ಕಾಂಗ್ರೆಸ್​ನವರು ಉಗ್ರರಿಗೆ ಬಿರಿಯಾನಿ ತಿನ್ನಿಸಿದರೆ ನಾವು ಗುಂಡಿನ ರುಚಿ ತೋರಿಸಿದ್ದೇವೆ; ಸಿಎಂ ಯೋಗಿ ಆದಿತ್ಯನಾಥ್​

ಬಾಲಕೋಟ್​ ಮೇಲೆ ಭಾರತೀಯ ವಾಯುಸೇನೆ ನಡೆಸಿದ್ದ ಸರ್ಜಿಕಲ್ ದಾಳಿಯಲ್ಲಿ ಮಡಿದವರ ಲೆಕ್ಕ ಕೇಳಿದ್ದ ಕಾಂಗ್ರೆಸ್​ ನಾಯಕ ಸ್ಯಾಮ್​ ಪಿತ್ರೊಡ ವಿರುದ್ಧವೂ ಯೋಗಿ ಆದಿತ್ಯನಾಥ್​ ಹರಿಹಾಯ್ದಿದ್ದಾರೆ.

sushma chakre | news18
Updated:March 24, 2019, 8:54 PM IST
ಕಾಂಗ್ರೆಸ್​ನವರು ಉಗ್ರರಿಗೆ ಬಿರಿಯಾನಿ ತಿನ್ನಿಸಿದರೆ ನಾವು ಗುಂಡಿನ ರುಚಿ ತೋರಿಸಿದ್ದೇವೆ; ಸಿಎಂ ಯೋಗಿ ಆದಿತ್ಯನಾಥ್​
ಯೋಗಿ ಆದಿತ್ಯನಾಥ
sushma chakre | news18
Updated: March 24, 2019, 8:54 PM IST
ನವದೆಹಲಿ (ಮಾ. 24): ಕಾಂಗ್ರೆಸ್​ನವರು ಉಗ್ರರಿಗೆ ಬಿರಿಯಾನಿ ತಿನ್ನಿಸಿದರೆ ನಾವು ಅವರಿಗೆ ಬುಲೆಟ್​ ಮತ್ತು ಬಾಂಬ್​ನ ರುಚಿ ತೋರಿಸಿದ್ದೇವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಾಗ್ದಾಳಿ ನಡೆಸಿದ್ದಾರೆ.

ಭಯೋತ್ಪಾದಕರ ಬಗ್ಗೆ ಮೃದುವಾಗಿ ಮಾತನಾಡಿದ್ದ ಕಾಂಗ್ರೆಸ್​ ನಾಯಕರ ಬಗ್ಗೆ ಟೀಕಾಪ್ರಹಾರ ನಡೆಸಿರುವ ಯೋಗಿ ಆದಿತ್ಯನಾಥ್​ ವಿರೋಧಪಕ್ಷದಲ್ಲಿರುವ ಕಾಂಗ್ರೆಸ್​ನವರು ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿದ್ದಾರೆ. ಆದರೆ, ನಾವು ಗುಂಡನ್ನು ತಿನ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಪ್ನಾ ಚೌಧರಿಯನ್ನೇ ರಾಹುಲ್ ಗಾಂಧಿ ಮದುವೆಯಾಗಬೇಕು; ವಿವಾದಕ್ಕೆ ಕಾರಣವಾಯ್ತು ಬಿಜೆಪಿ ಶಾಸಕನ ಹೇಳಿಕೆ

ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತೀಯ ವಾಯುಸೇನೆ​ ಸರ್ಜಿಕಲ್ ಸ್ಟ್ರೈಕ್​ನಲ್ಲಿ ಮಡಿದ ಉಗ್ರರ ಲೆಕ್ಕ ಕೇಳಿದ್ದ ಕಾಂಗ್ರೆಸ್​ ಹಿರಿಯ ನಾಯಕ ಸ್ಯಾಮ್​ ಪಿತ್ರೊಡ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಿಎಂ ಯೋಗಿ ಆದಿತ್ಯನಾಥ್​, ಸ್ಯಾಮ್​ ಈ ದೇಶಕ್ಕೆ ದೊಡ್ಡ ಕಪ್ಪುಚುಕ್ಕೆ. ಅವರಿಗೆ ದೇಶಾಭಿಮಾನವೇ ಇಲ್ಲ ಎಂದಿದ್ದಾರೆ.

First published:March 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ