Union Budget 2022: ಪಂಚ ಪಾಂಡವರು! ನಿರ್ಮಲಾ ಸೀತಾರಾಮನ್ ಅವರ 2022ರ ಬಜೆಟ್ ರೂಪಿಸುವಲ್ಲಿ ಪಾತ್ರವಹಿಸಿದ ಪ್ರಮುಖರು ಇವರೇ!

Union Budget 2022: ದೇಶದ ಬಜೆಟ್ ರೂಪಿಸುವಲ್ಲಿ ಕೇಂದ್ರ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರನ್ನು ಹೊರತುಪಡಿಸಿ ಅವರದ್ದೇ ತಂಡದ ಸದಸ್ಯರೂ ತಮ್ಮ ಗಮನಾರ್ಹ ಕೊಡುಗೆ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ತಂಡದಲ್ಲಿ ಈಗಾಗಲೇ ಉನ್ನತ ಮಟ್ಟದ ಐದು ಅಧಿಕಾರಿಗಳಿದ್ದಾರೆ.

@News18 Creative

@News18 Creative

 • Share this:
  ದೇಶದ ಕಣ್ಣೆಲ್ಲ ಭಾರತದ ವಿತ್ತ ಮಂತ್ರಿಯತ್ತ ನೆಟ್ಟಿತ್ತು. ಕಾರಣ ಈ ವರ್ಷ ಅವರು ಮಂಡಿಸಿದ ಮುಂಗಡ ಪತ್ರ ಅರ್ಥಾತ್‌ ಕೇಂದ್ರ ಬಜೆಟ್ - 2022 (Union Budget 2022). ಕೇಂದ್ರ ಹಣಕಾಸು ಮಂತ್ರಿಯಾದ ನಿರ್ಮಲಾ ಸೀತಾರಾಮನ್ (Nirmala Sitharaman, Union Finance Minister) ಅವರು ಇಂದು ದೇಶದ ಆಯವ್ಯಯ ಮಂಡಿಸಿದ್ದಾರೆ. ಲೋಕಸಭೆಯಲ್ಲಿ (Lok sabha) ರಾಷ್ಟ್ರಪತಿಗಳ (President) ಭಾಷಣದ (Speech) ನಂತರ ದೇಶದ ಬಜೆಟ್ ಮಂಡನೆಗೆ ಚಾಲನೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ದೇಶದ ಆರ್ಥಿಕ ಸಮೀಕ್ಷೆಯನ್ನೂ (Economic Survey) ಸಹ ಮಂಡಿಸಲಾಗಿದ್ದು ಈ ವರ್ಷ ಅಂದರೆ 21-22ರ ಸಾಲಿನಲ್ಲಿ ಭಾರತದ ಜಿಡಿಪಿ ದರ ಬೆಳವಣಿಗೆ 9.2 ಇರಲಿದೆ ಎಂದು ಹೇಳಲಾಗಿದೆ.

  ದೇಶದ ಬಜೆಟ್ ರೂಪಿಸುವಲ್ಲಿ ಕೇಂದ್ರ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರನ್ನು ಹೊರತುಪಡಿಸಿ ಅವರದ್ದೇ ತಂಡದ ಸದಸ್ಯರೂ ತಮ್ಮ ಗಮನಾರ್ಹ ಕೊಡುಗೆ ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ತಂಡದಲ್ಲಿ ಈಗಾಗಲೇ ಉನ್ನತ ಮಟ್ಟದ ಐದು ಅಧಿಕಾರಿಗಳಿದ್ದಾರೆ. ಟಿವಿ ಸೋಮನಾಥನ್, ತರುಣ್ ಬಜಾಜ್, ದೇಬಶಿಶ್ ಪಾಂಡಾ, ಅಜಯ್ ಸೇಟ್, ಹಾಗೂ ತುಹಿನ್ ಕಾಂತಾ ಪಾಂಡೆ ಅವರಂತಹ ಉನ್ನತ ಅಧಿಕಾರಿಗಳು ಈಗಾಗಲೇ ವಿವಿಧ ಕ್ಷೇತ್ರಗಳಿಗೆ ಯಾವ ಯಾವ ಮಟ್ಟದಲ್ಲಿ ಆರ್ಥಿಕತೆಯನ್ನು ಒದಗಿಸುವುದರ ಬಗ್ಗೆ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಾರೆ.

  ಟಿವಿ ಸೋಮನಾಥನ್: ತಮಿಳುನಾಡು ಮೂಲದ ಇವರು 1987ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು 2015ರಲ್ಲಿ ಪ್ರಧಾನಿ ಅವರ ಕಚೇರಿಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಐದು ಅಧಿಕಾರಿಗಳ ತಂಡದಲ್ಲಿ ಸದ್ಯ ಹಿರಿಯ ಅಧಿಕಾರಿಯಾಗಿರುವ ಇವರು ಹಣಕಾಸು ಕಾರ್ಯದರ್ಶಿಯ ಹುದ್ದೆಯಲ್ಲಿದ್ದು ವಿವಿಧ ಮಂತ್ರಾಲಯಗಳು ತಮ್ಮ ಪ್ರಧಾನ ಬಂಡವಾಳ ವೆಚ್ಚದಲ್ಲಿ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಮಾಡುವ ಮೂಲಕ ಸಾಂಕ್ರಾಮಿಕ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ದೇಶದ ಬೆಳವಣಿಗೆ ಕುಂಠಿತವಾಗದಂತೆ ಕೆಲಸ ನಿರ್ವಹಿದ್ದಾರೆಂಬುದು ವಿಶೇಷ. ಕೇಂದ್ರ ಬಜೆಟ್ 2022ರ ತರುವಾಯ ಟಿವಿ ಸೋಮನಾಥನ್ ಅವರು ಹೇಗೆ ಆರ್ಥಿಕ ಚೇತರಿಕೆ ಉಂಟು ಮಾಡಲು ಬಂಡವಾಳ ವೆಚ್ಚದಲ್ಲಿ ಹೇಗೆ ಹಣ ಹೊಂದಾಣಿಕೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

  ತರುಣ್ ಬಜಾಜ್: ಕಂದಾಯ ಕಾರ್ಯದರ್ಶಿಯಾಗಿರುವ ಇವರು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ತಂಡದಲ್ಲಿ ನೇಮಕಗೊಂಡಿರುವ ಪ್ರಧಾನಿ ಕಚೇರಿಯ ಮತ್ತೊಬ್ಬ ಸದಸ್ಯರಾಗಿದ್ದಾರೆ. ಹಣಕಾಸಿನ ಸಚಿವಾಲಯದಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ತೆರಿಗೆ ಗುರಿಗಳ ಸಂಗ್ರಹ ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಇವರು ಈ ಬಾರಿ ತೆರಿಗೆ ಸಂಗ್ರಹದ ವಿಚಾರದಲ್ಲಿ ಗುರಿ ದಾಟಲು ಯೋಜನೆ ರೂಪಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಬಜಾಜ್ ಅವರು ವಿವಿಧ ಆರೋಗ್ಯ ಸೇವೆಗಳ ಪ್ಯಾಕೇಜುಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಬಾರಿಯ ಬಜೆಟ್ ನಲ್ಲಿ ತರುಣ್ ಅವರು ಸರಳವಾದ ತೆರಿಗೆ ಅನುಸರಣೆ ಹಾಗೂ ಕೋವಿಡ್ ಸಂಕ್ರಮಣದಿಂದ ಕುಂಠಿತವಾಗಿರುವ ವ್ಯಾಪಾರೋದ್ಯಮಗಳಿಗೆ ಪ್ಯಾಕೇಜುಗಳನ್ನು ನೀಡಬಹುದೆಂಬ ನಿರೀಕ್ಷಣೆ ಮಾಡಲಾಗಿದೆ.

  ಇದನ್ನು ಓದಿ: Union Budget 2022: ಮೇಕ್​ ಇನ್​ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಸರ್ಕಾರದ ಮುಂದಿನ ಗುರಿ!

  ಅಜಯ್ ಸೇಟ್: ಏಪ್ರಿಲ್ 2021ರಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಕವಾಗುವ ಮುಂಚೆ ಅಜಯ್ ಸೇಟ್ ಅವರು ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕೊಂಚ ನಾಚಿಕೆ ಸ್ವಭಾವದವರಾದ ಇವರು ಟಿವಿ ಸೋಮನಾಥನ್ ಅವರ ಜೊತೆಗೂಡಿ ನಿರ್ಮಲಾ ಸೀತಾರಾಮನ್ ಅವರ ಕಳೆದ ಎಲ್ಲ ಬಜೆಟ್ ಭಾಷಣಗಳನ್ನು ಸಿದ್ಧಪಡಿಸಿದ್ದಾರೆ. 2022ರ ಬಜೆಟ್ ಭಾಷಣದ ತಯಾರಿಯ ಹಿಂದೆ ಇವರ ಪಾತ್ರವೇ ಇದೆ. ಇವರ ಇಲಾಖೆಯು ಕ್ಯಾಪಿಟಲ್ ಮಾರ್ಕೆಟ್, ಹೂಡಿಕೆ, ಮೂಲ ಸೌಕರ್ಯಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಲ್ಲಿ ಪ್ರಧಾನವಾಗಿದೆ. ಪ್ರಸ್ತುತ ಬಜೆಟ್‌ನಲ್ಲಿ ಇವರು ಹೆಚ್ಚು ಮೊತ್ತವನ್ನು ದೊಡ್ಡ ಯೋಜನೆಗಳಿಗಾಗಿ ಮೀಸಲಿಡುವ ಮೂಲಕ ಹೆಚ್ಚಿನ ಆದಾಯ ಹಾಗೂ ಉದ್ಯೋಗ ಸೃಷ್ಟಿ ಮಾಡಬಹುದೆಂಬ ನಿರೀಕ್ಷೆಯಿದೆ.

  ದೇಬಶಿಶ್ ಪಾಂಡಾ: ಆರ್ಥಿಕ ಸೇವೆಗಳ ಇಲಾಖೆಯ ಮುಖ್ಯಸ್ಥರಾಗಿರುವ ಇವರು 1987ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು ಸಾರ್ವಜನಿಕ ವಲಯದ ಕಚೇರಿಗಳ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕೋವಿಡ್ ಸಂಕಷ್ಟದ ಸ್ಥಿತಿಯಲ್ಲೂ ಇವರು ಬ್ಯಾಂಕುಗಳು ಉತ್ತಮ ಪ್ರದರ್ಶನ ನೀಡುವಂತೆ ಅನುಕೂಲಕರ ವಾತಾವರಣ ಒದಗಿಸಿದ್ದು ಶ್ಲಾಘನೀಯ. ಈ ಬಾರಿಯ ಬಜೆಟ್‌ನಲ್ಲೂ ಅವರು ತಮ್ಮ ಈ ಸಮರ್ಥ ಪ್ರದರ್ಶನ ನೀಡಲಿದ್ದಾರೆಂದು ನಿರೀಕ್ಷೆ ಮಾಡಲಾಗಿದೆ.

  ಇದನ್ನು ಓದಿ: Union Budget 2022: ಆದಾಯ ತೆರಿಗೆ ಸಲ್ಲಿಸುವ ಜನರಿಗೆ ಬಿಗ್ ರಿಲೀಫ್ ನೀಡಿದ ವಿತ್ತ ಸಚಿವರು

  ತುಹಿನ್ ಕಾಂತಾ ಪಾಂಡೆ: ಈ ವರ್ಷ ಬಹುಶಃ ಸರ್ಕಾರವು ಬಂಡವಾಳ ಹಿಂತೆಗೆತದ ಗುರಿ ಮುಟ್ಟಲಿಕ್ಕಿಲ್ಲ, ಆದಾಗ್ಯೂ ತುಹಿನ್ ಕಾಂತಾ ಪಾಂಡೆ ಅವರು ಏರ್ ಇಂಡಿಯಾದ ಬಂಡವಾಳ ಹಿಂತೆಗೆತದ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಜೆಟ್ 2022 ಅನ್ನು ಹೊರತು ಪಡಿಸಿ ಇವರಿಗೆ ಎಲ್‌ಐಸಿ ಐಪಿಒ ಸೇರಿದಂತೆ ಹಲವು ಇತರೆ ಸಂಸ್ಥೆಗಳ ಬಂಡವಾಳ ಹಿಂತೆಗೆತದ ಹಲವು ಯೋಜನೆಗಳ ಜವಾಬ್ದಾರಿಯಿದೆ. DIPAM ನ ಕಾರ್ಯದರ್ಶಿಯಾಗಿರುವ ಪಾಂಡೆ ಅವರು ಸರ್ಕಾರದ ಬಂಡವಾಳ ಹಿಂತೆಗೆತದ ಯೋಜನೆಯ ಮಂಚೂಣಿ ಸ್ಥಾನದಲ್ಲಿ ಮುನ್ನಡೆಸುತ್ತಿದ್ದಾರೆ.
  Published by:Harshith AS
  First published: