18 ತಿಂಗಳ ಮಗುವಿಗೆ ಅಮಾನುಷವಾಗಿ ಹೊಡೆದ ತಾಯಿ: ವಿಡಿಯೋ ವೈರಲ್

ಮಹಿಳೆಯೊಬ್ಬಳು ತನ್ನ 18 ತಿಂಗಳ ಮಗುವಿಗೆ ಅಮಾನವೀಯವಾಗಿ ಹೊಡೆದಿದ್ದು, ಇದನ್ನು ಖುದ್ದು ಆಕೆಯೇ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತಾಯಿ ಮಕ್ಕಳ ಸಂಬಂಧ ಇಡೀ ಪ್ರಪಂಚದಲ್ಲಿಯೇ ಶ್ರೇಷ್ಠವಾದ ಸಂಬಂಧ. ಮಕ್ಕಳನ್ನು ಜತನದಿಂದ ಕಾಯುವುದು ತಾಯಿಯ ಕರ್ತವ್ಯ. ಆದರೆ ಇಲ್ಲೊಬ್ಬ ತಾಯಿ ತನ್ನ ಮಗುವಿನ ವಿಚಾರದಲ್ಲಿ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಮಹಿಳೆಯೊಬ್ಬಳು ತನ್ನ 18 ತಿಂಗಳ ಮಗುವಿಗೆ ಅಮಾನವೀಯವಾಗಿ ಹೊಡೆದಿದ್ದು, ಇದನ್ನು ಖುದ್ದು ಆಕೆಯೇ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಮಗುವಿಗೆ ಮನಬಂದಂತೆ ಥಳಿಸಿದ ನಿಷ್ಕರುಣಿ ತಾಯಿಯೇ ತುಳಸಿ. ವಲ್ಲಿಪುರಂನ ವಡಿವಜಗನ್ ನಾಲ್ಕು ವರ್ಷದ ಹಿಂದೆ 22 ವರ್ಷದ ತುಳಸಿಯನ್ನು ವಿವಾಹವಾಗಿದ್ದರು. ದಂಪತಿ ತಮಿಳುನಾಡಿನ ಮೋತ್ತೂರು ಗ್ರಾಮದಲ್ಲಿ ವಾಸವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

Rajasthan Man Kills Married Daughter For Eloping With Lover.
ಸಾಂದರ್ಭಿಕ ಚಿತ್ರ


ಆದಾಗ್ಯೂ, ವಡಿವಾಜಗನ್ ಮತ್ತು ತುಳಸಿಯು ಕ್ಷುಲ್ಲಕ ಕಾರಣಗಳಿಗೆ ಜಗಳ ಮಾಡುತ್ತಿದ್ದರು. ಕೊನೆಗೆ ವಡಿವಜಗನ್ ತುಳಸಿಯನ್ನು ಆಂಧ್ರಪ್ರದೇಶದಲ್ಲಿನ ತನ್ನ ತವರು ಮನೆಗೆ ಬಿಟ್ಟು ಬಂದರು.

ಇದನ್ನೂ ಓದಿ: ಪ್ರೀತಿಸಿದ ಹುಡುಗನ ಜತೆ ತವರೂರು ಶಿರ್ವದಲ್ಲಿ ಕಾಣಿಸಿಕೊಂಡ ಶುಭಾ ಪೂಂಜಾ..!

ತುಳಸಿಯ ಸಂಬಂಧಿಕರು ಆಕೆಯ ಮಗುವಿಗೆ ಹೊಡೆದಿರುವ ವಿಡಿಯೋವನ್ನು ತುಳಸಿಯ ಫೋನಿನಲ್ಲಿ ನೋಡಿದರು. ಈ ವಿಚಾರದ ಬಗ್ಗೆ ತಕ್ಷಣವೇ ಅವರು ವಡಿವಾಜಗನ್‌ಗೆ ಮಾಹಿತಿ ನೀಡಿದರು.

ತುಳಸಿಯು ತನ್ನ ಕೈಯನ್ನು ಮುಷ್ಟಿ ಕಟ್ಟಿ ಮನಬಂದಂತೆ ಹೊಡೆದಿದ್ದಾರೆ. 18 ತಿಂಗಳ ಆ ಮಗುವಿನಲ್ಲಿ ತಾಯಿಯ ಹೊಡೆತಕ್ಕೆ ಮೂಗು ಬಾಯಲ್ಲಿ ರಕ್ತಸ್ರಾವವಾಗಲು ಶುರುವಾಗಿದೆ. ಇಂತಹ ಹೃದಯ ವಿದ್ರಾವಕ ಘಟನೆಯನ್ನು ತನ್ನ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಾರೆ. ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ತುಳಸಿ ತನ್ನ ಮಗುವಿಗೆ ಆಗಾಗ ಹೊಡೆಯುತ್ತಿದ್ದಳು ಮತ್ತು ಅದನ್ನು ತನ್ನ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Drone Prathap: ಅಪೂರ್ವ ಸಂಗಮ: ತಮ್ಮ ಡ್ರೋನ್ ಪ್ರತಾಪನ ಭೇಟಿಯಾದ ಡ್ರೋನ್ ಪ್ರಥಮ್​..!

ಇನ್ನೊಂದು ವಿಡಿಯೋದಲ್ಲಿ, ತುಳಸಿಯು ಮಗುವಿನ ಕಾಲಿಗೆ ತನ್ನ ಮುಷ್ಟಿಯಿಂದ ಬಡಿಯುತ್ತಿರುವುದು ಕಂಡುಬಂದಿದೆ. ಇನ್ನೊಂದರಲ್ಲಿ ತನ್ನ ಮಗುವಿನ ಬೆನ್ನಿಗೆ ಕ್ರೂರವಾಗಿ ಹೊಡೆದ ಕಾರಣ ಮಗುವಿನ ಬೆನ್ನು ಸಂಪೂರ್ಣವಾಗಿ ಕೆಂಪೇರಿ ಹೋಗಿತ್ತು. ಮಗುವಿನ ಬೆನ್ನಿಗೆ ಹೊಡೆದ ಗಾಯದ ಗುರುತುಗಳು ವಿಡಿಯೋದಲ್ಲಿ ಕಂಡುಬಂದವು.

ತುಳಸಿಯು ಮಗುವಿನ ವಿಚಾರದಲ್ಲಿ ಕ್ರೂರವಾಗಿ ನಡೆದುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಿದ ತಂದೆ ವಡಿವಾಜಗನ್ ತಕ್ಷಣವೇ ಆಂಧ್ರಪ್ರದೇಶಕ್ಕೆ ಧಾವಿಸಿದರು. ಮಕ್ಕಳನ್ನು ತನ್ನೊಂದಿಗೆ ವಿಲ್ಲುಪುರಂಗೆ ಕರೆ ತಂದಿದ್ದಾರೆ.

ಈ ಮಧ್ಯೆ, ಮಗುವಿನ ಅಜ್ಜ ಗೋಪಾಲಕೃಷ್ಣನ್ ಅವರು ಮಗುವಿನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತಮಗೆ ತಿಳಿದಿಲ್ಲ. ಒಂದು ತಿಂಗಳ ಹಿಂದೆ ತುಳಸಿ ತನ್ನ ಮಗುವನ್ನು ಚಿಕಿತ್ಸೆಗಾಗಿ ಪುದುಚೇರಿಯ ಜಿಪ್ಮೆರ್ ಆಸ್ಪತ್ರೆಗೆ ಕರೆದೊಯ್ದಿದ್ದಳು ಎಂದು ಮಾತ್ರ ಗೊತ್ತಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Krishna Janmashtami: ರಿಷಭ್ ಶೆಟ್ಟಿ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ: ಇಲ್ಲಿವೆ ತುಂಟ ಕೃಷ್ಣ ಚಿತ್ರಗಳು

ತುಳಸಿ ತನ್ನ ಮಗುವಿಗೆ ನಿರ್ದಯವಾಗಿ ಥಳಿಸಿದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನೆಟ್ಟಿಗರು ತಾಯಿಯ ಕ್ರೂರತೆಯ ಬಗ್ಗೆ ಆಕ್ರೋಶ ಹೊರಹಾಕಿದರು ಮತ್ತು ಮಗುವಿನ ವಿಚಾರದಲ್ಲಿ ಕ್ರೌರ್ಯತೆ ಪ್ರದರ್ಶಿಸಿರುವ ತುಳಸಿಯ ಮೇಲೆ ಪೊಲೀಸ್ ಕ್ರಮ ಜರುಗಿಸಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ನಂತರ ತಮಿಳು ನಾಡು ಪೊಲೀಸರು ಈ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

Published by:Anitha E
First published: