Thief: ಪ್ರೇಯಸಿಯರಿಗಾಗಿ ಖರ್ಚು ಮಾಡಲು ದುಬಾರಿ ಬೈಕ್​ನಲ್ಲಿ ಕಳ್ಳತನ.. ಕೊನೆಗೂ ಸಿಕ್ಕಿಬಿದ್ದ ಖದೀಮ!

Viral Story: ಪ್ರೀತಿಸುತ್ತಿದ್ದ ಇಬ್ಬರು ಹುಡುಗಿಯರಿಗಾಗಿ ಗಿಫ್ಟ್​ ಕೊಡಲು, ಅವರನ್ನು ಸಂತೋಷವಾಗಿರಿಸಲು ಕಳ್ಳತನ ಮಾಡುತ್ತಿದ್ದ. ಹೆಚ್ಚಾಗಿ ಉತ್ತರ ಪ್ರದೇಶದ ಗಡಿ ಭಾಗದ ಪ್ರದೇಶಗಳಲ್ಲಿ ಇತನ ಕೈ ಚಳಕ ಜೋರಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಫೋನ್ ಕದಿಯುವ (Phone Snatcher) ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದ ಹೈಟೆಕ್ ಕಳ್ಳನನ್ನು ಉತ್ತರ ಪ್ರದೇಶದ (Uttar Pradesh) ಪೊಲೀಸರು ಬಂಧಿಸಿದ್ದಾರೆ. ಗೆಳತಿಯರನ್ನು ಮೆಚ್ಚಿಸಿ ನೆಮ್ಮದಿಯ ಜೀವನ ನಡೆಸುವುದೊಂದೇ ಆತನ ಕೆಲಸವಾಗಿತ್ತು. ಆದರೆ ಈ ಹವ್ಯಾಸಗಳನ್ನು ಈಡೇರಿಸಲು ಕಳ್ಳತನದ ದಾರಿ ಹಿಡಿದಿದ್ದ ಆತ ಕೊನೆಗೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    100 ಫೋನ್ ಕಳ್ಳತನ

    ಕಳ್ಳನ ಹೆಸರು ಆದಿಲ್ ಮಲಿಕ್. 100ಕ್ಕೂ ಹೆಚ್ಚು ಫೋನ್ ಕದ್ದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಆರೋಪಿಗೆ ಒಬ್ಬರಲ್ಲ ಇಬ್ಬರು ಗೆಳತಿಯರಿರುವುದು  ಎಂದು ಪೊಲೀಸರೊಂದಿಗೆ ಹೇಳಿಕೊಂಡಿದ್ದಾನೆ. ಒಬ್ಬಾಕೆ ವೈದ್ಯರಾದರೆ, ಮತ್ತೊಬ್ಬಳು ದೊಡ್ಡ ಆಸ್ಪತ್ರೆಯಲ್ಲಿ ನರ್ಸ್‌ ಕೆಲಸವನ್ನು ನಿರ್ವಹಿಸುತ್ತಿದ್ದಳು. ಇಬ್ಬರು ಗೆಳತಿಯರಿಗೆ ದುಬಾರಿ ಉಡುಗೊರೆಗಳನ್ನು ಕೊಡಲು, ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಕೊಡಿಸಲು ಆದಿಲ್ ಕಳ್ಳತನದ ಮಾರ್ಗವನ್ನು ಆರಿಸಿಕೊಂಡಿದ್ದ. ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಸಂಪಾದಿಸಬೇಕೆಂದು ಹಠ ಹಿಡಿದಿದ್ದ, ಅದಕ್ಕಾಗಿ ಕಳ್ಳತನದ ದಾರಿ ಹಿಡಿದ ಆತನ ಫೋನ್​ಗಳನ್ನು ಕದಿಯುತ್ತಿದ್ದ.

    ಇದನ್ನು ಓದಿ: ಮದುವೆ ಮೆರವಣಿಗೆಯಿಂದ ಮಾರಣಹೋಮ; DJ Music ಅಬ್ಬರ ತಡೆಯಲಾರದೆ ಪ್ರಾಣ ಬಿಟ್ಟವು!

    ಪ್ರೀತಿಸುತ್ತಿದ್ದ ಇಬ್ಬರು ಹುಡುಗಿಯರಿಗಾಗಿ ಗಿಫ್ಟ್​ ಕೊಡಲು, ಅವರನ್ನು ಸಂತೋಷವಾಗಿರಿಸಲು ಕಳ್ಳತನ ಮಾಡುತ್ತಿದ್ದ. ಹೆಚ್ಚಾಗಿ ಉತ್ತರ ಪ್ರದೇಶದ ಗಡಿ ಭಾಗದ ಪ್ರದೇಶಗಳಲ್ಲಿ ಇತನ ಕೈ ಚಳಕ ಜೋರಿತ್ತು. ದುಬಾರಿ ಬೈಕ್​ ಮೂಲಕ ಹೋಗಿ ಕದಿಯುತ್ತಿದ್ದ. ಯಾವಾಗ ಪೊಲೀಸರಿಗೆ ಈತನ ಬಗ್ಗೆ ಮಾಹಿತಿ ಸಿಕ್ಕಿತು ಅಂದಿನಿಂದ ಆತನಿಗೆ ಬಲೆ ಬೀಸಿದ್ದರು. ಒಂದು ದಿನ ಆದಿಲ್ ಮಲಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದು ತಕ್ಷಣವೇ ಬಂಧಿಸಿದ್ದಾರೆ

    ಕಳೆದ 6 ತಿಂಗಳಿಂದ ಶಹದಾರ ಮತ್ತು ಈಶಾನ್ಯ ದೆಹಲಿ ಪ್ರದೇಶಗಳಲ್ಲಿ ನಿರಂತರವಾಗಿ ಫೋನ್ ಕಳ್ಳತನದ ವರದಿಗಳು ವರದಿಯಾಗುತ್ತಿದ್ದವು. ಬೈಕ್‌ನಲ್ಲಿ ಯಾರೋ ಕಳ್ಳರು ಈ ಕೃತ್ಯ ಎಸಗುತ್ತಿದ್ದರು ಎಂಬ ಮಾಹಿತಿ ಲಭಿಸಿತು. ಈ ಬಗ್ಗೆ ಪಿಸಿಆರ್ ಕರೆಗಳು ಬರುತ್ತಿತ್ತು. ಹಾಗಾಗಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಬಲೆ ಬೀಸಿದಾಗ ಆದಿಲ್ ಮಲಿಕ್ ಸಿಕ್ಕಿಬಿದ್ದಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಶಹದಾರ) ಆರ್ ಸತ್ಯಸುಂದರಂ ಹೇಳಿದ್ದಾರೆ.



    ಇದನ್ನು ಓದಿ: Village of Dolls: ಈ ಹಳ್ಳಿಯಲ್ಲಿ ಜನರಿಗಿಂತ ಗೊಂಬೆಗಳೇ ಹೆಚ್ಚು!

    ಕದ್ದ ಮೊಬೈಲ್​ ಮಾರಾಟ ಮಾಡುತ್ತಿದ್ದ ಕಳ್ಳ!

    ವಿಚಾರಣೆ ವೇಳೆ ಆರೋಪಿಯು ಕದ್ದ ಮೊಬೈಲ್‌ಗಳನ್ನು ದೆಹಲಿ ಮತ್ತು ಗಾಜಿಯಾಬಾದ್‌ನಲ್ಲಿ ಮಾರಾಟ ಮಾಡುತ್ತಿದ್ದ ಎಂದು ಹೇಳಿದ್ದಾನೆ. ಕದ್ದ ಫೋನ್ ಗಳನ್ನು ಐಎಂಇಐ ನಂಬರ್ ಟ್ಯಾಂಪರಿಂಗ್ ಮಾಡಿ ಮತ್ತೆ ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಳ್ಳತನವಷ್ಟೇ ಅಲ್ಲ ದಂಧೆ ನಡೆಸಲಾಗುತ್ತಿದ್ದು, ಇದೀಗ ಪೊಲೀಸರು ಅದನ್ನು ಭೇದಿಸಿದ್ದಾರೆ. ಆರೋಪಿಯಿಂದ ದೇಶಿ ನಿರ್ಮಿತ ಪಿಸ್ತೂಲ್ ಮತ್ತು ಜೀವಂತ ಕಾಟ್ರಿಡ್ಜ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
    Published by:Harshith AS
    First published: