ಹಳೆಯ 1, 10, 20 ರೂ. ನೋಟುಗಳಿದ್ದರೆ ಲಕ್ಷಾಂತರ ರೂಪಾಯಿ ಸಿಗಲಿದೆ.. ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಮಾತಾ ವೈಷ್ಣವದೇವಿ ಇರುವ 10 ರೂಪಾಯಿ ನೋಟಿಗೆ ಭಾರೀ ಡಿಮ್ಯಾಂಡ್ ಇದೆ. ವೈಷ್ಣವದೇವಿ ಚಿತ್ರವಿರುವ ನೋಟನ್ನು ಲಕ್ಷಾಂತರ ರೂಪಾಯಿ ಕೊಟ್ಟು ಕೊಂಡುಕೊಳ್ಳಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ.

ಹಳೆಯ ಅಪರೂಪದ ನೋಟುಗಳು

ಹಳೆಯ ಅಪರೂಪದ ನೋಟುಗಳು

  • Share this:
ನಿಮಗೆ ಹಳೆಯ ನಾಣ್ಯ, ನೋಟುಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ, ಅದೀಗ ಲಕ್ಷಾಂತರ ರೂಪಾಯಿ ಆದಾಯವನ್ನು ತಂದುಕೊಡಲಿವೆ. ಎಂದೋ ಮನೆಯಲ್ಲಿಟ್ಟಿದ್ದ ಹಳೆ ನೋಟು, ಪರ್ಸ್​​ನಲ್ಲಿ ಇಟ್ಟು ಮರೆತ ಹಳೆಯ ನಾಣ್ಯ, ನೋಟುಗಳನ್ನು ಹುಡುಕಿ. ಓಲ್ಡ್​​ ಇಸ್​ ಗೋಲ್ಡ್​ ಎಂಬಂತೆ ಹಳೆಯ ಹಣ ನಿಮಗೆ ಅದೃಷ್ಟವನ್ನು ತರಲಿದೆ. ಇತ್ತೀಚೆಗೆ ಹಳೆಯ ನಾಣ್ಯಗಳು, ನೋಟುಗಳಿಗೆ ಭಾರೀ ಡಿಮ್ಯಾಂಡ್​ ಸೃಷ್ಟಿಯಾಗಿದ್ದು, ಹರಾಜು ಮೂಲಕ ಲಕ್ಷಾಂತರ ರೂಪಾಯಿಗೆ ಬಿಕರಿಯಾಗುತ್ತಿವೆ.

ಅಪರೂಪದ ನಾಣ್ಯಗಳು, ನೋಟುಗಳನ್ನು ಕಾಯಿನ್​​ ಬಜಾರ್​ ವೆಬ್​​ಸೈಟ್​ ಮೂಲಕ ಹರಾಜಿಗೆ ಇಡಬಹುದು. ಕಾಯಿನ್​ ಬಜಾರ್​ನಲ್ಲಿ ಅಕೌಂಟ್​​​ ಕ್ರಿಯೇಟ್​ ಮಾಡಿ ನಿಮ್ಮ ಮಾಹಿತಿಯನ್ನು ತುಂಬಬೇಕು. ನಿಮ್ಮ ಬಳಿಯಿರುವ ಅಪರೂಪದ ನಾಣ್ಯ ಇಲ್ಲವೇ ನೋಟುಗಳ ಫೋಟೋಗಳನ್ನು ಅಪ್​​ಲೋಡ್​ ಮಾಡಿ ಎಷ್ಟು ಹಣಕ್ಕೆ ಮಾರಲು ಸಿದ್ಧರಿದ್ದೀರಿ ಎಂದು ಮಾರಾಟದ ಮೊತ್ತವನ್ನು ನಿಗದಿಪಡಿಸಬೇಕು. ಆಸಕ್ತಿವುಳ್ಳವರು ಹರಾಜಿನ ಮೂಲಕ ನಿಮ್ಮ ನಾಣ್ಯಗಳನ್ನು ಖರೀದಿಸುತ್ತಾರೆ. ನಿಮ್ಮನ್ನು ನೇರವಾಗಿ ಸಂಪರ್ಕಿಸಿ ಹಣ ನೀಡಿ ನೋಟನ್ನು ಪಡೆದುಕೊಳ್ಳುತ್ತಾರೆ.

ಮಾತಾ ವೈಷ್ಣವದೇವಿ ಇರುವ 10 ರೂಪಾಯಿ ನೋಟಿಗೆ ಭಾರೀ ಡಿಮ್ಯಾಂಡ್ ಇದೆ. ವೈಷ್ಣವದೇವಿ ಚಿತ್ರವಿರುವ ನೋಟನ್ನು ಲಕ್ಷಾಂತರ ರೂಪಾಯಿ ಕೊಟ್ಟು ಕೊಂಡುಕೊಳ್ಳಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. 1977-1979ರ ಸಮಯದ 1 ರೂಪಾಯಿ ನೋಟು 45,000 ರೂಪಾಯಿಗೆ ಹರಾಜು ಆಗಲಿದೆ. 1977-1979ರವರೆಗೆ ಮೊರಾಜಿ ದೇಸಾಯಿ ಪ್ರಧಾನಿ ಆಗಿದ್ದಾಗ, ಹಿರೂಬಾಯಿ ಎಂ ಪಟೇಲ್​​ ಹಣಕಾಸು ಸಚಿವರಾಗಿದ್ದರು. ಅವರ ಸಹಿ ಇರುವ ನೋಟು, ನಾಣ್ಯಗಳಿಗೆ ಈಗ ಭಾರೀ ಬೇಡಿಕೆ ಇದೆ.

ಕಾಯಿನ್​ ಬಜಾರ್​ನಲ್ಲಿ ಹಳೆಯ ನಾಣ್ಯಗಳು, ನೋಟುಗಳು 2 ಸಾವಿರ ರೂಪಾಯಿಯಿಂದ 2 ಲಕ್ಷ ರೂ.ವರೆಗೆ ಹರಾಜಾಗಿವೆ. ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿದ್ದವರು ಈ ವೆಬ್​ ಸೈಟ್​ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಈವರೆಗೆ ವೆಬ್​ಸೈಟ್​ನಲ್ಲಿ ರಾಣಿ ವಿಕ್ಟೋರಿಯಾ ಇರುವ ನಾಣ್ಯ ಅತಿ ಹೆಚ್ಚು ಬೆಲೆಗೆ ಎಂದರೆ 1.5 ಲಕ್ಷಕ್ಕೆ ಬಿಕರಿಯಾಗಿದೆ. ಇನ್ನೇಕೆ ತಡ ನೀವು ನಿಮ್ಮ ಬಳಿಯಿರುವ ನಾಣ್ಯಗಳನ್ನು ಹರಾಜಾಕುವ ಮೂಲಕ ಭರ್ಜರಿ ಲಾಭ ಗಳಿಸಿ.

ಇದನ್ನೂ ಓದಿ: JIO: ವಾರ್ಷಿಕ ಪ್ರಿಪೇಯ್ಡ್​ ಪ್ಲಾನ್​​ ಪರಿಚಯಿಸಿದ ಜಿಯೋ; ಪ್ರತಿದಿನ 3GB ಡೇಟಾ ಸೇರಿದಂತೆ ಅನಿಯಮಿತ ಕರೆ ಉಚಿತ!

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: