ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ, ದೇಶದಲ್ಲಿ ಇನ್ಮುಂದೆ ಚುನಾವಣೆ ನಡೆಯಲ್ಲ; ಅಖಿಲೇಶ್​ ಯಾದವ್​


Updated:September 14, 2018, 6:39 PM IST
ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ, ದೇಶದಲ್ಲಿ ಇನ್ಮುಂದೆ ಚುನಾವಣೆ ನಡೆಯಲ್ಲ; ಅಖಿಲೇಶ್​ ಯಾದವ್​

Updated: September 14, 2018, 6:39 PM IST
ನ್ಯೂಸ್​ 18 ಕನ್ನಡ

ಲಕ್ನೋ (ಸೆ.14): 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಯಾಗಲಿದ್ದು, ಇನ್ಮುಂದೆ ಯಾವುದೇ ಚುನಾವಣೆಗಳು ನಡೆಯುವುದಿಲ್ಲ ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಸಮಾಜವಾದಿ ಪಕ್ಷ ನಾಯಕ ಅಖಿಲೇಶ್​ ಯಾದವ್​ ತಿಳಿಸಿದ್ದಾರೆ.

ಎಥವಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ಬಲವಾದ ಸಾಧ್ಯತೆಗಳಿವೆ. ಹಾಗೇನಾದರೂ ಆದರೆ ಭವಿಷ್ಯದಲ್ಲಿ ಯಾವುದೇ ಚುನಾವಣೆಗಳು ನಡೆಯುವುದಿಲ್ಲ. ಪ್ರಜಾಪ್ರಭುತ್ವ ಉಳಿಸಲು 2019 ಕಡೆಯ ಅವಕಾಶ ಎಂದರು.

ಜಾತಿರಾಜಕಾರಣ ಮತ್ತು ಕೋಮು ಗಲಭೆ ಯಂತಹ ಘಟನೆಗೆ ದೇಶ ಹೆಚ್ಚು ಒತ್ತು ನೀಡುತ್ತಿದೆ. ಸರ್ಕಾರ ದಲಿತರ  ಅನುಕೂಲಗಳ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಕೂಡ ಆರೋಪ ಮಾಡಿದರು.

ಇದಕ್ಕು ಮುಂಚೆ ಬಿಜೆಪಿ ಸರ್ಕಾರ ತೈಲ ಬೆಲೆ ಹೆಚ್ಚಿಸಿರುವ ಕುರಿತು ಹರಿಹಾಯ್ದ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಸರ್ಕಾರ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ, ಚೀನಾಕ್ಕೆ ಪ್ರಾಶಸ್ತ್ಯ ನೀಡಿ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ನೋಟು ಅಮಾನ್ಯೀಕರಣ ಮಾಡಲಾಯಿತು ಎಂದು ಹರಿಹಾಯ್ದರು.

ಇನ್ನು 50 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಎಂದು ಬಿಜೆಪಿ, ಉಪ ಚುನಾವಣೆ ಫಲಿತಾಂಶವನ್ನು ಮರೆತಿದೆ ಎಂದರು.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ