9ನೇ ತರಗತಿ ವಿದ್ಯಾರ್ಥಿನಿ ಆವಿಷ್ಕಾರ: ಸದ್ಯದಲ್ಲೇ ಮಾರುಕಟ್ಟೆಗೆ ಇಂಧನ-ಬ್ಯಾಟರಿ ಇಲ್ಲದೆ ಚಲಿಸುವ ವಾಹನ..!

ಇಂಧನ ಇಲ್ಲದೆ ವಾಹನ ಚಾಲನೆ ಸಾಧ್ಯ. ಅದು ಬ್ಯಾಟರಿಯಿಂದ. ಆದರೆ ಇವ್ಯಾವುದೂ ಇಲ್ಲದೆ ವಾಹನ ಚಲಿಸುವುದು ಸಾಧ್ಯ ಎಂದು 9ನೇ ತರಗತಿಯ ಬಾಲಕಿಯೊಬ್ಬಳು ಸಾಧಿಸಿ ತೋರಿಸಿದ್ದಾಳೆ. ಏನಿದು ಅಂತೀರಾ... ವರದಿ ಓದಿ ತಿಳಿಯುತ್ತೆ.

Anitha E | news18
Updated:February 12, 2019, 3:41 PM IST
9ನೇ ತರಗತಿ ವಿದ್ಯಾರ್ಥಿನಿ ಆವಿಷ್ಕಾರ: ಸದ್ಯದಲ್ಲೇ ಮಾರುಕಟ್ಟೆಗೆ ಇಂಧನ-ಬ್ಯಾಟರಿ ಇಲ್ಲದೆ ಚಲಿಸುವ ವಾಹನ..!
ಸಾಂದರ್ಭಿಕ ಚಿತ್ರ
Anitha E | news18
Updated: February 12, 2019, 3:41 PM IST
ಒಂದು ವಾಹನ ಮುಂದೆ ಹೋಗಲು ಪೆಟ್ರೋಲ್​, ಡೀಸೆಲ್​ ಅಥವಾ ಬ್ಯಾಟರಿ ಆದರೂ ಇರಲೇಬೇಕು. ಇವುಗಳಲ್ಲಿ ಯಾವುದೂ ಇಲ್ಲವೆಂದರೆ ಆ ವಾಹನ ನಿಲ್ಲಿಸಿದ ಸ್ಥಳದಿಂದ ಕದಲುವುದಿಲ್ಲ. ಆದರೆ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುಟ್ಟ ಬಾಲಕಿಗೆ ಇವೆಲ್ಲ ಇಲ್ಲದೆಯೇ ವಾಹನ ಚಲಿಸುವಂತೆ ಮಾಡುವುದು ಹೇಗೆ ಎಂಬ ಆಲೋಚನೆ ಬಂದಿತ್ತು.

ಇದನ್ನೂ ಓದಿ: Yajamana Trailer: ಅಭಿಮಾನಿಗಳೊಂದಿಗೆ 'ಯಜಮಾನ'ನ ಸಂಭ್ರಮಾಚರಣೆ..!

ಪೆದ್ದಪಲ್ಲಿ ಜಿಲ್ಲೆಯ ರಾಮಗೊಂಡಂನಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಗಿಡ್ಲ ರಜನಿ ಎಂಬ ಬಾಲಕಿಗೆ ಇಂತಹದೊಂದು ವಿಭಿನ್ನವಾಗಿ ಆಲೋಚನೆ ಬಂದಿತ್ತು. ಈ ವಿಷಯದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ ರಜನಿಗೆ ಕಡೆಗೂ ಯಶಸ್ಸು ದಕ್ಕಿದೆ.

ಹೌದು, ಪೆಟ್ರೋಲ್​, ಡೀಸೆಲ್​ ಇಲ್ಲದೆ ಚಲಿಸುವ ವಾಹನವನ್ನು ಕಂಡುಹಿಡಿಯುವುದು ರಜನಿಯ ಆಶಯ. ಅದರಂತೆ ವಾಹನ ಚಲಿಸಲು ಒಂದು ಶಕ್ತಿಯ ಅಗತ್ಯ ಇದೆ. ಅದಕ್ಕೆ ಒಂದು ಉಪಕರಣದ ಅಗತ್ಯವಿದೆ ಎಂದು ಅರಿತ ರಜನಿ, ಅದಕ್ಕಾಗಿ ಸಾಕಷ್ಟು ಸಮಯ ಪ್ರಯೋಗಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Yajamana Movie: ಟ್ರೆಂಡಿಂಗ್​ನಲ್ಲಿ ಪ್ರಥಮ ಸ್ಥಾನದಲ್ಲಿದೆ 'ಯಜಮಾನ'ನ ಆನೆ..!

ಕಡೆಗೂ ರಜನಿಯ ಪ್ರಯತ್ನ ಕೈಗೂಡಿದೆ. ಸೂರ್ಯನ ಕಿರಣಗಳು ಹಾಗೂ ಕಾಸ್ಮಿಕ್​ ಕಿರಣಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣ ಇದಾಗಿದೆ. 'ಅಯಾನ್​ ಪ್ರಪಲ್ಷನ್​ ಎಂಜಿನ್​ ಆ್ಯಂಡ್​ ಅಟ್ಮಾಸ್ಪಿರಿಕ್​ ಅಯಾನ್​ ಹಾರ್ವೆಸ್ಟಿಂಗ್​' ಎಂಬ ಉಪಕರಣವನ್ನು ಈ ಬಾಲಕಿ ಆವಿಷ್ಕರಿಸಿದ್ದಾಳೆ. ಇದು ಕೇವಲ ವಾಹವನ್ನು ಚಲಿಸುವಂತೆ ಮಾಡುವುದಲ್ಲದೆ ವಿದ್ಯುತ್​ ಅನ್ನೂ ಉತ್ಪಾದಿಸುತ್ತದೆ.

ರಜನಿಯ ಆವಿಷ್ಕಾರ ಶಾಲಾ ಉಪಾಧ್ಯಾಯರು ಸೇರಿದಂತೆ ಸಹ ವಿದ್ಯಾರ್ಥಿಗಳನ್ನೂ ಆಶ್ಚರ್ಯ ಚಿಕಿತರನ್ನಾಗಿಸಿದೆ. ಅಲ್ಲದೆ ಈ ಆವಿಷ್ಕರ ರಾಷ್ಟ್ರ ಮಟ್ಟದಲ್ಲಿ ನಡೆಯುವ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳಲಿದೆ. ದೆಹಲಿಯಲ್ಲಿ ಫೆ.13-15ರವರೆಗೆ ನಡೆಯಲಿರುವ ನ್ಯಾಷನಲ್​ ಇನ್ಸ್​ಸ್ಪೈರ್​ -ಮನಾಕ್​ ಮೇಳದಲ್ಲಿ ರಜನಿ ಆವಿಷ್ಕರಿಸಿರುವ ಈ ಉಪಕರಣ ಪ್ರದರ್ಶನಗೊಳ್ಳಲಿದೆ.
Loading...

ಇದನ್ನೂ ಓದಿ: ರಶ್ಮಿಕಾರನ್ನು ಅಪ್ಪಿಕೊಳ್ಳಬೇಕೆಂದು ಅಭಿಮಾನಿಯೊಬ್ಬರು ಬರೆದ ಪತ್ರ ವೈರಲ್​..!

ಪ್ರತಿಭೆಗೆ ವಯಸ್ಸಿನ ಅಡ್ಡಿ ಇಲ್ಲ. ಈ ವಯಸ್ಸಿಗೆ ಇಂತಹ ಸಾಧನೆ ಮಾಡಿರುವ ರಜನಿಗೆ ಸರ್ಕಾರದಿಂದ ಪೋತ್ಸಾಹ ಸಿಕ್ಕರೆ, ಯಾವ ಮಟ್ಟಕ್ಕೆ ಬೆಳೆಯಬಹುದು ಒಮ್ಮೆ ಆಲೋಚಿಸಿ. ಅದರಲ್ಲೂ ರಜನಿ ಆವಿಷ್ಕರಿಸಿರುವ ಈ ಉಪಕರಣ ಎಲ್ಲ ಪ್ರಯೋಗಗಳಲ್ಲೂ ಯಶಸ್ವಿಯಾಗಿ ಮಾರುಕಟ್ಟೆಗೆ ಬಂದರೆ ಸಾಕು, ಇಂಧನದ ಅಗತ್ಯವೇ ಇರುವುದಿಲ್ಲ. ​

PHOTOS: ಇದೇ ಶುಕ್ರವಾರ ತೆರೆಗಪ್ಪಳಿಸಲಿದೆ 'ಕೆಮಿಷ್ಟ್ರಿ ಆಫ್​ ಕರಿಯಪ್ಪ' ಸಿನಿಮಾ..!
First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ