Murder: ತಂಗಿಯನ್ನೇ Love ಮಾಡಿದನಾ ಈ ಅಣ್ಣ? ಪ್ರೀತಿ ವಿಷಯ ಗೊತ್ತಾಗಿ ಮನೆಯವರು ಮಾಡಿದ್ದೇನು?

ಪ್ರೀತಿ ಕುರುಡು ಅಂತಾರೆ, ಆದ್ರೆ ಅಣ್ಣ-ತಂಗಿ ಮಧ್ಯೆಯೇ ಪ್ರೀತಿ ಹುಟ್ಟಿದ್ರೆ ಅದಕ್ಕೆ ಏನೆನ್ನಬೇಕು? ಇಲ್ಲಿ ಆಗಿದ್ದೂ ಅದೇ. ಅವರಿಬ್ಬರು ಗೊತ್ತೋ, ಗೊತ್ತಿಲ್ಲದೆಯೋ ಪ್ರೀತಿಯಲ್ಲಿ ಬಿದ್ದು ಬಿಟ್ಟಿದ್ದರು. ಇದೀಗ ಅವರ ಮನೆಯವರಿಗೆ ಲವ್ ಮ್ಯಾಟರ್ ತಿಳಿದು, ನಡೆಯಬಾರದ್ದು ನಡೆದೇ ಹೋಗಿದೆ. ಈ ಸುದ್ದಿ ಕೇಳಿ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ,

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶ: ಅಣ್ಣ (Brother) ತಂಗಿ (Sister) ಅಂದರೆ ಅದೊಂತರಾ ಮಧುರ ಬಾಂಧವ್ಯ. ಅಣ್ಣನ ಒಳಿತಿಗಾಗಿ ಎಂತಾ ತ್ಯಾಗಕ್ಕೂ (Sacrifice) ತಂಗಿ ಸಿದ್ಧಳಾಗ್ತಾಳೆ. ತಂಗಿಯ ರಕ್ಷಣೆಗಾಗಿ (Protection) ಅಣ್ಣ ಎಂತದ್ದೇ ರಿಸ್ಕ್ (Risk) ತೆಗೆದುಕೊಳ್ಳಲು ರೆಡಿ (Ready) ಇರ್ತಾನೆ. ಆದರೆ ಇಲ್ಲಿ ಅಣ್ಣನೊಬ್ಬ ತಂಗಿ ವಿಚಾರಕ್ಕೆ ಜೀವಕ್ಕೆ ರಿಸ್ಕ್ ತಂದು ಕೊಂಡಿದ್ದಾನೆ. ಅದು ತಂಗಿಯನ್ನೇ ಪ್ರೀತಿಸಿದ (Love) ಕಾರಣಕ್ಕೆ. ಹೌದು ಇದು ಆಘಾತಕಾರಿ ವಿಚಾರ ಆಗಿದ್ದರೂ ನಿಜವಾಗಿ ನಡೆದಿರುವಂತದ್ದು. ಇಲ್ಲಿ ಅಣ್ಣನೆ ತನ್ನ ತಂಗಿಯನ್ನು ಪ್ರೀತಿಸಿದ್ದಾನೆ. ಬಳಿಕ ಮದುವೆವರೆಗೂ (Marriage) ಅವರ ಸಂಬಂಧ (Relationship) ಹೋಗಿದೆ. ಆಗ ಮನೆಯವರಿಗೆಲ್ಲ (Family) ಗೊತ್ತಾಗಿ ಬುದ್ಧಿ ಹೇಳಿದ್ದಾರೆ. ಆದರೆ ಆ ಅಣ್ಣ ತಂಗಿ ಯಾರ ಮಾತನ್ನೂ ಕೇಳಿಲ್ಲ. ಕೊನೆಗೆ ಅವರಿಬ್ಬರ ಹಠ, ಮನೆಯವರ ವಿರೋಧದಿಂದ ನಡೆಯಬಾರದ್ದು ನಡೆದು ಹೋಗೇ ಬಿಟ್ಟಿದೆ.

ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಯುವಕ ಸಾವು

ಉತ್ತರ ಪ್ರದೇಶದ ಮೀರತ್‌ನಲ್ಲಿ 25 ವರ್ಷದ ಯುವಕ ಶಹಬುದ್ದೀನ್ ಎಂಬಾತನ್ನು ಹೊಡೆದು ಸಾಯಿಸಲಾಗಿದೆ. ಈತ ಮೊಹಲ್ಲಾ ಧರ್ಮಪುರಿ ನಿವಾಸಿಯಾಗಿದ್ದು, ಥಳಿತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಿಸದೇ ಯುವಕ ಶಹಬುದ್ದೀನ್ ಮೃತಪಟ್ಟಿದ್ದಾನೆ.

ಕುಟುಂಬಸ್ಥರೇ ಯುವಕನನ್ನು ಹೊಡೆದು ಕೊಂದರು

 ಅಂದಹಾಗೆ ಮೃತ ಶಹಬುದ್ದೀನ್‌ನನ್ನು ಹೊಡೆದು ಕೊಂದಿದ್ದು ಬೇರೆ ಯಾರೋ ಅಲ್ಲ. ಅವರ ಕುಟುಂಬಸ್ಥರೇ ಮನಸ್ಸೋ ಇಚ್ಚೆ ಹೊಡೆದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಯುವಕ ಆಸ್ಪತ್ರೆ ಸೇರಿದ್ದ. ಆದರೆ ಚಿಕಿತ್ಸೆ ಫಲಿಸದೇ ಕೊನೆಗೂ ಕೊನೆಯುಸಿರೆಳೆದಿದ್ದಾನೆ.

ಪ್ರೀತಿಯ ವಿಚಾರವಾಗಿ ಯುವಕನ ಮೇಲೆ ಹಲ್ಲೆ

ಅಷ್ಟಕ್ಕೂ ಯುವಕ ಶಹಬುದ್ದೀನ್ ಕೊಲೆಗೆ ಕಾರಣ ಪ್ರೀತಿಯ ವಿಚಾರ ಎನ್ನೋದು ತಿಳಿದು ಬಂದಿದೆ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಾ ಇದ್ದ. ಇದಕ್ಕೆ ಎರಡೂ ಮನೆಯವರೂ ವಿರೋಧ ಮಾಡುತ್ತಿದ್ದರು. ಇದೇ ಕಾರಣಕ್ಕೆ ಆತನನ್ನು ಹೊಡೆದು ಕೊಲ್ಲಲಾಗಿದೆ.

ಇದನ್ನೂ ಓದಿ: Murder: ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡ್ತೀರಾ? ಮನೆಗೆ ಬಂದು ಗುಂಡು ಹಾರಿಸ್ತಾರೆ ಹುಷಾರ್!

ತಂಗಿಯನ್ನೇ ಪ್ರೀತಿಸುತ್ತಿದ್ದ ಯುವಕ

ಅಂದಹಾಗೆ ಈತ ಪ್ರೀತಿಸುತ್ತಾ ಇರುವುದು ಬೇರೆ ಯಾರನ್ನೋ ಅಲ್ಲ. ಸ್ವಂತ ಚಿಕ್ಕಪ್ಪನ ಮಗಳು ಅಂದರೆ ತಂಗಿಯನ್ನೇ  ಈ ಶಹಬುದ್ದೀನ್ ಪ್ರೀತಿಸುತ್ತಾ ಇದ್ದ. ಇನ್ನು ಆಘಾತಕಾರಿ ವಿಚಾರ ಅಂದ್ರೆ ಈಗಾಗಲೇ ಈತನಿಗೆ ಮದುವೆಯಾಗಿ ಹೆಂಡತಿಯೂ ಇದ್ದಳು. ಆದರೂ ಚಿಕ್ಕಪ್ಪನ ಮಗಳನ್ನು ಪ್ರೀತಿಸುತ್ತಾ ಇದ್ದ.

ಮದುವೆವರೆಗೂ ಮುಂದುವರೆದ ಅಣ್ಣ-ತಂಗಿ

ಶಹಬುದ್ದೀನ್ ಹಾಗೂ ಆತನ ಚಿಕ್ಕಪ್ಪನ ಮಗಳು ಒಬ್ಬರಿಗೊಬ್ಬರು ಪ್ರೀತಿಸುತ್ತಾ ಇದ್ದರು. ಬಳಿಕ ಮದುವೆ ಮಾಡಿಕೊಳ್ಳಲೂ ನಿರ್ಧರಿಸಿದ್ದರು. ಈ ವೇಳೆ ಎರಡೂ ಮನೆಯವರಿಗೆ ಇವರ ಪ್ರೀತಿಯ ವಿಚಾರ ಗೊತ್ತಾಗಿದೆ.

ಎರಡೂ ಮನೆಯವರಿಂದ ಪ್ರೀತಿಗೆ ವಿರೋಧ

ಅಣ್ಣ, ತಂಗಿಯ ಪ್ರೀತಿ ವಿಚಾರ ಎರಡೂ ಮನೆಯವರಿಗೆ ಗೊತ್ತಾಗಿದೆ. ಕೂಡಲೇ ಎರಡೂ ಮನೆಯವರು ವಿರೋಧ ಮಾಡಿದ್ದಾರೆ. ಈ ಪ್ರೀತಿಯನ್ನು ಇಲ್ಲಿಗೆ ಬಿಡುವಂತೆ ಇಬ್ಬರಿಗೂ ಬುದ್ಧಿ ಹೇಳಿದ್ದಾರೆ. ಆದರೂ ಕೇಳದೇ ಮದುವೆಯವರೆಗೂ ಮುಂದುವರೆದಿದ್ದಾರೆ.

ಕೆಲಸ ಮುಗಿಸಿ ಬರುತ್ತಿದ್ದವನ ಮೇಲೆ ಅಟ್ಯಾಕ್

ಯುವಕ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹುಡುಗಿಯ ಮನೆಯವರು ಆತನನ್ನು ತಡೆದಿದ್ದಾರೆ. ಆತನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಗಾಯದಿಂದ ನರಳುತ್ತಿದ್ದ ಶಹಬುದ್ದೀನ್‌ನ ಕುಟುಂಬದವರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದು ಅಲ್ಲಿಂದ ಮೀರತ್‌ಗೆ ಕಳುಹಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಯುವಕ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: Murder: ಗೆಳೆಯನ ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದವ ಹೆಣವಾದ! ಆ್ಯಕ್ಸಿಡೆಂಟ್ ನಾಟಕವಾಡಿದ್ದ ಸ್ನೇಹಿತರು ಅಂದರ್

 ಯುವಕನ ಸಾವಿನ ನಂತರ ಆರೋಪಿ ಪರಾರಿ

ಈ ಕುರಿತಂತೆ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರಿನ ಅನ್ವಯ ಬಾಲಕಿಯ ಕುಟುಂಬದ ಐವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಯುವಕನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಹಂತಕರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
Published by:Annappa Achari
First published: