೂರು ಬಂದಿದ್ದೆವು. ಸ್ಥಿರ ಜೀವನೋಪಾಯವನ್ನು ಕಂಡುಕೊಳ್ಳಲು, ಸರಿಯಾದ ಶಿಕ್ಷಣವನ್ನು ಪಡೆಯಲು. ಮಹಿಳೆಯರು ವಿಶ್ವವಿದ್ಯಾಲಯಗಳತ್ತ ಮುಖ ಮಾಡಿದ್ದರು. ಹುಡುಗಿಯರು ಶಾಲೆಗೆ ಹೋಗುವುದನ್ನು ನೋಡುವುದೇ ಒಂದು ಸುಂದರ ದೃಶ್ಯವಾಗಿತ್ತು. ಎಲ್ಲಾ ಕೇವಲ ಒಂದು ವಾರದಲ್ಲಿ ಹಾಳಾಗಿ ಹೋಯಿತು. ತಾಲಿಬಾನ್‌ನಿಂದ ರಕ್ಷಿಸಲು ಹುಡುಗಿಯರ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಕುಟುಂಬಸ್ಥರು ಸುಡಲು ಆರಂಭಿಸಿದ್ದಾರೆ ಎಂದು ನನ್ನ ಸಂಬಂಧಿಕರಿಂದ ತಿಳಿದು ಬಂದಿದೆ ಎಂದು ಖಟೇರಾ ಹೇಳಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಆದಷ್ಟು ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: