ಎಲ್‍ಜಿಬಿಟಿಕ್ಯೂ (LGBTQ) ಸಮುದಾಯದ ಮಂದಿಯ ಪಾಲಿಗೆ ಹೆಮ್ಮೆಯ ತಿಂಗಳು ಇದು. ಹೌದು, ಜೂನ್‍ನಲ್ಲಿ ಕಾಮನ ಬಿಲ್ಲಿನ ಧ್ವಜಗಳದ್ದೇ ರಂಗು (Flag Of Rainbow). ನಮ್ಮ ಸಮಾಜ ಇಂದಿಗೂ ಸಂಪೂರ್ಣವಾಗಿ ಎಲ್‍ಜಿಬಿಟಿಕ್ಯೂ ಸಮುದಾಯವನ್ನು ಒಪ್ಪಿಕೊಂಡಿಲ್ಲ, ನಿಜ. ಆದರೆ, ನಮ್ಮ ಸಮಾಜಕ್ಕೆ ಎಲ್‍ಜಿಬಿಟಿಕ್ಯೂ ಸಮುದಾಯ (Community) ನೀಡಿದ ಕೊಡುಗೆಯನ್ನು ಸ್ಮರಿಸುವ ಹೆಮ್ಮೆಯ ಆಚರಣೆಯ ಈ ತಿಂಗಳು ಆ ಸಮುದಾಯದವರ ಪಾಲಿಗೆ ಮಾತ್ರ ಖಂಡಿತಾ ವಿಶೇಷ. 2018ರಲ್ಲಿ ದೇಶದಲ್ಲಿ ಸಲಿಂಗ ಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸುವ ಮೂಲಕ, ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಭಾರತದೆಲ್ಲೆಡೆ ಎಲ್‍ಜಿಬಿಟಿಕ್ಯೂ ಸಮುದಾಯದ ಮಂದಿಯ ಪರಿಸ್ಥಿತಿ ಒಂದೇ ರೀತಿ ಇಲ್ಲದಿರಬಹುದು, ಆದರೆ ಕೆಲವು ಮುಖ್ಯ ನಗರಗಳು ಈ ಸಮುದಾಯದ ಮಂದಿಯನ್ನು ಮುಕ್ತವಾಗಿ ಸ್ವಾಗತಿಸಿ, ಆಶ್ರಯ ನೀಡಿವೆ. ಅಂತಹ ಐದು ನಗರಗಳ ಕುರಿತ ಮಾಹಿತಿ ಇಲ್ಲಿದೆ.
ಸಲಿಂಗ ಕಾಮಿಗಳನ್ನು ಮತ್ತು ತೃತೀಯ ಲಿಂಗಿಯರನ್ನು ವಿಚಿತ್ರವಾಗಿ ನೋಡುವ ಜನರ ಸಂಖ್ಯೆ ಕಡಿಮೆ ಇಲ್ಲ ಎಂಬುವುದು ನಿಜವಾದರೂ, ಸುಪ್ರೀಂ ಕೋರ್ಟ್‍ನ ಆ ಮಹತ್ವದ ತೀರ್ಪನ್ನು ಸಮಾಜದ ಬಹುತೇಕ ವರ್ಗಗಳು ಸ್ವಾಗತಿಸಿವೆ ಎಂಬುವುದು ಕೂಡ ಅಷ್ಟೇ ಸತ್ಯ. ಅದರಲ್ಲೂ ಈ ದಿನಗಳಲ್ಲಂತೂ ಭಾರತದ ಹಲವಾರು ನಗರಗಳು ಎಲ್‍ಜಿಬಿಟಿಕ್ಯೂ ಸಮುದಾಯಗಳನ್ನು ಒಳಗೊಂಡಿವೆ.
ಪಣಜಿ
ದೇಸಿ ಜನರನ್ನು ಮಾತ್ರವಲ್ಲ, ವಿದೇಶಿಗರನ್ನು ಕೂಡ ಆಕರ್ಷಿಸಿರುವ ಪ್ರವಾಸಿಗರ ಪಾಲಿನ ಸ್ವರ್ಗದಂತಿರುವ ಗೋವಾದ ರಾಜಧಾನಿ ಪಣಜಿ, ಎಲ್‍ಜಿಬಿಟಿಕ್ಯೂ ಸಮುದಾಯದ ಜನರಿಗೂ ಸೂಕ್ತವಾದ ಜಾಗ ನೀಡಿದೆ. ಪಣಜಿಯಲ್ಲಿ ಪ್ರಗತಿಶೀಲ ಸಲಿಂಗ ಕಾಮಿ - ಸ್ನೇಹಿ ಕ್ಲಬ್‍ಗಳು ಮತ್ತು ಕಡಲ ತೀರಗಳಿವೆ. ಇಲ್ಲಿ ಎಲ್‍ಜಿಬಿಟಿಕ್ಯೂ ಜನರ ಬಗ್ಗೆ ತಾರತಮ್ಯವಿಲ್ಲ ಮತ್ತು ವಿಚಿತ್ರ ನೋಟಗಳನ್ನು ಎದುರಿಸಬೇಕು ಎಂಬ ಚಿಂತೆ ಇಲ್ಲ.
ಬೆಂಗಳೂರು
ವೈವಿಧ್ಯಮಯ ಜನ ಸಮುದಾಯಗಳ ನೆಲೆ ಎಂದು ಹೆಸರುವಾಸಿ ಆಗಿರುವ ಐಟಿ ನಗರಿ ಬೆಂಗಳೂರು , ಪ್ರಗತಿಶೀಲ ಆಧುನಿಕ ಸಂಸ್ಕøತಿಯ ದಾರಿಯಲ್ಲಿ ಸಾಗುತ್ತಿದೆ. ಎಲ್‍ಜಿಬಿಟಿಕ್ಯೂ ಸಮುದಾಯದ ಜನರ ಪಾಲಿಗಂತೂ, ರಾಜಧಾನಿ ಬೆಂಗಳೂರು ಕ್ವೀರ್ ಚಲನಚಿತ್ರೋತ್ಸವದ ನೆಲೆಯಾಗಿದೆ. 2008 ರಲ್ಲಿ ಪ್ರಾರಂಭವಾದ ಈ ಚಲನಚಿತ್ರೋತ್ಸದಲ್ಲಿ, ಲೆಸ್ಬಿಯನ್, ಗೇ, ಸಲಿಂಗ ಕಾಮಿ, ತೃತೀಯ ಲಿಂಗಿ ಮತ್ತು ಇತರ ಲೈಂಗಿಕ ಹಾಗೂ ಲಿಂಗ ಅಲ್ಪ ಸಂಖ್ಯಾತರನ್ನು ಪ್ರತಿನಿಧಿಸುವ ಸಿನಿಮಾಗಳನ್ನು ನಾವು ಕಾಣಬಹುದಾಗಿದೆ.
ಲಡಾಕ್
ನಮ್ಮ ದೇಶದ ಉತ್ತರ ಭಾಗದಲ್ಲಿರುವ ಶೀತ ಮರುಭೂಮಿ ಲಡಾಕ್ ಪ್ರವಾಸಿಗರಿಗೆ , ಅದರಲ್ಲೂ ಮುಖ್ಯವಾಗಿ ಸಾಹಸಮಯ ಪ್ರವಾಸಗಳನ್ನು ಇಷ್ಟಪಡುವವರಿಗೆ ಅತ್ಯುತ್ತಮ ತಾಣ. ಇಂಡಿಯಾ ಗೇ ಟ್ರಾವೆಲ್ ಬಡ್ಡಿಯಂತಹ ಏಜೆನ್ಸಿಗಳು, ಪ್ರವಾಸಿ ಸ್ಥಳದ ಬಗ್ಗೆ ಒಳ್ಳೆಯ ಜ್ಞಾನವನ್ನು ಹೊಂದಿರುವ ಹೊಸ ಸ್ನೇಹಿತರ ಜೊತೆಗೆ, ಲಡಾಕ್‍ನ ವಿಶೇಷ ಸ್ಥಳಗಳನ್ನು ಕಂಡು ಆನಂದಿಸಲು ಎಲ್‍ಜಿಬಿಟಿಕ್ಯೂ ಸಮುದಾಯದ ಮಂದಿಗೆ ಅವಕಾಶ ಮಾಡಿಕೊಡುತ್ತದೆ.
ಮುಂಬೈ
ಶೋ ಬಿಜ್ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಸಿನಿಮಾ ನಗರಿ ಮುಂಬೈ ಎಲ್‍ಜಿಬಿಟಿಕ್ಯೂ ಸಮುದಾಯದ ಮಂದಿಗೆ ಇಷ್ಟವಾಗುವ ಸ್ಥಳವೂ ಹೌದು. ದೇಶದ ಮನರಂಜನಾ ರಾಜಧಾನಿ ಎಂದೇ ಹೆಸರುವಾಸಿಯಾಗಿರುವ ಮುಂಬೈ ನಗರದಲ್ಲಿ ಲೆಸ್ಬಿಯನ್, ಗೇ, ಸಲಿಂಗ ಕಾಮಿ, ತೃತೀಯ ಲಿಂಗಿ ಮತ್ತು ಇತರ ಲೈಂಗಿಕ ಹಾಗೂ ಲಿಂಗ ಅಲ್ಪ ಸಂಖ್ಯಾತರನ್ನು ಪ್ರತಿನಿಧಿಸುವ ಸಿನಿಮಾಗಳಿಗೆ ಮೀಸಲಾಗಿರುವ ಕ್ವೀರ್ ಚಲನಚಿತ್ರೋತ್ವವನ್ನು ಕೂಡ ಆಯೋಜಿಸಲಾಗುತ್ತದೆ.
ಇದನ್ನೂ ಓದಿ: Sologamy: ತನ್ನನ್ನು ತಾನೇ ಮದುವೆಯಾದ ಗುಜರಾತ್ ಯುವತಿ! ಇಲ್ನೋಡಿ ಫೋಟೋಸ್
ಇದು ಸಾಮಾಜಿಕ ಬದಲಾವಣೆಯನ್ನು ಸೃಷ್ಟಿಸಲು ಮತ್ತು ಪ್ರೊತ್ಸಾಹಿಸಲು , ವೀಕ್ಷಕರು ಮತ್ತು ನಿರ್ಮಾಪಕರು ಒಂದೆಡೆ ಸೇರುವಂತೆ ಮಾಡುತ್ತದೆ.
ಇದನ್ನೂ ಓದಿ: Marijuana Legalized: ಥೈಲ್ಯಾಂಡ್ನಲ್ಲಿ ಗಾಂಜಾ ಕಾನೂನುಬದ್ಧ! ಈ ಹಿಂದೆ ಅರೆಸ್ಟ್ ಆದ 4 ಸಾವಿರ ಜನ ರಿಲೀಸ್
ಕೊಲ್ಕತ್ತಾ
ಈ ನಗರ ಮೊದಲಿನಿಂದಲೂ ತನ್ನ ಶ್ರೀಮಂತ ಕಲೆ ಮತ್ತು ಸಂಸ್ಕøತಿಗೆ ಹೆಸರುವಾಸಿಯಾಗಿದೆ. ಇದೀಗ ನೀವು ಈ ಮೆಟ್ರೋಪಾಲಿಟಾನ್ ನಗರದಲ್ಲಿ ಎಲ್‍ಜಿಬಿಟಿಕ್ಯೂ ಸಮುದಾಯದ ಮಂದಿಯನ್ನು ಗೌರವಿಸುವ ಜನರನ್ನು ಕೂಡ ಕಾಣಬಹುದು. ಇಲ್ಲಿ 2007 ರಿಂದಲೂ ಎಲ್‍ಜಿಬಿಟಿಕ್ಯೂ ಸಿನಿಮಾ ಮತ್ತು ವಿಡಿಯೋ ಉತ್ಸವವನ್ನು ವಾರ್ಷಿಕವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ