News18 India World Cup 2019

ನಕ್ಸಲರ ಈ 2 ಪತ್ರಗಳಿಂದ ಬಯಲಾಗಿತ್ತು ಮೋದಿ- ಶಾ ಹತ್ಯೆಗೆ ರೂಪಿಸಿರುವ ತಂತ್ರ!: ಅದರಲ್ಲೇನಿತ್ತು?


Updated:August 29, 2018, 10:50 AM IST
ನಕ್ಸಲರ ಈ 2 ಪತ್ರಗಳಿಂದ ಬಯಲಾಗಿತ್ತು ಮೋದಿ- ಶಾ ಹತ್ಯೆಗೆ ರೂಪಿಸಿರುವ ತಂತ್ರ!: ಅದರಲ್ಲೇನಿತ್ತು?

Updated: August 29, 2018, 10:50 AM IST
ನ್ಯೂಸ್​ 18 ಕನ್ನಡ

ಮಹಾರಾಷ್ಟ್ರ(ಆ.29): ನಕ್ಸಲ್​ ನಾಯಕರಿಂದ ವಿನಿಮಯ ಮಾಡಿಕೊಳ್ಳಲಾದ ಎರಡು ಪತ್ರಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹತ್ಯೆಗೆ ನಡೆದಿದ್ದ ಸಂಚು ಬಹಿರಂಗಗೊಂಡಿತ್ತು. ಈ ಪತ್ರದಲ್ಲಿ ಪ್ರಧಾನಿ ಮೋದಿಯನ್ನು ಹೊರತುಪಡಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಗೃಹ ಮಂತ್ರಿ ರಾಜನಾಥ್​ ಸಿಂಗ್​ರವರ ಹತ್ಯೆಗೂ ಯೋಜನೆ ರೂಪಿಸಿದ್ದರೆಂಬ ವಿಚಾರ ಬಯಲಾಗಿದೆ. ಇದಾದ ಬಳಿಕವೇ ಪೊಲೀಸರು ಹಲವಅರು ರಅಜ್ಯಗಳಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು.

ಈವರೆಗೂ ನಕ್ಸಲರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆಂಬ ಆರೋಪದಡಿಯಲ್ಲಿ ಐವರು ವಿಚಾರವಾದಿಗಳನ್ನು ಬಂಧಿಸಲಾಗಿದೆ. 2016ರಲ್ಲಿ ಬರೆದ ಪತ್ರದಲ್ಲಿ ಮೋದಿ, ಅಮಿತ್​ ಶಾ ಹಾಗೂ ರಾಜನಾಥ್​ ಸಿಂಗ್​ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ನಕ್ಸಲರ ನಡುವೆ ವಿಚಾರ- ವಿಮರ್ಶೆ ನಡೆದಿತ್ತು ಎಂಬ ವಿಚಾರ ಬಯಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು 2017ರಲ್ಲಿ ಬರೆದ ಪತ್ರದಲ್ಲಿ ರೋಡ್​ ಶೋನಲ್ಲಿ ರಾಜೀವ್​ ಗಾಂಧಿಯನ್ನು ಹತ್ಯೆಗೈದ ಮಾದರಿಯಲ್ಲೇ ಪ್ರಧಾನಿ ಮೋದಿ ಮೇಲೂ ದಾಳಿ ನಡೆಸಬೇಕೆಂದು ಯೋಜನೆ ರೂಪಿಸಿರುವುದು ಬಹಿರಂಗವಾಗಿದೆ.

ರಕ್ಷಣಾ ಅಧಿಕಾರಿಯೊಬ್ಬರು ಮಾತನಾಡುತ್ತಾ ಎರಡನೇ ಪತ್ರವು "ಕಾಮ್ರೆಡ್​ ಪ್ರಕಾಶ್​" ಹೆಸರಿನಲ್ಲಿತ್ತು. ಇದು ನಮಗೆ ದೆಹಲಿಯಲ್ಲಿರುವ ರೋನಾ ವಿಲ್ಸನ್​ರವರ ಮನೆಯಲ್ಲಿ ಸಿಕ್ಕಿತು ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಲ್ಲಿ ಪೊಲೀಸರು ಶೋಧಕಾರ್ಯ ನಡೆಸಿದ್ದರು. ಈ ಸಂದರ್ಭದಲ್ಲಿ ರೋನಾ ವಿಲ್ಸನ್​ ಹಾಗೂ ಇನ್ನೂ ನಅಲ್ವರನ್ನು ಪೊಲೀಸರು ಜೂನ್​ನಲ್ಲಿ ಬಂಧಿಸಿದ್ದರು. ಮಹಾರಾಷ್ಟ್ರದ ಗಡ್​ಚಿರೌಲಿಯಲ್ಲಿ ಏಪ್ರಿಲ್​ನಲ್ಲಿ ನಡೆದ ನಕ್ಸಲ್​ ವಿರೋಧಿ ಅಭಿಯಾನದ ವೆಳೆ ಈ ಪತ್ರಗಳು ಪೊಲೀಸರ ಕೈ ಸೇರಿದ್ದವು. ಇನ್ನು ಈ ಅಭಿಯಾನದಲ್ಲಿ 39 ನಕ್ಸಲರು ಹತ್ಯೆಗೀಡಾಗಿದ್ದರು ಎಂಬುವುದು ಗಮನಾರ್ಹ
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...