ಸುಪ್ರೀಂ ‘ಹಂಗಾಮಿ ಸಿಜೆಐ’ ಹಾಗೆಯೆ ಸಿಬಿಐ ‘ಹಂಗಾಮಿ ನಿರ್ದೇಶಕ’ರಿಗೂ ಅರ್ಥವಿಲ್ಲ: ​ವರ್ಮಾ ಕೌಂಟರ್​​​

ನಿರ್ದೇಶಕರ ಕಡ್ಡಾಯ ರಜೆ ಹಾಗೂ ಹಂಗಾಮಿ ನಿರ್ದೇಶಕರ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯರಾತ್ರಿ ತೆಗೆದುಕೊಂಡ ನಿರ್ಧಾರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ರಜೆ ಮೇಲೆ ಇರುವ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

Ganesh Nachikethu
Updated:December 6, 2018, 4:01 PM IST
ಸುಪ್ರೀಂ ‘ಹಂಗಾಮಿ ಸಿಜೆಐ’ ಹಾಗೆಯೆ ಸಿಬಿಐ ‘ಹಂಗಾಮಿ ನಿರ್ದೇಶಕ’ರಿಗೂ ಅರ್ಥವಿಲ್ಲ: ​ವರ್ಮಾ ಕೌಂಟರ್​​​
ಅಲೋಕ್​​
Ganesh Nachikethu
Updated: December 6, 2018, 4:01 PM IST
ನವದೆಹಲಿ(ಡಿ.06): ಸುಪ್ರೀಂಕೋರ್ಟ್​ನಲ್ಲಿ ಹೇಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ಅರ್ಥವಿಲ್ಲವೋ, ಹಾಗೆಯೇ ಕೇಂದ್ರ ತನಿಖಾ ದಳ(ಸಿಬಿಐ) ಸಂಸ್ಥೆಗೂ ಹಂಗಾಮಿ ನಿರ್ದೇಶಕರ ನೇಮಕ ಮಾಡುವುದರಿಂದ ಯಾವುದೇ ಅರ್ಥವಿಲ್ಲ ಎಂದು ಸಿಬಿಐ ನಿರ್ದೇಶಕ ಅಲೋಕ್​​ ಕುಮಾರ್​ ವರ್ಮಾ ಉನ್ನತ ನ್ಯಾಯಲಯಕ್ಕೆ ತಿಳಿಸಿದ್ದಾರೆ. ಅಲ್ಲದೇ ಹಂಗಾಮಿ ನಿರ್ದೇಶಕ ನೇಮಕಕ್ಕೆ ಕಾನೂನಿನಲ್ಲಿಯೂ ಯಾವುದೇ ರೀತಿಯ ಅವಕಾಶವಿಲ್ಲ ಎಂದು ಸುಪ್ರೀಂಗೆ ವರ್ಮಾರ ಪರ ವಕೀಲರು ಹೇಳಿದ್ದಾರೆ ಎನ್ನಲಾಗಿದೆ.

ಅಲೋಕ್​​ ಕುಮಾರ್​​ ವರ್ಮಾರ ಪರವಾಗಿ ಹಿರಿಯ ವಕೀಲ ಫಾಲಿ ಎಸ್​​ ನಾರಿಮನ್​ ಅವರು ಸುಪ್ರೀಂಕೋರ್ಟ್​​ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ವಾದ ಮಂಡಿಸಿದ ಅವರು, ಸಿಬಿಐ ಸಂಸ್ಥೆಗೆ ಹಂಗಾಮಿ ನಿರ್ದೇಶಕರ ನೇಮಕಕ್ಕೆ ಯಾವುದೇ ಅವಕಾಶವಿಲ್ಲ. ಜೊತೆಗೆ ಅಲೋಕ್​​ ವರ್ಮಾರ ಅಧಿಕಾರದ ಅವಧಿಗೆ ಮುನ್ನವೇ ಕಡ್ಡಾಯ ರಜೆ ಮೇಲೆ ಮನೆಗೆ ಕಳಿಸುವುದು ಕಾನೂನುಬಾಹಿರ, ಅಕ್ಷಮ್ಯ ಅಪರಾಧ ಎಂದು ವಾದ ಮಂಡಿಸಿದ್ದಾರೆ.

ಇದೇ ವೇಳೆ ಸುಪ್ರೀಂಕೋರ್ಟ್​​ಗೆ ಕೇಂದ್ರ ನೀಡಿರುವ ಉತ್ತರದ ಬಗ್ಗೆ ಪ್ರತಿಕ್ರಿಯಿಸಿದ ವಕೀಲರು, ಸರ್ಕಾರ ತುಂಬಾ ಚೆನ್ನಾಗಿ ನಾಟಕ ಪ್ರದರ್ಶಿಸುತ್ತಿದೆ. ಅಲೋಕ್​ರನ್ನು ಸಿಬಿಐ ನಿರ್ದೇಶಕ ಎಂದು ಕರೆಯಲಾಗುತ್ತದೆ. ಇನ್ನೊಂದೆಡೆ ವರ್ಗಾವಣೆ ಮಾಡದೆಯೂ ತನ್ನ ಕಚೇರಿಗೆ ಬೀಗ ಹಾಕಿ ಎಲ್ಲಾ ಕಾರ್ಯಗಳನ್ನು ನಿಲ್ಲಿಸಲಾಗಿದೆ. ಅವರ ತನಿಖೆ ಸರಿಯಾದ ನಿಟ್ಟಿನಲ್ಲಿ ನಡೆಯಬೇಕಾದರೇ, ಅಲೋಕ್​​ರನ್ನು ವರ್ಗಾವಣೆ ಮಾಡಬೇಕಿತ್ತು. ಕಡ್ಡಾಯ ರಜೆ ಮೇಲೆ ಮನೆಗೆ ಕಳಿಸುವುದಲ್ಲ ಎಂದು ತ್ರಿಸದಸ್ಯ ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ಡಿ.22ಕ್ಕೆ ಸಂಪುಟ ವಿಸ್ತರಣೆ ಇಲ್ಲ; ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದ ಹಿರಿಯ ನಾಯಕರು

ಈ ಹಿಂದೆ ತಮ್ಮನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಅಲೋಕ್​​ ವರ್ಮಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಈ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯೂ ನಡೆಯಿತು.ನೇಮಕ ಮಾಡುವ ಅಧಿಕಾರ ಇರುವವರಿಗೆ ವಜಾ ಮಾಡುವ ಅಥವಾ ಕಿತ್ತು ಹಾಕುವ ಅಧಿಕಾರವೂ ಇರುತ್ತದೆ. ಅಲೋಕ್ ವರ್ಮಾ ವಿರುದ್ಧ ಏನೇ ಮಾಡಬೇಕು ಎಂದಿದ್ದರು ಆಯ್ಕೆ ಸಮಿತಿ ಮುಂದೆ ಹೋಗಬೇಕಾಗಿತ್ತು.

ಆದರೆ, ನೇರವಾಗಿ ಕೇಂದ್ರ ಸರ್ಕಾರವೇ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದೆ. ಇಂದು ಅಲೋಕ್​ ವರ್ಮಾಗೆ ಎದುರಾಗಿರುವ ಸನ್ನಿವೇಶ ನಾಳೆ ಸಿಎಜಿ ಮತ್ತು ಸಿವಿಸಿಗೂ ಎದುರಾಗಬಹುದು ಎಂದು ಹಿರಿಯ ವಕೀಲ ಕಪಿಲ್ ಸಿಬಾಲ್​ ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡಿಸಿದ್ದರು. ಈ ವೇಳೆ ಸ್ಪಷ್ಟನೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶಿಸಿತು. ಇದೀಗ ಸ್ಪಷ್ಟನೆ ಕೇಂದ್ರ ನೀಡಿದ್ದು, ತನಿಖೆ ವಿಚಾರವಾಗಿ ಮನೆಗೆ ಕಳಿಸಲಾಗಿತ್ತು ಎಂದು ಹೇಳಿದೆ.

ಇದನ್ನೂ ಓದಿ: ಹಿರಿಯ ನಾಯಕರ ಬಂಡಾಯಕ್ಕೆ ಬೆದರಿದ ಮೈತ್ರಿ ಸರ್ಕಾರ; ಎಂ.ಬಿ ಪಾಟೀಲ್​ ಮನವೊಲಿಕೆಗೆ ಡಿಕೆಶಿ ಯತ್ನ
Loading...

ಏನಿದು ವಿವಾದ?: ಸಿಬಿಐ ಮುಖ್ಯಸ್ಥ ಹಾಗೂ ಉಪಮುಖ್ಯಸ್ಥರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನೂ ಕೇಂದ್ರ ಸರ್ಕಾರ ರಾತ್ರೋರಾತ್ರಿ ಕಡ್ಡಾಯ ರಜೆ ಮೇಲೆ ಕಳುಹಿಸಿ, ಸಿಬಿಐಗೆ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್​ ರಾವ್ ಅವರನ್ನು ನೇಮಿಸಿದೆ. ಸಿಬಿಐ ನಿರ್ದೇಶಕರ ಕಡ್ಡಾಯ ರಜೆ ಹಾಗೂ ಹಂಗಾಮಿ ನಿರ್ದೇಶಕರ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯರಾತ್ರಿ ತೆಗೆದುಕೊಂಡ ನಿರ್ಧಾರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ರಜೆ ಮೇಲೆ ಇರುವ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

ಬಳಿಕ ಸುಪ್ರೀಂಕೋರ್ಟ್​​ನ ಮುಖ್ಯನ್ಯಾಯಮೂರ್ತಿ ರಂಜನ್​ ಗೋಗೊಯ್​ ನೇತೃತ್ವದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿ ಸಿವಿಸಿ ಎರಡು ವಾರಗಳೊಳಗೆ ಈ ಕುರಿತು ವರದಿ ಸಲ್ಲಿಸುವಂತೆ ಆದೇಶ ನೀಡಿತ್ತು.  ಸಿಬಿಐ ಮುಖ್ಯಸ್ಥರನ್ನು ತೆಗೆದುಹಾಕಿದ ಕ್ರಮ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು​ ದೇಶಾದ್ಯಂತ ರಾಹುಲ್​ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದವು.

---------------------
ಅಭಿಮಾನಿಯ ಆಸೆ ಈಡೇರಿಸಿದ ಗೋಲ್ಡನ್ ಸ್ಟಾರ್‌ ಗಣೇಶ್
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...