• Home
 • »
 • News
 • »
 • national-international
 • »
 • Global Trends: 2023 ರಲ್ಲಿ ಈ ಜಾಗತಿಕ ಘಟನೆಗಳ ಬಗ್ಗೆ ಕಣ್ಣಿಟ್ಟಿರಿ!

Global Trends: 2023 ರಲ್ಲಿ ಈ ಜಾಗತಿಕ ಘಟನೆಗಳ ಬಗ್ಗೆ ಕಣ್ಣಿಟ್ಟಿರಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಯುರೋಪಿಯನ್ ಯೂನಿಯನ್ ಹೇಳುವ ಪ್ರಕಾರ ಎಲ್ಲಾ ಡಿವೈಸ್‌ಗಳಿಗೆ ಒಂದೇ ಚಾರ್ಜರ್ ಬಳಸುವುದರಿಂದ €250 ಮಿಲಿಯನ್ ಗ್ರಾಹಕರಿಗೆ ಉಪಯೋಗವಾಗುತ್ತದೆ.

 • News18 Kannada
 • 5-MIN READ
 • Last Updated :
 • New Delhi, India
 • Share this:

2022 ಇನ್ನೇನು ಮುಗಿದು 2023 ರ ಹೊಸ ವರ್ಷಕ್ಕೆ ನಾವು ಕಾಲಿಟ್ಟಿದ್ದೇವೆ. 2022 ಒಂದು ರೀತಿಯಲ್ಲಿ ಸಿಹಿ ಹಾಗೂ ಕಹಿ ನೆನಪುಗಳ ಘಟನೆಗಳ ಮಿಶ್ರಣ ಎಂದೇ ಹೇಳಬಹುದು. ಉಕ್ರೇನ್ ರಷ್ಯಾ ಯುದ್ಧ (Russia Ukraine War), ಹಣದುಬ್ಬರ, ಸಾಂಕ್ರಾಮಿಕದ ಏರಿಕೆ (Covid-19), ಫಿಫಾ ವಿಶ್ವಕಪ್ (FIFA)  ಹೀಗೆ 2022 ಹೇಗೆ ಸಂಪೂರ್ಣಗೊಂಡಿತು ಎಂಬುದೇ ಅರಿವಿಗೆ ಬಾರದಂತೆ ನಡೆದುಹೋಗಿದೆ. ಆದರೆ 2022 ರಲ್ಲಿ ಮಾಡಿರುವ ಕೆಲವೊಂದು ನಿರ್ಧಾರಗಳು 2023 ರಲ್ಲೂ ಪರಿಣಾಮ ಬೀರುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


2022 ರ ಕೆಲವೊಂದು ಪ್ರಮುಖ ಮಾರ್ಪಾಡುಗಳಲ್ಲಿ ಅತ್ಯಂತ ಮುಖ್ಯವಾದುದು ಸಾಕಷ್ಟಿದೆ. ಇದು 2023 ರಲ್ಲೂ ಪರಿಣಾಮಕಾರಿ ಎಂದೆನಿಸಿದೆ. ತಜ್ಞರು ಇದನ್ನು ಬ್ಯುಸಿನೆಸ್ ಟ್ರೆಂಡ್‌ಗಳು ಎಂದು ಕರೆದಿದ್ದು, 2022 ರಲ್ಲಿಯೇ ಈ ಟ್ರೆಂಡ್‌ಗಳು ಅಸ್ತಿತ್ವಕ್ಕೆ ಬಂದಿವೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಹಾಗಿದ್ದರೆ ಆ ಟ್ರೆಂಡ್‌ಗಳು ಯಾವುವು ಎಂಬುದನ್ನು ನೋಡೋಣ


ಯುಎಸ್‌ಬಿ ಚಾರ್ಜರ್‌ಗಳ ಮೇಲೆ ಯುರೋಪಿಯನ್ ಯೂನಿಯನ್ ನಿಯಮಾವಳಿ


ಅಕ್ಟೋಬರ್‌ನಲ್ಲಿ ಯುರೋಪಿಯನ್ ಯೂನಿಯನ್ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಇ-ರೀಡರ್‌ಗಳು, ಇಯರ್ ಬಡ್ಸ್, ಹೆಡ್‌ಫೋನ್‌ಗಳ ಚಾರ್ಜರ್‌ಗಳು 2024 ರ ಆರಂಭದಲ್ಲಿ ಯುಎಸ್‌ಬಿ ಟೈಪ್ ಸಿ ಕಾಂಪಿಟೇಬಲ್ ಆಗಿರಬೇಕೆಂಬ ಬೇಡಿಕೆಯ ನಿಯಮವನ್ನು ರೂಪಿಸಿದೆ. ಲ್ಯಾಪ್‌ಟಾಪ್‌ಗಳಿಗೆ ಅನ್ವಯಿಸಿರುವ ನಿಯಮಗಳು 2026 ರಲ್ಲಿ ಜಾರಿಗೆ ಬರಲಿವೆ ಎಂದು ಯೂನಿಯನ್ ತಿಳಿಸಿದೆ. ಅಂದರೆ ಎಲ್ಲಾ ಡಿವೈಸ್‌ಗಳಿಗೆ ಒಂದೇ ಚಾರ್ಜರ್ ಎಂದಾಗಿದೆ.


ಎಲ್ಲ ಡಿವೈಸ್​ಗಳಿಗೆ ಒಂದೇ ಚಾರ್ಜರ್


ಯುರೋಪಿಯನ್ ಯೂನಿಯನ್ ಹೇಳುವ ಪ್ರಕಾರ ಎಲ್ಲಾ ಡಿವೈಸ್‌ಗಳಿಗೆ ಒಂದೇ ಚಾರ್ಜರ್ ಬಳಸುವುದರಿಂದ €250 ಮಿಲಿಯನ್ ಗ್ರಾಹಕರಿಗೆ ಉಪಯೋಗವಾಗುತ್ತದೆ. ಇದು ಇ-ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಹಾಗೂ ಚಾರ್ಜರ್ ರಹಿತವಾಗಿ ಹೊಸ ಡಿವೈಸ್‌ಗಳನ್ನು ಖರೀದಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತದೆ.


ಏರ್‌ಬಸ್ A380 ವಿಮಾನ ಸೇವೆ ಸ್ಥಗಿತ


ಏರ್‌ಬಸ್ A380, ಸೇವೆಯಲ್ಲಿರುವ ಅತಿ ದೊಡ್ಡ ಪ್ರಯಾಣಿಕ ವಿಮಾನವಾಗಿದೆ. ಹೆಚ್ಚು ವೆಚ್ಚದಾಯಕ ಜೆಟ್ ಕೂಡ ಹೌದು ಇಕನಾಮಿ ಕ್ಲಾಸ್‌ನಲ್ಲಿ 850 ಪ್ರಯಾಣಿಕರನ್ನು ಸಾಗಿಸುವ ವ್ಯವಸ್ಥೆ ಈ ವಿಮಾನದಲ್ಲಿದೆ ಅಂತೆಯೇ ಬ್ಯುಸಿನೆಸ್ ಕ್ಲಾಸ್‌ನಲ್ಲಿ 525 ಪ್ರಯಾಣಿಕರನ್ನು ಕೊಂಡೊಯ್ಯಬಹುದಾಗಿದೆ.


ಎಮಿರೇಟ್ಸ್ ಇದುವರೆಗೆ ಮಾರಾಟವಾದ 251 ಜೆಟ್‌ಗಳಲ್ಲಿ ಅರ್ಧದಷ್ಟು ಖರೀದಿಸಿತು. ಕೆಲವೊಂದು ಸಂಸ್ಥೆಗಳು ಕೆಲವೊಂದು ಜೆಟ್‌ಗಳ ಖರೀದಿಯನ್ನು ಮಾಡಿದವು. ಇದೇ ಸಮಯದಲ್ಲಿ ಕೋವಿಡ್-19 ಪ್ರಯಾಣ ನಿರ್ಬಂಧಗಳನ್ನು ಹೇರಿತು ಹಾಗೂ ಜಾಗತಿಕ ಪ್ರಯಾಣವನ್ನು ಸ್ಥಗಿತಗೊಳಿಸಿದವು. ಕೋವಿಡ್ ವಿಪತ್ತಿನಿಂದ ಏರ್‌ಬಸ್ 2021 ರ ಕೊನೆಯಲ್ಲಿ A380 ಉತ್ಪಾದನೆಯನ್ನು ನಿಲ್ಲಿಸಲು ನಿರ್ಧರಿಸಿತು.


ಬಿರ್ಕೆನ್‌ಸ್ಟಾಕ್ ಪಾದರಕ್ಷೆ ಬ್ರ್ಯಾಂಡ್‌


ಬಿರ್ಕೆನ್‌ಸ್ಟಾಕ್ ತಯಾರಿಸಿದ ಕ್ಲುಂಕಿ ಕಾರ್ಕ್ ಮತ್ತು ಚರ್ಮದ ಸ್ಯಾಂಡಲ್‌ಗಳು ಹೆಚ್ಚು ಆರಾಮದಾಯಕ ಎಂದೆನಿಸಿದೆ. ಆದರೆ ಇದು ಫ್ಯಾಶನ್‌ಗೆ ತಕ್ಕಂತೆ ಇರಲಿಲ್ಲ ಹೀಗಾಗಿಯೇ ಫ್ರೆಂಚ್ LVMH ಈ ಬ್ರ್ಯಾಂಡ್‌ನ ಪಾದರಕ್ಷೆಗಳನ್ನು ಕೊಂಚ ಫ್ಯಾಶನ್‌ಗೊಳಿಸುವ ಇರಾದೆಯಲ್ಲಿ ಕುಟುಂಬ ಸಂಸ್ಥೆ ಬಿರ್ಕೆನ್‌ಸ್ಟಾಕ್ ಅನ್ನು 2021 ರಲ್ಲಿ ಖರೀದಿಸಿತು. ಅದಾಗ್ಯೂ ಈ ಪಾದರಕ್ಷೆಗಳ ಉತ್ಪಾದನೆಯಲ್ಲಿ ಅಷ್ಟೊಂದು ಮಹತ್ತರ ಬದಲಾವಣೆಗಳು ಕಂಡುಬರಲಿಲ್ಲ. ಇನ್ನು ಕಂಪನಿ ಕೂಡ ಪಾದರಕ್ಷೆಗಳ ಪ್ರಚಾರವನ್ನು ಅಷ್ಟೊಂದು ಗಮನಾರ್ಹವಾಗಿ ನಡೆಸಿಲ್ಲ.


ಥೆರಾನೋಸ್ ತೀರ್ಪು


ಎಲಿಜಬೆತ್ ಹೋಮ್ಸ್ ಸಿಲಿಕಾನ್ ವ್ಯಾಲಿಯ ಸೂಪರ್ ಸ್ಟಾರ್ ಎಂದೆನಿಸಿದ್ದರು. ಆಕೆಯ ಕಂಪನಿ ಥೆರಾನೋಸ್ ಒಂದೇ ಹನಿ ರಕ್ತವನ್ನು ಬಳಸಿಕೊಂಡು ವಿಭಿನ್ನ ರೋಗಗಳನ್ನು ಪತ್ತೆಹಚ್ಚಬಹುದಾದ ತಂತ್ರಜ್ಞಾನ ಹಾಗೂ ಸಣ್ಣ ಯಂತ್ರವನ್ನು ಪತ್ತೆಹಚ್ಚಿತು. ಇದೊಂದು ಪವಾಡ ಕ್ರಾಂತಿ ಎಂದೆನ್ನಿಸಿತು. ಇದಕ್ಕಾಗಿ ಹೂಡಿಕೆದಾರರು $945 ಮಿಲಿಯನ್ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: Benedict XVI Death: ಮಾಜಿ ಪೋಪ್ ಬೆನೆಡಿಕ್ಟ್ XVI ನಿಧನ, ಪ್ರಧಾನಿ ಮೋದಿ ಸಂತಾಪ!


ಕಂಪನಿ ಇಂತಹ ಸಾಧನವನ್ನು ಅನ್ವೇಷಿಸಿಯೇ ಇಲ್ಲ ಎಂದು ನಂತರ ತನಿಖೆಯಿಂದ ತಿಳಿದುಬಂದಿತು. 2018 ರಲ್ಲಿ ಕಂಪನಿ ನಷ್ಟಕ್ಕೆ ಒಳಗಾಯಿತು. 2022 ರ ಆರಂಭದಲ್ಲಿ ಹೋಮ್ಸ್ ನಾಲ್ಕು ವಂಚನೆಗಳಲ್ಲಿ ತಪ್ಪಿತಸ್ಥರು ಎಂದು ಸಾಬೀತಾಯಿತು. ಕಂಪನಿಯ ಸಿಒಒ ರಮೇಶ್ ಬಲ್ವಾನಿ ಅವರು 12 ವಂಚನೆಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದಿದೆ.


ಪ್ರಮುಖ ಮುಕ್ತ ವ್ಯಾಪಾರ ಪ್ರಗತಿ


ವರ್ಷಗಳ ಚರ್ಚೆಯ ನಂತರ, ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು ಅನುಮೋದಿಸುವ ಕಡೆಗೆ ಸ್ಥಿರವಾದ ಪ್ರಗತಿಯನ್ನು ಸಾಧಿಸಿದೆ. EU-ಕೆನಡಾ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) EU ಮತ್ತು ಕೆನಡಾ ನಡುವಿನ ಪ್ರಗತಿಪರ ವ್ಯಾಪಾರ ಒಪ್ಪಂದವಾಗಿದೆ. ಈ ಒಪ್ಪಂದಕ್ಕೆ ಕೆನಡಾದ ಪ್ರಜೆಗಳು 2016 ರಲ್ಲಿ ಸಹಿ ಹಾಕಿದರೆ ಯುರೋಪಿಯನ್ ಪಾರ್ಲಿಮೆಂಟ್ 2017 ರಲ್ಲಿ ಅಂಗೀಕಾರ ನೀಡಿತು. ಅಂದಿನಿಂದ, ಒಪ್ಪಂದದ ಹಲವು ಭಾಗಗಳು ಅನ್ವಯಗೊಂಡಿವೆ.


ಇದನ್ನೂ ಓದಿ: Ratan Tata: ಕೈಗಾರಿಕೋದ್ಯಮಿ ರತನ್ ಟಾಟಾ ಮೀಟಿಂಗ್​ಗಳಲ್ಲಿ ಹೇಗಿರ್ತಾರೆ ಗೊತ್ತಾ? ಇದನ್ನೊಮ್ಮೆ ಓದಿ


ಕೆನಡಾ ಮತ್ತು EU ನಡುವಿನ ಮುಕ್ತ ವ್ಯಾಪಾರ ಒಪ್ಪಂದವಾದ CETA ಎಲ್ಲಾ ತೆರಿಗೆ ಸುಂಕಗಳನ್ನು ತೆಗೆದುಹಾಕಿತು. ತೆರಿಗೆ ಉಳಿತಾಯ, ಬಲವಾದ ಬೌದ್ಧಿಕ ಆಸ್ತಿ ಹಕ್ಕುಗಳು, ವೃತ್ತಿಪರ ಕೌಶಲ್ಯಗಳ ಗುರುತಿಸುವಿಕೆ ಕೆನಡಾ ಮತ್ತು EU ನಡುವೆ ಸಿಬ್ಬಂದಿ ಚಲನೆಯ ಸುಂಕಗಳನ್ನು ನಿವಾರಿಸಿತು.

Published by:ಗುರುಗಣೇಶ ಡಬ್ಗುಳಿ
First published: