ಈ ಕಂಪನಿಗಳಲ್ಲಿ ಡೇಟಿಂಗ್ ಹೋಗಲೂ ಸಿಗುತ್ತೆ ರಜೆ!

ಚೀನಾದ ಕೆಲ ಕಂಪನಿಗಳು ಈಗಾಗಲೇ ಈ ನಿಯಮವನ್ನು ಅಳವಡಿಸಿಕೊಂಡಿದೆ. ಈ ಮೂಲಕ ದೇಶ ತಮ್ಮ ಕೊಡುಗೆ ನೀಡುತ್ತಿದ್ದಾರೆ!

Rajesh Duggumane | news18
Updated:January 26, 2019, 4:54 PM IST
ಈ ಕಂಪನಿಗಳಲ್ಲಿ ಡೇಟಿಂಗ್ ಹೋಗಲೂ ಸಿಗುತ್ತೆ ರಜೆ!
ಸಾಂದರ್ಭಿಕ ಚಿತ್ರ
  • News18
  • Last Updated: January 26, 2019, 4:54 PM IST
  • Share this:
ಕಚೇರಿಗಳಲ್ಲಿ ಕೆಲಸ ಮಾಡುವುದಕ್ಕಿಂತ ದೊಡ್ಡ ಸಾಹಸದ ಕೆಲಸ ಬಾಸ್​​ ಬಳಿ ರಜೆ ಕೇಳುವುದು! ಒಂದು ದಿನ ಹೆಚ್ಚುವರಿಯಾಗಿ ರಜೆ ತೆಗೆದುಕೊಳ್ಳಬೇಕೆಂದರೆ, ಸಾವಿರ ಸುಳ್ಳು ಹೇಳಬೇಕು. ಪದೇ ಪದೆ ರಜೆಯ ವಿಚಾರವನ್ನು ಅವರಿಗೆ ನೆನಪು ಮಾಡುತ್ತಿರಬೇಕು. ಬಾಸ್​​ನ ಮನಸ್ಥಿತಿ​ ಉತ್ತಮವಾಗಿತ್ತೆಂದರೆ ರಜೆ ಸಿಗುತ್ತದೆ. ಇಲ್ಲವಾದರೆ, ಕಚೇರಿಗೆ ತೆರಳುವುದು ಅನಿವಾರ್ಯ. ಆದರೆ, ಚೀನಾದ ಕೆಲ ಕಂಪನಿಗಳಲ್ಲಿ ಡೇಟಿಂಗ್​ ಹೋಗುತ್ತೇನೆಂದರೆ ಸಾಕು. ಅಲ್ಲಿ, ಕಣ್ಮುಚ್ಚಿಕೊಂಡು ರಜೆ ನೀಡುತ್ತಾರೆ!

ಇದು ಅಚ್ಚರಿ ಎನಿಸಿದರೂ ಸತ್ಯ. ಚೀನಾದಲ್ಲಿರುವ ಕೆಲ ಕಂಪನಿಗಳು ಈ ನಿಯಮವನ್ನು ಜಾರಿಗೆ ತಂದಿದೆ. ಅನಾರೋಗ್ಯ ರಜೆ, ಕಡ್ಡಾಯ ರಜೆ ಸೇರಿ ವಿವಿಧ ರೀತಿಯ ರಜೆಗಳಿರುತ್ತವೆ. ಅದರ ಜೊತೆಗೆ ವರ್ಷಕ್ಕೆ 8 ದಿನ ಡೇಟಿಂಗ್ ರಜೆ ನೀಡಲಾಗುತ್ತದೆ.

ಇದನ್ನೂ ಓದಿ: ದೇಹದಲ್ಲಿ ಕೊಬ್ಬಿನಾಂಶ ಜಾಸ್ತಿಯಾದರೆ ಮಾತ್ರವಲ್ಲ ಸೋಂಕು ತಗಲಿದರೂ ಹೃದಯಾಘಾತ ಸಂಭವಿಸುತ್ತೆ!

ಚೀನಾದ ಕೆಲ ಕಂಪನಿಗಳು ಈಗಾಗಲೇ ಈ ನಿಯಮವನ್ನು ಅಳವಡಿಸಿಕೊಂಡಿದೆ. ಈ ಮೂಲಕ ದೇಶ ತಮ್ಮ ಕೊಡುಗೆ ನೀಡುತ್ತಿದ್ದಾರೆ! ಅಷ್ಟಕ್ಕೂ ಡೇಟಿಂಗ್​ ಹೋಗುವುದರಿಂದ ದೇಶಕ್ಕೇನು ಕೊಡುಗೆ ಸಿಗಲಿದೆ ಎನ್ನುವ ಪ್ರಶ್ನೆ ಕಾಡುತ್ತಿದೆಯೇ? ಅದಕ್ಕೂ ಉತ್ತರವಿದೆ.

ಚೀನಾದಲ್ಲಿ ಒಂದು ದಂಪತಿಗೆ ಒಂದೇ ಮಗು ಎನ್ನುವ ನಿಯಮ ಜಾರಿಯಲ್ಲಿತ್ತು. ಒಂದಕ್ಕಿಂತ ಹೆಚ್ಚು ಮಗುವನ್ನು ಹೊಂದಿದ್ದರೆ, ಅಂಥವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಆದರೆ, ಈ ನಿಯಮದಿಂದ ವೃದ್ಧರ ಸಂಖ್ಯೆ ಹೆಚ್ಚುವ ಭಯ ಚೀನಾವನ್ನು ಕಾಡಿತ್ತು. ಹಾಗಾಗಿ ಈ ನಿಯಮ ಬದಲಿಸಲಾಗಿತ್ತು. ಈಗ ದಂಪತಿ ಎರಡು ಮಕ್ಕಳನ್ನು ಹೊಂದುವ ಹಕ್ಕಿದೆ.

ಇದನ್ನೂ ಓದಿ: ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೆ ಯೌವ್ವನ ಕಳೆದು ಹೋಗಬಹುದು!; ಇಲ್ಲಿದೆ ಆತಂಕಕಾರಿ ವಿಚಾರ

ಇದಕ್ಕಿಂತ ದೊಡ್ಡ ಸಮಸ್ಯೆ ಚೀನಾಕ್ಕೆ ಎದುರಾಗಿದೆ. ಚೀನಾದ ಮಹಿಳೆಯರು ಈಗ ತಮ್ಮ ಕೆರಿಯರ್​ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹಾಗಾಗಿ ಮದುವೆಯಾಗುವವರ ಸಂಖ್ಯೆ ಕಡಿಮೆ ಆಗುತ್ತಿದೆಯಂತೆ. ಅದರಲ್ಲೂ, 30 ವರ್ಷದವರೆಗೆ ಮದುವೆಯ ಬಗ್ಗೆ ಯಾರೂ ಚಿಂತನೆಯನ್ನೇ ನಡೆಸುತ್ತಿಲ್ಲ. ಹಾಗಾಗಿ, ಡೇಟಿಂಗ್​ಗೆ ತೆರಳಿದರೆ, ಅವರಲ್ಲಿ ಮದುವೆಯಾಗುವ ಚಿಂತನೆಗಳು ಹುಟ್ಟಿಕೊಳ್ಳಬಹುದು ಎನ್ನುವ ಆಲೋಚನೆ ಸರ್ಕಾರದ್ದು. ಹಾಗಾಗಿ ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗುತ್ತಿದೆ.
First published: January 26, 2019, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading