Population: ಭಾರತ vs ಚೀನಾ; ಜನಸಂಖ್ಯೆಯಲ್ಲಿ ಯಾರು ಮುಂದೆ? ಯಾರು ಹಿಂದೆ?

ಇದೇ ವರ್ಷ ನವೆಂಬರ್ 15, 2022 ರಷ್ಟರಲ್ಲಿ ವಿಶ್ವದ ಜನಸಂಖ್ಯೆಯು 8-ಬಿಲಿಯನ್ ಗಡಿ ದಾಟಬಹುದು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜನಸಂಖ್ಯೆಯಲ್ಲಿ ಭಾರತವು (India) ಮುಂದಿನ ವರ್ಷ ಚೀನಾವನ್ನು ಹಿಂದೆ ಹಾಕಲಿದೆ ಎಂಬ ಆಘಾತಕಾರಿ ವಿಷಯವನ್ನು ವಿಶ್ವಸಂಸ್ಥೆಯು ಬಹಿರಂಗಪಡಿಸಿದೆ. ಇದೇ ಸೋಮವಾರ ವಿಶ್ವ ಜನಸಂಖ್ಯಾ ದಿನವಾದ್ದರಿಂದ (World Population Day) ವಿಶ್ವಸಂಸ್ಥೆಯು ಜನಸಂಖ್ಯಾ ಕುರಿತು ವರದಿ ನೀಡಿದೆ. ಈ ವರದಿಯಲ್ಲಿ ಇದೇ ವರ್ಷ ನವೆಂಬರ್ 15, 2022 ರಷ್ಟರಲ್ಲಿ ವಿಶ್ವದ ಜನಸಂಖ್ಯೆಯು 8-ಬಿಲಿಯನ್ ಗಡಿ ದಾಟಬಹುದು ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಜನಸಂಖ್ಯೆಯಲ್ಲಿ (Population) ಭಾರತ ಮತ್ತು ಚೀನಾ ಎರಡೂ ತಲಾ 1.4 ಬಿಲಿಯನ್‌ ಜನಸಂಖ್ಯೆಯನ್ನು ಹೊಂದಿವೆ. ವಿಶ್ವದಲ್ಲಿ ಚೀನಾ (China) ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೆ, ಭಾರತ ಎರಡನೇ ಸ್ಥಾನವನ್ನು ಹೊಂದಿದೆ.

ಭಾರತದ ಜನಸಂಖ್ಯೆ ಎಷ್ಟಿದೆ 
ಜಾಗತಿಕ ಮೀಟರ್‌ಗಳ ಪ್ರಕಾರ, ಜುಲೈ 11 ರಂದು ಭಾರತದ ಜನಸಂಖ್ಯೆಯು ಸುಮಾರು 1.408 ಬಿಲಿಯನ್‌ ಎಂದು ದಾಖಲಾಗಿದ್ದರೆ, ಚೀನಾದ ಜನಸಂಖ್ಯೆಯು 1.450 ಬಿಲಿಯನ್‌ಗಿಂತ ಹೆಚ್ಚಿದೆ ಎಂದು ವರದಿ ಆಗಿದೆ. ಅಂಕಿ-ಅಂಶಗಳ ಪ್ರಕಾರ ನೋಡುವುದಾದರೆ, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಮುಂಬೈ ಮತ್ತು ಅಮರಾವತಿಯು ಅತಿ ಕಡಿಮೆ ಜನಸಂಖ್ಯೆಯನ್ನು ಹೊದಿರುವ ನಗರ ಆಗಿದೆ.

ಭಾರತದಲ್ಲಿ 2022 ರಲ್ಲಿ ಅಂದ್ರೆ ಈ ವರ್ಷ ಇಲ್ಲಿ ಪುರುಷರ ಜೀವಿತಾವಧಿ 61 ವರ್ಷ ಮತ್ತು ಸ್ತ್ರೀಯರ ಜೀವಿತಾವಧಿ 64 ವರ್ಷಗಳು ಎಂದು ವಿಶ್ವಸಂಸ್ಥೆಯು ಅಂದಾಜಿನಲ್ಲಿ ಹೇಳಿದೆ. ಕಳೆದ 2020 ರಲ್ಲಿ, ವಿಶ್ವ ಬ್ಯಾಂಕ್ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಜೀವಿತಾವಧಿ 70 ವರ್ಷಗಳನ್ನು ಮುಟ್ಟಿತು. ಜಾಗತಿಕವಾಗಿ, ಜೀವಿತಾವಧಿಯು 2019 ರಲ್ಲಿ 72 ವರ್ಷಗಳನ್ನು ತಲುಪಿತು, 1990 ರಿಂದ ಅಂದರೆ ಸುಮಾರು 9 ವರ್ಷಗಳ ಸಮಯದ ನಂತರ 72 ವರ್ಷಗಳ ಜೀವಿತಾವಧಿಯನ್ನು ಮುಟ್ಟಿತು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಏನಿದೆ 
ಭಾರತದಲ್ಲಿ ಮಕ್ಕಳನ್ನು ಹೊಂದುವ ಅಥವಾ ಒಟ್ಟು ಫಲವತ್ತತೆ ದರ (TFR), ಅಥವಾ ಮಹಿಳೆಯು ತನ್ನ ಹೆರಿಗೆಯ ವರ್ಷಗಳ ಅಂತ್ಯದ ವೇಳೆಗೆ ಹೊಂದುವ ಮಕ್ಕಳ ಸರಾಸರಿ ಸಂಖ್ಯೆಯು ಹಂತ-ಹಂತವಾಗಿ ಇಳಿಮುಖವಾಗುತ್ತಿದೆ. 1992-93 ಮತ್ತು 2019-21ರ ನಡುವೆ TFR 3.4 ಮಕ್ಕಳಿಂದ 2.0 ಮಕ್ಕಳಿಗೆ (1.4 ಮಕ್ಕಳ ಇಳಿಕೆ) ಕಡಿಮೆಯಾಗಿದೆ ಎಂದು ಕಳೆದ ವರ್ಷದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಪಡಿಸಿದೆ.

ಇದನ್ನೂ ಓದಿ:  PSI Recruitment Scam: ಅಮೃತ್ ಪೌಲ್​ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಅವ್ರ ಡೈರಿಯಲ್ಲಿ ಏನಿದೆ ಹೇಳಿ- ಸಿದ್ದರಾಮಯ್ಯ

ವಿಶ್ವಸಂಸ್ಥೆಯು 2022 ರಲ್ಲಿ ಫಲವತ್ತತೆ ದರವನ್ನು 2.7 % ಎಂದು ಅಂದಾಜಿಸಿದೆ. ಇದರ ನಂತರ 2020 ರಲ್ಲಿ ಬಿಡುಗಡೆಯಾದ ಭಾರತ ಸರ್ಕಾರದ ವರದಿಯ ಪ್ರಕಾರ " ಒಟ್ಟು ಫಲವತ್ತತೆ ದರ (TFR) 2011-2015 ರ ಅವಧಿಯಿಂದ 2031-35 ರ ಅವಧಿಯವರೆಗೆ 2.37 % ರಿಂದ 1.73 % ಕ್ಕೆ ಇಳಿಯುವ ನಿರೀಕ್ಷೆಯಿದೆ." ಎಂದು ಹೇಳಿದೆ.

ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಜಾರಿಗೆ ತರುವ ನಿರೀಕ್ಷೆ
ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಜಾರಿಗೆ ತರುವ ನಿರೀಕ್ಷೆಯಿದೆ. ಈ ಮಸೂದೆಯನ್ನು 2019 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಪರಿಚಯಿಸಲಾಯಿತು. ಇದು "ಚಿಕ್ಕ ಕುಟುಂಬ" ಅಥವಾ “ದಂಪತಿಗಳು ಎರಡು ಮಕ್ಕಳನ್ನು ಮಾತ್ರ ಹೊಂದಬೇಕು” ಎಂಬ ಪರಿಕಲ್ಪನೆಯನ್ನು ವಿವರಿಸುತ್ತದೆ.

ಈ ಜನಸಂಖ್ಯೆಯ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಅಸ್ಸಾಂ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಈಗಾಗಲೇ ಕೆಲವು ನೀತಿ-ನಿಯಮಗಳನ್ನು ರೂಪಿಸಿವೆ. 2019 ರಲ್ಲಿ ಅಸ್ಸಾಂ ಕ್ಯಾಬಿನೆಟ್ ಸರ್ಕಾರಿ ಸೇವೆಯಲ್ಲಿ ಪ್ರವೇಶ ದೊರಕಬೇಕು ಮತ್ತು ಆ ಸೇವೆಯಲ್ಲಿ ಮುಂದುವರಿಯಬೇಕು ಎಂದಾದರೆ 'ಎರಡು ಮಕ್ಕಳ' ನಿಯಮ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಅನುಮೋದಿಸಿತು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಜನವರಿ 2021 ರಿಂದ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುವುದಿಲ್ಲ ಎಂದು ಅಸ್ಸಾಂ ಕ್ಯಾಬಿನೆಟ್ ಸ್ಪಷ್ಟವಾಗಿ ತನ್ನ ರಾಜ್ಯದ ಜನತೆಗೆ ತಿಳಿಸಿದೆ.

ಇದನ್ನೂ ಓದಿ: Peacocks: ಮನೆಯಲ್ಲಿ ನವಿಲು ಸಾಕಬಹುದೇ? ಸಾಕಿದ ಈ ವ್ಯಕ್ತಿಗೆ ಕೊನೆಗೂ ಏನಾಯ್ತು?

ವಿಶ್ವ ಸಂಸ್ಥೆಯು “2020 ರಲ್ಲಿ, ಜಾಗತಿಕ ಬೆಳವಣಿಗೆ ದರವನ್ನು 1950 ರಿಂದ ನೋಡುವುದಾದರೆ ಇದೇ ಮೊದಲ ಬಾರಿಗೆ ಪ್ರತಿ ವರ್ಷಕ್ಕೆ 1% ರಷ್ಟು ಕಡಿಮೆಯಾಗಿದೆ. ಹಾಗೆಯೇ ವಿಶ್ವದ ಜನಸಂಖ್ಯೆಯು 2080 ರ ದಶಕದ ಹೊತ್ತಿಗೆ ಸುಮಾರು 10.4 ಬಿಲಿಯನ್‌ಗಳಷ್ಟು ಹೆಚ್ಚಾಗುತ್ತದೆ” ಎಂದು ಹೇಳಿದೆ.
Published by:Ashwini Prabhu
First published: