ಕೇರಳದ ಈ ಶಾಲೆಯ ಮಕ್ಕಳ ಪಾಲಿಗೆ ಸೋತ ಸ್ಪಾನಿಶ್ ರನ್ನರ್ ಹೀರೋ, ಇದಕ್ಕೆ ಕಾರಣ ಬದುಕಿನ ಪಾಠ ಕಲಿಸಿದ ಟೀಚರ್ !

ಶಾಲೆಯ ಪಾಠವೆಲ್ಲಾ ಕಲಿತು ಪರೀಕ್ಷೆ ಮುಗಿದು ರಿಸಲ್ಟ್ ಬಂದ ನಂತರವೂ ನಮ್ಮ ನೆನಪಿನಲ್ಲಿ ಉಳಿಯುತ್ತದಲ್ಲಾ? ಅದು ಶಿಕ್ಷಣ. ಮಕ್ಕಳ ಆಲೋಚನೆಯ ರೀತಿಯನ್ನೇ ಬದಲಿಸೋ ಕೆಲವು ಉದಾಹರಣೆಗಳ ಮೂಲಕ ಕೇರಳದ ಈ ಟೀಚರ್ ಅದ್ಭುತವನ್ನೇ ಮಾಡಿದ್ದಾರೆ. ನಾವು ಗೆಲ್ಲುವುದು ಮಾತ್ರ ಮುಖ್ಯವಲ್ಲ, ಹೇಗೆ ಗೆಲ್ಲುತ್ತೇವೆ ಎನ್ನುವುದು ಅದಕ್ಕಿಂತ ಮುಖ್ಯ ಎನ್ನುವುದನ್ನು ಅದೆಷ್ಟು ಸುಂದರವಾಗಿ ವಿವರಿಸಿದ್ದಾರೆ.

ಇವಾನ್ ಜಗತ್ತು ಗೆದ್ದ ಘಳಿಗೆ

ಇವಾನ್ ಜಗತ್ತು ಗೆದ್ದ ಘಳಿಗೆ

  • Share this:

ಶಿಕ್ಷಣವೆಂದರೆ ಕೇವಲ ಪಠ್ಯವಷ್ಟೇ ಅಲ್ಲ, ನಿಜವಾದ ಬದುಕಿನಲ್ಲಿ ಮಾನವೀಯತೆಯ ಸೆಲೆಯನ್ನು ಕಲಿಸಬೇಕು ಎನ್ನುವುದನ್ನು ಶಿಕ್ಷಕಿಯೊಬ್ಬರು ಸಾಧಿಸಿ ತೋರಿಸಿದ್ದಾರೆ. ಗೆಲುವುಗಳನ್ನಷ್ಟೇ ತುಂಬುತ್ತಿರುವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಾಮಾಣಿಕತೆಯ ಅನಾವರಣ ಇಲ್ಲಿದೆ.ಡಿಸೆಂಬರ್ 2012 ರಲ್ಲಿ ಸ್ಪೇನ್‌ನಲ್ಲಿ ನಡೆದ ಓಟದ ಸ್ಪರ್ಧೆಯ ಛಾಯಾಚಿತ್ರವೊಂದು ದೇಶಾದ್ಯಂತ ಸದ್ದು ಮಾಡಿದೆ. ಸ್ಥಳೀಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆಯು ಮಾನವನ ಎಲ್ಲಾ ಸದ್ಗುಣಗಳ ತಾಯಿ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತದೆ. ಅಲನಲ್ಲೂರ್‌ನ ಕೃಷ್ಣ ಎ.ಎಲ್.ಪಿ ಶಾಲೆಯಲ್ಲಿ 4ನೇ ತರಗತಿಯ ಮಕ್ಕಳಿಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುಮಿತಾ ಕೆ ಎಲ್ಲಾ ಶಿಕ್ಷಕರಿಗೂ ಮಾದರಿಯಾಗಿದ್ದಾರೆ. ತಮ್ಮ ಆನ್​ಲೈನ್​ ತರಗತಿಯಲ್ಲಿ ಒಬ್ಬ ಪ್ರಸಿದ್ಧ ಕ್ರೀಡಾಪಟುವಿನ ಚಿತ್ರವನ್ನು ತೋರಿಸುವ ಮೂಲಕ ಮಕ್ಕಳಿಗೆ ಹೊಸ ಅರಿವು ಮೂಡಿಸಿದ್ದಾರೆ. 2012ರಲ್ಲಿ ವೈರಲ್ ಆಗಿದ್ದ ಫೋಟೋ ಸಾಂಕ್ರಾಮಿಕದ ಈ ಕಾಲಘಟ್ಟದಾಚೆಗೂ ಮತ್ತೊಮ್ಮೆ ಸದ್ದು ಮಾಡುತ್ತಿದೆ.


ಆನ್‌ಲೈನ್ ತರಗತಿಯಲ್ಲಿ ಚಿತ್ರವನ್ನು ವಿಶ್ಲೇಷಿಸಲು ಮತ್ತು ಅದರ ಬಗ್ಗೆ ಪ್ರತಿಕ್ರಿಯಿಸಲು ಸುಮಿತಾ ಮಕ್ಕಳನ್ನು ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳು ಸ್ವಾಭಾವಿಕವಾಗಿ ಮತ್ತು ಬಹಳ ಸ್ವಂತಿಕೆಯಿಂದ ಪ್ರತಿಕ್ರಿಯಿಸಿದ್ದು ಶಿಕ್ಷಣ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿತು. ಮಕ್ಕಳ ವಿಭಿನ್ನ ಪ್ರತಿಕ್ರಿಯೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.


ಜಿ. ಅರ್ಥನಾ ಈ ಸಂದರ್ಭವನ್ನು ನಾಟಕೀಯವಾಗಿ ಪ್ರಸ್ತುತಪಡಿಸಿದ್ದಾರೆ. ಅಲ್ಲದೇ ಅತ್ಯುತ್ತಮ ಸಂಭಾಷಣೆಯನ್ನಾಗಿ ಮಾಡಿದ್ದಾರೆ. ಸಿ.ಎಸ್ ಅಪರ್ಣ ಚಿತ್ರದಲ್ಲಿರುವ ಸ್ಪ್ಯಾನಿಷ್​​ ಓಟಗಾರನಿಗೆ ಪತ್ರ ಬರೆದಿದ್ದು ಇನ್ನೊಂದಿಷ್ಟು ಜನರು ಪ್ರಬಂಧಗಳನ್ನು ಬರೆದಿದ್ದಾರೆ. 30 ವಿದ್ಯಾರ್ಥಿಗಳುಳ್ಳ ಆ ತರಗತಿಯ ಮಕ್ಕಳು ತಮ್ಮ ಜೀವನದಲ್ಲಿ ನೆನಪಿಡಲೇಬೇಕಾದಂತಹ ಸಂಗತಿ ಕಲಿತಿದ್ದಾರೆ. ಒಬ್ಬ ಮನುಷ್ಯ ಪ್ರಾಮಾಣಿಕವಾಗಿರುವುದಕ್ಕಿಂತಲೂ ಯಾವುದೇ ಗೆಲುವು ಹೆಚ್ಚು ಮೌಲ್ಯಯುತವಾಗಿರುವುದಿಲ್ಲ ಎನ್ನುವುದನ್ನು ಕಲಿತಿದ್ದಾರೆ.


ಏನಿದು ಘಟನೆ?


ಸ್ಪ್ಯಾನಿಷ್ ಓಟಗಾರ ಇವಾನ್ ಫರ್ನಾಂಡೀಸ್ ಅನಯಾ ಮಕ್ಕಳ ಹೀರೋ. ಕೀನ್ಯಾದ ಚಾಂಪಿಯನ್ ಅಬೆಲ್ ಕಿಪ್ರೊಪ್ ಮುಟೈ ಡಿಸೆಂಬರ್ 2012ರಲ್ಲಿ ಸ್ಪೇನ್‌ನ ಬುರ್ಲಾಡಾದಲ್ಲಿ ನಡೆದ ಓಟವನ್ನು ಗೆಲ್ಲುವುದು ನಿಶ್ಚಿತ ಮತ್ತು ಖಚಿತವಾಗಿತ್ತು. ಆದರೆ ಅಲ್ಲೊಂದು ಮಹಾ ಪ್ರಮಾದ ನಡೆದುಬಿಟ್ಟಿತು!


ಮುಟೈ ಓಟದ ಅಂತಿಮ ಗೆರೆಯನ್ನು ದಾಟಿದ್ದಾರೆಂದು ತಪ್ಪಾಗಿ ಯೋಚಿಸಿದ್ದರು. ಅದೇ ಕಾರಣಕ್ಕೆ 10 ಮೀಟರ್ ಅಂತರ ಇರುವಾಗಲೇ ತಮ್ಮ ವೇಗವನ್ನು ಕಡಿಮೆ ಮಾಡಿಕೊಂಡು ಓಟಕ್ಕೆ ಮುಕ್ತಾಯದ ಗೆರೆ ಎಳೆದಿದ್ದರು. ಈ ಘಟನೆಯ ನಂತರದ ಬೆಳವಣಿಗೆಯೇ ಮನುಕುಲಕ್ಕೆ ಇಂದಿಗೂ ಪಾಠವಾಗಿ ಉಳಿದಿರುವುದು.


ಇದನ್ನೂ ಓದಿ: NASA: ಕೊತಕೊತ ಕುದಿಯುತ್ತಿದೆ ಸೂರ್ಯನ ಮೇಲ್ಮೈ, ಬಹಳ ಹತ್ತಿರದಿಂದ ಸೂರ್ಯನ ವಿಡಿಯೋ ತೆಗೆದಿದೆ ನಾಸಾ.. ನೋಡಿ ಹೇಗಿದೆ !

ಸ್ಪ್ಯಾನಿಷ್ ಓಟಗಾರ ಇವಾನ್ ಈ ಸಂದರ್ಭ ಮತ್ತು ಅವಕಾಶ ಬಳಸಿಕೊಂಡು ಅದ್ಭುತವಾಗಿ ಗೆಲುವು ಸಾಧಿಸಬಹುದಿತ್ತು. ಆದರೆ ಇವಾನ್ ನಿಜವಾದ ಕ್ರೀಡಾಪಟು ಅನ್ನೋದನ್ನ ಸಾಬೀತು ಮಾಡಿಬಿಟ್ಟರು. ಒಬ್ಬ ಓಟಗಾರನ ಗೆಲುವನ್ನು ಅಷ್ಟು ಸುಲಭದಲ್ಲಿ ಕಬಳಿಸಲು ಸಿದ್ಧವಿರಲಿಲ್ಲ. ಈ ಸಂದರ್ಭದಲ್ಲಿ ಮುಟೈರಿಗೆ ಇನ್ನೂ ಮುಂದಕ್ಕೆ ಓಡಬೇಕು. ಇದು ಅಂತಿಮ ಗುರಿಯ ಗೆರೆಯಲ್ಲ ಎಂದು ಅವರನ್ನು ಮುಂದಕ್ಕೆ ತಳ್ಳಿದರು. ಮುಟೈ ಅವರ ಹಿಂದೆಯೇ ಇವಾನ್ ಓಡಿ ಬಂದು ಮುಟೈರನ್ನು ಮೊದಲ ಸ್ಥಾನ ತಲುಪುವಂತೆ ಮಾಡಿದರು. ಇವಾನ್ ಅನಯಾ ಗೆಲುವಿನ ಕಪ್‌ಗಿಂತಲೂ ಪ್ರಾಮಾಣಿಕತೆಯ ನಡವಳಿಕೆಗೆ ಆದ್ಯತೆ ನೀಡಿದರು. ಆ ಮೂಲಕ ವಿಶ್ವಕ್ಕೆ ಹೀರೋ ಆಗಿ ಮಹಾನ್ ಗೆಲುವು ಕಂಡರು. 'ಅವನು ನಮ್ಮ ನಾಯಕ' ಎಂದು ಜಗತ್ತು ಒಕ್ಕೊರಲಿನಿಂದ ಕೂಗಿ ಹೇಳಿತು..!


ಹಿರಿಯ ಶಿಕ್ಷಣ ತಜ್ಞ ಟಿ.ಪಿ. ಕಲಾಧರನ್ ತಮ್ಮ ಮಲಯಾಳಂ ಬ್ಲಾಗ್ ಚೊಂಡುವೈರಲ್ ನಲ್ಲಿ ಶಿಕ್ಷಕಿ ಸುಮಿತಾ ಪಠ್ಯಕ್ರಮದ ಪಾಠವನ್ನು ಪ್ರಸ್ತುತಪಡಿಸಿದ್ದಾರೆ. ಸದ್ಯ ಇದು ರಾಜ್ಯಾದ್ಯಂತ ಮೆಚ್ಚುಗೆ ಪಡೆಯುತ್ತಿದೆ.


ಅಬ್ಬಾ! ಎಂಥಾ ನಿದರ್ಶನ


ಶಿಕ್ಷಕಿ ಸುಮಿತಾ ಮಕ್ಕಳನ್ನು ಪಠ್ಯಪುಸ್ತಕದ ಮಿತಿಯೊಳಗೆ ನಿರ್ಬಂಧಿಸದೇ ಪುಸ್ತಕಕ್ಕೆ ಸಂಬಂಧಿಸದ ವಿಷಯವನ್ನು ಒದಗಿಸುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಮಾನವೀಯ ಗುಣಗಳನ್ನು ಬಿತ್ತಿದ್ದಾರೆ. ಮಕ್ಕಳ ಸ್ವಾತಂತ್ರ್ಯವನ್ನು ಗೌರವಿಸುವ ಮೂಲಕ ತಮ್ಮ ಮಾನ್ಯತೆ ಹೆಚ್ಚಿಸಿಕೊಂಡಿದ್ದಾರೆ. ಇಂತಹ ಶಿಕ್ಷಕರ ಪರಂಪರೆಯನ್ನು ಬೆಳೆಸುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದು ಡಾ.ಕಲಾಧಾರನ್ ಹೇಳಿದ್ದಾರೆ.
ಅವರ ಸಹೋದ್ಯೋಗಿಗಳು, ವಿಶೇಷವಾಗಿ ಜಯಮಾನಿಕಂಡಕುಮಾರ್, ಕೆ. ಸುಮಿತಾ ಅವರನ್ನು ಹೊಗಳಿದರು. ಜೊತೆಗೆ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳ ದಿನಚರಿಗಳನ್ನು ಇರಿಸಿಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸುತ್ತಿದ್ದಾರೆ. "ಡೈರಿ ಬರವಣಿಗೆ ಅವರಿಗೆ ಅದ್ಭುತಗಳನ್ನು ಮಾಡುತ್ತಿದೆ" ಎಂದು ಜಯಮಾನಿಕಂಡಕುಮಾರ್ಹೇ ಳಿದ್ದಾರೆ.

Published by:Soumya KN
First published: