ಸ್ವಗ್ರಾಮದಲ್ಲಿ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಅಂತ್ಯಕ್ರಿಯೆ; 25 ಲಕ್ಷ ಪರಿಹಾರ, ಮನೆ ಕಟ್ಟಿಕೊಳ್ಳಲು ಇಟ್ಟಿಗೆ ಘೋಷಿಸಿದ ಸರ್ಕಾರ

ಅತ್ಯಾಚಾರ ಆರೋಪಿಗಳು ಬೆಂಕಿ ಹಚ್ಚಿದ್ದರಿಂದ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಸಂತ್ರಸ್ತೆಯನ್ನು ಹೆಲಿಕಾಪ್ಟರ್​ ಮೂಲಕ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, 44 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇದ್ದ ಸಂತ್ರಸ್ತೆ ನೆನ್ನೆ ರಾತ್ರಿ ಕೊನೆಯುಸಿರೆಳೆದರು.

HR Ramesh | news18-kannada
Updated:December 8, 2019, 6:21 PM IST
ಸ್ವಗ್ರಾಮದಲ್ಲಿ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಅಂತ್ಯಕ್ರಿಯೆ; 25 ಲಕ್ಷ ಪರಿಹಾರ, ಮನೆ ಕಟ್ಟಿಕೊಳ್ಳಲು ಇಟ್ಟಿಗೆ ಘೋಷಿಸಿದ ಸರ್ಕಾರ
ಪ್ರಾತಿನಿಧಿಕ ಚಿತ್ರ
  • Share this:
ಲಕ್ನೋ: ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಮೇಲೆ ಆರೋಪಿಗಳು ಶನಿವಾರ ರಾತ್ರಿ ಬೆಂಕಿ ಹಚ್ಚಿದ್ದರಿಂದ ಮೃತಪಟ್ಟ 23 ವರ್ಷದ ಯುವತಿಯ ಅಂತಿಮ ವಿಧಿ ವಿಧಾನ ಇಂದು ಸ್ವಗ್ರಾಮದಲ್ಲಿ ನೆರವೇರಿತು.

ಸ್ಥಳಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಮೃತ ಯುವತಿಯ ಪೋಷಕರು ಆಗ್ರಹಿಸಿದ್ದರು. ಆ ಬಳಿಕ ಸರ್ಕಾರದ ಹಿರಿಯ ಅಧಿಕಾರಿಗಳು ಕುಟುಂಬದ ಸದಸ್ಯರೊಂದಿಗೆ ಸತತ ಎರಡು ಗಂಟೆಗಳ ಮಾತುಕತೆ ನಡೆಸಿ, ಅಂತ್ಯಕ್ರಿಯೆಗೆ ಮನವೊಸಿದರು. ಆನಂತರ ಪೋಷಕರು ಅಂತ್ಯಕ್ರಿಯೆ ನೆರವೇರಿಸಿದರು.

ಉತ್ತರ ಪ್ರದೇಶ ಸರ್ಕಾರ ಮೃತಳ ಕುಟುಂಬಕ್ಕೆ 25 ಲಕ್ಷ ಪರಿಹಾರ ಮತ್ತು ಮನೆ ಕಟ್ಟಿಕೊಳ್ಳಲು ಇಟ್ಟಿಗೆ ನೀಡುವುದಾಗಿ ಭರವಸೆ ನೀಡಿದೆ. ಜೊತೆಗೆ ಕುಟುಂಬಸ್ಥರ ಮೇಲೆ ಮತ್ತೆ ಇಂತಹ ದಾಳಿ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸುವುದಾಗಿ ಹೇಳಿದೆ. ಅಷ್ಟೇ ಅಲ್ಲದೇ, ಕುಟುಂಬಸ್ಥರ ಇತರೆ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಆಶ್ವಾಸನೆ ನೀಡಿದೆ.

ಅತ್ಯಾಚಾರ ಆರೋಪಿಗಳು ಬೆಂಕಿ ಹಚ್ಚಿದ್ದರಿಂದ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಸಂತ್ರಸ್ತೆಯನ್ನು ಹೆಲಿಕಾಪ್ಟರ್​ ಮೂಲಕ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, 44 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇದ್ದ ಸಂತ್ರಸ್ತೆ ನೆನ್ನೆ ರಾತ್ರಿ ಕೊನೆಯುಸಿರೆಳೆದರು. ಬಂಧನಕ್ಕೆ ಒಳಗಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಕಳೆದ ವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಇದನ್ನು ಓದಿ: ಅತ್ಯಾಚಾರ ನಡೆದ ಬಳಿಕ ಬಂದು ದೂರು ನೀಡು; ಪ್ರಕರಣ ದಾಖಲಿಸಲು ಬಂದ ಮಹಿಳೆಯೊಂದಿಗೆ ಪೊಲೀಸರ ವರ್ತನೆ
First published:December 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ