ಚೀನಾ ಸೈನಿಕರು ಲಡಾಖ್​ನಲ್ಲಿ ಒಳನುಸುಳಿಲ್ಲ; ಸೇನಾ ಮುಖ್ಯಸ್ಥ ಬಿಪಿನ್ ರಾವತ್​ ಸ್ಪಷ್ಟನೆ

ಭಾರತ ಮತ್ತು ಚೀನಾ ವಿವಾದಿತ ಗಡಿ ಪ್ರದೇಶವನ್ನು ಹಂಚಿಕೊಂಡಿದೆ. ಎರಡು ದೇಶಗಳು ತಮ್ಮ ಸೈನಿಕರನ್ನು ಡೋಕ್ಲಾಮ್​ ಪ್ರದೇಶದಲ್ಲಿ 2017ರಂದು 73ದಿನ ನಿಯೋಜನೆಗೊಳಿಸಿದ್ದವು.

HR Ramesh | news18
Updated:July 13, 2019, 2:44 PM IST
ಚೀನಾ ಸೈನಿಕರು ಲಡಾಖ್​ನಲ್ಲಿ ಒಳನುಸುಳಿಲ್ಲ; ಸೇನಾ ಮುಖ್ಯಸ್ಥ ಬಿಪಿನ್ ರಾವತ್​ ಸ್ಪಷ್ಟನೆ
ಸೇನಾ ಮುಖ್ಯಸ್ಥ ಜನರಲ್ ಬಿಪಿನ್​ ರಾವತ್​​​​​​
  • News18
  • Last Updated: July 13, 2019, 2:44 PM IST
  • Share this:
ನವದೆಹಲಿ: ಲಡಾಖ್​ನ ಡೆಮ್ಚೊಕ್​ ವಲಯದಲ್ಲಿ ಚೀನಾ ಸೈನಿಕರು ಒಳನುಸುಳುತ್ತಿಲ್ಲ ಎಂದು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್​ ಶನಿವಾರ ಸ್ಪಷ್ಟಪಡಿಸಿದರು.

ಜುಲೈ 6ರಂದು ದಲೈ ಲಾಮಾ ಜನ್ಮದಿನದಂದು ಟಿಬೆಟಿಯನ್ನರು ಧ್ವಜಾರೋಹಣ ಮಾಡಿದ ಬಳಿಕ ಚೀನಾದ ಸೈನಿಕರು ಕಳೆದ ಲೈನ್​ ಆಫ್ ಆಕ್ಚುಲ್​ ಕಂಟ್ರೋಲ್​ (ಎಲ್​ಎಸಿ) ಗಡಿ ಒಳನುಸುಳಿದ್ದಾರೆ ಎಂಬ ವರದಿ ಬಿತ್ತರವಾದ ಬಳಿಕ ಸೇನೆಯ ಮುಖ್ಯಸ್ಥರು ಈ ಸ್ಪಷ್ಟನೆ ನೀಡಿದ್ದಾರೆ.

ಚೀನಾದ ಸೈನಿಕರು ಎಲ್​ಎಸಿ ಬಳಿ ಬಂದು ಗಸ್ತು ತಿರುಗಿದರೆ ನಾವು ಅವರನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತೇವೆ. ಆದರೆ, ಅದೇ ವೇಳೆ ಸ್ಥಳೀಯರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಡೆಮ್ಚೋಕ್​ ವಲಯದಲ್ಲಿ ನಮ್ಮ ಟಿಬಿಟಿಯನ್ನರು ನಮ್ಮದೇ ಸ್ಥಳದಲ್ಲಿ ಸಂಭ್ರಮಾಚರಿಸುತ್ತಿದ್ದರು. ಇದೇ ವೇಳೆ ಇಲ್ಲಿ ಏನು ನಡೆಯುತ್ತಿದೆ ಎಂದು ನೋಡಲು ಚೀನಿ ಸೈನಿಕರು ಬಂದಿದ್ದಾರೆ. ಆದರೆ, ಅವರು ಒಳನುಸುಳಿಲ್ಲ. ಎಲ್ಲವೂ ಯಥಾಸ್ಥಿತಿಯಂತೆ ಇದೆ ಎಂದು ಬಿಪಿನ್ ರಾವತ್ ತಿಳಿಸಿದರು.

ಇದನ್ನು ಓದಿ: ಮುಲಾಜು ನೋಡದೇ ಭಾರತೀಯ ಸೇನೆ ಮೇಲೆ ನಿರಂತರ ಪ್ರಹಾರ ಮಾಡಿ: ಅಲ್-ಖೈದಾ ಮುಖ್ಯಸ್ಥ ಕರೆ

ಭಾರತ ಮತ್ತು ಚೀನಾ ವಿವಾದಿತ ಗಡಿ ಪ್ರದೇಶವನ್ನು ಹಂಚಿಕೊಂಡಿದೆ. ಎರಡು ದೇಶಗಳು ತಮ್ಮ ಸೈನಿಕರನ್ನು ಡೋಕ್ಲಾಮ್​ ಪ್ರದೇಶದಲ್ಲಿ 2017ರಂದು 73ದಿನ ನಿಯೋಜನೆಗೊಳಿಸಿದ್ದವು.

 

First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ