ಜೀವನದಲ್ಲಿ ಉತ್ತಮ ಉದ್ಯೋಗ(Job), ಐಷಾರಾಮಿಯಲ್ಲದಿದ್ದರೂ ಅಂದವಾದ ಮನೆ, ಓಡಾಡಲು ಸ್ವಂತ ಕಾರು(Car), ಖರ್ಚುಮಾಡಲು ಒಂದಿಷ್ಟು ಹಣ (Money) ಸಾಮಾನ್ಯವಾಗಿ ಎಲ್ಲರೂ ಕಾಣುವ ಕನಸಾಗಿದೆ (Dream). ಮನೆಯ ನಿರ್ಮಾಣ ಹಾಗೂ ಖರೀದಿ ಸಮಯದಲ್ಲಿ ಕೆಲವೊಂದು ಲೆಕ್ಕಾಚಾರಗಳಿದ್ದಂತೆ ಕಾರಿನ ಖರೀದಿ ಸಮಯದಲ್ಲಿ ಅದರ ಬ್ರ್ಯಾಂಡ್ (Brand), ಬಣ್ಣ, ಎಂಜಿನ್ ಕಾರ್ಯಕ್ಷಮತೆ, ಮೈಲೇಜ್, ಇನ್ನಿತರ ವೈಶಿಷ್ಟ್ಯಗಳು ಮುಖ್ಯವಾಗಿ ಬಜೆಟ್ ಹೀಗೆ ಪ್ರತಿಯೊಂದು ಅಂಶಕ್ಕೂ ಗಮನ ಹರಿಸಿ ಖರೀದಿಸಲಾಗುತ್ತದೆ.
ಕಾರಿನ ಬಣ್ಣದ ವಿಷಯದಲ್ಲಿ ಆದ್ಯತೆ
ಬಣ್ಣದ ವಿಷಯದಲ್ಲಿ ಕೂಡ ಕೆಲವೊಬ್ಬರು ಹೆಚ್ಚಿನ ಆದ್ಯತೆಯನ್ನು ಪ್ರಕಟಿಸುತ್ತಾರೆ. ಇಂದಿನ ಲೇಖನದಲ್ಲಿ ನಾವು ತಿಳಿಸುವ ವಿಷಯ ಕಾರಿನ ಬಣ್ಣಕ್ಕೆ ಏಕೆ ಆದ್ಯತೆ ನೀಡಬೇಕು ಎಂಬುದನ್ನು ಕಾರುಪ್ರಿಯರಿಗೆ ಮನದಟ್ಟುಮಾಡಿಕೊಡುತ್ತದೆ.
ನಿಮ್ಮಿಷ್ಟದ ಕಾರಿನ ಬಣ್ಣವನ್ನು ಆರಿಸುವ ಬದಲಿಗೆ ಕೆಲವೊಂದು ಅಂಶಗಳನ್ನು ಅರಿತುಕೊಂಡು ಬಣ್ಣವನ್ನು ಆಯ್ಕೆಮಾಡಿ ಎಂದೇ ನಾವು ಸಲಹೆ ನೀಡುತ್ತೇವೆ.
ಏಕೆಂದರೆ ನೀವು ಆರಿಸುವ ಬಣ್ಣ ಒಮ್ಮೊಮ್ಮೆ ಅಪಘಾತಕ್ಕೆ ಕೂಡ ಕಾರಣವಾಗುತ್ತದೆ ಎಂದರೆ ನೀವು ಕಾರಿನ ಬಣ್ಣದ ವಿಷಯದಲ್ಲಿ ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ಮನದಟ್ಟು ಮಾಡುತ್ತದೆ.
ಇದನ್ನೂ ಓದಿ: Women's Rights: ಹಕ್ಕುಗಳಿಗಾಗಿ ಮಿತಿಮೀರಿದ ಮಹಿಳೆಯರ ಹೋರಾಟ- ಹೆಚ್ಚಾಗ್ತಿದೆ ಪುರುಷ ತಾರತಮ್ಯ
ಹಾಗಿದ್ದರೆ ಸುರಕ್ಷಿತ ಕಾರಿನ ಬಣ್ಣಗಳು ಯಾವುವು? ಅವುಗಳು ಏಕೆ ಸುರಕ್ಷಿತ? ಇದರ ಹಿಂದೆ ಅಡಗಿರುವ ರಹಸ್ಯಗಳೇನು ಎಂಬುದನ್ನು ತಿಳಿದುಕೊಳ್ಳೋಣ
ಸುರಕ್ಷಿತ ಕಾರಿನ ಬಣ್ಣಗಳು
ಕಾರು ತಜ್ಞರ ಪ್ರಕಾರ ಸಿಲ್ವರ್ ಬಣ್ಣ ಹೆಚ್ಚಿನ ಕಾರು ಪ್ರಿಯರ ಮನಸೆಳೆಯುವ ಅಂತೆಯೇ ಮನಮೆಚ್ಚಿದ ಬಣ್ಣವಾಗಿದೆ. ಬಿಳಿ ಹಾಗೂ ಬೆಳ್ಳಿ ಬಣ್ಣದಲ್ಲಿ ಬಿಳಿ ಬಣ್ಣವು ಬೆಳ್ಳಿ ಬಣ್ಣಕ್ಕಿಂತ ಹೆಚ್ಚು ಸುರಕ್ಷಿತ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. ಈ ಕುರಿತಾಗಿ ಮೊನಾಶ್ ಯುನಿವರ್ಸಿಟಿಯ ಅಪಘಾತ ಸಂಶೋಧನೆ ಕೇಂದ್ರ ಸಂಶೋಧನೆಯನ್ನು ನಡೆಸಿದೆ.
ಈ ಅಧ್ಯಯನ ತಿಳಿಸಿರುವಂತೆ, ದಿನದ ಯಾವುದೇ ಸಮಯದಲ್ಲಾದರೂ ಕಪ್ಪು ಕಾರುಗಳಿಗಿಂತ ಬಿಳಿ ಬಣ್ಣದ ಕಾರು ಅಪಘಾತಕ್ಕೆ ಒಳಗಾಗುವ ಸಾಧ್ಯತೆ 12% ಕಡಿಮೆಯಾಗಿದೆ.
ಕೆನೆ, ಹಳದಿ ಹಾಗೂ ಬೀಜ್ ಬಣ್ಣ ಬಿಳಿಯ ನಂತರ ಸ್ಥಾನ ಪಡೆದಿವೆ. ಹಳದಿ ಬಣ್ಣ ಕೆಲವೊಂದು ಅಧ್ಯಯನಗಳಲ್ಲಿ ಬಿಳಿ ಬಣ್ಣಕ್ಕಿಂತ ಹೆಚ್ಚು ಸುರಕ್ಷಿತ ಎಂಬ ಮಾಹಿತಿಯನ್ನು ಒದಗಿಸಿದೆ.
ಹೆಚ್ಚು ಅಪಾಯಕಾರಿ ಕಾರಿನ ಬಣ್ಣಗಳು
ಕಪ್ಪಲ್ಲದೆ ಹೆಚ್ಚು ಅಪಾಯಕಾರಿ ಬಣ್ಣಗಳಲ್ಲಿ ಸ್ಥಾನ ಪಡೆದುಕೊಂಡಿರುವುದು ಬೂದು (11% ಹೆಚ್ಚು ಅಪಾಯ), ಸಿಲ್ವರ್ (10% ಹೆಚ್ಚಿನ ಅಪಾಯ) ನೀಲಿ (7% ಹೆಚ್ಚಿನ ಅಪಾಯ), ಮತ್ತು ಕೆಂಪು (7% ಹೆಚ್ಚಿನ ಅಪಾಯ) ಎಂಬುದಾಗಿ ಸೂಚಿಸಿವೆ.
ಭಿನ್ನತೆ ಏಕೆ?
ಇನ್ನು ಬಣ್ಣಗಳಲ್ಲಿ ತಿಳಿ ಹಾಗೂ ಗಾಢ ಬಣ್ಣಗಳ ನಡುವೆ ಕೂಡ ಸಾಕಷ್ಟು ವ್ಯತ್ಯಾಸಗಳಿವೆ. ತಿಳಿ ಬಣ್ಣದ ಕಾರುಗಳನ್ನು ರಸ್ತೆಯ ಮೇಲೆ ಸುಲಭವಾಗಿ ವೀಕ್ಷಿಸಬಹುದಾಗಿದೆ ಏಕೆಂದರೆ ಇವು ಕಣ್ಣಿಗೆ ತೀವ್ರವಾಗಿ ನಾಟುವಂತಹ ಬಣ್ಣಗಳಲ್ಲ.
ಇನ್ನು ಕೆಲವು ಬಣ್ಣಗಳಾದ ಬಿಳಿ ಹಾಗೂ ಹಳದಿ ಬಣ್ಣಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ಅವುಗಳನ್ನು ಅಷ್ಟಾಗಿ ಕದಿಯುವುದಿಲ್ಲ. ಗಾಢ ಬಣ್ಣಕ್ಕಿಂತ ಬಿಳಿ ಬಣ್ಣದ ಕಾರು ಅಷ್ಟಾಗಿ ರಾಚುವುದಿಲ್ಲ. ರಾತ್ರಿ ವೇಳೆಯಲ್ಲಿ ಕೂಡ ಈ ಬಣ್ಣ ಹೆಚ್ಚು ನಿಚ್ಚಳವಾಗಿ ತೋರುತ್ತದೆ. ಹಗಲಿನ ಬೆಳಕಿನಲ್ಲಿ ಗಾಢ ಬಣ್ಣದ ಕಾರುಗಳು ರಸ್ತೆಯೊಂದಿಗೆ ಕಡಿಮೆ ವ್ಯತ್ಯಾಸವನ್ನು ಹೊಂದಿರುತ್ತವೆ ಎಂಬುದು ತಜ್ಞರ ಹೇಳಿಕೆಯಾಗಿದೆ.
ಇದನ್ನೂ ಓದಿ: Polluted Cities: ವಿಶ್ವದಲ್ಲಿನ 50 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 39 ನಗರಗಳಿವೆಯಂತೆ!
ಬಣ್ಣದ ವ್ಯತ್ಯಾಸಕ್ಕಿಂತ ವಾಹನಗಳ ಅಪಘಾತಕ್ಕೆ ಕಾರಣವಾಗಿರುವ ಇನ್ನಿತರ ಅಂಶಗಳೆಂದರೆ ಚಾಲನೆಯ ಗುಣಮಟ್ಟ, ಗೋಚರತೆ, ಹವಾಮಾನ ಪರಿಸ್ಥಿತಿ ಮೊದಲಾದವುಗಳು ಕಾರಣವಾಗಿವೆ.
ನಿಮ್ಮ ಕಾರಿನ ಪರಿಸ್ಥಿತಿ ಕೂಡ ಒಮ್ಮೊಮ್ಮೆ ಮುಖ್ಯವಾಗಿರುತ್ತವೆ. ಹಾಗಾಗಿ ಕಪ್ಪುಕಾರು ನಿಮ್ಮ ಬಳಿ ಇದ್ದರೆ ಅದರಿಂದ ಅಪಘಾತ ಖಂಡಿತ ಸಂಭವಿಸುತ್ತದೆ ಎಂಬ ಹೆದರಿಕೆ ಬೇಡ ಎಂದು ತಜ್ಞರು ಸಲಹೆ ನೀಡುತ್ತಾರೆ.
ಯಾವುದೇ ಬಣ್ಣದ ಕಾರು ಹೊಂದಿದ್ದರೂ ನೀವು ಸಾಧ್ಯವಾದಷ್ಟು ಸುರಕ್ಷಿತ ಚಾಲಕರಾಗಿದ್ದೀರಿ ಎಂಬುದನ್ನ ಖಚಿತಪಡಿಸಿಕೊಳ್ಳುವುದು ಮುಖ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ