Viral Video: ಶಾಸಕಿಯ ಕೆನ್ನೆಗೆ ಚಟಾರನೆ ಬಾರಿಸಿದ ಗಂಡ! ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ

ಬೆಂಗಳೂರಲ್ಲಿ ಶಾಸಕರೊಬ್ಬರು ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದನ್ನು ನೋಡಿದ್ದೀರಿ. ಆದರೆ ಅತ್ತ ಶಾಸಕಿಯೊಬ್ಬರಿಗೆ ಅವರ ಗಂಡನೇ ಥಳಿಸಿದ್ದಾನೆ. ಮನೆ ಗೇಟ್‌ ಬಳಿ ಜನರೆಲ್ಲರು ಇದ್ದಾಗಲೇ ಶಾಸಕಿಯ ಕೆನ್ನೆಗೆ ಆಕೆಯ ಪತಿ ಹೊಡೆದಿದ್ದಾನೆ! ಈ ವಿಡಿಯೋ ಈಗ ವೈರಲ್ ಆಗಿದ್ದು, ಶಾಸಕಿ ಪತಿಯ ವರ್ತನೆಗೆ ಮಹಿಳಾ ಆಯೋಗ ಗರಂ ಆಗಿದೆ.

ಎಎಪಿ ಶಾಸಕಿ ಬಲ್ಜಿಂದರ್ ಕೌರ್

ಎಎಪಿ ಶಾಸಕಿ ಬಲ್ಜಿಂದರ್ ಕೌರ್

  • Share this:
ಪಂಜಾಬ್: ಕರ್ನಾಟಕದ (Karnataka) ರಾಜಧಾನಿ ಬೆಂಗಳೂರಲ್ಲಿ (Bengaluru) ಆಡಳಿತ ಪಕ್ಷದ ಶಾಸಕರೊಬ್ಬರು (MLA) ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಯನ್ನು (Women) ಅವಾಚ್ಯವಾಗಿ ನಿಂದಿಸಿದ್ದನ್ನು ನೋಡಿದ್ದೀರಿ. ಆದರೆ ಅತ್ತ ಶಾಸಕಿಯೊಬ್ಬರಿಗೆ ಅವರ ಗಂಡನೆ (Husband) ಥಳಿಸಿದ್ದಾನೆ. ಮನೆ ಗೇಟ್‌ ಬಳಿ ಜನರೆಲ್ಲರು ಇದ್ದಾಗಲೇ ಶಾಸಕಿಯ ಕೆನ್ನೆಗೆ ಆಕೆಯ ಪತಿ ಹೊಡೆದಿದ್ದಾನೆ. ಅಂದಹಾಗೆ ಇದು ನಡೆದಿರುವುದು ಪಂಜಾಬ್ (Punjab) ರಾಜ್ಯದ ತಲವಂಡಿ ಸಾಬೋ ಎಂಬ ಪ್ರದೇಶದಲ್ಲಿ. ಅಲ್ಲಿನ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (Aam Aadmi Party) ಶಾಸಕಿ ಬಲ್ಜಿಂದರ್ ಕೌರ್ (MLA Baljinder Kaur) ಎಂಬುವ ಕೆನ್ನೆಗೆ ಅವರ ಪತಿ ಸುಖರಾಜ್ ಸಿಂಗ್ (Sukhraj Singh) ಎಂಬುವರು ಬಾರಿಸಿದ್ದಾರೆ. ಇದೀಗ ವಿಡಿಯೋ ವೈರಲ್ (Video Viral) ಆಗಿದ್ದು, ಶಾಸಕಿಯ ಪತಿ ವರ್ತನೆಗೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ಶಾಸಕಿಯ ಕೆನ್ನೆಗೆ ಬಾರಿಸಿದ ಪತಿ

ಪಂಜಾಬ್‌ನ ತಾಲ್ವಂಡಿ ಸಬೋ ವಿಧಾನಸಭಾ ಕ್ಷೇತ್ರದ ಎಎಪಿ ಶಾಸಕಿ ಬಲ್ಜಿಂದರ್ ಕೌರ್ ಅವರಿಗೆ ಅವರ ಪತಿ ಸುಖರಾಜ್ ಸಿಂಗ್ ಅವರು ಥಳಿಸಿದ್ದಾರೆ. ಎಎಪಿ ಮುಖಂಡರಾಗಿರುವ ಅವರ ಪತಿ ಸುಖರಾಜ್ ಸಿಂಗ್ ಹಾಗೂ ಶಾಸಕಿ ಬಲ್ಜಿಂದರ್ ಕೌರ್ ಮಧ್ಯೆ ಜಗಳವಾಗಿದೆ. ಇದು ತಾರಕಕ್ಕೆ ಹೋಗಿ, ಕೊನೆಗೆ ಜನರ ಎದುರೇ ಶಾಸಕಿಗೆ ಅವರ ಪತಿ ಕೆನ್ನೆ ಮೇಲೆ ಬಾರಿಸಿದ್ದಾರೆ.ಜನರ ಎದುರೇ ಶಾಸಕಿಗೆ ಪತಿಯಿಂದ ಕಪಾಳಮೋಕ್ಷ

ತಾಲ್ವಂಡಿ ಸಬೋದಲ್ಲಿನ ಅವರ ನಿವಾಸದ ಹೊರಭಾಗದಲ್ಲಿ ಗಂಡ, ಹೆಂಡತಿಗೆ ಜಗಳ ನಡೆದಿದೆ. ಪತಿ ಸುಖರಾಜ್ ಸಿಂಗ್ ಇದ್ದಕ್ಕಿದ್ದಂತೆ ಕೋಪದ ಭರದಲ್ಲಿ ಬಲ್ಜಿಂದರ್ ಕೌರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಇಬ್ಬರು ಇತರ ಜನರ ಸಮ್ಮುಖದಲ್ಲಿ ಜಗಳವಾಡಿದ್ದಾರೆ. ಬಳಿಕ ಕಪಾಳಮೋಕ್ಷ ಮಾಡುತ್ತಿದ್ದಂತೆ ಪತಿಯನ್ನು ಸ್ಥಳದಲ್ಲಿದ್ದ ಇತರರು ಎಳೆದೊಯ್ದಿದ್ದಾರೆ.

ಇದನ್ನೂ ಓದಿ: Assam: ಅವಧಿಗೂ ಮುನ್ನ ಸಿಜೇರಿಯನ್, ಭ್ರೂಣ ಬೆಳೆದಿಲ್ಲವೆಂದು ಹೊಲಿಗೆ, ಗರ್ಭಿಣಿ ಸ್ಥಿತಿ ಗಂಭೀರ!

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ವಿಡಿಯೋ

ಶಾಸಕಿಗೆ ಅವರ ಪತಿ ಕಪಾಳ ಮೋಕ್ಷ ಮಾಡುತ್ತಿರುವ ದೃಶ್ಯ ಅವರದ್ದೇ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 50 ಸೆಕೆಂಡುಗಳ ವೀಡಿಯೊ ಜುಲೈ 10ರ ದಿನಾಂಕದಂದು ರೆಕಾರ್ಡ್‌ ಆಗಿದ್ದಾಗಿ ತೋರಿಸುತ್ತಿದೆ. ಆದರೆ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ವೈರಲ್ ಆಗಿದೆ. ಇನ್ನು ಇದನ್ನು ನೋಡಿದ ನೆಟ್ಟಿಗರು ಶಾಸಕಿಯ ಪತಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ

ಇನ್ನು ಈ ಬಗ್ಗೆ ಶಾಸಕಿ ಬಲ್ಜಿಂದರ್ ಕೌರ್ ಅವರು ಪತಿ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ ಎನ್ನಲಾಗಿದೆ. ಆದರೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಪಂಜಾಬ್ ರಾಜ್ಯ ಮಹಿಳಾ ಆಯೋಗ ನಿರ್ಧರಿಸಿದೆ. ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ಸುದ್ದಿಗಾರರೊಂದಿಗೆ ಮಾತನಾಡಿ, "ನಾನು ಸಾಮಾಜಿಕ ಮಾಧ್ಯಮದಲ್ಲಿ ಬಲ್ಜಿಂದರ್ ಕೌರ್ ಅವರ ವೀಡಿಯೊವನ್ನು ನೋಡಿದ್ದೇನೆ. ಘಟನೆಯ ಬಗ್ಗೆ ನಾವು ಸ್ವಯಂಪ್ರೇರಿತವಾಗಿ ನೋಟಿಸ್ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕ ಸಮಸ್ಯೆಗಳನ್ನು ಎತ್ತುವ ಮಹಿಳೆಯೊಬ್ಬರು ಮನೆಯಲ್ಲಿ ಕಿರುಕುಳವನ್ನು ಎದುರಿಸುತ್ತಿರುವುದು ಬೇಸರ ತಂದಿದೆ" ಅಂತ ಹೇಳಿದ್ದಾರೆ.

ಇದನ್ನೂ ಓದಿ: Kamala Pujari: ಐಸಿಯುನಲ್ಲಿದ್ದವರ ಜೊತೆ ಹೀಗಾ ವರ್ತಿಸೋದು? ಪದ್ಮಶ್ರೀ ಪುರಸ್ಕೃತೆಗೆ ಇದೆಂಥಾ ಅಪಮಾನ?

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡದ ಆಮ್ ಆದ್ಮಿ ಪಾರ್ಟಿ

ಬಲ್ಜಿಂದರ್ ಕೌರ್ ಅವರು ತಲ್ವಾಂಡಿ ಸಾಬೊ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಲ್ಜಿಂದರ್ ಕೌರ್ 2019 ರಲ್ಲಿ ಆಮ್ ಆದ್ಮಿ ಪಾರ್ಟಿಯ ಮಜಾ ಪ್ರದೇಶದ ಯುವ ಘಟಕದ ಸಂಚಾಲಕ ಸುಖರಾಜ್ ಸಿಂಗ್ ಅವರನ್ನು ವಿವಾಹವಾದರು. ಅವರು ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾಗಿದ್ದಾರೆ ಮತ್ತು ಪಂಜಾಬ್‌ನಲ್ಲಿ ಪಕ್ಷದ ಮಹಿಳಾ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆಗೆ ಆಡಳಿತಾರೂಢ ಎಎಪಿ ಪ್ರಮುಖರು ನಿರಾಕರಿಸಿದ್ದಾರೆ.
Published by:Annappa Achari
First published: