ಕಡಿಮೆ ಬಡ್ಡಿದರಲ್ಲಿ ಗೃಹಸಾಲ ಒದಗಿಸುವ ಬ್ಯಾಂಕ್‌ಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳು: ವಿವರ ಇಲ್ಲಿದೆ ನೋಡಿ..

ಹೆಚ್ಚಿನ ಸಾಲಗಾರರು ಬೇಸ್ ದರ ಅಥವಾ ಮಾರ್ಜಿನಲ್ ದರಕ್ಕೆ ಲಿಂಕ್ ಆಗಿರುವ ಹಳೆಯ ಸಾಲಗಳಿಗೆ ಬಂಧಿತವಾಗಿದ್ದು ಹೆಚ್ಚಿನ ಬ್ಯಾಂಕ್‌ಗಳು ಆರ್‌ಬಿಐ ರೆಪೋ ದರವಾಗಿರುವ ಬಾಹ್ಯ ಬೆಂಚ್‌ಮಾರ್ಕ್‌ಗೆ ಅನ್ವಯವಾಗಿರುವಂತೆ ಹೊಸ ಸಾಲಗಳನ್ನು ನೀಡುತ್ತಿವೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ (SBI) ತನ್ನ ಬ್ಯಾಂಕಿನಿಂದ ಹೊಸ ಸಾಲ ಪಡೆಯುವವರು ಹಾಗೂ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮಾಡಲು ಇಚ್ಛಿಸುವ ಸಾಲಗಾರರಿಗಾಗಿ ಹಬ್ಬದ ಆಫರ್ ಘೋಷಿಸಿದ್ದು, ಸಾಲದ ಪ್ರಮಾಣ ಎಷ್ಟೇ ಮೊತ್ತವಾಗಿದ್ದರೂ 6.7% ಬಡ್ಡಿದರದಲ್ಲಿ ಗೃಹಸಾಲ ಪಡೆಯಬಹುದಾಗಿದೆ. ಜೊತೆಗೆ ಹೆಚ್ಚಿನ ಕ್ರೆಡಿಟ್ ಸ್ಕೋರ್ ಪಡೆದವರು ಕೂಡ ಗೃಹಸಾಲವನ್ನು ಇದೇ ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ. ಇದರೊಂದಿಗೆ ಬ್ಯಾಂಕ್ ಪ್ರೊಸೆಸಿಂಗ್ ಫೀ ಹಾಗೂ ವೇತನ ರಹಿತ ಸಾಲಗಾರರಿಗೆ ವಿಧಿಸುವ ಬಡ್ಡಿಯ ಮೇಲಿನ ಪ್ರೀಮಿಯಂ ಕೂಡ ಮನ್ನಾ ಮಾಡಿದೆ.

  ಹೆಚ್ಚಿನ ಸಾಲಗಾರರು ಬೇಸ್ ದರ ಅಥವಾ ಮಾರ್ಜಿನಲ್ ದರಕ್ಕೆ ಲಿಂಕ್ ಆಗಿರುವ ಹಳೆಯ ಸಾಲಗಳಿಗೆ ಬಂಧಿತವಾಗಿದ್ದು ಹೆಚ್ಚಿನ ಬ್ಯಾಂಕ್‌ಗಳು ಆರ್‌ಬಿಐ ರೆಪೋ ದರವಾಗಿರುವ ಬಾಹ್ಯ ಬೆಂಚ್‌ಮಾರ್ಕ್‌ಗೆ ಅನ್ವಯವಾಗಿರುವಂತೆ ಹೊಸ ಸಾಲಗಳನ್ನು ನೀಡುತ್ತಿವೆ. ಬಾಹ್ಯ ಬೆಂಚ್‌ಮಾರ್ಕ್‌ಗೆ ಲಿಂಕ್ ಆಗಿರುವ ಸಾಲಗಳ ವಿವರಗಳನ್ನು ಅರ್ಥೈಸಿಕೊಳ್ಳುವುದು ಸುಲಭವಾಗಿದ್ದು ಪಾಲಿಸಿ ದರ ಬದಲಾವಣೆಗಳನ್ನು ಪಾದರ್ಶಕವಾಗಿ ರವಾನಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಯಾವುದೇ ರೆಪೋ ದರ ವಿನಾಯಿತಿ ಪ್ರಯೋಜನಗಳನ್ನು ಸಾಲಗಾರರಿಗೆ ಬ್ಯಾಂಕ್‌ಗಳು ರವಾನಿಸಬೇಕಾಗುತ್ತದೆ. ಅಂದರೆ ಸಾಲಗಾರರಿಗೆ ಅಗ್ಗದ ಸಾಲಗಳನ್ನು ನೀಡುವುದು ಎಂದಾಗಿದೆ.

  ಈ ನಿಟ್ಟಿನಲ್ಲಿ Moneycontrol.com ಹಾಗೂwww.bankbazaar.comಕಡಿಮೆ ಬಡ್ಡಿದರದಲ್ಲಿ ಗೃಹಸಾಲಗಳನ್ನು ವಿತರಿಸುವ ಬ್ಯಾಂಕ್‌ಗಳು ಹಾಗೂ ಗೃಹ ಸಾಲ ಹಣಕಾಸು ಸಂಸ್ಥೆಗಳ ವಿವರಗಳನ್ನು ದಾಖಲಿಸಿದ್ದು ಈ ಸಂಸ್ಥೆಗಳು ಯಾವ ಬಡ್ಡಿ ದರದಲ್ಲಿ ಗೃಹಸಾಲ ಒದಗಿಸಲಿವೆ, ಮಾಸಿಕ ಇಎಮ್‌ಐ ವೆಚ್ಚ ಮೊದಲಾದ ವಿವರಗಳನ್ನು ಅರಿತುಕೊಳ್ಳೋಣ.

  ಕೋಟಕ್ ಮಹೀಂದ್ರಾ ಬ್ಯಾಂಕ್:

  ಈ ಖಾಸಗಿ ವಲಯದ ಬ್ಯಾಂಕ್ ಕಳೆದ ನವೆಂಬರ್‌ನಿಂದ ಕಡಿಮೆ ಬಡ್ಡಿದರಲ್ಲಿ ಗೃಹ ಸಾಲ ನೀಡುತ್ತಿದೆ. 20 ವರ್ಷಗಳ ಕಾಲಾವಧಿಗೆ 75 ಲಕ್ಷ ರೂ. ಸಾಲಕ್ಕಾಗಿ ಇದು ವಿಧಿಸಿರುವ ಬಡ್ಡಿದರ 6.5% ಆಗಿದೆ. ತಿಂಗಳ ಇಎಮ್‌ಐ 55,918 ರೂ. ರಂತೆ ಪಾವತಿಸಬೇಕಾಗುತ್ತದೆ.

  ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್:

  ಕೋಟಕ್ ಬ್ಯಾಂಕ್‌ನಂತೆಯೇ ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ಕಡಿಮೆ ಬಡ್ಡಿದರವನ್ನು ಒದಗಿಸುತ್ತಿದ್ದರೂ ಖಾಸಗಿ ವಲಯದ ಇತರ ಬ್ಯಾಂಕ್‌ಗಳಿಗಿಂತ ಮುಂದಿದ್ದು ಇದು ವಿಧಿಸುವ ಬಡ್ಡಿದರ 6.65% ಆಗಿದೆ.

  ಎಸ್‌ಬಿಐ:

  ಎಸ್‌ಬಿಐ ಹೊಸ ಸಾಲಗಾರರನ್ನು ಆಕರ್ಷಿಸುವ ಸಲುವಾಗಿ ಹಾಗೂ ಇತರ ಬ್ಯಾಂಕ್‌ಗಳಿಂದ ಎಸ್‌ಬಿಐಗೆ ಬದಲಿಸಬೇಕೆಂಬ ಇಚ್ಛೆ ಹೊಂದಿರುವವರಿಗಾಗಿ ಹಬ್ಬದ ಕೊಡುಗೆ ಘೋಷಿಸಿದೆ. 800ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ 6.7%ನಂತೆ ಬಡ್ಡಿದರವನ್ನು ಬ್ಯಾಂಕ್ ವಿಧಿಸಿದೆ.

  ಟಾಟಾ ಕ್ಯಾಪಿಟಲ್:

  Moneycontrol-Bankbazaarನ ಅಗ್ಗದ ಸಾಲದಾತರ ಪಟ್ಟಿಗೆ ಸೇರ್ಪಡೆಗೊಂಡಿರುವ ಟಾಟಾ ಕ್ಯಾಪಿಟಲ್ 20 ವರ್ಷಗಳ ಕಾಲಾವಧಿಯ 75 ಲಕ್ಷ ರೂ. ಗೃಹ ಸಾಲ ಮೊತ್ತಕ್ಕೆ 6.7% ಬಡ್ಡಿ ವಿಧಿಸುತ್ತದೆ. ಪ್ರತಿ ತಿಂಗಳು 56,805 ರೂ. ಇಎಂಐ ಪಾವತಿಸಬೇಕಾಗುತ್ತದೆ.

  ಬ್ಯಾಂಕ್ ಆಫ್ ಬರೋಡಾ (ಬಿಒಬಿ):

  ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ತನ್ನ ಗೃಹ ಸಾಲದ ಬಡ್ಡಿದರವನ್ನು 6.75%ನಿಂದ ಆರಂಭಿಸಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್ ಹಬ್ಬದ ಆಫರ್ ಘೋಷಿಸಿದ್ದು ಸಂಸ್ಕರಣಾ ಶುಲ್ಕ ಮನ್ನಾ ಮಾಡಿದೆ. 20 ವರ್ಷಗಳ ಕಾಲಾವಧಿಯಲ್ಲಿ 75 ಲಕ್ಷ ರೂ. ಗೃಹ ಸಾಲವನ್ನು ನೀವು ಪಡೆದುಕೊಳ್ಳುತ್ತಿದ್ದರೆ ಪ್ರತಿ ತಿಂಗಳು 57,027 ರೂ, ಇಎಮ್‌ಐ ಪಾವತಿಸಬೇಕಾಗುತ್ತದೆ.

  ಬಜಾಜ್ ಫಿನ್‌ಸರ್ವ್ ಹೌಸಿಂಗ್ ಫಿನಾನ್ಸ್ ಕಂಪನೀಸ್ (ಎಚ್‌ಎಫ್‌ಸಿ):

  ಎಚ್‌ಎಫ್‌ಸಿ ಒದಗಿಸುವ ಕಡಿಮೆ ಬಡ್ಡಿದರವು BoB ಬ್ಯಾಂಕ್‌ಗೆ ಸಮನಾಗಿದೆ. ಭಾರತದ ಅತಿದೊಡ್ಡ ಸಾಲದಾತ ಬ್ಯಾಂಕ್ ಎಚ್‌ಡಿಎಫ್‌ಸಿಗಿಂತ (7%) ಕಡಿಮೆ ಇದೆ.

  ಪಂಜಾಬ್ ನ್ಯಾಶನಲ್ ಬ್ಯಾಂಕ್:

  ಸಾರ್ವಜನಿಕ ವಲಯದ ಬ್ಯಾಂಕ್ 6.8% ಬಡ್ಡಿದರದಲ್ಲಿ ಗೃಹಸಾಲ ಒದಗಿಸುತ್ತಿದ್ದು ಸಾಲಗಾರರು ಪ್ರತಿ ತಿಂಗಳು 57,250 ರೂ. ಇಎಮ್‌ಐ ಪಾವತಿಸಬೇಕಾಗುತ್ತದೆ. ಇಂಡಿಯನ್ ಬ್ಯಾಂಕ್ ಕೂಡ ಇದೇ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತಿದೆ.
  First published: