ಜಿ 20 ಶೃಂಗಸಭೆಗೆ (G20 summit) ಆಗಮಿಸುವ ಅತಿಥಿಗಳನ್ನು (guests) ಸ್ವಾಗತಿಸಲು ತಾಜ್ ಮಹಲ್‌ನ (Taj Mahal) ವಿಐಪಿ ಗೇಟ್ ಬಳಿ ಹೊಸದಾಗಿ ನಿರ್ಮಿಸಲಾದ ವರ್ಟಿಕಲ್ ಗಾರ್ಡನ್ (vertical garden) ಹಾಗೂ ಸೆಲ್ಫಿ ಪಾಯಿಂಟ್ (selfie point) ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬರುವ ಅತಿಥಿಗಳನ್ನು ಸ್ವಾಗತಿಸುವ ನಿಟ್ಟಿನಲ್ಲಿ ಈ ಗಾರ್ಡನ್ ಅನ್ನು ನಿರ್ಮಿಸಲಾಗಿದ್ದು, ಇದೀಗ ಗಾರ್ಡನ್ ಹಾಗೂ ಸೆಲ್ಫಿ ಪಾಯಿಂಟ್ ಕುಸಿದು ಬಿದ್ದಿದೆ. ಅತಿಥಿಗಳು ಶುಕ್ರವಾರ ಸಂಜೆ ಆಗ್ರಾಗೆ (Agra) ಆಗಮಿಸಲಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
ಕೋತಿಗಳ ದಾಳಿಯಿಂದ ಗಾರ್ಡನ್ ಕುಸಿದಿದೆ
ಆಗ್ರಾ ವಿಮಾನ ನಿಲ್ದಾಣದಿಂದ ಆರಂಭಿಸಿ ತಾಜ್‌ಮಹಲ್‌ವರೆಗೆ ವಿಸ್ತರಿಸುವ ಮಾರ್ಗದ ಬೃಹತ್ ಕೂಲಂಕುಷ ಪರೀಕ್ಷೆಯನ್ನು ಆಡಳಿತ ವರ್ಗ ಕೈಗೊಂಡಿದೆ. ವರ್ಟಿಕಲ್ ಗಾರ್ಡನ್ ಹಾಗೂ ಸೆಲ್ಫಿ ಪಾಯಿಂಟ್ ಸರಕಾರದ ಸಂಪೂರ್ಣ ಬದಲಾವಣೆಯ ಭಾಗವಾಗಿತ್ತು ಎಂಬುದು ಇಲ್ಲಿ ಮಹತ್ವಪೂರ್ಣವಾದುದು. ಆಗ್ರಾ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಚಿರ್ಚಿತ್ ಗೌರ್ ತಿಳಿಸಿರುವಂತೆ ವರ್ಟಿಕಲ್ ಗಾರ್ಡನ್ ಕುಸಿತಗೊಂಡಿರುವುದಕ್ಕೆ ಕೋತಿಗಳ ದಾಳಿ ಕಾರಣವಾಗಿದೆ ಎಂದು ದೂಷಿಸಿದ್ದಾರೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಗಾರ್ಡನ್ ಹಾಗೂ ಸೆಲ್ಫಿ ಪಾಯಿಂಟ್ ಕುಸಿತದ ಸಮಯದಲ್ಲಿ ಯಾವುದೇ ಪ್ರವಾಸಿಗರು ಉಪಸ್ಥಿತರಿರಲಿಲ್ಲ ಇದ್ದಿದ್ದರೆ ಗಾರ್ಡನ್‌ನ ತೂಕದಿಂದಾಗಿ ಅಪಾರ ಪ್ರಾಣ ಹಾನಿ ಸಂಭವಿಸುತ್ತಿತ್ತು ಎಂಬುದಾಗಿ ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: Operation Moti: ಭಾರತೀಯ ಸೇನೆ, ಎನ್‌ಜಿಒ ಹೋರಾಟಕ್ಕೆ ಸಿಕ್ಕಿತು ಫಲ; 2 ವಾರಗಳ ಬಳಿಕ ಎದ್ದು ನಿಂತ 'ಮೋತಿ' ಆನೆ!
ಉಳಿದೆಡೆ ಅಳವಡಿಸಲಾದ ಗಾರ್ಡನ್ ಪರಿಶೀಲನೆ
ಗಾರ್ಡನ್‌ನ ದುರಸ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನ ಹಾನಿಯನ್ನು ತಡೆಯಲು ಯತ್ನಿಸುತ್ತಿರುವುದಾಗಿ ಚಿರ್ಚಿತ್ ಆಶ್ವಾಸನೆ ನೀಡಿದ್ದಾರೆ. ನಗರಗಳಾದ್ಯಂತ ವರ್ಟಿಕಲ್ ಗಾರ್ಡನ್‌ಗಳನ್ನು ನಿರ್ಮಿಸಿದ್ದು ಆಗ್ರಾದಲ್ಲಿ ಗಾರ್ಡನ್ ಕುಸಿತದ ಸಮಯದಲ್ಲಿ ಪ್ರವಾಸಿಗರು ಇರಲಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಮಾಧ್ಯಮದೊಂದಿಗೆ ಮಾತನಾಡಿದ ಆಗ್ರಾ ಟೂರಿಸ್ಟ್ ವೆಲ್ಫೇರ್ ಚೇಂಬರ್ ಕಾರ್ಯದರ್ಶಿ ವಿಶಾಲ್ ಶರ್ಮಾ, ಇದು ಅತ್ಯಂತ ದುಷ್ಪರಿಣಾಮಕಾರಿ ಘಟನೆಯಾಗಿದೆ ಎಂದು ತಿಳಿಸಿದ್ದಾರೆ. ಅತ್ಯಂತ ಗಂಭೀರ ವಿಷಯವಾಗಿರುವುದರಿಂದ ಕೂಡಲೇ ಅಧಿಕಾರಿಗಳು ಕಾರ್ಯತತ್ಪರವಾಗಬೇಕು ಹಾಗೂ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಮುಜುಗರ ಉಂಟುಮಾಡಿದೆ ಹಾಗೂ ಅವಮಾನಕರ ಘಟನೆ
ದೇಶಕ್ಕೆ ಭೇಟಿನೀಡುವ ಅತಿಥಿಗಳಿಗೆ ಗೌರವವನ್ನು ಸೂಚಿಸಬೇಕಾದ ವರ್ಟಿಕಲ್ ಗಾರ್ಡನ್ ಕುಸಿದು ಬಿದ್ದಿದ್ದು ಮುಜುಗರ ಹಾಗೂ ಅವಮಾನಕ್ಕೆ ಕಾರಣವಾಗಿದೆ ಎಂದು ವಿಶಾಲ್ ಶರ್ಮಾ ತಿಳಿಸಿದ್ದಾರೆ.
ಅಲಂಕಾರಕ್ಕೆ ಹೆಚ್ಚಿನ ಮೆರುಗು ನೀಡಿದ್ದ ಮುಖ್ಯ ಅಂಶವೇ ಕುಸಿದ್ದುಬಿದ್ದಿದ್ದು ಇದು ಇಂತಹ ಪ್ರಾಮುಖ್ಯವಾದ ಕಾರ್ಯಕ್ರಮಕ್ಕೆ ಶೋಭನೀಯವಲ್ಲ ಹಾಗೂ ಕಪ್ಪುಚುಕ್ಕೆಯಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಘಟನೆಯ ನಂತರ ಆಗ್ರಾದಲ್ಲಿ ಹೊಸದಾಗಿ ನಿರ್ಮಿಸಲಾದ ಎಲ್ಲಾ ವರ್ಟಿಕಲ್ ಗಾರ್ಡನ್ ಹಾಗೂ ಇನ್ನಿತರ ನಿರ್ಮಾಣಗಳನ್ನು ಪರಿಶೀಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ.
ಈ ಪ್ರದೇಶದಲ್ಲಿ ಏನಾದರೊಂದು ಘಟನೆಗಳು ನಡೆಯುತ್ತಲೇ ಇದ್ದು ಸಾರ್ವಜನಿಕ ಚರ್ಚೆಗೆ ಕಾರಣವಾಗುತ್ತಿರುತ್ತದೆ ಎಂದು ಕಾರ್ಯಕರ್ತರಾದ ಸಾಮಿ ತಿಳಿಸಿದ್ದಾರೆ.
ಚರಂಡಿ ವಾಸನೆ ತಡೆಯಲು ಟ್ರಂಪ್ ಸಲಹೆ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಾಕ್ಕೆ ಭೇಟಿ ನೀಡಿದಾಗ, ಹತ್ತಿರದ ಚರಂಡಿಯಿಂದ ಹೊರಬರುತ್ತಿದ್ದ ದುರ್ನಾತವನ್ನು ಹೇಗೆ ತಡೆಯುವುದು ಎಂಬುದಕ್ಕೆ ಸಲಹೆಗಳನ್ನು ನೀಡಿದ್ದರು ಎಂಬುದನ್ನು ಸಾಮಿ ನೆನಪಿಸಿಕೊಂಡಿದ್ದಾರೆ.
ಆದರೆ, ಆಡಳಿತ ವರ್ಗ ದುರ್ನಾತ ತಡೆಗಟ್ಟುವ ಸಲುವಾಗಿ ಹಲವಾರು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಚರಂಡಿಗಳ ದುರ್ನಾತವನ್ನು ತಡೆಯಲು ಸುತ್ತಲಿನ ಹೊಲಸು ಪ್ರದೇಶವನ್ನು ಅಲಂಕರಿಸಿದೆ ಎಂದು ತಿಳಿಸಿದ್ದಾರೆ.
ಅತಿಥಿಗಳ ಗಮನ ಸೆಳೆಯಲು ಗಾರ್ಡನ್ ನಿರ್ಮಾಣ
ಚರಂಡಿಗಳ ಹಾಗೂ ಸುತ್ತಲಿನ ಪ್ರದೇಶದ ನೋಟವನ್ನು ಮರೆಮಾಡುವ ಪ್ರಯತ್ನದಲ್ಲಿ ವರ್ಟಿಕಲ್ ಗಾರ್ಡನ್ ಅನ್ನು ನಿರ್ಮಸಲಾಯಿತು. ಭೇಟಿದಾರರ ಗಮನವನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಮಾಡಿರುವ ಹಲವಾರು ಬದಲಾವಣೆಗಳಲ್ಲಿ ಇದೂ ಒಂದು ಅವರು ತಿಳಿಸಿದ್ದಾರೆ. ಆಗ್ರಾದಲ್ಲಿನ ಪ್ರಮುಖ ರಸ್ತೆಗಳನ್ನು ಸುಗಮಗೊಳಿಸಲಾಗಿದೆ ಮತ್ತು ಭಾರತದ G-20 ಅಧ್ಯಕ್ಷ ಸ್ಥಾನಕ್ಕಾಗಿ ರಾಷ್ಟ್ರವ್ಯಾಪಿ ಮೂಲಸೌಕರ್ಯ ನವೀಕರಣದ ಭಾಗವಾಗಿ ಕಟ್ಟಡಗಳನ್ನು ಸ್ಥಾಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ