ಉಳಿತಾಯ ಖಾತೆಯಲ್ಲಿ ಹಣವಿಟ್ಟರೆ ಶೇ. 7ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತವೆ ಈ ಬ್ಯಾಂಕ್​ಗಳು!

news18
Updated:October 4, 2018, 2:34 PM IST
ಉಳಿತಾಯ ಖಾತೆಯಲ್ಲಿ ಹಣವಿಟ್ಟರೆ ಶೇ. 7ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತವೆ ಈ ಬ್ಯಾಂಕ್​ಗಳು!
ಸಾಂದರ್ಭಿಕ ಚಿತ್ರ
  • News18
  • Last Updated: October 4, 2018, 2:34 PM IST
  • Share this:
ನ್ಯೂಸ್​ 18 ಕನ್ನಡ

ಸಾಮಾನ್ಯವಾಗಿ ನಮ್ಮ ಉಳಿತಾಯ ಖಾತೆಗಳಲ್ಲಿ ಹಣ ಉಳಿದುಕೊಳ್ಳುತ್ತದೆ. ಹೀಗೆ ಉಳಿದುಕೊಂಡ ಹಣ ಆ ಸಮಯಕ್ಕೆ ಅಗತ್ಯವಿಲ್ಲವೆಂದಾದರೆ ಎಫ್​ಡಿ (ಫಿಕ್ಸೆಡ್​ ಡೆಪಙಆಸಿಟ್​) ಮಾಡುತ್ತೇವೆ. ಆದರೆ ಇದೀಗ ದೇಶದ ಹಲವಾರು ಬ್ಯಾಂಕ್​ಗಳು ಉಳಿತಾಯ ಖಾತೆಗಳಲ್ಲಿರುವ ಮತ್ತಕ್ಕೆ ಶೇ. 7ಕ್ಕಿಂತಲೂ ಅಧಿಕ ಬಡ್ಡಿ ನೀಡುತ್ತವೆ. ಹೀಗಿರುವಾಗ ನೀವು ಕೂಡಾ ಯಾವುದೇ ಚಿಂತೆ ಇಲ್ಲದೆ ಹೆಚ್ಚು ಲಾಭ ಗಳಿಸಬಹುದಾಗಿದೆ. ಹಾಗಾದರೆ ಆ ಬ್ಯಾಂಕ್​ಗಳು ಯಾವುವು? ನಿಯಮಗಳೇನು? ಇಲ್ಲಿದೆ ವಿವರ

SBI, HDFC, ICICIಬ್ಯಾಂಕ್​ನಂತಹ ದೊಡ್ಡ ಬ್ಯಾಂಕ್​ಗಳು ಉಳಿತಾಯ ಖಾತೆಗಳ ಮೊತ್ತಕ್ಕೆ ಶೇಕಡಾ 4-6 ರಷ್ಟು ಬಡ್ಡಿ ನೀಡಿದರೆ, ಎಫ್​ಡಿ ಮೇಲೆ ಸುಮಾರು ಶೇಕಡಾ 7-8ರಷ್ಟು ಬಡ್ಡಿ ನೀಡುತ್ತದೆ.

ಈ ಬ್ಯಾಂಕ್​ಗಳು ಸುರಕ್ಷಿತವೇ?

ದೇಶದಲ್ಲಿ ಎಲ್ಲಾ ಬ್ಯಾಂಕ್​ಗಳು ಭಾರತೀಯ ರಿಸರ್ವ್​ ಬ್ಯಾಂಕ್​ ನಿರ್ದೇಶನದ ಮೇರೆಗೆ ಕಾರ್ಯ ನಿರ್ವಹಿಸುತ್ತವೆ. ಇವುಗಳಲ್ಲಿ ಕೆಲ ಸಣ್ಣ ಫೈನಾನ್ಸ್​ ಬ್ಯಾಂಕ್​ ಉಳಿತಾಯ ಖಾತೆಗಳ ಮೇಲೆ ಎಫ್​ಡಿಯಂತೆಯೇ ಬಡ್ಡಿ ನೀಡುತ್ತವೆ.

1) ಸೂರ್ಯೋದಯ ಸಣ್ಣ ಹಣಕಾಸು ಬ್ಯಾಂಕ್: ಇಲ್ಲಿ ಉಳಿತಾಯ ಖಾತೆಯಲ್ಲಿ 1 ಲಕ್ಷದಷ್ಟು ಮೊತ್ತವಿದ್ದರೆ ಬಡ್ಡಿ ದರ ಶೇ. 6.25ರಷ್ಟಿದೆ. 1 ರಿಂದ 10 ಲಕ್ಷದಷ್ಟು ಮತ್ತಕ್ಕೆ ಶೇ. 7.25ರಷ್ಟು ಬಡ್ಡಿ ಸಿಗುತ್ತದೆ. ಒಂದು ವೇಳೆ ಖಾತೆಯಲ್ಲಿ 10 ಲಕ್ಷಕ್ಕೂ ಅಧಿಕ ಮೊತ್ತ ಇದ್ದರೆ ನಿಮಗೆ ಶೇ. 7ರಷ್ಟು ಬೆಡ್ಡಿ ಸಿಗುತ್ತದೆ.

2) ಉಜ್ಜೀವನ್​ ಸಣ್ಣ ಹಣಕಾಸು ಫೈನಾನ್ಸ್​ ಬ್ಯಾಂಕ್: ಈ ಬ್ಯಾಂಕ್​ 50 ಲಕ್ಷದಿಂದ 5 ಕೋಟಿ ರೂಪಾಯಿಯವರೆಗಿನ ಮೊತ್ತಕ್ಕೆ ಶೇ. 6.75ರಷ್ಟು ಬಡ್ಡಿ ನೀಡುತ್ತದೆ. ಒಂದು ವೇಳೆ 5 ಕೋಟಿಗಿಂತಲೂ ಅಧಿಕ ಮೊತ್ತವಿದ್ದರೆ ಶೇ. 7 ರಷ್ಟು ಬಡ್ಡಿ ಸಿಗುತ್ತದೆ.3) ಇಕ್ವಿಟಾಸ್​ ಸಣ್ಣ ಫೈನಾನ್ಸ್​ ಬ್ಯಾಂಕ್: ಈ ಬ್ಯಾಂಕ್ 10 ಲಕ್ಷದಿಂದ 5 ಕೋಟಿಯವರೆಗೆ ನಿಮ್ಮ ಉಳಿತಾಯ ಖಾತೆಯಲ್ಲಿ ಹಣ ಜಮೆ ಮಾಡಿದರೆ ಶೇ. 6.50ರಷ್ಟು ಬಡ್ಡಿ ನೀಡುತ್ತದೆ.

4) ಎಯು ಸಣ್ಣ ಫೈನಾನ್ಸ್​ ಬ್ಯಾಂಕ್: 1 ಲಕ್ಷದಿಂದ 10 ಲಕ್ಷ ಮೊತ್ತ ಉಳಿತಾಯ ಖಾತೆಯಲ್ಲಿದ್ದರೆ ಶೇ. 6.50ರಷ್ಟು ಮೊತ್ತ ಬಡ್ಡಿ ಹಾಗೂ 10 ಲಕ್ಕಕ್ಕೂ ಅಧಿಕ ಮೊತ್ತವಿದ್ದರೆ ಶೇ. 6.75ರಷ್ಟು ಬಡ್ಡಿ ನೀಡುತ್ತದೆ.
First published:October 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading