• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Metal balls: ಆಕಾಶದಿಂದ ಬಿದ್ದಿವೆಯಂತೆ ಈ ವಿಚಿತ್ರ ಲೋಹದ ಚೆಂಡುಗಳು! ದಿಗ್ಭ್ರಮೆಗೊಂಡ ಗುಜರಾತ್ ನಿವಾಸಿಗಳು

Metal balls: ಆಕಾಶದಿಂದ ಬಿದ್ದಿವೆಯಂತೆ ಈ ವಿಚಿತ್ರ ಲೋಹದ ಚೆಂಡುಗಳು! ದಿಗ್ಭ್ರಮೆಗೊಂಡ ಗುಜರಾತ್ ನಿವಾಸಿಗಳು

ಆಕಾಶದಿಂದ ಭೂಮಿಗೆ ಬಿದ್ದ ಲೋಹದ ಚೆಂಡುಗಳು

ಆಕಾಶದಿಂದ ಭೂಮಿಗೆ ಬಿದ್ದ ಲೋಹದ ಚೆಂಡುಗಳು

ಗುಜರಾತಿನ ಆನಂದ್ ಜಿಲ್ಲೆಯ ಭಲೇಜ್, ಖಂಭೋಲಾಜ್ ಮತ್ತು ರಾಂಪುರ ಎಂಬ ಮೂರು ವಿಭಿನ್ನ ಸ್ಥಳಗಳಲ್ಲಿ ನಿವಾಸಿಗಳು ವಿಚಿತ್ರ ಲೋಹದ ಚೆಂಡುಗಳು ಬಂದು ಬಿದ್ದಿರುವುದನ್ನು ನಿವಾಸಿಗಳು ನೋಡಿದ್ದಾರೆ. ಈ ನಿಗೂಢ ಲೋಹದ ಚೆಂಡುಗಳನ್ನು ನೋಡಿ ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ.

  • Share this:

ಕೆಲವೊಮ್ಮೆ (Sometimes) ನಾವು ಮನೆಯಲ್ಲಿ (Home) ರಾತ್ರಿ (Night) ಮಲಗಿರುವಾಗ ಒಮ್ಮಿಂದೊಮ್ಮೆಲೆ ಒಂದು ದೊಡ್ಡ ಸ್ಫೋಟವಾದ (explosion) ಹಾಗೆ ಶಬ್ದವನ್ನು (Sound) ನಾವು ಕೇಳಿರುತ್ತೇವೆ. ಆ ದೊಡ್ಡ (Loud) ಶಬ್ದ ಕೇಳಿ ನಾವು ನಿದ್ದೆಯಿಂದ (Sleep) ಎಷ್ಟೋ ಬಾರಿ ದಿಢೀರನೆ ಎಚ್ಚೆತ್ತು ಕೊಂಡಿರುತ್ತೇವೆ. ಇಂತಹ ದೊಡ್ಡ ಶಬ್ದ ಏಕೆ ಮತ್ತು ಎಲ್ಲಿಂದ ಬಂತು, ಆಕಾಶದಿಂದ (Sky) ಭೂಮಿಗೆ (Earth) ಏನಾದರೂ ಬಂದು ಅಪ್ಪಳಿಸಿತೇ ಎಂದು ಅಂದು ಕೊಂಡಿರುತ್ತೇವೆ. ಇಂತಹದೇ ಒಂದು ದೊಡ್ಡ ಶಬ್ದವೊಂದು ಗುಜರಾತಿನ (Gujarat) ಕೆಲವು ಜಿಲ್ಲೆಗಳಲ್ಲಿ (District) ಕೇಳಿ ಬಂದಿದೆ ಅಂತೆ.


ಆಕಾಶದಿಂದ ಭೂಮಿಗೆ ಬಿದ್ದ ಲೋಹದ ಚೆಂಡುಗಳು
ಬಹುತೇಕ ನಿವಾಸಿಗಳು ಈ ಶಬ್ದವನ್ನು ಕೇಳಿ ದಿಗ್ಭ್ರಮೆಗೊಂಡಿದ್ದಾರಂತೆ ಎಂದು ಹೇಳಲಾಗುತ್ತಿದೆ. ಈ ಶಬ್ದ ಕೇಳಿದ ಜನರು ಭಯಭೀತರಾಗಿ ಭೂಕಂಪ ಇರಬೇಕೆಂದು ಮನೆಯಿಂದ ಕೂಡಲೇ ಹೊರಗೆ ಓಡಿ ಬಂದಿದ್ದಾರಂತೆ ಎಂದು ಮಾಧ್ಯಮದ ವರದಿಯೊಂದು ಹೇಳಿದೆ. ಆಕಾಶದಿಂದ ವಿಚಿತ್ರವಾದ ಲೋಹದ ದೊಡ್ಡ ಚೆಂಡುಗಳು ಭೂಮಿಗೆ ಬಂದು ಬಿದ್ದಿವೆ ಎಂದು ನಂತರ ಗೊತ್ತಾಯಿತು.


ವಿಚಿತ್ರ ಲೋಹದ ಚೆಂಡುಗಳು
ಗುಜರಾತಿನ ಆನಂದ್ ಜಿಲ್ಲೆಯ ಭಲೇಜ್, ಖಂಭೋಲಾಜ್ ಮತ್ತು ರಾಂಪುರ ಎಂಬ ಮೂರು ವಿಭಿನ್ನ ಸ್ಥಳಗಳಲ್ಲಿ ನಿವಾಸಿಗಳು ವಿಚಿತ್ರ ಲೋಹದ ಚೆಂಡುಗಳು ಬಂದು ಬಿದ್ದಿರುವುದನ್ನು ನಿವಾಸಿಗಳು ನೋಡಿದ್ದಾರೆ. ಈ ನಿಗೂಢ ಲೋಹದ ಚೆಂಡುಗಳನ್ನು ನೋಡಿ ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಈ ಘಟನೆಯ ನಂತರ ನಿವಾಸಿಗಳು ಸ್ಥಳೀಯ ಪೊಲೀಸರನ್ನು ಕೂಡಲೇ ಸಂಪರ್ಕಿಸಿದರು. ಅವರು ತನಿಖೆಯನ್ನು ಪ್ರಾರಂಭಿಸುವ ಸಲುವಾಗಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಜ್ಞರನ್ನು ಕರೆದರು.


ಇದನ್ನೂ ಓದಿ: Tips to Waitress: 4,000ದ ಆಹಾರ ತಿಂದು 62 ಸಾವಿರ ಟಿಪ್ಸ್ ಕೊಟ್ಟ! ಕಾರಣ ಇಂಟ್ರೆಸ್ಟಿಂಗ್


ಸುಮಾರು 5 ಕೆಜಿ ತೂಕದ ಗಂಟೆಯಂತೆ ಕಾಣುತ್ತಿದ್ದ ಮೊದಲ ದೊಡ್ಡ ಕಪ್ಪು ಲೋಹದ ಚೆಂಡು ಗುರುವಾರ ಸಂಜೆ 4:45 ರ ಸುಮಾರಿಗೆ ಭಲೇಜ್ ನಲ್ಲಿ ಬಿದ್ದಿತು. ಇದಾದ ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಇದೇ ರೀತಿಯ ವಿಚಿತ್ರವಾದ ಲೋಹದ ಚೆಂಡುಗಳು ಬಿದ್ದಿವೆ ಎಂದು ಹೇಳಲಾಗುತ್ತಿದೆ. “ಮೊದಲ ಲೋಹದ ಚೆಂಡು ಸಂಜೆ 4.45ರ ಸುಮಾರಿಗೆ ಬಿದ್ದಿತು ಮತ್ತು ಶೀಘ್ರದಲ್ಲಿಯೇ ಇತರ ಎರಡು ಸ್ಥಳಗಳಿಂದ ಇದೇ ರೀತಿಯ ವರದಿಗಳು ಬಂದವು” ಎಂದು ಆನಂದ್ ನಗರದ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ರಜಿಯಾನ್ ಹೇಳಿದ್ದಾರೆ.


ಎಫ್ಎಸ್ಎಲ್ ನಿಂದ ತನಿಖೆ
“ಅದೃಷ್ಟವಶಾತ್, ಭಗ್ನಾವಶೇಷಗಳು ಖಂಭೋಲಾಜ್ ನಲ್ಲಿರುವ ಒಂದು ಮನೆಯಿಂದ ಸ್ವಲ್ಪ ದೂರ ಬಿದ್ದರೆ, ಇತರ ಎರಡು ಸ್ಥಳಗಳಲ್ಲಿ ಅದು ತೆರೆದ ಪ್ರದೇಶದಲ್ಲಿ ಬಿದ್ದಿದ್ದರಿಂದ ಯಾವುದೇ ಗಾಯ ಅಥವಾ ಸಾವು ನೋವು ಸಂಭವಿಸಿಲ್ಲ. ಇದು ಯಾವ ರೀತಿಯ ಬಾಹ್ಯಾಕಾಶ ಭಗ್ನಾವಶೇಷಗಳು ಎಂದು ನಮಗೆ ಇನ್ನೂ ಖಚಿತವಾಗಿಲ್ಲ, ಆದರೆ ಗ್ರಾಮಸ್ಥರ ಪ್ರಕಾರ ಇವುಗಳು ಆಕಾಶದಿಂದ ಬಿದ್ದಿವೆ" ಎಂದು ಅವರು ಹೇಳಿದರು.


“ಎಫ್ಎಸ್ಎಲ್ ಅವರು ಬಂದು ತನಿಖೆ ನಡೆಸಲಿದ್ದಾರೆ, ನಾವು ಈ ಘಟನೆಯಲ್ಲಿ 'ನೋಟ್ ಕೇಸ್' ದಾಖಲಿಸಿದ್ದೇವೆ ಮತ್ತು ಈ ವಿಷಯದಲ್ಲಿ ಎಫ್ಎಸ್ಎಲ್ ನ ವರದಿಗಾಗಿ ಕಾಯುತ್ತಿದ್ದೇವೆ" ಎಂದು ಅವರು ಹೇಳಿದರು.


ಇದನ್ನೂ ಓದಿ:  Health Problem: ಬರೋಬ್ಬರಿ 30 ವರ್ಷಗಳಿಂದ ನಿಂತುಕೊಂಡೇ ಇದ್ದಾರೆ ಈ ಮಹಿಳೆ! ಕಾರಣ ಏನು ಗೊತ್ತಾ? ಹೆಚ್ಚು ಹೊತ್ತು ಒಂದೇ ಕಡೆ ನಿಂತು ಕೆಲಸ ಮಾಡುವುದು ಆರೋ


ಇದಕ್ಕೂ ಮುಂಚೆ ರಜಿಯಾನ್ ಅವರು ಮೂರು ವಿಭಿನ್ನ ತಂಡಗಳನ್ನು ಖಂಭೋಲಾಜ್, ಭಲೇಜ್ ಮತ್ತು ರಾಂಪುರಕ್ಕೆ ಕಳುಹಿಸಿದ್ದರು. "ಆರಂಭದಲ್ಲಿ ನಮಗೆ ವಸ್ತುಗಳು ಯಾವುವು ಎಂದು ತಿಳಿದಿರಲಿಲ್ಲ ಮತ್ತು ಆಗಲೇ ಈ ಮೂರು ಸ್ಥಳಗಳಲ್ಲಿ ಜನಸಮೂಹ ಜಮಾಯಿಸಿತ್ತು. ಗುರುತ್ವಾಕರ್ಷಣೆಯ ಅನುಪಸ್ಥಿತಿಯಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹದ ಆವೇಗವನ್ನು ನಿರ್ವಹಿಸಲು ಬಳಸಲಾಗುವ ಬಾಲ್ ಬೇರಿಂಗ್ ಗಳಾಗಿವೆ ಎಂದು ನಾವು ಅಂದಾಜಿಸಿದ್ದೆವು. ಈ ಲೋಹದ ಚೆಂಡುಗಳು ಏನೆಂದು ನಿಖರವಾಗಿ ತಿಳಿಯಲು ಅಹಮದಾಬಾದ್ ಮತ್ತು ಗಾಂಧಿನಗರದ ವಿಧಿವಿಜ್ಞಾನ ತಜ್ಞರನ್ನು ಕರೆಸಿದ್ದೆವು" ಎಂದು ರಜಿಯಾನ್ ಹೇಳಿದರು.


ಈ ಹಿಂದೆ ಸಹ ಇಂತಹ ನಿಗೂಢ ಘಟನೆ ನಡೆದಿತ್ತು
ವರದಿಗಳ ಪ್ರಕಾರ, ಈ ವರ್ಷದ ಏಪ್ರಿಲ್ ನಲ್ಲಿ ಮಹಾರಾಷ್ಟ್ರದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಆಕಾಶದಲ್ಲಿ ಉಲ್ಕಾ ಶಿಲೆ ಕಾಣಿಸಿಕೊಂಡಿದೆ. ಏನಿದು ದೊಡ್ಡ ಸ್ಫೋಟ ಸಂಭವಿಸಿದ್ದು ಎಂದು ನೋಡಿದಾಗ ಅವುಗಳು ಸುಟ್ಟು ಹೋದ ವಸ್ತುಗಳು ನ್ಯೂಜಿಲೆಂಡ್ ನಲ್ಲಿ ಉಡಾಯಿಸಲಾದ ಉಪಗ್ರಹದ ತುಣುಕುಗಳು ಎಂದು ಮೂಲಗಳು ಆಮೇಲೆ ದೃಢಪಡಿಸಿದವು.


ಇದನ್ನೂ ಓದಿ: Viral Story: ಈತ ಪುಣ್ಯಾತ್ಮ ಕಣ್ರಿ! 11 ಸಾವಿರ ವೋಲ್ಟ್​​ ವಿದ್ಯುತ್​ ಹರಿದರೂ ಬದುಕುಳಿದ

top videos
    First published: