Lok Sabha Elections 2019 ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 17 ಸ್ಥಾನಗಳು ಸಹ ದಕ್ಕದು; ಮಮತಾ ಬ್ಯಾನರ್ಜಿ ಭವಿಷ್ಯ

ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯು ಉತ್ತರಪ್ರದೇಶದಲ್ಲಿ 72 ಸ್ಥಾನ ಗಳಿಸಿತ್ತು. ಕೇಂದ್ರದಲ್ಲಿ ಆ ಪಕ್ಷ ಅಧಿಕಾರ ಹಿಡಿಯಲು ಇದು ಸಹಕಾರಿಯಾಗಿತ್ತು. ಆದರೆ, ಈ ಬಾರಿ ಉತ್ತರಪ್ರದೇಶದಲ್ಲಿ ಬಿಜೆಪಿ 17 ಸ್ಥಾನಗಳನ್ನು ಗಳಿಸುವುದು ಸಹ ಕಷ್ಟವಿದೆ  ಎಂದು ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.

MAshok Kumar | news18
Updated:April 30, 2019, 9:43 AM IST
Lok Sabha Elections 2019 ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 17 ಸ್ಥಾನಗಳು ಸಹ ದಕ್ಕದು; ಮಮತಾ ಬ್ಯಾನರ್ಜಿ ಭವಿಷ್ಯ
ಮಮತಾ ಬ್ಯಾನರ್ಜಿ
  • News18
  • Last Updated: April 30, 2019, 9:43 AM IST
  • Share this:
ಕೋಲ್ಕತಾ (ಏ.30) : ಈ ಬಾರಿಯ ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಒಟ್ಟಾರೆ 17 ಸ್ಥಾನಗಳಲ್ಲೂ ಸಹ ಗೆಲುವು ಸಾಧಿಸುವುದು ಕಷ್ಟವಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.

ಸೋಮವಾರದ ನಾಲ್ಕನೇ ಹಂತದ ಚುನಾವಣೆ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿರುವ ದೀದಿ, “ಉತ್ತರಪ್ರದೇಶವನ್ನು ಗೆದ್ದವರು ಇಡೀ ದೇಶವನ್ನು ಗೆದ್ದಂತೆ ಎನ್ನಲಾಗುತ್ತದೆ. ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಯು ಉತ್ತರಪ್ರದೇಶದಲ್ಲಿ 72 ಸ್ಥಾನ ಗಳಿಸಿತ್ತು. ಕೇಂದ್ರದಲ್ಲಿ ಆ ಪಕ್ಷ ಅಧಿಕಾರ ಹಿಡಿಯಲು ಇದು ಸಹಕಾರಿಯಾಗಿತ್ತು. ಆದರೆ, ಈ ಬಾರಿ ಉತ್ತರಪ್ರದೇಶದಲ್ಲಿ ಬಿಜೆಪಿ 17 ಸ್ಥಾನಗಳನ್ನು ಗಳಿಸುವುದು ಸಹ ಕಷ್ಟವಿದೆ”  ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ; ಮೋದಿ, ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ವಿರುದ್ಧ ಇಂದು ವಿಚಾರಣೆ

"ಬಿಜೆಪಿಗೆ ವಿರುದ್ಧವಾಗಿ ಸ್ಥಳೀಯ ಪಕ್ಷಗಳಾದ ಬಿಎಸ್​ಪಿ ಹಾಗೂ ಎಸ್​ಪಿ ಮೈತ್ರಿ ಉತ್ತರಪ್ರದೇಶದಲ್ಲಿ ಬಲಿಷ್ಟವಾಗಿದೆ. ಈ ಮೈತ್ರಿ ಬಿಜೆಪಿಗೆ ದೊಡ್ಡ ಹೊಡೆತ ಕೊಡಲಿದ್ದು, ಬಹುಪಾಲು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅಲ್ಲದೆ ಕಾಂಗ್ರೆಸ್ ಪಕ್ಷವು 7 ರಿಂದ 8 ಸ್ಥಾನಗಳಲ್ಲಿ ಜಯಗಳಿಸಲಿದ್ದು, ಬಿಜೆಪಿ ಆಸೆಗೆ ತಣ್ಣೀರೆರಚಲಿವೆ" ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಅವರು, “ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವವರ ಭಾಷೆಯನ್ನು ಜನಸಾಮಾನ್ಯರು ಗಮನಿಸುತ್ತಿರುತ್ತಾರೆ. ಅವರ ಭಾಷೆಯನ್ನು ವರ್ತನೆಯನ್ನು ಅನುಕರಿಸುತ್ತಿರುತ್ತಾರೆ. ಹೀಗಾಗಿ ರಾಜಕೀಯ ಭಾಷಣಗಳನ್ನು ಮಾಡುವಾಗ ಪ್ರಧಾನಿಗಳು ತೀರಾ ಕೀಳುಭಾಷೆಯನ್ನು ಬಳಸಬಾರದು, ತಮ್ಮ ಭಾಷೆಯ ಮೇಲೆ ನಿಗಾ ವಹಿಸಬೇಕು” ಎಂದು ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ : ಕೊಲ್ಕತಾ ಹೈಡ್ರಾಮ; ಕೇಂದ್ರ ಸರ್ಕಾರದ ವಿರುದ್ಧ ಧರಣಿ ಕುಳಿತ ಸಿಎಂ ಮಮತಾ ಬ್ಯಾನರ್ಜಿ

80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಕಳೆದ ಬಾರಿ ಬಿಜೆಪಿ 70 ಹಾಗೂ ಅದರ ಮಿತ್ರಪಕ್ಷವಾದ ಆಪ್ನಾದಳ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದವು. ಪರಿಣಾಮ ಸ್ಥಳೀಯ ಪ್ರಾದೇಶಿಕ ಪಕ್ಷಗಳು ಹೇಳಹೆಸರಿಲ್ಲದಂತಾಗಿದ್ದವು. ಇದೇ ಕಾರಣಕ್ಕೆ ಈ ಬಾರಿ ಬಿಜೆಪಿಯನ್ನು ಮಣಿಸುವ ಸಲುವಾಗಿ ಉತ್ತರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಒಟ್ಟಾಗಿವೆ.
First published:April 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ