ನವದೆಹಲಿ (ಜ. 14): ಪ್ರತಿ ಬಾರಿ ಜ. 26ರಂದು ಗಣರಾಜ್ಯೋತ್ಸವದಂದು ವಿದೇಶಿ ಗಣ್ಯ ಅಥಿತಿಯನ್ನು ಆಹ್ವಾನಿಸುವುದನ್ನು ರೂಢಿಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಯನ್ನು ಆಹ್ವಾನಿಸದಿರಲು ಸರ್ಕಾರ ನಿರ್ಧರಿಸಿದೆ. ಕಾರಣ ಕೋವಿಡ್ 19. ಕೋರೋನಾ ವೈರಸ್ಗೆ ಇಡೀ ಜಗತ್ತನ್ನು ನಲುಗಿಸುತ್ತಿದೆ. ಈ ಹಿನ್ನಲೆ ಈ ಬಾರಿ ಯಾವುದೇ ರಾಷ್ಟ್ರದ ಗಣ್ಯರನ್ನು ಕರೆಯದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ. ಈ ಮೊದಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಈ ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ, ಇಂಗ್ಲೆಡ್ನಲ್ಲಿ ರೂಪಾಂತಾರಿ ಕೊರೋನಾ ಹಾವಳಿ ಹೆಚ್ಚಿರುವ ಹಿನ್ನಲೆ ಅವರು ಈ ಪ್ರವಾಸವನ್ನು ರದ್ದು ಮಾಡಿದರು.
ಬೋರಿಸ್ ಜಾನ್ಸ್ ಪ್ರವಾಸ ರದ್ದಾದ ಬಳಿಕ ಸುರಿನಾಮ್ ಅಧ್ಯಕ್ಷ ಚಂದ್ರಕಾಪರ್ಸಾದ್ ಸಂತೋಳಿ ಅವರನ್ನು ಆಹ್ವಾನಿಸಲಾಗಿದೆ ಎಂಬ ಮಾತು ಕೇಳಿ ಬಂದಿತ್ತಾದರೂ ಸರ್ಕಾರ ಈ ಬಗ್ಗೆ ಅಧಿಕೃತ ಪಡಿಸಿರಲಿಲ್ಲ.
ಎಲ್ಲೆಡೆ ಕೊರೋನಾ ವೈರಸ್ ಸೋಂಕಿರುವ ಹಿನ್ನಲೆ ಈ ಬಾರಿ ಗಣರಾಜ್ಯೋತ್ಸವಕ್ಕೆ ಯಾವುದೇ ಅತಿಥಿಗಳನ್ನು ಕರೆಯದಿರಲು ನಿರ್ಧರಿಸಲಾಗಿದೆ.
ಕಳೆದ ಐದು ದಶಕಗಳಿಂದ ಕೆಂಪುಕೋಟೆಯಲ್ಲಿ ಆಚರಿಸುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಯಾವುದಾದರೂ ಒಂದು ದೇಶದ ಪ್ರಮುಖ ಅಥವಾ ಸರ್ಕಾರದ ವ್ಯಕ್ತಿಗಳನ್ನು ಅತಿಥಿಯಾಗಿ ಅಹ್ವಾನಿಸಲಾಗುತ್ತಿದೆ. ಇದೇ ಈ ಬಾರೊ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಯಾವುದೇ ಅತಿಥಿಗಳು ಭಾಗಿಯಾಗುವುದಿಲ್ಲ. ಈ ಹಿಂದೆ 1966ರಲ್ಲಿ ಜ.24ರಂದು ಇಂದಿರಾ ಗಾಂಧಿ ಪ್ರಮಾಣವಚನ ಸ್ವೀಕಾರ ಮಾಡಿದಾಗ ಹಾಗೂ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರ ನಿಧನರಾದ ಎರಡು ವರ್ಷ ಅಂದರೆ 1952 ಮತ್ತು 53ರಲ್ಲಿ ಕೂಡ ಅತಿಥಿಗಳು ಭಾಗಿಯಾಗಿರಲಿಲ್ಲ.
ಇದನ್ನು ಓದಿ: ಪೊಂಗಲ್ ಶುಭಾಶಯ ತಿಳಿಸಿ, ಮಧುರೈನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್ ಗಾಂಧಿ
ಕೊರೋನಾ ಹರಡದಂತೆ ತಡೆಯಲು ಜನ ದಟ್ಟಣೆಯನ್ನು ನಿಗ್ರಹಿಸುವ ಸಲುವಾಗಿ ಕೇಂದ್ರ ಸರ್ಕಾರ ಮುಂದಿನ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಮಿಲಿಟರಿ ಪಥ ಸಂಚಲನ ಈ ಬಾರಿ ವಿಜಯ್ ಚೌಕ್ನಿಂದ ಆರಂಭವಾಗಿ ರಾಷ್ಟ್ರೀಯ ಕ್ರೀಡಾಂಗಣದಲ್ಲೇ ಕೊನೆಗೊಳ್ಳಲಿದೆ. ಮೆರವಣಿಗೆಯ ಅಂತರವನ್ನು ಅರ್ಧಕ್ಕೆ ಇಳಿಸಲಾಗಿದೆ. ಈ ಹಿಂದೆ 8.2 ಕಿಲೋಮೀಟರ್ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮೆರವಣಿಗೆಯನ್ನು 3.3 ಕಿಲೋಮೀಟರ್‌ಗೆ ಇಳಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಪ್ರೋಟೋಕಾಲ್‌ಗಳ ಭಾಗವಾಗಿ, ಮೆರವಣಿಗೆ ಮಾಡುವವರು ಮತ್ತು ವೀಕ್ಷಕರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿರಬೇಕು ಎಂದು ಸೂಚಿಸಲಾಗಿದೆ. ಪ್ರೇಕ್ಷಕರ ಸಂಖ್ಯೆಯನ್ನು 1,15,000 ದಿಂದ 25,000 ಕ್ಕೆ ಇಳಿಸಲಾಗಿದೆ ಮತ್ತು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ