HOME » NEWS » National-international » THERE IS NOT MUCH DIFFERENCE BETWEEN TRUMP AND BJP SUPPORTERS SAYS MAMATA BANERJEE MAK

ಟ್ರಂಪ್-ಬಿಜೆಪಿ ಬೆಂಬಲಿಗರಿಗೆ ಹೆಚ್ಚು ವ್ಯತ್ಯಾಸವಿಲ್ಲ, ಸೋತರೆ ಇವರ ವರ್ತನೆಯೂ ಹಾಗೆ ಇರಲಿದೆ; ಸಿಎಂ ಮಮತಾ ಲೇವಡಿ

ಯಾವಾಗ ಬಿಜೆಪಿ ಸೋಲುತ್ತದೆಯೋ ಅಂದು ’ನಾವು ಗೆದ್ದಿದ್ದೇವೆ, ನಾವು ಗೆದ್ದಿದ್ದೇವೆ’ ಎಂದು ಬಿಜೆಪಿ ಬೆಂಬಲಿಗರೂ ಇದೇ ರೀತಿ ಹೇಳುತ್ತಾ, ಇಂತಹದ್ದೇ ವರ್ತನೆ ತೋರುತ್ತಾರೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ.

news18-kannada
Updated:January 12, 2021, 11:20 AM IST
ಟ್ರಂಪ್-ಬಿಜೆಪಿ ಬೆಂಬಲಿಗರಿಗೆ ಹೆಚ್ಚು ವ್ಯತ್ಯಾಸವಿಲ್ಲ, ಸೋತರೆ ಇವರ ವರ್ತನೆಯೂ ಹಾಗೆ ಇರಲಿದೆ; ಸಿಎಂ ಮಮತಾ ಲೇವಡಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
  • Share this:
ಕೋಲ್ಕತ್ತಾ (ಜನವರಿ 12); ಚುನಾವಣಾ ಸೋಲನ್ನು ಒಪ್ಪದೆ ಅಮೆರಿಕ ಸಂಸತ್​ ಭವನದ ಮೇಲೆ ದಾಳಿ ನಡೆಸಿರುವ ಡೊನಾಲ್ಡ್​ ಟ್ರಂಪ್ ಹಾಗೂ ಬಿಜೆಪಿ ಬೆಂಬಲಿಗರಿಗೆ ಹೆಚ್ಚೇನು ವ್ಯತ್ಯಾಸ ಇಲ್ಲ. ಭವಿಷ್ಯದಲ್ಲಿ ಬಿಜೆಪಿ ಸೋಲನುಭವಿಸಿದರೆ ಆ ಪಕ್ಷದ ಬೆಂಬಲಿಗರೂ ಇದೇ ರೀತಿ ವರ್ತನೆ ಮಾಡುತ್ತಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಈವರೆಗೆ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಅಲ್ಲದೆ, ಚುನಾವಣಾ ಅಧಿಕಾರಿಗಳು ಫಲಿತಾಂಶವನ್ನು ತಿರುಚಿದ್ದಾರೆ ಎಂದು ನಿರಂತರವಾಗಿ ಆರೋಪಿಸುತ್ತಲೇ ಇದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಲೇ ಇದ್ದರು. ಪರಿಣಾಮ ಕಳೆದ ಬುಧವಾರ ಟ್ರಂಪ್ ಬೆಂಬಲಿಗರು ಏಕಾಏಕಿ ವಾಷಿಂಗ್ಟನ್‌ನ ಅಮೆರಿಕ ಸಂಸತ್ (Mob at US Capitol) ಮೇಲೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ಗಲಭೆಗೆ ಕಾರಣರಾಗಿದ್ದರು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ಘಟನೆಯನ್ನು ಇಡೀ ವಿಶ್ವದ ಪ್ರಮುಖ ನಾಯಕರು ಖಂಡಿಸಿದ್ದರು. ಆದರೆ, ಮಮತಾ ಬ್ಯಾನರ್ಜಿ ಇದೀಗ ಬಿಜೆಪಿ ಬೆಂಬಲಿಗರನ್ನು ಡೊನಾಲ್ಡ್​ ಟ್ರಂಪ್ ಅಭಿಮಾನಿಗಳಿಗೆ ಹೋಲಿಕೆ ಮಾಡಿ ಮಾತನಾಡುವ ಮೂಲಕ ಬಿಜೆಪಿಯನ್ನು ಅಪಹಾಸ್ಯಕ್ಕೆ ಗುರಿಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಟಿಎಂಸಿ ಪಕ್ಷ ನಿನ್ನೆ ನಾಡಿಯಾ ಜಿಲ್ಲೆಯಲ್ಲಿ ಸಾರ್ವಜನಿಕ ರ್‍ಯಾಲಿಯನ್ನು ಆಯೋಜಿಸಿತ್ತು. ಈ ರ್‍ಯಾಲಿಯಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ, "ನೀವು ಅವರನ್ನು ನೋಡಲಿಲ್ಲವೇ? ಸೋತರೂ ತಾನು ಗೆದ್ದಿದ್ದೇನೆ ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ. ಅವರ ಬೆಂಬಲಿಗರು ಅಮೆರಿಕ ಸಂಸತ್​ ಭವನದ ಮೇಲೆ ದಾಳಿ ನಡೆಸಿದ್ದಾರೆ.

ಯಾವಾಗ ಬಿಜೆಪಿ ಸೋಲುತ್ತದೆಯೋ ಅಂದು ’ನಾವು ಗೆದ್ದಿದ್ದೇವೆ, ನಾವು ಗೆದ್ದಿದ್ದೇವೆ’ ಎಂದು ಬಿಜೆಪಿ ಬೆಂಬಲಿಗರೂ ಇದೇ ರೀತಿ ಹೇಳುತ್ತಾ, ಇಂತಹದ್ದೇ ವರ್ತನೆ ತೋರುತ್ತಾರೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ" ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: Covishield Vaccine: ಕೊರೋನಾ ವಿರುದ್ಧ ಭಾರತ ಮಹತ್ವದ ಹೆಜ್ಜೆ; ದೇಶದೆಲ್ಲೆಡೆ ರವಾನೆಯಾಗುತ್ತಿದೆ ಕೋವಿಶೀಲ್ಡ್​ ಲಸಿಕೆ

ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಯ ವಿರುದ್ಧವೂ ಕಿಡಿಕಾರಿರುವ ಮಮತಾ ಬ್ಯಾನರ್ಜಿ, "ಹರಿಯಾಣ ಪಂಜಾಬ್ ರೈತರು ಕಳೆದ ಒಂದು ತಿಂಗಳಿನಿಂದ ಬಿಸಿಲು ಮತ್ತು ಮಳೆಯೆನ್ನದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವರು ಚಳಿಯಲ್ಲಿ ಮೃತಪಟ್ಟಿದ್ದಾರೆ, ಆದರೆ, ನಮ್ಮ ರೈತ ಬಾಂಧವರಿಗೆ ಈವರೆಗೆ ನ್ಯಾಯ ಧಕ್ಕಿಲ್ಲ" ಎಂದು ಕಿಡಿಕಾರಿದ್ದಾರೆ.

ಇನ್ನೂ ಬಿಜೆಪಿಯನ್ನು ಜಂಕ್ ಪಾರ್ಟಿ ಎಂದು ಜರೆದಿರುವ ಅವರು, "ಬಿಜೆಪಿ ಪಕ್ಷಕ್ಕೆ ನನ್ನ ಬಗ್ಗೆ ಭಯಭೀತವಾಗಿದೆ. ಏಕೆಂದರೆ ನನ್ನನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ನಾನು ಹೋರಾಟದಲ್ಲಿ ಮುಂದೆಯೆ ನಿಲ್ಲುತ್ತೇನೆ. ಅವರಿಗೆ ಬಂಗಾಳವನ್ನು ಮಾರಾಟ ಮಾಡಲು ನಾನು ಬದುಕಿರುವವರೆಗೆ ಬಿಡುವುದಿಲ್ಲ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
Published by: MAshok Kumar
First published: January 12, 2021, 11:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories