HOME » NEWS » National-international » THESE ARE THE STATE CHIEF MINISTER RECOVERED FROM COVID POSITIVE SESR

Covid19: ಯಾವೆಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಕೊರೋನಾವನ್ನು ಯಶಸ್ವಿಯಾಗಿ ಎದುರಿಸಿದ್ದಾರೆ ಗೊತ್ತಾ..?

ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಖುದ್ದು ತಾವೇ ಸೋಂಕಿತರಾದರೂ ಹೆದರದೇ ಕೋವಿಡ್ ನಿರ್ವಹಣೆಯಲ್ಲಿ ತೊಡಗಿ ದಿಟ್ಟತನ ಮೆರೆದಿದ್ದಾರೆ

news18-kannada
Updated:April 14, 2021, 5:18 PM IST
Covid19: ಯಾವೆಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಕೊರೋನಾವನ್ನು ಯಶಸ್ವಿಯಾಗಿ ಎದುರಿಸಿದ್ದಾರೆ ಗೊತ್ತಾ..?
ಯೋಗಿ ಆದಿತ್ಯನಾಥ್​, ಬಿಎಸ್​ವೈ, ಪಿಣರಾಯಿ ವಿಜಯ್​, ತಿರಾತ್​ ಸಿಂಗ್​ ರಾವತ್​​
  • Share this:
ಬೆಂಗಳೂರು (ಏ. 14): ಭಯಾನಕ ಕೋವಿಡ್-19 ಸೋಂಕು ಇಡೀ ವಿಶ್ವವನ್ನೇ ಕಾಡುತ್ತಿದೆ. ದೇಶದಲ್ಲಿ ಕೊರೋನಾ 2ನೇ ಅಲೆ ಅಬ್ಬರಿಸುತ್ತಿದೆ. ಜನಸಾಮಾನ್ಯರಿಂದ ಮುಖ್ಯಮಂತ್ರಿಗಳವರೆಗೆ, ಸಿನಿಮಾ ತಾರೆಯರಿಂದ ಹಿಡಿದು ಕ್ರಿಕೆಟಿಗರವರೆಗೆ ಎಲ್ಲರನ್ನೂ ಕೊರೋನಾ ಕಾಡಿದೆ. ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಸಿಎಂ ಅಖಿಲೇಶ್ ಯಾದವ್ ಸೋಂಕಿಗೆ ತುತ್ತಾಗಿದ್ದಾರೆ. ನಮ್ಮ ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳೂ ಸೋಂಕಿಗೆ ತುತ್ತಾಗಿದ್ದರು. ಡೆಡ್ಲಿ ವೈರಸ್​ನಿಂದ ಇಡೀ ರಾಜ್ಯವನ್ನು ಕಾಪಾಡಲು ನಿಂತ ಮುಖ್ಯಮಂತ್ರಿಗಳನ್ನೂ ಈ ಸೋಂಕು ಬಿಟ್ಟಿಲ್ಲ. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಖುದ್ದು ತಾವೇ ಸೋಂಕಿತರಾದರೂ ಹೆದರದೇ ಕೋವಿಡ್ ನಿರ್ವಹಣೆಯಲ್ಲಿ ತೊಡಗಿ ದಿಟ್ಟತನ ಮೆರೆದಿದ್ದಾರೆ. ಆ ಸಾಲಿನಲ್ಲಿ ಮೊದಲು ನಿಲ್ಲುವರು ನಮ್ಮ ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ. ಕಳೆದ ವರ್ಷ ಆಗಸ್ಟ್ನಲ್ಲಿ 78 ವರ್ಷ ವಯಸ್ಸಿನ ಬಿಎಸ್ವೈ ಸೋಂಕಿಗೆ ತುತ್ತಾಗಿದ್ದರು. ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಅವರ ಒಂದೇ ವಾರದಲ್ಲಿ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆಸ್ಪತ್ರೆಯಲ್ಲೇ ಆಡಳಿತಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ನಡೆಸಿ ಗಮನ ಸೆಳೆದಿದ್ದರು.

ಇನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೂಡ ಕೊರೋನಾದಿಂದ ಬಳಲಿದ್ದರು. ಕೋವಿಡ್ ರಿಪೋರ್ಟ್ ಪಾಸಿಟಿವ್ ಬರುತ್ತಲೇ ಕೋಝೀಗೋಡುವಿನ ಆಸ್ಪತ್ರೆಗೆ ದಾಖಲಾಗಿದ್ದರು. ಅತ್ಯಂತ ಕಡಿಮೆ ರೋಗಲಕ್ಷಣಗಳಿದ್ದ ಕಾರಣ ಶೀಘ್ರವೇ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು.

ಕಳೆದ ತಿಂಗಳ ಉತ್ತರಾಖಂಡ್ ಸಿಎಂ ತಿರಥ್ ಸಿಂಗ್ ರಾವತ್ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಆದರೆ ಧೈರ್ಯದಿಂದ ಸೋಂಕನ್ನು ಎದುರಿಸಿ ಗುಣಮುಖರಾಗಿದ್ದರು. ವೈರಸ್​ಗೆ ಹೆದರುವ ಅಗತ್ಯವಿಲ್ಲ, ವೈದ್ಯರ ಸಲಹೆ ಮೇರೆಗೆ ಸೋಂಕಿನಿಂದ ಬಚಾವ್ ಆಗಬಹುದು ಎಂದು ಆತ್ಮವಿಶ್ವಾಸ ಮಾತುಗಳನ್ನಾಡಿದ್ದರು.

ಇದನ್ನು ಓದಿ: ಬೆಂಗಳೂರಲ್ಲಿ ಹಬ್ಬದಂದೇ ಅತಿ ಹೆಚ್ಚು ಕೋವಿಡ್ ಸಾವು; ಅಂತ್ಯಕ್ರಿಯೆಗಾಗಿ ಚಿತಾಗಾರಗಳ ಮುಂದೆ ಸರತಿ ಸಾಲು!

ಗುಜರಾತ್ ಸಿಎಂ ವಿಜಯ್ ರೂಪಾನಿ ಇದೇ ವರ್ಷ ಫೆಬ್ರವರಿಯಲ್ಲಿ ಪಾಲಿಕೆ ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪರಿಶೀಲಿಸಿದಾಗ ಸೋಂಕಿರುವುದು ಪತ್ತೆಯಾಗಿತ್ತು. ಕೆಲವೇ ದಿನಗಳಲ್ಲಿ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದರು. ಇದೇ ತಿಂಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಮಣಿಪುರದ ಸಿಎಂ ಬಿಪಿನ್ ಕುಮಾರ್ ದೇವ್ ಕೂಡ ಕೋವಿಡ್​​ಗೆ ತುತ್ತಾಗಿದ್ದರು. ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಿ ಕೊರೋನಾದಿಂದ ಗುಣಮುಖರಾಗಿದ್ದರು.

ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಕೆಲವೇ ದಿನಗಳಲ್ಲಿ ದಂಪತಿ ಸೋಂಕಿನಿಂದ ಮುಕ್ತರಾಗಿದ್ದರು. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಸೋಂಕನ್ನು ದಿಟ್ಟವಾಗಿ ಎದುರಿಸಿದ್ದಾರೆ. ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ, ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ಕೂಡ ಕೊರೋನಾವನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.

(ವರದಿ : ಕಾವ್ಯಾ. ವಿ)
Published by: Seema R
First published: April 14, 2021, 5:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories