Fight in Marriage: ಹಪ್ಪಳ ಹಾಕಿಲ್ಲ ಅಂತ ಹುಡುಗ-ಹುಡುಗಿ ಕಡೆಯವ್ರಿಗೆ ಹೊಡೆದಾಟ ಕಣ್ರೀ! ಮದ್ವೆಯಲ್ಲಿ 2 ಲಕ್ಷ ಲಾಸ್ ಆಯ್ತಂತೆ!

ಊಟ ಮಾಡುವಾಗ ವರನ ಸ್ನೇಹಿತರು ಹೆಚ್ಚುವರಿಯಾಗಿ ಹಪ್ಪಳ ಬೇಕು ಅಂತ ಕೇಳಿದ್ದಾರೆ. ಆಗ ಹಪ್ಪಳ ಖಾಲಿಯಾಗಿದೆ ಅಂತ ವಧುವಿನ ಕಡೆಯವರು ಹೇಳಿದ್ದಾರಂತೆ. ಇದಕ್ಕೆ ವರನ ಕಡೆಯವರು ಸಿಟ್ಟಾಗಿದ್ದಾರಂತೆ. ಬಳಿಕ ಮಾತಿಗೆ ಮಾತು ಬೆಳೆದು, ಎರಡೂ ಕಡೆಯವರು ಕೈಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇರಳ: ಮದುವೆ (Marriage) ಅಂದ್ರೆ ಗಂಡು (Boy), ಹೆಣ್ಣಿನ (Girl) ನಡುವೆ ಹೊಂದಾಣಿಕೆ ಇದ್ರೆ ಅಷ್ಟೇ ಸಾಕಾಗೋದಿಲ್ಲ, ಆ ಗಂಡು ಹಾಗೂ ಹೆಣ್ಣಿನ ಕುಟುಂಬದ (Family) ನಡುವೆಯೂ ಹೊಂದಾಣಿಕೆ ಇರಬೇಕು. ಇಲ್ಲವಾದರೆ ಆಗಬಾರದ್ದು ಆಗುತ್ತೆ ಎನ್ನೋದಕ್ಕೆ ಈ ಘಟನೆಯೇ ಉದಾಹರಣೆ. ಮದುವೆ ಮನೆಯಲ್ಲಿ ಹಿಂದಿನಿಂದಲೂ ಗಂಡಿನ ಕಡೆಯವರು ಅಂದ್ರೆ ಏನೋ ಒಂದು ಗತ್ತು, ಗೈರತ್ತು ಇರುತ್ತೆ. ಅವರ ಊಟ, ಉಪಚಾರದಲ್ಲಿ ಯಾವುದೂ ಕಡಿಮೆಯಾಗಬಾರದು, ನಮ್ಮ ಮಗಳು (Daughter) ನಗು ನಗುತ್ತಾ ಆ ಮನೆ ಸೇರಬೇಕು ಅಂತ ಎಲ್ಲಾ ಹೆಣ್ಣು ಹೆತ್ತವರೂ ಕನಸು ಕಾಣುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಗಂಡಿನ ಕಡೆಯವರು ಚಿಕ್ಕ ಚಿಕ್ಕ ಸಮಸ್ಯೆಗಳನ್ನೇ (Problems) ದೊಡ್ಡದು ಮಾಡ್ತಾರೆ. ಹೀಗೆ ಮಾಡಲು ಹೋಗಿ ಕೇರಳದ (Kerala) ಮದುವೆ ಮನೆಯೊಂದರಲ್ಲಿ ಹಪ್ಪಳಕ್ಕಾಗಿ ಫೈಟ್ (Fight for Pappad) ನಡೆದಿದೆ. ಪರಿಣಾಮ ಬರೋಬ್ಬರಿ 2 ಲಕ್ಷ ರೂಪಾಯಿ ನಷ್ಟವಾಗಿದ್ಯಂತೆ!

ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ನಡೆಯಿತು ಗಲಾಟೆ!

ಕೇರಳದ ಹರಿಪ್ಪಾಡ್‌ ಎಂಬಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಹಪ್ಪಳದ ಕಾರಣಕ್ಕಾಗಿ ಗಂಡು ಹಾಗೂ ಹೆಣ್ಣಿನ ಮನೆಯವರು, ಸಂಬಂಧಿಕರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.  ಸಂಬಂಧಿಕರು ಹೆಚ್ಚುವರಿ ಪಪ್ಪಡದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸಭಾಂಗಣಕ್ಕೆ 1.50 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿ ಹಾನಿಯಾಗಿದೆ ಅಂತ ವರದಿಯಾಗಿದೆ.

ಹಪ್ಪಳಕ್ಕಾಗಿ ನಡೆದ ಗಲಾಟೆ


ಹೆಚ್ಚುವರಿ ಹಪ್ಪಳ ಕೇಳಿದ ವರನ ಕಡೆಯವರು

ಮುತ್ತಂನ ಸಭಾಂಗಣದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಇಲ್ಲಿ ಸ್ಥಳೀಯರೊಬ್ಬರ ಮದುವೆ ನಡೆದಿತ್ತು. ಈ ವೇಳೆ ಊಟ ಮಾಡುವಾಗ ವರನ ಸ್ನೇಹಿತರು ಹೆಚ್ಚುವರಿಯಾಗಿ ಹಪ್ಪಳ ಬೇಕು ಅಂತ ಕೇಳಿದ್ದಾರೆ. ಆಗ ಹಪ್ಪಳ ಖಾಲಿಯಾಗಿದೆ ಅಂತ ವಧುವಿನ ಕಡೆಯವರು ಹೇಳಿದ್ದಾರಂತೆ. ಇದಕ್ಕೆ ವರನ ಕಡೆಯವರು ಸಿಟ್ಟಾಗಿದ್ದಾರಂತೆ. ಬಳಿಕ ಮಾತಿಗೆ ಮಾತು ಬೆಳೆದು, ಎರಡೂ ಕಡೆಯವರು ಕೈಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Shocking News: ಎಂಥಾ ಕಾಲ ಬಂತಪ್ಪ, ಕಡಿಮೆ ಮಾರ್ಕ್ಸ್ ಕೊಟ್ಟಿದ್ದಕ್ಕೆ ಶಿಕ್ಷಕರನ್ನೇ ಹೊಡೆದ ವಿದ್ಯಾರ್ಥಿಗಳು!

ಹಪ್ಪಳದ ಜಗಳದಲ್ಲಿ ಕುರ್ಚಿಗಳು ಪುಡಿ ಪುಡಿ

ಊಟದ ಕೋಣೆಯಲ್ಲಿ ಶುರುವಾದ ಗಲಾಟೆ, ಸಭಾಂಗಣದ ಹೊರಗೂ ಮುಂದುವರೆದಿದೆ. ಮದುವೆ ಎನ್ನುವುದನ್ನೂ ಮರೆತು ಸಂಬಂಧಿಕರು ಪರಸ್ಪರ ಹೊಡೆದುಕೊಂಡಿದ್ದಾರೆ. ಮೊದಲು ಕೈಕೈ ಮಿಲಾಯಿಸಿದವರು ಬಳಿಕ ಅಲ್ಲಿ ಹಾಕಿದ್ದ ಕುರ್ಚಿ, ಮೇಜು ಇತ್ಯಾದಿಗಳಿಂದ ಬಡಿದಾಡಿಕೊಂಡಿದ್ದಾರೆ.

12 ಜನರ ಮೇಲೆ ಹಲ್ಲೆ, ಮೂವರಿಗೆ ಗಂಭೀರ ಗಾಯ

ಈ ಮಾರಾಮಾರಿಯಲ್ಲಿ 12 ಟೇಬಲ್‌ಗಳು ಮತ್ತು 25 ಕುರ್ಚಿಗಳು ಮುರಿದು ಬಿದ್ದಿವೆ ಎನ್ನಲಾಗಿದೆ. ಅಲ್ಲದೇ ಒಟ್ಟು 12 ಮಂದಿ ಮೇಲೆ ಹಲ್ಲೆ ನಡೆದಿದೆ. ಈ ಪೈಕಿ ಆಡಿಟೋರಿಯಂ ಮಾಲೀಕ, 65 ವರ್ಷದ ಮುರಳೀಧರನ್, 21 ವರ್ಷದ ಜೋಹಾನ್, ಹಾಗೂ 21 ವರ್ಷದ ಹರಿ ಎಂಬುವರು ಗಾಯಗೊಂಡು, ಆಸ್ಪತ್ರೆ ಸೇರಿದ್ದಾರೆ.

ಇದನ್ನೂ ಓದಿ: Fake Swamiji: 16ರ ಬಾಲಕಿ ಮದುವೆಯಾದ 62ರ ನಕಲಿ ಸ್ವಾಮೀಜಿ! ಮಾಟಮಂತ್ರದ ಹೆಸರಲ್ಲಿ ನೀಚಕೃತ್ಯ

ಮಾರಾಮಾರಿಯಲ್ಲಿ 2 ಲಕ್ಷ ರೂಪಾಯಿ ನಷ್ಟ

ಗಂಡು ಹೆಣ್ಣಿನ ಕಡೆಯವರು ಜಗಳದ ವೇಳೆ ಸಭಾಂಗಣದಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಪರಿಣಾಮ ಸುಮಾರು 2 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಅಂತ ಅಂದಾಜಿಸಲಾಗಿದೆ. ಇನ್ನು ಆಡಿಟೋರಿಯಂ ಮಾಲೀಕರು  ಗಾಯಗೊಂಡು ತಮ್ಮ ಮೇಲೆ ನಡೆದ ಹಲ್ಲೆ, ವಸ್ತುಗಳ ಹಾನಿ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published by:Annappa Achari
First published: