• Home
  • »
  • News
  • »
  • national-international
  • »
  • Shocking News: "ಹೊಟ್ಟೆಗೇನ್ ತಿಂತೀಯಾ" ಅಂತ ಕೇಳ್ಬೇಡಿ, ಈತ ಹಾವು ತಿಂದು ಜೀರ್ಣಿಸಿಕೊಳ್ತಾನೆ!

Shocking News: "ಹೊಟ್ಟೆಗೇನ್ ತಿಂತೀಯಾ" ಅಂತ ಕೇಳ್ಬೇಡಿ, ಈತ ಹಾವು ತಿಂದು ಜೀರ್ಣಿಸಿಕೊಳ್ತಾನೆ!

ಅಂತರ್ಜಾಲ ಚಿತ್ರ

ಅಂತರ್ಜಾಲ ಚಿತ್ರ

ಯಾರಾದ್ರೂ ಏನೋ ಮಾಡಬಾರದ್ದು ಮಾಡಿದ್ರೆ, "ಏನಪ್ಪಾ ನೀನು ಹೊಟ್ಟೆಗೇನು ತಿಂತೀಯಾ?" ಅಂತ ಸಹಜವಾಗಿ ಕೇಳ್ತಾರೆ. ಆದ್ರೆ ಇವನ ಹತ್ತಿರ ಹಾಗೇನಾದ್ರೂ ಕೇಳಿಬಿಟ್ಟೀರಿ ಹುಷಾರ್! ಯಾಕೆಂದ್ರೆ ಆತ ನೀಡುವ ಉತ್ತರ ನೋಡಿ ನೀವು ವಾಂತಿ ಮಾಡಿಕೊಳ್ಳಬಹುದು, ಇಲ್ಲಾಂದ್ರೆ ಪ್ರಜ್ಞೆ ತಪ್ಪಿ ಬೀಳಬಹುದು! ಅಷ್ಟಕ್ಕೂ ಈ 'ಉರಗ ಭಕ್ಷಕ' ಯಾರು? ಏನಿವನ ಕಥೆ ಅಂತ ನೀವೇ ಓದಿ...

ಮುಂದೆ ಓದಿ ...
  • Share this:

ಆಂಧ್ರಪ್ರದೇಶ: ಈ ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ (Strange), ವಿಶೇಷ (Special), ವಿಶಿಷ್ಟ (Unique) ಜನಗಳು ಇರ್ತಾರೆ ನೋಡ್ರಪ್ಪ. ಅಲ್ಲ ಸ್ವಾಮೀ, ಜನಗಳು ಆಹಾರ (Food) ಅಂತ ಏನೇನೆಲ್ಲಾ ತಿಂತಾರೆ? ವೆಜ್ (Veg) ಆದ್ರೆ ಸಹಜವಾಗಿ ತರಕಾರಿ (Vegetables), ಸೊಪ್ಪು, ಗೆಡ್ಡೆ ಇತ್ಯಾದಿಗಳನ್ನ ತಿಂತಾರೆ. ನಾನ್ ವೆಜ್‌ನವರಾದ್ರೆ (Non-Veg) ಕುರಿ (Sheep), ಕೋಳಿ (Poultry), ಮೀನು (Fish), ಮಾಂಸ (Meat), ಮೊಟ್ಟೆ (Eggs) ಇತ್ಯಾದಿಗಳನ್ನ ತಿಂತಾರೆ. ವಿದೇಶಗಳ ಜನರು ಅದರಲ್ಲೂ ಚೀನಾದವರು (China) ಕಣ್ಣಿಗೆ ಕಂಡದ್ದೆಲ್ಲ ತಿಂತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವಂತದ್ದೇ. ಆದ್ರೆ ಇಲ್ಲೊಬ್ಬ ಮಹಾನುಭಾವ ಅದೇನೇನೋ ತಿಂತಾನಂತೆ ಕಣ್ರೀ.. ಇದು ಸುಳ್ಳಲ್ಲ ನಿಜ. ಆತ ‘ಗಬ ಗಬಾ’ ಅಂತ ತಿನ್ನುತ್ತಿರುವ ವಿಡಿಯೋ (Video) ವೈರಲ್ (Viral) ಆಗಿದೆ. ಹಾಗಿದ್ರೆ ಯಾರು ಆ ಭೂಪ, ಆತ ತಿನ್ನೋದಾದ್ರೂ ಏನು ಅಂತ ತಿಳಿದುಕೊಳ್ಳಲು ಮುಂದೆ ಓದಿ…


ನಿಜ ಸ್ವಾಮಿ, ಈತ ತಿನ್ನೋದು ಹಾವಂತೆ!


ಯಾರಾದ್ರೂ ಏನೋ ಮಾಡಬಾರದ್ದು ಮಾಡಿದ್ರೆ, "ಏನಪ್ಪಾ ನೀನು ಹೊಟ್ಟೆಗೇನು ತಿಂತೀಯಾ?" ಅಂತ ಸಹಜವಾಗಿ ಕೇಳ್ತಾರೆ. ಆದ್ರೆ ಇವನ ಹತ್ತಿರ ಹಾಗೇನಾದ್ರೂ ಕೇಳಿಬಿಟ್ಟೀರಿ ಹುಷಾರ್! ಯಾಕೆಂದ್ರೆ ಆತ ನೀಡುವ ಉತ್ತರ ನೋಡಿ ನೀವು ವಾಂತಿ ಮಾಡಿಕೊಳ್ಳಬಹುದು, ಇಲ್ಲಾಂದ್ರೆ ಪ್ರಜ್ಞೆ ತಪ್ಪಿ ಬೀಳಬಹುದು! ಅಷ್ಟಕ್ಕೂ ಈತ ತಿನ್ನೋದು ಹಾವಂತೆ!


ಆಂಧ್ರಪ್ರದೇಶದಲ್ಲಿದ್ದಾನೆ ಉರಗ ಭಕ್ಷಕ!


ಹೌದು, ಈತರ ಉರಗ ಭಕ್ಷಕ ಇರೋದು ಆಂಧ್ರಪ್ರದೇಶ ರಾಜ್ಯದಲ್ಲಿ. ಅನಂತಪುರ ಜಿಲ್ಲೆಯ ಸಾಣಗಲ ಗುಡೂರು ಗ್ರಾಮದ ಪುಟ್ಲೂರು ಮಂಡಲ ಎಂಬಲ್ಲಿನ ನಿವಾಸಿ ಪೆದ್ದ ಪುಲ್ಲಣ್ಣ ಎಂಬಾತ ಹಾವು ತಿನ್ನುತ್ತಾನಂತೆ.


ಇದನ್ನೂ ಓದಿ: Shocking News: ಬಿಸಿ ಸಾಂಬಾರ್ ಪಾತ್ರೆಯಲ್ಲಿ ಬಿದ್ದ ಮಗು, Birthday ದಿನವೇ ಕಣ್ಮುಚ್ಚಿದ ಕಂದಮ್ಮ!


ಹಾವು ತಿನ್ನುವ ವಿಡಿಯೋ ವೈರಲ್


ಪುದ್ದ ಪೆಲ್ಲಣ್ಣ ಹಾವು ತಿನ್ನುತ್ತಿದ್ದಾನೆ ಎಂಬ ಗುಸುಗುಸು ಇತ್ತು. ಆದರೆ ಗ್ರಾಮಸ್ಥರೆಲ್ಲ ಅದನ್ನು ನಂಬಿರಲಿಲ್ಲ. ಆದರೆ ಒಮ್ಮೆ ಒಂದಿಷ್ಟು ಯುವಕರು ಆತ ಹಾವು ತಿನ್ನುತ್ತಿರುವ ವಿಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ಬಳಿಕ  ವಿಡಿಯೋಗಳನ್ನು ವೈರಲ್ ಮಾಡಿದ್ದಾರೆ. ಅದನ್ನು ನೋಡಿದ ಜನ ಹೌಹಾರಿದ್ದಾರೆ.


ಕಬ್ಬಿನ ಜಲ್ಲೆಯಂತೆ ಹಾವನ್ನು ಜಗಿಯುವ ಪುಲ್ಲಣ್ಣ!


ಈತನಿಗೆ ಹಾವು ಎಂದರೆ ಭಯವೇ ಇಲ್ಲವಂತೆ. ಕಬ್ಬಿನ ಜಲ್ಲೆಯನ್ನು ಹೇಗೆ ಕೈಯಲ್ಲಿ ಹಿಡಿದು, ಅದರ ರಸ ನುಂಗುತ್ತಾರೋ ಅದೇ ರೀತಿ ಈತ ಹಾವು ಭಕ್ಷಿಸುತ್ತಾನೆ. ಹಾವನ್ನು ಕೈಯಲ್ಲಿ ಹಿಡಿದು, ಕಟ ಕಟಾ ಕಡಿಯುತ್ತಾನೆ. ಈ ಎಲ್ಲಾ ದೃಶ್ಯಗಳು ಯುವಕರು ಮಾಡಿದ ವಿಡಿಯೋದಲ್ಲಿ ಸೆರೆಯಾಗಿದೆ.


ಯಾಕಾಗಿ ಶುರುವಾಯ್ತು ಹಾವು ತಿನ್ನುವ ಚಟ?


ಸುಮಾರು 60 ವರ್ಷದ ಈ ಪೆದ್ಗ ಪುಲ್ಲಣ್ಣ ಸಾಮಾನ್ಯರಂತೆ ಇದ್ದಾನೆ. ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿಯೇ ಇದ್ದಾನೆ. ಆದರೆ ಹಾವು ತಿಂದು ಜೀರ್ಣಿಸಿಕೊಳ್ಳುತ್ತಿದ್ದಾನೆ. ಆದರೆ ಯಾಕಾಗಿ ಇವನಿಗೆ ಈ ಚಟ ಶುರುವಾಯಿತು ಎನ್ನುವುದು ತಿಳಿದಿಲ್ಲ.


ಇದನ್ನೂ ಓದಿ: Tragedy: ಮಸಣವಾದ ಮದುವೆ ಮನೆ, ಆಕಸ್ಮಿಕವಾಗಿ ಬಾವಿಗೆ ಬಿದ್ದು 13 ಮಹಿಳೆಯರು ಸಾವು


ಸಹಜವಾಗೇ ಊಟ, ತಿಂಡಿ ತಿನ್ನುವ ವ್ಯಕ್ತಿ


ತೀರಾ ಬಡತನದಲ್ಲಿದ್ದ ಪೆದ್ದ ಪಲ್ಲಣ್ಣ, ಹಸಿವು ನೀಗಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾನಾ ಅನ್ನೋ ಚರ್ಚೆ ಶುರುವಾಗಿದೆ. ಆದರೆ ಈತ ಪ್ರತಿದಿನ ಹಾವು ತಿನ್ನುವುದಿಲ್ಲ. ಪ್ರತಿ ದಿನ ಎಲ್ಲರಂತೆ ಸಹಜವಾಗಿ ತಿಂಡಿ ತಿನ್ನುತ್ತಾನೆ, ಊಟವನ್ನೂ ಮಾಡುತ್ತಾನೆ. ಆದರೆ ಎಂದಾದರೂ ಒಂದು ದಿನ, ಹಾವು ಕಾಣಿಸಿಕೊಂಡ ಸಮಯದಲ್ಲಿ ಅದನ್ನು ಹಿಡಿದು, ಲಬಕ್ ಸ್ವಾಹಾ ಮಾಡುತ್ತಾನೆ.


ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ ಸುತ್ತಮುತ್ತಲ ಮನೆಯ ಜನ ಭಯಪಡುತ್ತಿದ್ದಾರೆ. ಕೆಲವರು ವಿಡಿಯೋ ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ.

Published by:Annappa Achari
First published: