Sadhguru: ಸದ್ಗುರು ಪ್ರಕಾರ ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ರೈತರೇ ಇರುವುದಿಲ್ಲವಂತೆ! ಯಾಕೆ ಗೊತ್ತೇ?

ವೈವಿಧ್ಯಮಯ ಕೈಗಾರಿಕೆಗಳು ತಲೆ ಎತ್ತುತ್ತಿದ್ದು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇದು ನಿಜಕ್ಕೂ ಅಭಿವೃದ್ಧಿ ಪಥದತ್ತ ದೇಶ ನಡೆಯುತ್ತಿರುವ ಸೂಚನೆಯಾದರೂ ಎಲ್ಲೊ ಒಂದು ಕಡೆ ರೈತ ವೃತ್ತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ ಎಂದರೂ ತಪ್ಪಾಗಲಾರದು.

ಈಶಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್

ಈಶಾ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್

  • Share this:
ಭಾರತ (India) ಮೊದಲಿನಿಂದಲೂ ಕೃಷಿ (Agriculture) ಪ್ರಧಾನ ದೇಶ. ರೈತರೇ (Farmers) ನಮ್ಮ ದೇಶದ ಬೆನ್ನೆಲುಬು ಎಂದು ನಾವು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ಆದರೆ, ಇಂದಿನ ಪರಿಸ್ಥಿತಿಗಳು ಭಿನ್ನವಾಗಿವೆ. ತಂತ್ರಜ್ಞಾನ (Technology) ಸಾಕಷ್ಟು ಅಭಿವೃದ್ಧಿಗೊಂಡಿದೆ. ವೈವಿಧ್ಯಮಯ ಕೈಗಾರಿಕೆಗಳು ತಲೆ ಎತ್ತುತ್ತಿದ್ದು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಇದು ನಿಜಕ್ಕೂ ಅಭಿವೃದ್ಧಿ (Development) ಪಥದತ್ತ ದೇಶ ನಡೆಯುತ್ತಿರುವ ಸೂಚನೆಯಾದರೂ ಎಲ್ಲೊ ಒಂದು ಕಡೆ ರೈತ ವೃತ್ತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ ಎಂದರೂ ತಪ್ಪಾಗಲಾರದು. ಇದಕ್ಕೆ ಸಂಬಂಧಿಸಿದಂತೆ ಈಶಾ ಫೌಂಡೇಶನ್ (Isha Foundation) ಸಂಸ್ಥೆಯ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ತಮ್ಮದೆ ಆದ ನಿಲುವೊಂದನ್ನು ವ್ಯಕ್ತಪಡಿಸುತ್ತಾರೆ. 

ರೈತ ವೃತ್ತಿಯಲ್ಲಾಗುವ ಬದಲಾವಣೆಯನ್ನು ಬಗ್ಗೆ ಒತ್ತಿ ಹೇಳಿದ ಸದ್ಗುರು
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಸದ್ಗುರು ಅವರು ರೈತರು ಹಾಗೂ ಆ ವೃತ್ತಿ ಬಗ್ಗೆ ತಮಗಿರುವ ಕಾಳಜಿ ವ್ಯಕ್ತಪಡಿಸಿದ್ದಲ್ಲದೆ ಮುಂದಿನ ದಿನಗಳಲ್ಲಿ ರೈತ ವೃತ್ತಿಗೆ ಸಂಬಂಧಿಸಿದಂತೆ ಆಗುವ ಬದಲಾವಣೆಯ ಬಗ್ಗೆ ಒತ್ತಿ ಹೇಳಿದ್ದಾರೆ.

ಅವರ ಸಂಸ್ಥೆ ನಡೆಸಿರುವ ಸಮೀಕ್ಷೆಯೊಂದರ ಬಗ್ಗೆ ಮಾತನಾಡಿರುವ ಸದ್ಗುರು ಪ್ರಕಾರ, ಇಂದಿನ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ 25 ವರ್ಷಗಳಲ್ಲಿ ರೈತರು ಎಂಬುವವರೇ ಯಾರೂ ಇರುವುದಿಲ್ಲ ಎಂಬ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರು ಕೃಷಿಯನ್ನು ಹೆಚ್ಚು ಆಕರ್ಷಣೀಯ ಕಸುಬನ್ನಾಗಿ ರೂಪಿಸುವ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಇಂದಿನ ಯುವ ಪೀಳಿಗೆ ಈ ವೃತ್ತಿಯನ್ನು ತಮ್ಮ ಕರಿಯರ್ ಅನ್ನಾಗಿ ಆಯ್ದುಕೊಳ್ಳಬೇಕಾದಂತಹ ವಾತಾವರಣ ಸೃಷ್ಟಿಸಬೇಕಾಗಿರುವುದಾಗಿ ಅವರು ಹೇಳುತ್ತಾರೆ.

ಕೃಷಿಯ ಮಹತ್ವ ಎಷ್ಟು ಎಂಬುದನ್ನು ಮಕ್ಕಳಲ್ಲಿ ಅರಿವು ಮೂಡಿಸಬೇಕು
ರೈತ ವೃತ್ತಿ ಕಣ್ಮರೆಯಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಸಂದರ್ಶಕರೊಂದಿಗೆ ಮಾತನಾಡುತ್ತ ಅವರು ಈ ರೀತಿ ಹೇಳುತ್ತಾರೆ, "ಇನ್ನು 25 ವರ್ಷಗಳಲ್ಲಿ, ಈ ಕಡ್ಡಾಯ ಶಿಕ್ಷಣ ಪ್ರಕ್ರಿಯೆಯು ಮಕ್ಕಳನ್ನು 18 ವರ್ಷದವರೆಗೆ ಶಾಲೆಗೆ ಹೋಗುವಂತೆ ಮಾಡುತ್ತಿದೆ, ಇದರಿಂದಾಗಿ ಅವರು ಎಂದಿಗೂ ಜಮೀನಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಅಲ್ಲದೆ ಕೃಷಿ ಚಟುವಟುಕೆಗಳಲ್ಲಿ ತೊಡಗಿಕೊಳ್ಳದಂತೆ ನಮ್ಮಲ್ಲಿ ಬಾಲಕಾರ್ಮಿಕ ಸಮಸ್ಯೆಗಳೂ ಸಹ ಉಪಸ್ಥಿತವಿದೆ.

ಇದನ್ನೂ ಓದಿ: Kannada Email ID: ಕನ್ನಡಿಗರಿಗೆ ಖುಷಿ ಸುದ್ದಿ! ಇನ್ಮುಂದೆ ಸರ್ಕಾರದ ಯುಆರ್‌ಎಲ್‌, ಇಮೇಲ್ ಐಡಿಗಳು ಕನ್ನಡದಲ್ಲಿ ಲಭ್ಯ

ಇದರ ಅರ್ಥ ನಾನು ಬಾಲಕಾರ್ಮಿಕರ ಪರ ಅಥವಾ ಕಡ್ಡಾಯ ಶಿಕ್ಷಣ ಪ್ರಕ್ರಿಯೆಯ ವಿರುದ್ಧ ಇದ್ದೇನೆ ಅಂತಲ್ಲ, ಆದರೆ ನಮ್ಮ ರಾಷ್ಟ್ರವು ಎತ್ತ ಸಾಗುತ್ತಿದೆ ನಮ್ಮ ದೇಶದ ಮೂಲಭೂತ ಸ್ವರೂಪ ಹಾಗೂ ಅಂಶಗಳು ಏನು, ಕೃಷಿಯ ಮಹತ್ವ ಎಷ್ಟು ಎಂಬುದನ್ನು ಮಕ್ಕಳಲ್ಲಿ ಅರಿವು ಮೂಡಿಸುವುದರ ಜೊತೆ ಜೊತೆಗೆ ಅವು ನಾಶ ಹೊಂದದ ರೀತಿಯಲ್ಲಿ ನಾವು ನಮ್ಮ ಶಿಕ್ಷಣವನ್ನು ರಚಿಸಬೇಕಾಗಿದೆ."

ರೈತರ ಸಂಖ್ಯೆ ಕ್ಷೀಣಿಸುತ್ತ ಹೋದರೆ ರಾಷ್ಟ್ರಕ್ಕೆ ದೊಡ್ಡ ಅಪಾಯವಾಗಲಿದೆ
ಮುಂದುವರಿದು ಮಾತನಾಡುವ ಅವರು, ದೇಶದಲ್ಲಿರುವ ಶೇ.63ರಷ್ಟು ರೈತರ ಜನಸಂಖ್ಯೆಯಲ್ಲಿ ಕನಿಷ್ಠ ಶೇ.2ರಷ್ಟು ರೈತರು ಸ್ವತಃ ತಮ್ಮ ಮಕ್ಕಳು ತಮ್ಮ ರೀತಿಯಲ್ಲೇ ರೈತ ಆಗಬೇಕೆಂದು ಬಯಸುತ್ತಿಲ್ಲ, ಅದರಂತೆ ಮಕ್ಕಳೂ ಸಹ ತಮ್ಮ ಅಪ್ಪನಂತೆ ರೈತನಾಗಬೇಕೆಂದು ಬಯಸುತ್ತಿಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಇದನ್ನು ಹೋಗಲಾಡಿಸಬೇಕಾದುದು ಮುಖ್ಯವಾಗಿದೆ. ಅದನ್ನು ಸಾಧಿಸಬೇಕೆಂದರೆ ನಾವು ಕೃಷಿಯನ್ನು ಲಾಭದಾಯಕ ಪ್ರಕ್ರಿಯೆಯನ್ನಾಗಿ ಪರಿವರ್ತಿಸದ ಹೊರತು ಯಾವುದೇ ಅನ್ಯ ಮಾರ್ಗಗಳಿಲ್ಲ.

ಹೀಗೆ ರೈತರ ಸಂಖ್ಯೆ ಕ್ಷೀಣಿಸುತ್ತ ಹೋದರೆ ಮುಂದೆ ಇದು ರಾಷ್ಟ್ರಕ್ಕೆ ದೊಡ್ಡ ಅಪಾಯವಾಗಲಿದೆ ಎಂದು ಸದ್ಗುರು ಹೇಳಿದ್ದಾರೆ. ಹಾಗಾಗಿ ಆಧ್ಯಾತ್ಮಿಕ ನಾಯಕ ಸದ್ಗುರು ಈ ಸಂದರ್ಭದಲ್ಲಿ ರೈತರ ಗಳಿಕೆಯಲ್ಲಿ ಹೆಚ್ಚಳವಾಗಬೇಕೆಂಬ ಅಂಶವನ್ನು ಪ್ರತಿಪಾದಿಸುತ್ತಾರೆ.

ರೈತರು ಎಲ್ಲಕ್ಕಿಂದ ಹೆಚ್ಚು ಆದಾಯ ಗಳಿಸುವಂತಾಗಬೇಕು
ಇಷ್ಟೆ ಅಲ್ಲದೆ ರೈತ ವೃತ್ತಿಯನ್ನು ಇಂದಿನ ಜನರು ಹೆಚ್ಚು ಹೆಚ್ಚು ಅಳವಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅವರು ಹೇಳುತ್ತಾರೆ, “ರೈತರು ಸಹ ಇಂದಿನ ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಪತ್ರಕರ್ತರು ಇತ್ಯಾದಿ ಗಳಿಸುವಷ್ಟು ಇಲ್ಲವೆ ಅದಕ್ಕಿಂತ ಹೆಚ್ಚು ಆದಾಯವನ್ನು ಗಳಿಸುವಂತಾಗಬೇಕು, ಆಗ ಮಾತ್ರ ಜನರು ಕೃಷಿಯತ್ತ ಆಕರ್ಷಿತಗೊಂಡು ಇದನ್ನು ತಮ್ಮ ವೃತ್ತಿಯನ್ನಾಗಿ ರೂಪಿಸಿಕೊಳ್ಳುವುದರ ಮೂಲಕ ಭೂಮಿಯೊಂದಿಗೆ ಸ್ಪರ್ಶದಲ್ಲಿರುತ್ತಾರೆ, ಇಲ್ಲದಿದ್ದರೆ ಜನರು ನಗರಗಳತ್ತ ವಲಸೆ ಹೋಗುವ ಮೂಲಕ ಜನಸಾಂದ್ರತೆ ಹೆಚ್ಚಾಗಲು ಕಾರಣವಾಗಬಹುದು".

ಇದನ್ನೂ ಓದಿ:  Explained: ಅಪಾಯ ಮಟ್ಟ ಮೀರಿದ ಜಾಗತಿಕ ತಾಪಮಾನ; 2026ಕ್ಕೆ ಎದುರಾಗಲಿದೆಯೇ ಮಹಾ ಕಂಟಕ?

ಒಟ್ಟಿನಲ್ಲಿ ಸದ್ಗುರು ವ್ಯಕ್ತಪಡಿಸಿರುವ ಈ ಅಂಶವನ್ನು ಒಮ್ಮೆ ಗಂಭೀರವಾಗಿ ಯೋಚಿಸಬೆಕಾದ ಅಗತ್ಯವಿದೆ ಎಂದಷ್ಟೆ ಈ ಸಂದರ್ಭದಲ್ಲಿ ಹೇಳಬಹುದಾಗಿದ್ದು ನಮ್ಮ ದೇಶದ ಜೀವಾಳ ಎನ್ನಲಾಗುವ ನೇಗಿಲ ಯೋಗಿಗೆ ಸಂದಬೇಕಾದ ಎಲ್ಲ ಆದರ, ಗೌರವ ಹಾಗೂ ಆರ್ಥಿಕ ಸದೃಢತೆ ಸಿಗಬೇಕೆಂಬುದೇ ನಮ್ಮೆಲ್ಲರ ಆಶಯವಾಗಲಿ.
Published by:Ashwini Prabhu
First published: