Ayodhya Verdict: ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐದು ಜಡ್ಜ್​ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಈ ತೀರ್ಪು ಪ್ರಕಟಿಸಲಿದೆ. ಈ ನ್ಯಾಯಪೀಠದಲ್ಲಿ ನ್ಯಾ. ಎಸ್​ಎ ಬೊಬ್ಡೆ, ಎನ್​.ವಿ ರಮಣ, ಯು.ಯು ಲಲಿತ್​, ಡಿ.ವೈ ಚಂದ್ರಚೂಡ್​ ಇದ್ದಾರೆ. ಅವರ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

Rajesh Duggumane | news18-kannada
Updated:November 9, 2019, 7:32 AM IST
Ayodhya Verdict: ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐದು ಜಡ್ಜ್​ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ
ಸುಪ್ರೀಂ ಕೋರ್ಟ್​
  • Share this:
ಬೆಂಗಳೂರು(ನ.09): ಇಂದು ಸುಪ್ರೀಂಕೋರ್ಟ್​ ಅಯೋಧ್ಯೆ ಭೂ ವಿವಾದದ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಈ ತೀರ್ಪು ನೀಡಲಿದೆ. ಈ ನ್ಯಾಯಪೀಠದಲ್ಲಿ ನ್ಯಾ. ಎಸ್​ಎ ಬೊಬ್ಡೆ, ಎನ್​.ವಿ ರಮಣ, ಯು.ಯು ಲಲಿತ್​, ಡಿ.ವೈ ಚಂದ್ರಚೂಡ್​ ಇದ್ದಾರೆ. ಅವರ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

ರಂಜನ್​ ಗೋಗೋಯ್​:

ಗೋಗೋಯ್​ ನವೆಂಬರ್​ 18, 1954ರಂದು ಜನಿಸಿದ್ದರು. ಗೋಗೋಯ್​ ತಂದೆ ಕೆಸಬ್​ ಚಂದ್ರ ಗೋಗೋಯ್​ ಕಾಂಗ್ರೆಸ್​ನಲ್ಲಿ ಸೇವೆ ಸಲ್ಲಿಸಿದವರು. 1982ರಲ್ಲಿ ಕೆಸಬ್​ 2 ತಿಂಗಳು ಕಾಲ ಅಸ್ಸಾಂ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.

ಗೋಗೋಯ್​ ಗುವಾಹಟಿಯ ಕೋರ್ಟ್​ನಲ್ಲಿ ಜಡ್ಜ್ ಆಗಿದ್ದರು. ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​​ನ ಜಡ್ಜ್​ ಆಗಿ ಕಾರ್ಯ ನಿರ್ವಹಿಸಿದ್ದ ಅವರು ಅಲ್ಲಿಯೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2018 ಅಕ್ಟೋಬರ್ 3ಕ್ಕೆ ದೇಶದ 46ನೇ ಮುಖ್ಯನ್ಯಾಯಮೂರ್ತಿಯಾಗಿ ನ್ಯಾ. ರಂಜನ್ ಗೊಗೋಯ್ ಅಧಿಕಾರ ಸ್ವೀಕರಿಸಿದ್ದರು. ನ.17ರಂದು ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ: ಇಂದು ಐತಿಹಾಸಿಕ ಅಯೋಧ್ಯೆ ವಿವಾದದ ತೀರ್ಪು ಪ್ರಕಟ​; ಎಲ್ಲರ ಚಿತ್ತ ಸುಪ್ರೀಂಕೋರ್ಟ್​ನತ್ತ

ಎಸ್​ಎಸ್​ ಬೋಬ್ಡೆ:

ನ್ಯಾ. ಶರದ್ ಅರವಿಂದ ಬೋಬ್ಡೆ 1956 ಏ.24ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು. ಬಾಂಬೇ ಹೈಕೋರ್ಟ್​ನಲ್ಲಿ 2000-2012ರವರೆಗೆ ನ್ಯಾಯಮೂರ್ತಿಯಾಗಿ ಎಸ್​ಎಸ್​ ಬೋಬ್ಡೆ ಕಾರ್ಯ ನಿರ್ವಹಿಸಿದ್ದರು. ನಂತರ 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2013ರಲ್ಲಿ ಇವರು ಸುಪ್ರೀಂಕೋರ್ಟ್​​ ನ್ಯಾಯಮೂರ್ತಿಯಾಗಿ ನೇಮಕಗೊಂಡರು.2018 ಅಕ್ಟೋಬರ್ 3ನೇ ತಾರೀಕಿನಂದು ದೇಶದ 46ನೇ ಮುಖ್ಯನ್ಯಾಯಮೂರ್ತಿಯಾಗಿ ನ್ಯಾ. ರಂಜನ್ ಗೊಗೋಯ್ ಅಧಿಕಾರ ಸ್ವೀಕರಿಸಿದ್ದರು. ಅವರು ನವೆಂಬರ್ 17ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ನ್ಯಾಯಮೂರ್ತಿಯಾಗಿ ಶರದ್ ಹೆಸರನ್ನು ಶಿಫಾರಸು ಮಾಡಿದ್ದರು. ಇದಕ್ಕೆ ಈಗ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದು, ನವೆಂಬರ್​ 18ರಂದು ಶರದ್​ ಅಧಿಕಾರ ಸ್ವೀಕರಿಸಲಿದ್ದಾರೆ.

ಹಾಲಿ ಸಿಜೆಪಿ ರಂಜನ್ ಗೊಗೋಯ್ ಹೊರತುಪಡಿಸಿದರೆ ನ್ಯಾ. ಶರದ್ ಅರವಿಂದ್ ಬೋಬ್ಡೆ  ಸುಪ್ರೀಂಕೋರ್ಟ್​ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಅವರ ಸೇವಾ ಹಿರಿತನದ ಆಧಾರದ ಮೇಲೆ ಸಿಜೆಐ ಅವರು ಹೆಸರು ಶಿಫಾರಸು ಮಾಡಿದ್ದರು.

ಇದನ್ನೂ ಓದಿ: ಅಯೋಧ್ಯೆ ವಿವಾದದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಇತಿಹಾಸ

ಎನ್​.ವಿ ರಮಣ:

ಎನ್.​ವಿ ರಮಣ  ಮೂಲತಃ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯವರು. ಇವರು ಆಗಸ್ಟ್​ 27, 1957ರಂದು ಜನಿಸಿದ್ದರು. ದೆಹಲಿ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿ ಇವರು 2013-14ರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಇವುರ ಸುಪ್ರೀಂ ಕೋರ್ಟ್​ ಜಡ್ಜ್​ ಆಗಿ ಬಡ್ತಿ ಪಡೆದಿದ್ದರು.

ಯು.ಯು ಲಲಿತ್​:

ಉಮೇಶ್​ ಯು.ಯು ಲಲಿತ್​ 1957 ನವೆಂಬರ್​ 9ರಂದು ಜನಿಸಿದರು. ಇವರು ನೇರವಾಗಿ ಸುಪ್ರೀಂಕೋರ್ಟ್​ ಜಡ್ಜ್​ ಆಗಿ ಮುಂಬಡ್ತಿ ಪಡೆದುಕೊಂಡಿದ್ದರು.

ಡಿ.ವೈ ಚಂದ್ರಚೂಡ:

ಧನಂಜಯ ಯಶ್ವಂತ್​ ಚಂದ್ರಚೂಡ್​ 1959ರಲ್ಲಿ ಜನಿಸಿದ್ದರು. ಇವರು ಮೊದಲು ಬಾಂಬೇ ಹೈಕೋರ್ಟ್​​ನಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಅಲಹಾಬಾದ್​ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಹಾಲಿ ಸುಪ್ರೀಂಕೋರ್ಟ್​ ಜಡ್ಜ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
--------------
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading