ನಮ್ಮ ನಕ್ಷತ್ರ ಸಮೂಹದೊಳಗೆಯೇ ಮನುಷ್ಯರಿಗಿಂತಲೂ ಬುದ್ಧವಂತ 36 ಅನ್ಯಗ್ರಹ ಸಂಕುಲಗಳಿವೆ: ವಿಜ್ಞಾನಿಗಳ ಅಂದಾಜು

ಭೂಮಿಯಲ್ಲಿ ಮನುಷ್ಯನಂತೆ ಬುದ್ಧವಂತ ನಾಗರಿಕತೆ ಬೆಳೆಯಲು 450 ಕೋಟಿ ವರ್ಷಗಳೇ ಆಗಿವೆ. ಅಂದರೆ, ಭೂಮಿಯಲ್ಲಿ ಜೀವ ಉಗಮವಾಗಿ 450 ಕೋಟಿ ವರ್ಷಗಳಾದ ಮೇಲೆ ಮನುಷ್ಯ ಇಷ್ಟು ಔನ್ನತ್ಯ ಮಟ್ಟಕ್ಕೆ ಬಂದಿದ್ಧಾನೆ. ಇದೇ ಲೆಕ್ಕಾಚಾರದ ಪ್ರಕಾರ, ಬೇರೆ ಗ್ರಹಗಳಲ್ಲಿ 500 ಕೋಟಿ ವರ್ಷಗಳ ಹಿಂದೆ ಜೀವ ಉಗಮವಾಗಿದ್ದರೆ ಮನುಷ್ಯನಿಗಿಂತ ಬುದ್ಧಿವಂತೆ ಜೀವಿಗಳು ವಿಕಸನ ಹೊಂದಿರಬಹುದು ಎಂಬುದು ವಿಜ್ಞಾನಿಗಳ ಅಂದಾಜು.

news18
Updated:June 17, 2020, 5:20 PM IST
ನಮ್ಮ ನಕ್ಷತ್ರ ಸಮೂಹದೊಳಗೆಯೇ ಮನುಷ್ಯರಿಗಿಂತಲೂ ಬುದ್ಧವಂತ 36 ಅನ್ಯಗ್ರಹ ಸಂಕುಲಗಳಿವೆ: ವಿಜ್ಞಾನಿಗಳ ಅಂದಾಜು
ಗ್ರಹ ವ್ಯವಸ್ಥೆ
  • News18
  • Last Updated: June 17, 2020, 5:20 PM IST
  • Share this:
ನವದೆಹಲಿ: ಅನ್ಯಗ್ರಹ ಜೀವಿಗಳ ಬಗ್ಗೆ ಮನುಷ್ಯರಿಗೆ ಕಳೆದೊಂದು ಶತಮಾನದಿಂದಲೂ ಕೌತುಕ ಹೆಚ್ಚಾಗುತ್ತಿದೆ. ಹಾರುವ ತಟ್ಟೆ ಹಾಗೂ ಅದರಲ್ಲಿ ಅನ್ಯಗ್ರಹ ಜೀವಿಗಳು ಬರುವ ಬಗ್ಗೆ ಬಹಳಷ್ಟು ಜನರು ಸಾಕ್ಷಿ ಹೇಳಿದ್ಧಾರೆ. ಆದರೆ, ಯಾವುದೂ ಸಾಬೀತಾಗಿಲ್ಲ. ಎಲ್ಲವೂ ನಿಗೂಢವಾಗಿಯೇ ಉಳಿದಿವೆ. ಭೂಮಿಯಲ್ಲಿ ಜೀವಿಗಳ ವಾಸಕ್ಕೆ ಯೋಗ್ಯ ಪರಿಸರ ಇದೆ. ಇದಕ್ಕೆ ಕಾರಣ ಜೀವ ವಿಕಾಸಕ್ಕೆ ಬೇಕಾಗಿರುವ ಅಗತ್ಯ ಉಷ್ಣಾಂಶ ಮತ್ತು ಪರಿಸರ. ಭೂಮಿಯ ಗಾತ್ರ, ಅದರ ವಯಸ್ಸು ಹಾಗೂ ಸೂರ್ಯನ ವಯಸ್ಸು ಹಾಗೂ ಸೂರ್ಯನಿಂದ ಭೂಮಿ ಇರುವ ದೂರ ಇವೆಲ್ಲವೂ ಜೀವ ವಿಕಾಸಕ್ಕೆ ಅನುಕೂಲಕರವಾಗಿವೆ. ಇವೆಲ್ಲಾ ಅಂಶಗಳನ್ನೊಳಗೊಂಡ ಅನ್ಯಗ್ರಹಗಳನ್ನ ವಿಜ್ಞಾನಿಗಳು ಹುಡುಕುತ್ತಲೇ ಇದ್ದಾರೆ. ಕೆಲ ಖಗೋಲತಜ್ಞರ ಪ್ರಕಾರ ಭೂಮಿಯ ರೀತಿ ಇರುವ 600 ಕೋಟಿ ಗ್ರಹಗಳು ನಮ್ಮ ಮಿಲ್ಕಿ ವೇ ನಕ್ಷತ್ರಸಮೂಹದಲ್ಲಿವೆಯಂತೆ. ಆದರೆ, ಇಲ್ಲಿ ಜೀವಿಗಳಿದ್ದಾವೆಯೇ ಎಂಬುದು ಗೊತ್ತಿಲ್ಲ.

ಮಿಲ್ಕಿ ವೇ ಗೆಲಾಕ್ಸಿಯಲ್ಲಿ ಏನಿಲ್ಲವೆಂದರೂ 40 ಸಾವಿರ ಕೋಟಿ ನಕ್ಷತ್ರಗಳಿವೆ. ನಮ್ಮ ಸೂರ್ಯ ಈ ಗೆಲಾಕ್ಸಿಯ ಒಂದು ಪುಟ್ಟ ನಕ್ಷತ್ರವಷ್ಟೇ. ಇಷ್ಟು ಅಗಾಧ ಪ್ರಮಾಣದಲ್ಲಿ ನಕ್ಷತ್ರಗಳನ್ನ ಹಾಗೂ ಅವುಗಳ ಸುತ್ತ ಸುತ್ತುವ ಗ್ರಹಗಳನ್ನ ಪತ್ತೆ ಮಾಡುವುದು ತೀರಾ ಕ್ಲಿಷ್ಟಕರ ಕೆಲಸ. ಅಂಥದ್ದರಲ್ಲಿ ಅನ್ಯಗ್ರಹ ಜೀವಿಗಳನ್ನ ಪತ್ತೆ ಹಚ್ಚುವುದು ಸಾಧ್ಯವೇ?

ನಾಟಿಂಗ್​ಹ್ಯಾಂ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವೊಂದು ಹೊಸದಾಗಿ ರೂಪಿತವಾದ ಕಾಸ್ಮಿಕ್ ಎವಲ್ಯೂಷನ್ ಮಾಪನದ ಆಧಾರದ ಮೇಲೆ ಒಂದಷ್ಟು ಕುತೂಹಲಕಾರಿ ಮಾಹಿತಿ ಹೊರಗೆಡವಿದ್ದಾರೆ.

ಇದನ್ನೂ ಓದಿ: ಹಾಲಿವುಡ್ ಸಿನಿಮಾ ಶೈಲಿಯಲ್ಲಿ ಫೈಟಿಂಗ್; ಭಾರತೀಯ ಸೈನಿಕರ ಮೇಲೆ ಚೀನೀ ಡೆತ್ ಸ್ಕ್ವಾಡ್ ರಕ್ಕಸತನ

ಈ ವಿಜ್ಞಾನಿಗಳ ಪ್ರಕಾರ, ನಮ್ಮ ಮಿಲ್ಕಿ ವೇ ಗೆಲಾಕ್ಸಿಯೊಂದರಲ್ಲೇ ನಮ್ಮ ಮನುಷ್ಯರಿಗಿಂತ ಬುದ್ಧಿವಂತರಾಗಿರಬಹುದಾದ 36 ಅನ್ಯಗ್ರಹ ನಾಗರಿಕತೆಗಳು ಬೆಳೆದುಕೊಂಡಿರಬಹುದಂತೆ. ನಕ್ಷತ್ರ ವಯಸ್ಸು, ಅದನ್ನ ಸುತ್ತುವ ಗ್ರಹಗಳು, ಆ ಗ್ರಹಗಳ ವಯಸ್ಸು, ಅಲ್ಲಿ ಜೀವಿಗಳ ಉಗಮವಾಗಿ ವಿಕಸನ ಆಗಲು ಬೇಕಿರುವ ಕಾಲಾವಧಿ ಇತ್ಯಾದಿ ಅಂಶಗಳನ್ನೆಲ್ಲಾ ಪರಿಗಣಿಸಲಾಗಿದೆ.

ಭೂಮಿಯಲ್ಲಿ ಮನುಷ್ಯನಂತೆ ಬುದ್ಧವಂತ ನಾಗರಿಕತೆ ಬೆಳೆಯಲು 450 ಕೋಟಿ ವರ್ಷಗಳೇ ಆಗಿವೆ. ಅಂದರೆ, ಭೂಮಿಯಲ್ಲಿ ಜೀವ ಉಗಮವಾಗಿ 450 ಕೋಟಿ ವರ್ಷಗಳಾದ ಮೇಲೆ ಮನುಷ್ಯ ಇಷ್ಟು ಔನ್ನತ್ಯ ಮಟ್ಟಕ್ಕೆ ಬಂದಿದ್ಧಾನೆ. ಇದೇ ಲೆಕ್ಕಾಚಾರದ ಪ್ರಕಾರ, ಬೇರೆ ಗ್ರಹಗಳಲ್ಲಿ 500 ಕೋಟಿ ವರ್ಷಗಳ ಹಿಂದೆ ಜೀವ ಉಗಮವಾಗಿದ್ದರೆ ಮನುಷ್ಯನಿಗಿಂತ ಬುದ್ಧಿವಂತೆ ಜೀವಿಗಳು ವಿಕಸನ ಹೊಂದಿರಬಹುದು ಎಂಬುದು ವಿಜ್ಞಾನಿಗಳ ಅಂದಾಜು. 1962ರಲ್ಲಿ ಫ್ರಾಂಕ್ ಡ್ರೇಕ್ ಪ್ರಸ್ತುತಪಡಿಸಿದ ಸೂತ್ರದ ಪ್ರಕಾರ ವಿಜ್ಞಾನಿಗಳು ನಮ್ಮ ಮಿಲ್ಕಿ ವೇ ಗೆಲಾಕ್ಸಿಯಲ್ಲಿ ಮನುಷ್ಯನಿಗಿಂತ ಹೆಚ್ಚು ವಿಕಸನ ಹೊಂದಿದ 36 ಅನ್ಯಗ್ರಹ ಸಂಕುಲಗಳಿರಬಹುದು ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮಕ್ಕೂ ಮೊದಲೇ ಚೀನಾ ಸೈನಿಕರ ಗುಂಡಿಗೆ ಬಲಿಯಾದ ತಮಿಳುನಾಡು ಯೋಧ ಪಳನಿಅದರೆ, ನಮ್ಮ ಮಿಲ್ಕಿ ವೇ ಗೆಲಾಕ್ಸಿಯಲ್ಲೇ ಈ ಜೀವ ಸಂಕುಲಗಳು ಇರಬಹುದಾದರೂ ಭೂಮಿಯಿಂದ ಈ ಗ್ರಹಗಳನ್ನ ತಲುಪಲು 17 ಸಾವಿರ ಜ್ಯೋತಿರ್ವರ್ಷಗಳೇ ಬೇಕಾಗುತ್ತದಂತೆ. ಒಂದು ಜ್ಯೋತಿರ್ವರ್ಷ ಎಂದರೆ ಬೆಳಕಿನ ವೇಗದಲ್ಲಿ (ಸೆಕೆಂಡ್​ಗೆ 3 ಲಕ್ಷ ಕಿಮೀ) ಸಾಗುವ ದೂರ. ಇಷ್ಟು ಕ್ಷಿಪ್ರ ವೇಗದಲ್ಲಿ ಸಾಗಿದರೆ ಆ ಗ್ರಹಗಳನ್ನ ತಲುಪಲು 17 ಸಾವಿರ ವರ್ಷಗಳೇ ಹಿಡಿಯುತ್ತದೆ. ನಮ್ಮಲ್ಲಿರುವ ರಾಕೆಟ್​ಗಳು ಒಂದು ಸೆಕೆಂಡ್​ಗೆ ಸುಮಾರು 5-9 ಕಿಮೀ ವೇಗದಲ್ಲಿ ಸಾಗುತ್ತವೆ. ಅಂದರೆ ಆ ದೂರದ ಗ್ರಹಗಳನ್ನ ತಲುಪಲು ಕೋಟ್ಯಂತರ ವರ್ಷಗಳೇ ಹಿಡಿಯುತ್ತವೆ. ಅದೆಲ್ಲಾ ಸಾಧ್ಯವಿಲ್ಲದ ಮಾತು.

- ವಿಶಾಲ್ ಮಾಥುರ್, CNN-News18
First published: June 17, 2020, 5:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading