ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ; ಮನುಷ್ಯನಾಗಿರುವುದೇ ಆತನ ಅಪರಾಧ: ಹರ್ಭಜನ್ ಸಿಂಗ್

ಈ ವಿಡಿಯೋದಲ್ಲಿ ವಿದ್ಯಾರ್ಥಿಯು, ನಾನು ಜಾಮಿಯಾ ಸೆಂಟರ್ ಲೈಬ್ರರಿಯಲ್ಲಿ ಓದುತ್ತಿದ್ದೆ. ಈ ವೇಳೆ ಗ್ರಂಥಾಲಯಕ್ಕೆ ಆಗಮಿಸಿದ 20-25 ಪೊಲೀಸರು ಲಾಠಿಚಾರ್ಜ್ ಮಾಡಿದರು.

news18-kannada
Updated:December 20, 2019, 6:28 PM IST
ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ; ಮನುಷ್ಯನಾಗಿರುವುದೇ ಆತನ ಅಪರಾಧ: ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್
  • Share this:
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಕಾವು ಪಡೆದುಕೊಳುತ್ತಿದೆ. ದೇಶದ ಹಲವೆಡೆ ಸೆಕ್ಷನ್ 144 ಜಾರಿ ಮಾಡಿದ್ದರೂ ಕೂಡಾ, ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಅಸ್ಸಾಂನಲ್ಲಿ ಪ್ರಾರಂಭವಾದ ಪೌರತ್ವದ ಕಿಚ್ಚು, ದಿಲ್ಲಿ,ಕೋಲ್ಕತ್ತಾ, ಮುಂಬೈ, ಹೈದರಾಬಾದ್ ಸೇರಿದಂತೆ ಬೆಂಗಳೂರು-ಮಂಗಳೂರಿಗೂ ವ್ಯಾಪಿಸಿದೆ. ಇದರ ನಡುವೆ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಪರವಾಗಿ ಮಾಜಿ ಕ್ರಿಕೆಟಿಗ ಹರ್ಜಭನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಜಾಮಿಯಾ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮಿನಾಜುದ್ದೀನ್ ಪೊಲೀಸ್ ದೌರ್ಜನ್ಯದಿಂದ ತನ್ನ ಒಂದು ಕಣ್ಣು ಕಳೆದುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ 'ಮನುಷ್ಯನಾಗಿರುವುದೇ ಆತನ ಅಪರಾಧ' ಎಂದು ಟ್ವೀಟ್ ಮಾಡಿದ್ದಾರೆ.

''ಇವನ ಅಪರಾಧವೆಂದರೆ ಅವನು ಮನುಷ್ಯನಾಗಿರುವುದು.. ಅವನೇನು ತಪ್ಪು ಮಾಡಿದ್ದಾನೆ ಎಂಬುದನ್ನು ಕೇಳಿದರೆ ದುಃಖವಾಗುತ್ತದೆ. ದೆಹಲಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕೂಡ ತುಂಬಾ ದುಃಖವಿದೆ. ಇದೆಲ್ಲವನ್ನು ನಿಲ್ಲಿಸಬೇಕಾಗಿದೆ'' ಎಂಬಾರ್ಥದಲ್ಲಿ ಹರ್ಭಜನ್ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.


ಈ ವಿಡಿಯೋದಲ್ಲಿ ವಿದ್ಯಾರ್ಥಿಯು, ನಾನು ಜಾಮಿಯಾ ಸೆಂಟರ್ ಲೈಬ್ರರಿಯಲ್ಲಿ ಓದುತ್ತಿದ್ದೆ. ಈ ವೇಳೆ ಗ್ರಂಥಾಲಯಕ್ಕೆ ಆಗಮಿಸಿದ 20-25 ಪೊಲೀಸರು ಲಾಠಿಚಾರ್ಜ್ ಮಾಡಿದರು. ಆ ವೇಳೆ ನನ್ನ ಕೈಗಳಿಗೆ ಮತ್ತು ಕಣ್ಣಿನ ಭಾಗಕ್ಕೆ ಹೊಡೆದರು. ಆ ಬಳಿಕ ಗಾಯಗೊಂಡಿದ್ದ ನನ್ನನ್ನು ಗೆಳೆಯರು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿಂದ ವೈದ್ಯರು ಐ ಸೆಂಟರ್​ಗೆ ಹೋಗುವಂತೆ ತಿಳಿಸಿದರು. ಪರೀಕ್ಷಿಸಿದ ಡಾಕ್ಟರ್​, ನನ್ನ ಕಣ್ಣಿನ ದೃಷ್ಟಿ ಹೋಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ದೃಷ್ಟಿಯನ್ನು ಮರಳಿ ಪಡೆಯಲಾಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಮಿನಾಜುದ್ದೀನ್ ಹೇಳಿದ್ದಾರೆ.

ಇದನ್ನೂ ಓದಿ: ಕೆ.ಜಿ.ಎಫ್​ಗೆ ಒಂದು ವರ್ಷ: ಚಿತ್ರರಂಗದಲ್ಲಿ ರಾಕಿ ಭಾಯ್​ ಸೃಷ್ಟಿಸಿದ್ದ ಹವಾ ಒಂದಾ ಎರಡಾ..!

ಹಾಗೆಯೇ ಮತ್ತೊಂದು ಟ್ವೀಟ್​ನಲ್ಲಿ "ನಾನು ಹೇಳುತ್ತಿರುವುದು ಎಲ್ಲರೂ ಶಾಂತಿಯನ್ನು ಕಾಪಾಡಿ ಎಂದು..ಇದು ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಬೇರೆ ಮಾರ್ಗಗಳಿವೆ ಎಂಬ ಖಾತ್ರಿ ನನಗಿದೆ. ಇದು ಎಲ್ಲಾ ವಿದ್ಯಾರ್ಥಿಗಳು ಮತ್ತು ಪೊಲೀಸ್ ಮತ್ತು ಅಧಿಕಾರಿಗಳಿಗೆ ನನ್ನ ವಿನಂತಿಯಾಗಿದೆ" ಎಂದು ಹರ್ಭಜನ್ ತಿಳಿಸಿದ್ದಾರೆ.


ಗುರುವಾರ ಬೆಳಿಗ್ಗೆ ರಾಷ್ಟ್ರದ ರಾಜಧಾನಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತಿಭಟನೆಯಿಂದ ಭಾರಿ ಸಂಚಾರ ದಟ್ಟಣೆಗೆ ಕಾರಣವಾಗಿತ್ತು. ಅಲ್ಲದೆ ಹಲವೆಡೆ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗುತ್ತಿದೆ. ಅದರಲ್ಲೂ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್​ಗೆ ಇಬ್ಬರು ಬಲಿಯಾಗಿದ್ದರು.

 

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

First published:December 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ