• Home
  • »
  • News
  • »
  • national-international
  • »
  • Chola King: ಜೋರಾಯ್ತು ಚೋಳರ ಧರ್ಮದ ಕುರಿತ ಚರ್ಚೆ! ಕಮಲ್‌ ಹಾಸನ್‌ಗೆ ಬಿಜೆಪಿ ಸವಾಲು

Chola King: ಜೋರಾಯ್ತು ಚೋಳರ ಧರ್ಮದ ಕುರಿತ ಚರ್ಚೆ! ಕಮಲ್‌ ಹಾಸನ್‌ಗೆ ಬಿಜೆಪಿ ಸವಾಲು

ರಾಜ ರಾಜ ಚೋಳನ ವರ್ಣಚಿತ್ರ

ರಾಜ ರಾಜ ಚೋಳನ ವರ್ಣಚಿತ್ರ

ಚೋಳದ ಧರ್ಮ ಯಾವುದು ಎನ್ನುವ ಬಗ್ಗೆ ತಮಿಳುನಾಡಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ರಾಜಕಾರಣಿಯೂ ಆಗಿರುವ ಖ್ಯಾತ ನಟ ಕಮಲ್ ಹಾಸನ್ ನೀಡಿದ ಹೇಳಿಕೆ. ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಅಂತ ಕಮಲ್ ಹಾಸನ್ ಹೇಳಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಮಲ್ ಹಾಸನ್ ವಿರುದ್ಧ ತಮಿಳುನಾಡಿನ ಬಿಜೆಪಿ ನಾಯಕರು ಮುಗಿ ಬಿದ್ದಿದ್ದಾರೆ.

ಮುಂದೆ ಓದಿ ...
  • Share this:

ತಮಿಳುನಾಡು: ಭಾರತವನ್ನು ಆಳಿದ ಪ್ರಮುಖ ರಾಜಮನೆತನಗಳಲ್ಲಿ ಚೋಳ ಸಾಮ್ರಾಜ್ಯವೂ (Chola Empire) ಒಂದು. ತಮಿಳುನಾಡಿನ (Tamil Nadu) ಪ್ರದೇಶಗಳನ್ನೇ ಕೇಂದ್ರವಾಗಿರಿಸಿಕೊಂಡು ರಾಜ್ಯ ಆಳಿದ್ದ ಚೋಳರು (Cholas), ಸಿಂಹಳ ದ್ವೀಪ (Sinhala island) ಅಂದರೆ ಈಗಿನ ಶ್ರೀಲಂಕಾದಲ್ಲೂ (Sri Lanka) ಆಳ್ವಿಕೆ ನಡೆಸಿದ್ದರು. ಇದೀಗ ಚೋಳದ ಧರ್ಮ (religion) ಯಾವುದು ಎನ್ನುವ ಬಗ್ಗೆ ತಮಿಳುನಾಡಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ರಾಜಕಾರಣಿಯೂ (Politician) ಆಗಿರುವ ಖ್ಯಾತ ನಟ (Actor Kamal Haasan) ಕಮಲ್ ಹಾಸನ್ ನೀಡಿದ ಹೇಳಿಕೆ. ಚೋಳರ ಕಾಲದಲ್ಲಿ ಹಿಂದೂ ಧರ್ಮವೇ (Hindu religion) ಇರಲಿಲ್ಲ ಅಂತ ಕಮಲ್ ಹಾಸನ್ ಹೇಳಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಮಲ್ ಹಾಸನ್ ವಿರುದ್ಧ ತಮಿಳುನಾಡಿನ ಬಿಜೆಪಿ ನಾಯಕರು (Tamil Nadu BJP Leaders) ಮುಗಿ ಬಿದ್ದಿದ್ದಾರೆ.


ಚರ್ಚೆಗೆ ನಾಂದಿ ಹಾಡಿದ ತೆಲಂಗಾಣ ರಾಜ್ಯಪಾಲೆ


ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್-1 ಸಿನಿಮಾ ಬಿಡುಗಡೆ ಬೆನ್ನಲ್ಲೇ ಈ ವಿಚಾರವಾಗಿ ತಮಿಳುನಾಡಿನಲ್ಲಿ ಚರ್ಚೆ ಶುರುವಾಗಿದೆ. ಚೋಳರ ಕಥೆಯುಳ್ಳ ಪೊನ್ನಿಯನ್ ಸೆಲ್ವನ್ ಸಿನಿಮಾದ ಈ ವಿಷಯವಾಗಿ ಮಾತನಾಡಿದ ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್, ಉನ್ನತ ಮಟ್ಟದ ಹಿಂದೂ ಸಾಧಕರನ್ನು ಕಡೆಗಣಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದುತ್ವ ಎನ್ನುವುದು ಸಾಂಸ್ಕೃತಿಕ ಅಸ್ಮಿತೆ. ಆದರೆ ತಮಿಳುನಾಡಿನಲ್ಲಿ ಇಂತಹ ಸಾಂಸ್ಕೃತಿಕ ಗುರುತಿಸುವಿಕೆಯನ್ನೇ ಮರೆಮಾಚಲಾಗುತ್ತಿದೆ. ಇದರ ವಿರುದ್ಧ ದೊಡ್ಡಮಟ್ಟದ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ತಮಳಿಸೈ ಸೌಂದರ್ ರಾಜನ್ ಪ್ರತಿಪಾದಿಸಿದ್ದರು.


there is a clash between kamal haasan and bjp over whether the chola king raja raja was a hindu or a christian
ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್


ರಾಜ್ಯಪಾಲೆ ಮಾತಿಗೆ ತಮಿಳು ನಿರ್ದೇಶಕ ಕಿಡಿ


ಬಳಿಕ ಮಾತನಾಡಿದ ತಮಿಳು ಚಿತ್ರ ನಿರ್ದೇಶಕ ವೆಟ್ರಿಮಾರನ್ ನಮ್ಮ ಐಡೆಂಟಿಟಿಯನ್ನು ನಮ್ಮಿದ ಕಿತ್ತುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದರು. ತಿರುವಳ್ಳುವರ್ ಮತ್ತು ರಾಜರಾಜ ಚೋಳನನ್ನು ಹಿಂದೂ ಎಂದು ಬಿಂಬಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದು ಆರೋಪಿಸಿ, ಚರ್ಚೆಗೆ ಮತ್ತಷ್ಟು ತುಪ್ಪು ಸುರಿದಿದ್ದರು.


there is a clash between kamal haasan and bjp over whether the chola king raja raja was a hindu or a christian
ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ವೆಟ್ರಿಮಾರನ್


ಇದನ್ನೂ ಓದಿ: PS1-Kamal Hassan: ಚೋಳರ ಕಾಲದಲ್ಲಿ ಹಿಂದು ಧರ್ಮವೇ ಇರಲಿಲ್ಲ ಎಂದ ನಟ ಕಮಲ್ ಹಾಸನ್!


ಕಮಲ್ ಹಾಸನ್ ಹೇಳಿದ್ದೇನು?


ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟ ಕಮಲ್ ಹಾಸನ್, ನಿರ್ದೇಶಕ ವೆಟ್ರಿಮಾರನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ ರಾಜ ಚೋಳನ್ ಅವಧಿಯಲ್ಲಿ ಹಿಂದೂ ಧರ್ಮ ಎಂದು ಕರೆಯುವ ಯಾವುದೇ ಹೆಸರು ಇರಲಿಲ್ಲ.  ವೈನವಂ, ಶಿವಂ ಮತ್ತು ಸಮಾನಂಗಳಿದ್ದವು ಮತ್ತು ಬ್ರಿಟಿಷರೇ ಹಿಂದೂ ಪದವನ್ನು ಸೃಷ್ಟಿಸಿದರು. ಅವರಿಗೆ ಏನು ಹೇಳಬೇಕೆಂದು ತಿಳಿಯದ ಕಾರಣ ಅವರು ತುತ್ತುಕುಡಿಯನ್ನು ಟುಟಿಕೋರಿನ್ ಆಗಿ ಬದಲಾಯಿಸಿದರು ಎಂದು ಹೇಳಿದ್ದಾರೆ.


there is a clash between kamal haasan and bjp over whether the chola king raja raja was a hindu or a christian
ತಮಿಳುನಾಡು ಬಿಜೆಪಿ ನಾಯಕ ಎಚ್‌, ರಾಜ


ಕಮಲ್ ಹಾಸನ್ ಹೇಳಿಕೆಗೆ ಬಿಜೆಪಿ ಕಿಡಿ ಕಿಡಿ


ಇನ್ನು ಕಮಲ್ ಹಾಸನ್ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಕಮಲ್ ಹಾಸನ್ ಹಾಗೂ ವೆಟ್ರಿಮಾರನ್ ಹೇಳಿಕೆಗೆ ಬಿಜೆಪಿ ಮುಖಂಡ ಹೆಚ್ ರಾಜಾ ತಿರುಗೇಟು ನೀಡಿದ್ದಾರೆ.  ರಾಜ ರಾಜ ಚೋಳನ್ ಹಿಂದೂ ರಾಜನೇ ಆಗಿದ್ದ. ನಾನು ವೆಟ್ರಿ ಮಾರನ್ ಅವರಂತೆ ಇತಿಹಾಸವನ್ನು ಚೆನ್ನಾಗಿ ತಿಳಿದಿಲ್ಲ. ಆದರೆ, ಅವರು ರಾಜ ರಾಜ ಚೋಳನ್ ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ಸೂಚಿಸಲಿ, ರಾಜ ರಾಜ ಚೋಳ ಅವರು ತಮ್ಮನ್ನು ಶಿವಪಾದ ಶೇಖರನ್ ಎಂದು ಕರೆದುಕೊಂಡಿದ್ದರು. ಆಗ ಆತ ಹಿಂದೂ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Gyanvapi Case: ಜ್ಞಾನವಾಪಿ ಪರಿಸರದಲ್ಲಿ ಹಿಂದೂಯೇತರರ ಪ್ರವೇಶ ಪ್ರಕರಣದ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ


ಇದೇ ವಿಚಾರವಾಗಿ ಬಿಸಿ ಬಿಸಿ ಚರ್ಚೆ


ಅಕ್ಟೋಬರ್ 1ರಂದು ತಮಿಳುನಾಡಲ್ಲಿ ನಡೆದ ವಿಧುತಲೈ ಚಿರುತೈಗಲ್ ಕಚ್ಚಿ ಪಕ್ಷದ ಮುಖಂಡ ತಿರುಮಾವಲವನ್ ಅವರ 60ನೇ ಜನ್ಮದಿನ ಸಮಾರಂಭದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆಯಾಯಿತು. ಇದರ ಹಿಂದಿನ ದಿನವಷ್ಟೇ ಮಣಿರತ್ನಂ ನಿರ್ದೇಶಿಸಿದ ಬಹುತಾರಾಗಣದ ಪೊನ್ನಿಯನ್ ಸೆಲ್ವನ್-1 ಚಿತ್ರ ಬಿಡುಗಡೆಯಾಗಿತ್ತು. ಇದೀಗ ಚೋಳರು ಯಾರು? ರಾಜ ರಾಜ ಚೋಳನ ಧರ್ಮ ಯಾವುದು ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

Published by:Annappa Achari
First published: