• Home
 • »
 • News
 • »
 • national-international
 • »
 • Mahatma Gandhi: ಉನ್ನತ ಗುರಿ ಸಾಧನೆಗೆ ಗಾಂಧಿ ಮಾರ್ಗಕ್ಕಿಂತ ಉತ್ತಮವಾದುದು ಮತ್ತೊಂದಿಲ್ಲ; ನಟ ಕಮಲಹಾನಸ್

Mahatma Gandhi: ಉನ್ನತ ಗುರಿ ಸಾಧನೆಗೆ ಗಾಂಧಿ ಮಾರ್ಗಕ್ಕಿಂತ ಉತ್ತಮವಾದುದು ಮತ್ತೊಂದಿಲ್ಲ; ನಟ ಕಮಲಹಾನಸ್

ಕಮಲಹಾಸನ್.

ಕಮಲಹಾಸನ್.

ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ರ ನಾಯಕ, ಅಹಿಂಸಾವಾದಿ ಹಾಗೂ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿ ನಮ್ಮನ್ನು ಅಗಲಿ ಇಂದಿಗೆ  73 ವರ್ಷವಾಗಿದೆ. ಇಂದು ಭಾರತದಾದ್ಯಂತ ಎಲ್ಲರೂ ಮಹಾತ್ಮಾ ಗಾಂಧಿ ಅವರ ಪುಣ್ಯತಿಥಿಯನ್ನು ಆಚರಿಸುತ್ತಿದ್ದಾರೆ.

 • Share this:

  ನವ ದೆಹಲಿ (ಜನವರಿ 30); ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ರ ನಾಯಕ, ಅಹಿಂಸಾವಾದಿ ಹಾಗೂ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿ ನಮ್ಮನ್ನು ಅಗಲಿ ಇಂದಿಗೆ  73 ವರ್ಷವಾಗಿದೆ. ಇಂದು ಭಾರತದಾದ್ಯಂತ ಎಲ್ಲರೂ ಮಹಾತ್ಮಾ ಗಾಂಧಿ ಅವರ ಪುಣ್ಯತಿಥಿಯನ್ನು ಆಚರಿಸುತ್ತಾ ಗೌರವ ನಮನಗಳನ್ನು ಸಲ್ಲಿಸುತ್ತಿದ್ದಾರೆ. ಗಣ್ಯರು ಹಾಗೂ ರಾಜಕೀಯ ನೇತಾರರು ಮಹಾತ್ಮಾ ಗಾಂಧಿ ಗುಣಗಾನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್​ ಮೂಲಕ ಗಾಂಧಿ ಅವರಿಗೆ ನಮನ ಸಲ್ಲಿಸಿರುವ ನಟ ಹಾಗೂ ಮಕ್ಕಳ್ ನೀದಿ ಮಯ್ಯಂ ಪಕ್ಷದ ಮುಖಂಡ ಕಮಲಹಾಸನ್, "ಉನ್ನತ ಗುರಿ ಸಾಧನೆಗೆ ಗಾಂಧಿ ಮಾರ್ಗಕ್ಕಿಂತ ಉತ್ತಮವಾದುದು ಮತ್ತೊಂದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.   ಮಹಾತ್ಮಾ ಗಾಂಧಿ ಅವರ ಪುಣ್ಯತಿಥಿ ನಿಮಿತ್ತ ಚೆನ್ನೆನಲ್ಲಿರುವ ಮಕ್ಕಳ್ ನೀದಿ ಮಯ್ಯಂ ಕೇಂದ್ರ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಅವರು ಪಟಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದ ನಂತರ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಕಮಲಹಾಸನ್, "ನನ್ನ ಜೀವನವೇ ನನ್ನ ಸಂದೇಶ ಎಂದು ಬದುಕಿ, ಅದನ್ನು ಜಗತ್ತಿಗೆ ಸಾರಿದ ಗಾಂಧೀಜಿಯವರನ್ನು ಸ್ಮರಿಸೋಣ. ಉನ್ನತವಾದದನ್ನು ಸಾಧಿಸಲು ಗಾಂಧಿ ಮಾರ್ಗಕ್ಕಿಂತ ಬಲವಾದ ಮತ್ತೊಂದು ಪರ್ಯಾಯ ಮಾರ್ಗವಿಲ್ಲ" ಎಂದು ಬರೆದುಕೊಂಡಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಸಹ ಟ್ವೀಟ್ ಮೂಲಕ ಗಾಂಧಿಯನ್ನು ಸ್ಮರಿಸಿದ್ದು, "ಗಾಂಧೀಜಿಗೆ ಅವರ ಪುಣ್ಯತಿಥಿಯಂದು ನನ್ನ ನಮನಗಳು. ಅವರ ಆದರ್ಶಗಳು ಲಕ್ಷಾಂತರ ಜನರಿಗೆ ಸ್ಪೂರ್ತಿ. ಹುತಾತ್ಮರ ದಿನದಂದು, ಭಾರತದ ಸ್ವಾಂತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಎಲ್ಲ ಮಹಿಳೆಯರು ಮತ್ತು ಪುರಷರನ್ನು ಸ್ಮರಿಸಬೇಕಿದೆ" ಎಂದಿದ್ದಾರೆ.  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿ, "ಜನರ ಬೆಂಬಲವಿಲ್ಲದೆ ಸತ್ಯ ಇನ್ನೂ ನಿಂತಿದೆ. ಈಗ ಅದು ಆತ್ಮನಿರ್ಭರವಾಗಿದೆ" ಎಂದು ಸಂಗೀತ ಸಾಮ್ರಾಜ್ಞೆ ಎಂ ಎಸ್ ಸುಬ್ಬಲಕ್ಷ್ಮಿಯವರ ಹಾಡಿನ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.  ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಮಾಡಿ, "ಸತ್ಯ, ಅಹಿಂಸೆಯ ಆದರ್ಶಗಳ ಸಾಕಾರ ಮೂರ್ತಿಯಂತಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯತಿಥಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ನಮ್ಮನ್ನು ಸದಾ ಎಚ್ಚರಿಸುವ ಗಾಂಧೀಜಿಯವರ ಜೀವನ, ಅವರ ನಡೆ ಮತ್ತು ನುಡಿಗಳ ಬೆಳಕಿನಲ್ಲಿ ಸಮೃದ್ಧ, ಸಶಕ್ತ ಭಾರತ ನಿರ್ಮಾಣದ ಹಾದಿಯಲ್ಲಿ ಮುನ್ನಡೆಯೋಣ" ಎಂದು ಗೌರವ ಸಲ್ಲಿಸಿದ್ದಾರೆ.  ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, "ಕೋಮು ಸೌಹಾರ್ದತೆಗಾಗಿ ತನ್ನ ಜೀವವನ್ನು ಬಲಿದಾನಗೈದ ಮಹಾತ್ಮ ಗಾಂಧೀಜಿ ಬದುಕಿನಲ್ಲಿ ಮಾತ್ರವಲ್ಲ ಸಾವಿನಲ್ಲಿಯೂ ಹೇಳಿಹೋಗಿರುವ ಪಾಠವನ್ನು ಮರೆಯದಿರೋಣ. ಗಾಂಧೀಜಿ ಎಂಬ ಜಗದ್ಗರುವಿನ ತತ್ವಾದರ್ಶಗಳ ಅನುಷ್ಠಾನ ನಮ್ಮ ಗುರಿಯಾಗಿರಲಿ. ರಾಷ್ಟ್ರಪಿತನಿಗೆ ಗೌರವದ ಶ್ರದ್ಧಾಂಜಲಿ" ಎಂದು ನಮನ ಸಲ್ಲಿಸಿದ್ದಾರೆ.

  Published by:MAshok Kumar
  First published: