• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Spying Balloon: ಅಮೆರಿಕಾದಲ್ಲಿ ಹಾರಾಡ್ತಿದೆ ಚೀನಾದ ಬೇಹುಗಾರಿಕಾ ಬಲೂನ್! ಪತ್ತೆ ಹಚ್ಚಿದ ಪೆಂಟಗಾನ್

Spying Balloon: ಅಮೆರಿಕಾದಲ್ಲಿ ಹಾರಾಡ್ತಿದೆ ಚೀನಾದ ಬೇಹುಗಾರಿಕಾ ಬಲೂನ್! ಪತ್ತೆ ಹಚ್ಚಿದ ಪೆಂಟಗಾನ್

ಚೀನಾದ ಬೇಹುಗಾರಿಕಾ ಬಲೂನ್‌ ಅಮೆರಿಕಾದಲ್ಲಿ ಹಾರಾಟ

ಚೀನಾದ ಬೇಹುಗಾರಿಕಾ ಬಲೂನ್‌ ಅಮೆರಿಕಾದಲ್ಲಿ ಹಾರಾಟ

ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಕೂಡ ಈ ಅನಾಮಧೇಯ ಬಲೂನ್ ಹಾರಾಟವನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಿಲಿಟರಿ ಅಧಿಕಾರಿಗಳು ಜೋ ಬೈಡೆನ್ ಅವರ ಸೂಚನೆಯ ಮೇರೆಗೆ ಹೊಡೆದುರುಳಿಸಲು ಎದುರು ನೋಡುತ್ತಿದ್ದಾರೆ. ಒಂದು ವೇಳೆ ಆ ಬಲೂನ್‌ ಅನ್ನು ಹೊಡೆದು ಉರುಳಿಸಿದ್ದೇ ಆದಲ್ಲಿ ಜನರ ಪ್ರಾಣಕ್ಕೂ ಸಂಚಕಾರ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ವಾಷಿಂಗ್ಟನ್‌: ಚೀನಾ ಮತ್ತು ಅಮೆರಿಕಾ (China and America) ನಡುವಿನ ಶೀತಲ ಸಮರ (Cold War) ಇಂದು ನಿನ್ನೆಯದಲ್ಲ. ಎರಡು ರಾಷ್ಟ್ರಗಳ ನಡುವೆ ದಶಕಗಳ ಹಿಂದಿನಿಂದಲೂ ಕೋಲ್ಡ್‌ ವಾರ್‌ ನಡೆಯುತ್ತಲೇ ಬಂದಿದೆ. ಈ ಮಧ್ಯೆ ಚೀನಾ ದೇಶ ಅಮೆರಿಕಾದ ಮೇಲೆ ಬೇಹುಗಾರಿಕೆ (China Spying on America) ನಡೆಸುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಇಂತಹ ಅನುಮಾನ ಸೃಷ್ಟಿಯಾಗಲು ಕಾರಣ, ಚೀನಾದ ಬೇಹುಗಾರಿಕಾ ಬಲೂನ್ ಅಮೆರಿಕಾದಲ್ಲಿ ಹಾರಾಟ ನಡೆಸುತ್ತಿರುವುದು.


ಹೌದು.. ಚೀನಾದ ಬೇಹುಗಾರಿಕಾ ಬಲೂನ್‌ ಅಮೆರಿಕಾದಲ್ಲಿ ಹಾರಾಟ ನಡೆಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಯುಎಸ್‌ನ ರಕ್ಷಣಾ ಸಂಸ್ಥೆ ಪೆಂಟಗಾನ್‌ ಹೇಳಿದ್ದು, ಅಮೆರಿಕಾದ ಸೂಕ್ಷ್ಮ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ಚೀನಾ ಕಣ್ಗಾವಲು ಇಟ್ಟಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Rahul Gandhi: ರಷ್ಯಾದಂತೆ ಚೀನಾ ಭಾರತದ ಮೇಲೆ ದಾಳಿ ಮಾಡಬಹುದು! ಕಮಲ್ ಹಾಸನ್​ ಇಂಟರ್​ ವ್ಯೂನಲ್ಲಿ ರಾಹುಲ್ ಗಾಂಧಿ ಆತಂಕದ ಮಾತು


ವಾಯುವ್ಯ ಪ್ರದೇಶದ ಮೇಲೆ ಹಾರಾಟ


ಈ ಬಲೂನ್ ಅಮೆರಿಕಾದ ವಾಯುವ್ಯ ಪ್ರದೇಶದ ಮೇಲೆ ಹಾದು ಹೋಗಿದೆ ಎಂದು ಹೇಳಲಾಗಿದ್ದು, ಆ ಭಾಗದಲ್ಲಿ ಸೂಕ್ಷ್ಮ ವಾಯುನೆಲೆಗೆಳು ಮತ್ತು ಭೂಗತ ಸಿಸೋಸ್‌ನಲ್ಲಿ ಕಾರ್ಯತಂತ್ರದ ಕ್ಷಿಪಣಿಗಳಿವೆ, ಈ ಬಲೂನ್‌ನ ಉದ್ದೇಶವು ಕಣ್ಗಾವಲು ಆಗಿದೆ, ಮತ್ತು ಸದ್ಯ ಆ ಬಲೂನ್‌ ಹಾರಾಡುತ್ತಿರುವ ಮಾರ್ಗವು ಹಲವಾರು ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.


ಇದನ್ನೂ ಓದಿ: Explained: ಶಸ್ತ್ರಸಜ್ಜಿತ ರಷ್ಯಾದ ವಾಯುಪಡೆ ಉಕ್ರೇನ್‌ನಲ್ಲಿ ವಿಫಲವಾಗಿದ್ದೇಕೆ? ಇದರಿಂದ ಭಾರತದ ವಾಯುಪಡೆ ಕಲಿಯಬೇಕಾಗಿರುವುದೇನು?


ಬಲೂನ್ ಒಡೆದರೆ ಪ್ರಾಣಕ್ಕೆ ಸಂಚಕಾರ ಆಗುವ ಸಾಧ್ಯತೆ


ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಕೂಡ ಈ ಅನಾಮಧೇಯ ಬಲೂನ್ ಹಾರಾಟವನ್ನು ಗಂಭೀರವಾಗಿ ಪರಿಗಣಿಸಿದ್ದು, ಜೊತೆಗೆ ರಕ್ಷಣಾ ಕಾರ್ಯದರ್ಶಿ ಆಸ್ಟೀನ್ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಜೋ ಬೈಡೆನ್ ಅವರ ಸೂಚನೆಯ ಮೇರೆಗೆ ಬಲೂನ್‌ ಅನ್ನು ಹೊಡೆದುರುಳಿಸಲು ಎದುರು ನೋಡುತ್ತಿದ್ದಾರೆ. ಆ ಬಲೂನ್ ನಿಜಕ್ಕೂ ಬೇಹುಗಾರಿಕೆ ನಡೆಸುತ್ತಿದೆಯೇ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಆದರೆ ಒಂದು ವೇಳೆ ಆ ಬಲೂನ್‌ ಅನ್ನು ಹೊಡೆದು ಉರುಳಿಸಿದ್ದೇ ಆದಲ್ಲಿ ಹಲವು ಜನರ ಪ್ರಾಣಕ್ಕೂ ಸಂಚಕಾರ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಮೊಂಟಾನಾದಲ್ಲಿ ಪತ್ತೆಯಾದ ಅನಾಮಧೇಯ ಬಲೂನ್!


ಎರಡು ದಿನಗಳ ಹಿಂದೆ ಅಮೆರಿಕಾದ ವಾಯುಪ್ರದೇಶವನ್ನು ಅನಾಮಧೇಯ ಬಲೂನ್ ಪ್ರವೇಶಿಸಿದ್ದು, ಅದಕ್ಕೂ ಮೊದಲೇ ಅಮೆರಿಕಾದ ಗುಪ್ತಚರ ಇಲಾಖೆ ಆ ಬಲೂನ್ ಅನ್ನು ಪತ್ತೆ ಹಚ್ಚಿತ್ತು. ಮಾಲ್ಮ್‌ಸ್ಟ್ರೋಮ್ ಏರ್ ಫೋರ್ಸ್ ಬೇಸ್‌ನಲ್ಲಿರುವ ಮೂರು ಪರಮಾಣು ಕ್ಷಿಪಣಿ ಉಡಾವಣಾ ಸ್ಥಳಗಳಲ್ಲಿ ಒಂದಾದ ಮೊಂಟಾನಾದಲ್ಲಿ ಈ ಬಲೂನ್ ಪತ್ತೆಯಾಗಿದೆ.




ಅಮೆರಿಕಾದಲ್ಲಿ ಅನಾಮಧೇಯ ಬಲೂನ್ ಹಾರಾಟದ ಸುದ್ದಿ ಪ್ರಚಾರವಾಗುತ್ತಿದ್ದಂತೆ ಹಲವು ದೇಶಗಳು ಎಚ್ಚೆತ್ತುಕೊಂಡು, ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಅಲರ್ಟ್‌ ಆಗಿವೆ. ಇತ್ತ ಈ ಘಟನೆಯಿಂದ ಚೀನಾ ಮತ್ತು ಅಮೆರಿಕಾ ನಡುವೆ ಮತ್ತೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿದ್ದು,  ಪರಸ್ಪರ ಎರಡು ದೇಶಗಳ ಮಧ್ಯೆ ಮತ್ತೆ ಬೂದಿ ಮುಚ್ಚಿದ ಕೆಂಡದಂತೆ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಪರಸ್ಪರರ ಮಧ್ಯೆ ಯಾವುದೇ ಒಂದು ದೇಶ ಒಂಚೂರು ಕಾಲ್ಕೆದರಿ ಪ್ರಚೋದಿಸಿದರೂ ಕೂಡ ಇಬ್ಬರ ಮಧ್ಯೆ ದೊಡ್ಡ ಮಟ್ಟದಲ್ಲಿ ಯುದ್ಧದ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ಇದೆ ಎಂದು ವಿಷಯ ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು