ಕೊಟ್ಟಾಯಂ: ಮಳೆಗಾಲ ಶುರುವಾಗುತ್ತಿದ್ದಂತೆ ಕೆರೆಗಳು, ಬಾವಿಗಳು ತುಂಬಿ ತುಳುಕುತ್ತವೆ. ಅದೇ ಬೇಸಿಗೆ ಕಾಲ ಬರುತ್ತಿದ್ದಂತೆ ನಿಧಾನವಾಗಿ ನೀರಿನ ಮಟ್ಟ (Kerala) ಕಡಿಮೆಯಾಗಿ ಕೆಲವೇ ವಾರಗಳಲ್ಲಿ ಬಾವಿಗಳ ನೀರು (Water) ಬತ್ತಿ ಹೋಗುತ್ತವೆ. ಪರಿಣಾಮ ಆ ಬಾವಿಯ ನೀರಿಗೆ ಆಸರೆಯಾಗಿದ್ದವರು ಬರ ಅನುಭವಿಸುತ್ತಾರೆ. ಆದರೆ ಇಲ್ಲೊಂದು ಬಾವಿ ಮಾತ್ರ ಇದೆಲ್ಲಕ್ಕಿಂತಲೂ ಭಿನ್ನವಾಗಿದ್ದು, ಎಲ್ಲರಿಂದಲೂ ಮ್ಯಾಜಿಕಲ್ ಬಾವಿ (Magical Well) ಎಂದು ಕರೆಸಿಕೊಂಡಿದೆ.
ಹೌದು.. ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಈ ಬಾವಿ ನಿಗೂಢತೆಗೆ ಸಾಕ್ಷಿಯಾಗಿದ್ದು, ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಅಂದ ಹಾಗೆ ಈ ಬಾವಿಯಲ್ಲಿ ಯಾವ ಕಾಲಕ್ಕೂ ನೀರು ತಪ್ಪೋದಿಲ್ಲ. ಮಳೆಗಾಲ ಇರಲಿ, ಬೇಸಿಗೆ ಕಾಲ ಇರಲಿ ಬಾವಿ ತುಂಬಾ ನೀರು ಇರುತ್ತದೆ. ಇಡೀ ಊರಿಗೆ ಊರೇ ಬೇಸಿಗೆ ಕಾಲದಲ್ಲಿ ನೀರಿಲ್ಲದೆ ಪರಿತಪಿಸುತ್ತಿದ್ದರೂ ಕೂಡ ಈ ಬಾವಿಯಲ್ಲಿ ಇಡೀ ಊರಿಗೆ ಬೇಕಾಗುವಷ್ಟು ನೀರು ಇರುತ್ತದೆ. ಇದಕ್ಕಾಗಿಯೇ ಈ ಬಾವಿಗೆ ಎಲ್ಲರೂ ಮ್ಯಾಜಿಕಲ್ ಬಾವಿ ಅಂತಾನೂ ಕರೆಯುತ್ತಾರೆ. ಆದರೆ ಈ ಬಾವಿಯ ಮೂಲ ಹೆಸರು ಕಮಲ ನೀರಜಿ.
ಇದನ್ನೂ ಓದಿ: Viral Video: ಕಾರಿನ ಬಾನೆಟ್ ಮೇಲೆ ಬಿದ್ದ ಕಾನ್ಸ್ಟೇಬಲ್ 20 ಕಿಮೀ ಎಳೆದೊಯ್ದ ಯುವಕ! ಮೈನವಿರೇಳಿಸುವ ದೃಶ್ಯ ವೈರಲ್
500 ವರ್ಷಗಳ ಇತಿಹಾಸ
ಇತಿಹಾಸವನ್ನು ಕೆದಕಿದರೆ, ಸುಮಾರು 500 ವರ್ಷಗಳ ಹಿಂದೆ ಥೆಕ್ಕುಂಕುರ್ ರಾಜ ಮನೆತನದಲ್ಲಿ ಕಮಲ ನೀರಜಿ ಹೆಸರಿನ ಈ ಮ್ಯಾಜಿಕಲ್ ಬಾವಿಯನ್ನು ನಿರ್ಮಾಣ ಮಾಡಲಾಗಿತ್ತಂತೆ. ಅಂದಿನಿಂದ ಇಂದಿನತನಕ ಈ ಬಾವಿಯಲ್ಲಿ ನೀರು ತಪ್ಪಿಲ್ಲ. ಆ ಗ್ರಾಮದಲ್ಲಿ ಇರುವ ಮನೆಗಳಿಗೆ ಸರಿಯಾದ ನೀರು ಸಂಪರ್ಕ ಇಲ್ಲದೇ ಇರೋದ್ರಿಂದ ಸುಮಾರು 300 ಕುಟುಂಬಗಳಿಗೆ ಇದೇ ಬಾವಿಯಿಂದ ನೀರು ಸರಬರಾಜು ಆಗುತ್ತಿದೆ. ಪ್ರತಿನಿತ್ಯ ಅಷ್ಟೊಂದು ಕುಟುಂಬಗಳಿಗೆ ನೀರು ಕೊಡುತ್ತಿದ್ದರೂ ಕೂಡ ಜನರಿಗೆ ಯಾವುದೇ ಮೀಟರ್ ಗೇಜ್ ಇಲ್ಲ, ನೀರಿನ ತೆರಿಗೆಯೂ ಇಲ್ಲ. ಆ ಪ್ರದೇಶದ ವಾರ್ಡ್ ಸಮಿತಿಯು ತಂಕಮ್ಮ ಅವರನ್ನು ಬಾವಿ ನೋಡಿಕೊಳ್ಳಲು ನಿಯೋಜಿಸಿದ್ದು, ವಾರ್ಡಿನ ಪ್ರತಿ ಮನೆಯು ತಂಕಮ್ಮಗೆ ತಿಂಗಳಿಗೆ ಇಂತಿಷ್ಟು ಹಣವನ್ನು ನೀಡುತ್ತದೆ.
ಇದನ್ನೂ ಓದಿ: 6 Teachers Arrested: ಶಾಲಾ ಬಾಲಕರನ್ನು ಹಲವು ತಿಂಗಳಿಂದ ಲೈಂಗಿಕ ಕೃತ್ಯಕ್ಕೆ ಬಳಸಿದ 6 ಶಿಕ್ಷಕಿಯರ ಬಂಧನ!
ಇನ್ನು ಈ ಬೃಹತ್ ಬಾವಿಯು ಕೊಟ್ಟಾಯಂ ಕಾರ್ಪೊರೇಶನ್‌ನ ನಿಯಂತ್ರಣದಲ್ಲಿ ಇದ್ದು, ಆ ಭಾಗದ ವಾರ್ಡ್ ನಂ 40ರ ಗ್ರಾಮಸ್ಥರು ನಿಯಂತ್ರಿಣ ಮಾಡುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 6.30ಕ್ಕೆ ತಂಕಮ್ಮ ನೀರು ಬಿಡುತ್ತಾರೆ. ಕುನ್ನುಂಪುರಂ ಸೇರಿದಂತೆ ಆ ಭಾಗದ ವಿವಿಧ ಮನೆಗಳಿಗೆ ಬಾವಿಯ ನೀರು ಹರಿಯುತ್ತದೆ. ಒಂದು ಪ್ರದೇಶಕ್ಕೆ ನೀರು ಹರಿಸಿದ ನಂತರ ಮಧ್ಯಾಹ್ನದ ವೇಳೆಗೆ ಇತರೆ ಪ್ರದೇಶಗಳಿಗೆ ನೀರು ಹರಿಸುತ್ತಾರೆ. ಬಾವಿಯ ನೀರಿನ ಸೇವೆಯು ವಾರ್ಡ್ ವ್ಯಾಪ್ತಿಯಲ್ಲಿ ಮೂರು ಕಿಲೋಮೀಟರ್ ತನಕ ವಿಸ್ತರಿಸಿದೆ. ಈ ವಾರ್ಡ್‌ನ ಬಹುತೇಕ ಎಲ್ಲ ಮನೆಗಳು ಬಾವಿಯ ನೀರೇ ಪ್ರತಿನಿತ್ಯ ಉಪಯೋಗಿಸುತ್ತಾರೆ.
ಕೆಲ ವರ್ಷಗಳ ಹಿಂದೆ ಈ ಬಾವಿಯು ಪರಪನ್ನತ್ ಅರಮನೆಗೆ ಸೇರಿತ್ತು. 90ರ ದಶಕದಲ್ಲಿ ಅರಮನೆಯು ಬಾವಿಯಿಂದ ನೀರನ್ನು ಹರಿಸುವ ಅಧಿಕಾರವನ್ನು ನಟ್ಟಕೊಂ ಪಂಚಾಯತ್‌ಗೆ ಬಿಟ್ಟು ಕೊಟ್ಟಿತು. ಬಳಿಕ ಪಂಚಾಯಿತಿಯು ನಿಗಮದೊಂದಿಗೆ ವಿಲೀನಗೊಂಡಾಗ, ನಿಯಂತ್ರಣ ಅದರ ಸುಪರ್ದಿಗೆ ಬಂದಿತು. ಇನ್ನು ವಿಶೇಷ ಅಂದ್ರೆ ಈ ಬಾವಿಯ ಒಳಭಾಗವನ್ನು ತಾವರೆಯ 13 ದಳಗಳನ್ನು ಹೋಲುವಂತೆ ಕೆತ್ತಲಾಗಿದೆ. ನಿರ್ಮಾಣದ ಮೇಲೆ ಕೆಂಪು ಕಲ್ಲುಗಳಲ್ಲಿ ನಿರ್ಮಿಸಲಾಗಿದ್ದು, ಅದು ಅಪ್ರತಿಮ ಬಾಳಿಕೆ ನೀಡುತ್ತದೆ.
ತೊಂಬತ್ತರ ಬೇಸಿಗೆಯ ಯಾವುದೇ ಸುಡುವ ವಾತಾವರಣದಲ್ಲಿ, ಬಾವಿಯು ಎಂದಿಗೂ ಬತ್ತುವುದಿಲ್ಲ. ಇದು ಇಂದಿಗೂ ಎಲ್ಲರಿಗೂ ರಹಸ್ಯವಾಗಿ ಉಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ