Ruby Roman Grapes: ಒಂದು ದ್ರಾಕ್ಷಿಗೆ 35,000ರೂ, ಗೊಂಚಲಿಗೆ 7.5 ಲಕ್ಷ...ಈ ದ್ರಾಕ್ಷಿ ಬೆಳೆದವರೇ ಭಾಗ್ಯವಂತರು

Expensive Exotic Grapes of Japan: ಪ್ರತಿ ದ್ರಾಕ್ಷಿಯೂ ಪಿಂಗ್ ಪಾಂಗ್(Ping pong) ಬಾಲ್ ನಷ್ಟು ಗಾತ್ರವಿದ್ದು, 20 ಗ್ರಾಂ ನಷ್ಟು ತೂಕ ಬರುತ್ತದೆ. 2019ರಲ್ಲಿ ರೂಬಿ ರೋಮನ್ ಒಂದು ಗೊಂಚಲು ದ್ರಾಕ್ಷಿಯನ್ನು 1.2 ಮಿಲಿಯನ್ ಗಳಿಗೆ ಮಾರಾಟ ಮಾಡಲಾಗಿತ್ತು. ಭಾರತದ ಕರೆನ್ಸಿ ಪ್ರಕಾರ 7,55,000ಕ್ಕೂ ಹೆಚ್ಚು ರೂಪಾಯಿಗಳಿಗೆ ದ್ರಾಕ್ಷಿಯನ್ನು ಮಾರಾಟ ಮಾಡಲಾಗಿತ್ತು.

ರೂಬಿ ರೋಮನ್ ದ್ರಾಕ್ಷಿ

ರೂಬಿ ರೋಮನ್ ದ್ರಾಕ್ಷಿ

 • Share this:
  Expensive Fruit: ಹಣ್ಣುಗಳಲ್ಲಿ ದ್ರಾಕ್ಷಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹಣ್ಣುಗಳಲ್ಲಿ ಹೇರಳವಾಗಿ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ದ್ರಾಕ್ಷಿ ಲಭ್ಯವಿದೆ. ಆದರೆ ಜಪಾನಿನ ವೈವಿಧ್ಯಮಯ ಐಷಾರಾಮಿ ದ್ರಾಕ್ಷಿ ಬೆಲೆ ಕೇಳಿದರೆ ದಂಗಾಗೋದು ಗ್ಯಾರೆಂಟಿ. ರೂಬಿ ರೋಮನ್ (Ruby Roman) ತಳಿಯ ಒಂದು ಗೊಂಚಲು ದ್ರಾಕ್ಷಿಗೆ ಭಾರತದ ಕರೆನ್ಸಿ ಪ್ರಕಾರ 7,55,000 ರೂಪಾಯಿ. ಬರೀ ಒಂದೇ ಒಂದು ದ್ರಾಕ್ಷಿಯ ಬೆಲೆ 35,000 ರೂಪಾಯಿ. ಜಪಾನ್‌ ನಲ್ಲಿ (Japan) ಮಾತ್ರ ಬೆಳೆಯುವ ರೂಬಿ ರೋಮನ್ ದ್ರಾಕ್ಷಿಯನ್ನು ವಿಶ್ವದ ಅತ್ಯಂತ ದುಬಾರಿ ದ್ರಾಕ್ಷಿ ಎಂದು ಕರೆಯಲಾಗುತ್ತೆ. ಈ ದ್ರಾಕ್ಷಿಗಳ ಬೆಲೆ ತುಂಬಾ ದುಬಾರಿಯಾಗಲು ಮುಖ್ಯ ಕಾರಣವೆಂದರೆ ಅವುಗಳ ಅಸಾಧಾರಣ ಗುಣಮಟ್ಟ, ರುಚಿ ಮತ್ತು ದೊಡ್ಡ ಗಾತ್ರವಂತೆ. ಈ ರೂಬಿ ರೋಮನ್ ದ್ರಾಕ್ಷಿ ಕೆಂಪು ಬಣ್ಣವನ್ನು ಹೊಂದಿದೆ. ರೂಬಿ ರೋಮನ್ ದ್ರಾಕ್ಷಿಗಳು ಬಹಳ ಅಪರೂಪದ ಹಣ್ಣು.

  ಕೇವಲ ಒಂದು ದ್ರಾಕ್ಷಿಯ ತೂಕ 20 ಗ್ರಾಂ !

  ವಿಶೇಷ ಅಂದರೆ ಸತತ 14 ವರ್ಷಗಳ ಹೂಡಿಕೆ ಮಾಡಿ, ಸಂಶೋಧನೆ ನಡೆಸಿ ರೂಬಿ ರೋಮನ್ ದ್ರಾಕ್ಷಿಗಳನ್ನು ಬೆಳೆಸಲಾಗಿದೆಯಂತೆ. ಇನ್ನು ಐಷಾರಾಮಿ ದ್ರಾಕ್ಷಿಗಳನ್ನ ಜಪಾನ್‌ನ ಇಶಿಕಾವಾ ಪ್ರಿಫೆಕ್ಚರ್‌ನಲ್ಲಿ ಮಾತ್ರ ಬೆಳೆದು ಮಾರಾಟ ಮಾಡಲಾಗುತ್ತದೆ. ರೂಬಿ ರೋಮನ್ ತಳಿಯ ದ್ರಾಕ್ಷಿಗಳು ಪ್ರಕೃತಿಯಲ್ಲಿ ಅತ್ಯಂತ ವಿರಳವಾಗಿರುವ ಹಣ್ಣು. ಜಪಾನ್ ಬಿಟ್ಟು ಬೇರೆಡೆ ಎಲ್ಲಿಯೂ ಈ ದ್ರಾಕ್ಷಿಗಳನ್ನು ಬೆಳೆಯಲು ಸಾಧ್ಯವಿಲ್ಲವಂತೆ. ಈ ದ್ರಾಕ್ಷಿಗಳನ್ನು ಬೆಳೆಯಲು ವಾತಾವರಣ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ವಿಶ್ವದಲ್ಲೇ ದ್ರಾಕ್ಷಿಗಳಲ್ಲಿ ರೂಬಿ ರೋಮನ್ ತಳಿಯ ದ್ರಾಕ್ಷಿಗಳು ದುಬಾರಿ ಎಂದು ಹೇಳಲಾಗುತ್ತೆ. ಪ್ರತಿ ದ್ರಾಕ್ಷಿಯೂ ಪಿಂಗ್ ಪಾಂಗ್(Ping pong) ಬಾಲ್ ನಷ್ಟು ಗಾತ್ರವಿದ್ದು, 20 ಗ್ರಾಂ ನಷ್ಟು ತೂಕ ಬರುತ್ತದೆ. 2019ರಲ್ಲಿ ರೂಬಿ ರೋಮನ್ ಒಂದು ಗೊಂಚಲು ದ್ರಾಕ್ಷಿಯನ್ನು 1.2 ಮಿಲಿಯನ್ ಗಳಿಗೆ ಮಾರಾಟ ಮಾಡಲಾಗಿತ್ತು. ಭಾರತದ ಕರೆನ್ಸಿ ಪ್ರಕಾರ 7,55,000ಕ್ಕೂ ಹೆಚ್ಚು ರೂಪಾಯಿಗಳಿಗೆ ದ್ರಾಕ್ಷಿಯನ್ನು ಮಾರಾಟ ಮಾಡಲಾಗಿತ್ತು.

  ಇದನ್ನೂ ಓದಿ: ಇಲ್ಲಿವೆ ನೋಡಿ ಪ್ರಪಂಚದ ಅತಿ ದುಬಾರಿ ಹಣ್ಣುಗಳು; ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

  1995ರಲ್ಲಿ ಆರಂಭವಾದ ಸಂಶೋಧನೆ:

  ಪ್ರತಿ ವರ್ಷ ಈ ದ್ರಾಕ್ಷಿಯ 2,400 ಗೊಂಚಲು ಮಾತ್ರ ಬೆಳೆಸಲಾಗುತ್ತದೆ. ಪ್ರತಿಯೊಂದು ದ್ರಾಕ್ಷಿಯ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲು ಸಂಪೂರ್ಣವಾಗಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ನಡೆಸಿ ಆಯ್ಕೆಯಾದ ಹಣ್ಣುಗಳಿಗೆ ಸರ್ಟಿಫಿಕೇಶನ್ ನೀಡಿ ಮಾರಾಟ ಮಾಡಲಾಗುತ್ತೆ. 1995ರಲ್ಲಿ 400ಕ್ಕೂ ಹೆಚ್ಚು ದ್ರಾಕ್ಷಿ ತಳಿಗಳನ್ನು ಸಂಶೋಧಿಸಿ ಬಳಿಕ ಪತ್ತೆಯಾದ ತಳಿಯೇ ರೂಬಿ ರೋಮನ್ ದ್ರಾಕ್ಷಿ. ಜಪಾನ್ ನಲ್ಲಿ ರೂಬಿ ಸೀಸನ್ ನಲ್ಲಿ ಮಾತ್ರ ಈ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಹೀಗಾಗಿ ಇದಕ್ಕೆ ರೂಬಿ ರೋಮನ್ ದ್ರಾಕ್ಷಿ ಎಂದು ಹೆಸರಿಡಲಾಗಿದೆ. ಚೀನಾ ದೇಶದಲ್ಲಿ ಈ ತಳಿಯ ದ್ರಾಕ್ಷಿಗಳಿಗೆ ಸಖತ್ ಡಿಮ್ಯಾಂಡ್ ಇದೆಯಂತೆ.

  2008ರಲ್ಲಿ ಮೊದಲ ಬಾರಿಗೆ ರೂಬಿ ರೋಮನ್ ದ್ರಾಕ್ಷಿಗಳನ್ನ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಈ ಹಣ್ಣು ತುಂಬಾ ಜ್ಯೂಸಿ ಹಾಗೂ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದೆ. ತಿನ್ನಲು ಬಹಳ ರುಚಿಕರ, ಹಾಗೂ ಆಹ್ಲಾದಕರವಾಗಿರುತ್ತದೆ. ಕೋಟ್ಯಾಧಿಪತಿಗಳು ಈ ಹಣ್ಣುಗಳನ್ನು ಖರೀದಿಸಿ ತಮ್ಮ ಕಾರ್ಯಕ್ರಮಗಳಲ್ಲಿ ವೆಲ್ಕಂ ಫ್ರೂಟ್(Welcome Fruit) ರೀತಿ ಬಳಸುತ್ತಾರೆ. ಇನ್ನು ಕೆಲವರು ಗಿಫ್ಟ್ (Gift) ರೂಪದಲ್ಲಿ ಈ ಹಣ್ಣುಗಳನ್ನು ನೀಡುತ್ತಾರೆ.

  (ವರದಿ - ವಾಸುದೇವ್. ಎಂ)
  Published by:Soumya KN
  First published: