OMG: ಈ ಕಾಲೇಜ್‌ಗಳಲ್ಲಿ 'ಆ ತರ' ಕೋರ್ಸ್‌ಗಳೂ ಇರುತ್ತಂತೆ! ಹೊಸ 'ಪಾಠ' ಕಲಿಯುವ ಜೋಷ್‌ನಲ್ಲಿದ್ದಾರೆ ಸ್ಟೂಡೆಂಟ್ಸ್!

ವಯಸ್ಕರ ಚಿತ್ರಗಳ ಬಗ್ಗೆ ಕೋರ್ಸ್ ಶುರುಮಾಡಲು ಖಾಸಗಿ ಕಾಲೇಜ್ ನಿರ್ಧಾರ ಮಾಡಿದೆ. "ಅಡಲ್ಟ್ ಮೂವಿಗಳು ಬರೀ ಮನರಂಜನೆಗಷ್ಟೇ ಸೀಮಿತವಲ್ಲ, ದುಡ್ಡು ಗಳಿಸುವ ವಿಧಾನಗಳಲ್ಲಿ ಅದೂ ಒಂದು" ಎಂದು ಕಾಲೇಜ್‌ ಆಡಳಿತ ಮಂಡಳಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಮೆರಿಕಾ: ಭಾರತ (India) ಹಾಗೂ ಅಮೆರಿಕಾದಲ್ಲಿ (America) ಹಲವಷ್ಟು ವ್ಯತ್ಯಾಸಗಳಿವೆ. ಉಭಯ ದೇಶಗಳ ಆಹಾರ (Food) ಪದ್ಧತಿ, ಜನ ಜೀವನ (Life Style), ಸಂಸ್ಕೃತಿ (Culture), ಶಿಕ್ಷಣ (Education) ವಿಧಾನ ಎಲ್ಲವೂ ಬೇರೆ ಬೇರೆ. ನಮ್ಮಲ್ಲಿ ಅಶ್ಲೀಲ ಚಿತ್ರಗಳು ಎಂದರೆ ಸಾರ್ವಜನಿಕವಾಗಿ ನಿಷಿದ್ಧ. ‘ಆ ತರದ’ ಸಿನಿಮಾ (Cinema), ವಿಡಿಯೋ (Video) ನೋಡ್ತಾರೆ ಅಂತ ಗೊತ್ತಾದರೆ ಜನ ಮೂಗು ಮುರಿಯುತ್ತಾರೆ. ಆದರೆ ಅಮೆರಿಕಾದಂತ ದೇಶಗಳಲ್ಲಿ ಅವೆಲ್ಲ ಕಾಮನ್. ಇದೀಗ ಇಂತಹ ವಯಸ್ಕರ ಚಿತ್ರಗಳ ಬಗ್ಗೆ ಕೋರ್ಸ್ ಶುರುಮಾಡಲು ಅಮೆರಿಕಾದ ಖಾಸಗಿ ಕಾಲೇಜ್ ನಿರ್ಧಾರ ಮಾಡಿದೆ. ಅಡಲ್ಟ್ ಮೂವಿಗಳು ಬರೀ ಮನರಂಜನೆಗಷ್ಟೇ ಸೀಮಿತವಲ್ಲ, ದುಡ್ಡು ಗಳಿಸುವ ವಿಧಾನಗಳಲ್ಲಿ ಅದೂ ಒಂದು ಎಂದು ಕಾಲೇಜ್‌ ಆಡಳಿತ ಮಂಡಳಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

 ಅಮೆರಿಕನ್ ಕಾಲೇಜ್‌ನಲ್ಲಿ ‘ವಯಸ್ಕರ ಸಿನಿಮಾ’ ಕೋರ್ಸ್!

ಅಮೆರಿಕದ ಉತ್ಹಾ ನಗರದ ವೆಸ್ಟ್‌- ಮಿನ್‌ಸ್ಟರ್‌ನ ಲಿಬರಲ್ ಆರ್ಟ್ಸ್ ಕಾಲೇಜು ಕಾಲೇಜು 2022-23 ಶೈಕ್ಷಣಿಕ ವರ್ಷದಲ್ಲಿ ವಯಸ್ಕರ ಸಿನಿಮಾದ ಬಗ್ಗೆ ಕೋರ್ಸ್ ಆರಂಭಿಸಲು ಚಿಂತನೆ ನಡೆಸಿದೆ. 'ಫಿಲ್ಮ್ 2000 ಪೋರ್ನ್' ಹೆಸರಿನ ಕೋರ್ಸ್‌ನ ಉಲ್ಲೇಖವನ್ನು ವೆಬ್‌ಸೈಟ್‌ನ ಪಟ್ಟಿಯಿಂದ ಹಿಂತೆಗೆದುಕೊಳ್ಳಲಾಗಿದೆ.

ಆದರೆ ಕೋರ್ಸ್ ಅನ್ನು ಹಿಂತೆಗೆದುಕೊಳ್ಳಲಾಗಿಲ್ಲ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. ಮತ್ತು ಯಾವುದೇ ಗೊಂದಲದ ಕಾರಣದಿಂದ ಕೋರ್ಸ್ ಅನ್ನು ತೆಗೆದುಹಾಕಲಾಗಿಲ್ಲ ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.

ಇದು ‘ಬದುಕುವ ಕಲೆ’ ಎಂದ ಆಡಳಿತ ಮಂಡಳಿ

''ನೀಲಿ ಚಿತ್ರ ಅನೇಕರ ದೃಷ್ಟಿಯಲ್ಲಿ ಅಶ್ಲೀಲವಾಗಿ ಕಾಣಿಸಿದರೂ ಅದರಲ್ಲಿ ಅಗಾಧ ಲಾಭ ಇದೆ. ತೆರೆಮರೆಯಲ್ಲಿ ಅಪಾರ ಹಣ ಗಳಿಸುವ ದಂಧೆಯಾಗಿ ಅದು ಬದಲಾಗಿದೆ. ಬದಲಾದ ಈ ಜಮಾನದಲ್ಲಿ ಮಡಿವಂತಿಕೆ ತೊರೆದು, ಬದುಕುವ ಕಲೆ ಕಲಿಯುವುದು ಅಗತ್ಯ,'' ಎಂದು ಕಾಲೇಜಿನ ಆಡಳಿತ ಮಂಡಳಿ ತಮ್ಮ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ.

ಇದನ್ನೂ ಓದಿ: Shocking News: ತಮ್ಮದೇ ಶಾಲೆಯ 24 ವಿದ್ಯಾರ್ಥಿಗಳನ್ನು ಕಿಡ್ನಾಪ್ ಮಾಡಿದ ಶಿಕ್ಷಕಿಯರು! ಮುಂದಾಗಿದ್ದೇನು ಗೊತ್ತಾ?

ಸಾಮಾಜಿಕ ಸಮಸ್ಯೆ ನಿರ್ಮೂಲನೆಗೆ ಸಹಕಾರಿ

ಸಮಾಜದ ವಿವಿಧ ಜನ ವರ್ಗಗಳಲ್ಲಿ ಇರುವ ಲೈಂಗಿಕ ಕಲೆಯ ಮಾಹಿತಿ ನಮ್ಮ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಸಾಮಾಜಿಕ ಸಮಸ್ಯೆಯಾಗಿ ಅದು ಹೇಗೆ ಬದಲಾಗುತ್ತದೆ? ಅದನ್ನು ಸರಿಪಡಿಸುವುದು ಹೇಗೆ ಎನ್ನುವ ದಾರಿಗಳ ಕುರಿತೂ ಹೇಳಿಕೊಡಲಾಗುತ್ತದೆ ಅಂತ ಕಾಲೇಜ್ ಮುಖ್ಯಸ್ಥರು ಹೇಳಿದ್ದಾರೆ.

ಒಟ್ಟಿಗೆ ವಯಸ್ಕರ ಸಿನಿಮಾ ವೀಕ್ಷಿಸಲಿರುವ ವಿದ್ಯಾರ್ಥಿಗಳು

ಈ ಕೋರ್ಸ್‌ನಲ್ಲಿ ಹುಡುಗ ಮತ್ತು ಹುಡುಗಿಯರಿಗೆ ಒಟ್ಟಿಗೆ ಪಾಠ ಹೇಳಿಕೊಡಲಾಗುತ್ತದೆ.  ಅಲ್ಲಿ ವಿದ್ಯಾರ್ಥಿಗಳು ಒಟ್ಟಿಗೆ ಅಶ್ಲೀಲ ಚಲನಚಿತ್ರಗಳನ್ನು ವೀಕ್ಷಿಸುತ್ತಾರೆ. ಪಾಠದ ಭಾಗವಾಗಿ ಜನಾಂಗ, ವರ್ಗ ಮತ್ತು ಲೈಂಗಿಕತೆ ಬಗ್ಗೆ ಮುಕ್ತವಾಗಿ ಚರ್ಚಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ಈ ಕೋರ್ಸ್ ಹೊಸದೇನು ಅಲ್ಲ

ಯುಎಸ್‌ಎ ಟುಡೇ ಸಂಸ್ಥೆಯ ವರದಿ ಪ್ರಕಾರ ಈ ರೀತಿಯ ಅಶ್ಲೀಲ ಸಿನಿಮಾ ಬಗ್ಗೆ ಕಲಿಸುವ ಕೋರ್ಸ್ ಹೊಸದಲ್ಲ ಎಂದು ಕಾಲೇಜು ಅಧಿಕಾರಿಗಳು ಹೇಳಿದ್ದಾರೆ. ಅವರು ಈ ಹಿಂದೆ ಹಲವಾರು ಬಾರಿ ಕೋರ್ಸ್ ಅನ್ನು ನೀಡಿದ್ದಾರೆ ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಅದನ್ನು ನಿಲ್ಲಿಸಲಾಯಿತು. ಕೋರ್ಸ್‌ನಲ್ಲಿ ಸಾಮಾನ್ಯವಾಗಿ ಸುಮಾರು 20 ವಿದ್ಯಾರ್ಥಿಗಳು ಇರುತ್ತಾರೆ ಎಂದು ಕಾಲೇಜು ತಿಳಿಸಿದೆ.

ಇದನ್ನೂ ಓದಿ: US Visa: ಅಮೆರಿಕ ಈ ಬಾರಿ ತಾನು ನೀಡುವ ವಿದ್ಯಾರ್ಥಿ ವೀಸಾ ನೀತಿಯಲ್ಲಿ ಮಾಡಿದ ಬದಲಾವಣೆ ಏನು?

ಅಶ್ಲೀಲ ಕೋರ್ಸ್‌ ಪರ ವಿರೋಧ ಅಭಿಪ್ರಾಯ

ಇನ್ನು ಈ ಕೋರ್ಸ್‌ಗೆ ಅಮೆರಿಕಾದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದು ಸರಿಯಲ್ಲ ಅಂತ ಹೇಳಿದರೆ, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲವನ್ನೂ ತಿಳಿದುಕೊಂಡಿರಬೇಕು ಅಂತ ಹಲವರು ವಾದಿಸಿದ್ದಾರೆ.
Published by:Annappa Achari
First published: